ಕೇರಳ ಬ್ಲಾಸ್ಟರ್ಸ್ ವಿರುದ್ಧ ಗೆಲುವಿನ ನಿರೀಕ್ಷೆಯಲ್ಲಿ ಜಮ್ಷೆಡ್ಪುರ್ ಎಫ್‌ಸಿ

ಗೋವಾ: ಪ್ರಸಕ್ತ ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಮಿಶ್ರ ಫಲ ಕಂಡಿರುವ ಜಮ್ಷೆಡ್ಪುರ್ ಎಫ್‌ಸಿ ತಂಡ ಇದೀಗ, ಟೂರ್ನಿಯ ಎರಡನೇ ಹಂತವನ್ನು ಭರ್ಜರಿಯಾಗಿ ಶುರು ಮಾಡುವ ಲೆಕ್ಕಾಚಾರದಲಿದ್ದು ಕೇರಳ ಬ್ಲಾಸ್ಟರ್ಸ್ ಸವಾಲು ಎದುರಿಸಲಿದೆ. ಜಮ್ಷೇದ್ಪುರ್ ಎಫ್‌ಸಿ ಮತ್ತು ಕೇರಳ ಬ್ಲಾಸ್ಟರ್ಸ್ ತಂಡಗಳು ತಿಲಕ್ ಮೈದಾನ್ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಪೈಪೋಟಿ ನಡೆಸಲಿವೆ. ಒಟ್ಟು 9 ಪಂದ್ಯಗಳ ಅಂತ್ಯಕ್ಕೆ ಜಮ್ಷೆಡ್ಪುರ್ ಎಫ್‌ಸಿ ತಂಡ 13 ಅಂಕಗಳನ್ನು ಗಳಿಸಿದ್ದು, ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಇದೀಗ ಕೇರಳ ಬ್ಲಾಸ್ಟರ್ಸ್ ವಿರುದ್ಧ ಗೆಲುವು ಲಭ್ಯವಾದರೆ 3ನೇ ಸ್ಥಾನ ಪಡೆದುಕೊಳ್ಳುವ ಉತ್ತಮ ಅವಕಾಶ ಹೊಂದಿದೆ. ಅಂದಹಾಗೆ ಜಮ್ಷೆದ್ಪುರ್ ಎಫ್‌ಸಿ ತಂಡ ಟೂರ್ನಿಯಲ್ಲಿ ಈವರೆಗೆ ಕೇವಲ 2 ಪಂದ್ಯಗಳಲ್ಲಿ ಮಾತ್ರವೇ ಸೋತಿದೆ.
ಇನ್ನು ಪ್ಲೇ-ಆಫ್ಸ್‌ಗೆ ತಲುಪುವ ಫೇವರಿಟ್ಸ್ ಆಗಿರುವ ಬೆಂಗಳೂರು ಎಫ್‌ಸಿ ವಿರುದ್ಧ ಸಿಕ್ಕಿರುವ 1-0 ಗೋಲ್‌ಗಳ ಗೆಲುವು ಜಮ್ಷೆದ್ಪುರ್ ಎಫ್‌ಸಿ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ, ಅತಿಯಾದ ಆತ್ಮವಿಶ್ವಾಸದಲ್ಲಿ ಲಯ ಕಳೆದುಕೊಳ್ಳದಂತೆ ಕೋಚ್ ಒವೆನ್ ಕಾಯ್ಲ್ ಅವರ ತಂಡ ಎಚ್ಚರಿಕೆ ವಹಿಸುವ ಅಗತ್ಯವಿದೆ.

ಆತ್ಮವಿಶ್ವಾಸ ಹೆಚ್ಚಾಗುವುದು ನಿಜ
"ಪಂದ್ಯಗಳನ್ನು ಗೆದ್ದಾಗ ಆಟಗಾರರಲ್ಲಿ ಆತ್ಮವಿಶ್ವಾಸ ಹೆಚ್ಚಾಗುವುದು ನಿಜ. ಆದರೆ ಗೋವಾ ವಿರುದ್ಧದ ಪಂದ್ಯದಲ್ಲಿ ಎದುರಾದ ಸೋಲು ಹಿನ್ನಡೆ ತಂದಿದೆ. ಆದರೂ ಕೂಡ ಮುಖದಲ್ಲಿ ನಗುವಿನೊಂದಿಗೆ ತಪ್ಪುಗಳನ್ನು ಸರಿ ಮಾಡಿಕೊಳ್ಳುವ ಮೂಲಕ ಯಶಸ್ಸಿನ ಹಾದಿ ತುಳಿಯುವ ಲೆಕ್ಕಾಚಾರದಲ್ಲಿದ್ದೇವೆ. ಬಿಎಸ್‌ಸಿ ವಿರುದ್ಧವೂ ಇದನ್ನೇ ಮಾಡಿದ್ದೆವು. ನಮ್ಮ ತಂಡದಲ್ಲಿನ ಅತ್ಯುತ್ತಮ ಗುಣವಿದು. ಗೆದ್ದಾಗ ಬೀಗುವುದಿಲ್ಲ, ಸೋತಾಗ ಕುಗ್ಗುವುದಿಲ್ಲ. ಸಮತೋಲನ ಹೊಂದಿರುವ ತಂಡ ನಮ್ಮದು. ಸುಧಾರಿಸಿಕೊಳ್ಳುವ ಮಾರ್ಗವನ್ನು ಅರ್ಥಮಾಡಿಕೊಂಡಿದ್ದೇವೆ," ಎಂದು ಒವೆನ್ ಕಾಯ್ಲ್ ಹೇಳಿದ್ದಾರೆ.
ಅತ್ಯಂತ ಕಳಪೆ ಪ್ರದರ್ಶನ ನೀಡುತ್ತಿರುವ ಕೇರಳಾ ಬ್ಲಾಸ್ಟರ್ಸ್ ವಿರುದ್ಧ ಜಮ್ಷೆದ್ಪುರ್ ಎಫ್‌ಸಿ ತಂಡ ಸಂಪೂರ್ಣ ಮೂರು ಅಂಕ ಬಾಚಿಕೊಳ್ಳುವ ಅತ್ಯುತ್ತಮ ಅವಕಾಶ ಹೊಂದಿದೆ. ಏಕೆಂದರೆ ಕಳೆದ ಪಂದ್ಯದಲ್ಲಿ ದುರ್ಬಲ ಒಡಿಶಾ ಎಫ್‌ಸಿ ಎದುರು ಬ್ಲಾಸ್ಟರ್ಸ್ 2-4 ಗೋಲ್‌ಗಳ ಅಂತರದಲ್ಲಿ ಹೀನಾಯ ಸೋಲನುಭವಿಸಿತ್ತು. ಆದರೂ ಕೇರಳ ತಂಡವನ್ನು ಕಡೆಗಣಿಸುವಂತ್ತಿಲ್ಲ ಎಂದು ಕೋಯ್ಲ್ ಎಚ್ಚರಿಕೆ ನೀಡಿದ್ದಾರೆ.

ದುರದೃಷ್ಟ ಎಂದೇ ಹೇಳಬಹುದು
"ಕೇರಳ ತಂಡದ ಆಟವನ್ನು ಒಮ್ಮೆ ಗಮನಿಸಿ. ಅವರದ್ದು ದುರದೃಷ್ಟ ಎಂದೇ ಹೇಳಬಹುದು. ಕಳೆದ ಪಂದ್ಯದಲ್ಲಿ ಒಡಿಶಾ ಎಫ್‌ಸಿ ವಿರುದ್ಧ 2-4 ಅಂತರದಲ್ಲಿ ಸೋತಿರುವ ಕೇರಳ ತಂಡಕ್ಕೆ 5-6 ಗೋಲ್ ಗಳಿಸುವ ಸುಲಭದ ಅವಕಾಶ ಸಿಕ್ಕಿತ್ತು. ತಂಡವೊಂದು ಈ ಪರಿಯ ನಿರಾಸೆ ಎದುರಿಸಿದ್ದಾಗ, ಆ ತಂಡ ಅತ್ಯಂತ ಅಪಾಯಕಾರಿ ಆಗಿರುತ್ತದೆ.
ಮತ್ತೊಂದೆಡೆ ಕೇರಳ ತಂಡದ ಕೋಚ್ ವಿಕೂನಾ ತಮ್ಮ ತಂಡಕ್ಕೆ ಇನ್ನೂ ಪ್ಲೇ ಆಫ್ಸ್ ತಲುಪುವ ಅವಕಾಶವಿದೆ ಎಂದು ಹೇಳಿದ್ದಾರೆ. ವಿಕೂನಾ ಮಾರ್ಗದರ್ಶನದ ಕೇರಳ ತಂಡ ಮೋಹನ್ ಬಗಾನ್ ಎದುರು ಆಕ್ರಮಣಕಾರಿ ಆಟವಾಡಿ ಯಶಸ್ಸು ಕಂಡಿತ್ತು. ಆದರೆ, ಸತತ ಗಾಯದ ಸಮಸ್ಯೆಗಳು ತಂಡಕ್ಕೆ ಭಾರಿ ಹಿನ್ನಡೆ ತಂದೊಡ್ಡಿವೆ.

ಉತ್ತಮ ಆರಂಭ ಕಂಡೆವು
"ಇಲ್ಲಿ ಶೈಲಿಯ ಪ್ರಶ್ನೆಯೇ ಇಲ್ಲ. ಏಕೆಂದರೆ ನಮ್ಮ ತಂಡವೇ ವಿಭಿನ್ನ, ಆಟಗಾರರೂ ವಿಭಿನ್ನ. ಈ ಆವೃತ್ತಿಯಲ್ಲಿ ಉತ್ತಮ ಆರಂಭ ಕಂಡೆವು. ಆದರೆ ಈಗ ಹೆಚ್ಚು ಬದಲಾವಣೆಗಳನ್ನು ತರುವಂತ್ತಾಗಿದೆ. ಆರಂಭದಲ್ಲಿ ಆಡಿದ ಆಟವನ್ನು ಕಾಯ್ದುಕೊಳ್ಳಲು ಸಾಧ್ಯವಾಗಿಲ್ಲ. ಪ್ರತಿ ಪಂದ್ಯದಲ್ಲಿ ಬದಲಾವಣೆ ಮಾಡುತ್ತಿರುವಾಗ ಇಲ್ಲಿ ಶೈಲಿಯ ಪ್ರಶ್ನೆಯೇ ಬರುವುದಿಲ್ಲ. ಬೇರೆ ಬೇರೆ ತಂಡಗಳ ವಿರುದ್ಧ ಆಡುತ್ತಿರುವ ಕಾರಣ ಪ್ರತಿ ಪಂದ್ಯಕ್ಕೂ ವಿಭಿನ್ನ ರಣತಂತ್ರದೊಂದಿಗೆ ಕಣಕ್ಕಿಳಿಯುತ್ತೇವೆ. ಎದುರಾಳಿ ತಂಡದ ಆಟಕ್ಕೆ ತಕ್ಕಂತೆ ನಮ್ಮ ರಣತಂತ್ರ ರೂಪಿಸುತ್ತೇವೆ," ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications