ಐಎಸ್‌ಎಲ್: ಕೃಷ್ಣ, ಮನ್ವೀರ್ ಮಿಂಚು, ಬಾಗನ್‌ಗೆ ಬಾಗಿದ ಒಡಿಶಾ

ಗೋವಾ: ಮನ್ವೀರ್ ಸಿಂಗ (11 ಮತ್ತು 54ನೇ ನಿಮಿಷ) ರಾಯ್ ಕೃಷ್ಣ (83 ಮತ್ತು 86ನೇ ನಿಮಿಷ) ಅವರ ಡಬಲ್ ಧಮಾಕದ ನೆರವಿನಿಂದ ಒಡಿಶಾ ಎಫ್ ಸಿಯನ್ನು 4-2 ಗೋಲುಗಳ ಅಂತರದಲ್ಲಿ ಸೋಲಿಸಿ ಎಟಿಕೆ ಮೋಹನ್ ಬಾಗನ್ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ 2ನೇ ಸ್ಥಾನವನ್ನು ಭದ್ರಪಡಿಸಕೊಂಡಿತು. ಪ್ರಥಮಾರ್ಧದಲ್ಲಿ 1-1 ಗೋಲುಗಳಿಂದ ಇತ್ತಂಡಗಳು ಸಮಬಲ ಸಾಧಿಸಿದ್ದವು.
ಆದರೆ ದ್ವಿತಿಯಾರ್ಧದಲ್ಲಿ ಒಡಿಶಾದ ನೈಜ ದೌರ್ಬಲ್ಯ ಬಯಲಾಗುವುದರೊಂದಿಗೆ ಎಟಿಕೆ ಮೋಹನ್ ಬಾಗನ್ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು. ಒಟ್ಟು 30 ಅಂಕಗಳನ್ನು ಗಳಿಸಿದ ಎಟಿಕೆ ಪ್ಲೇ ಆಫ್ ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಕೊಂಡಿತು. ಒಡಿಶಾದ ಆಸೆ ಮತ್ತಷ್ಟು ದೂರವಾಯಿತು.

ಅದ್ಭುತ ಫುಟ್ಬಾಲ್
ಪ್ರಥಮಾರ್ದದಲ್ಲಿ ಎಟಿಕೆ ಮೋಹನ್ ಬಾಗನ್ ಮತ್ತು ಒಡಿಶಾ ಎಫ್ ಸಿ ತಂಡಗಳು 1-1 ಗೋಲಿನಿಂದ ಸಮಬಲ ಸಾಧಿಸಿವೆ. ಎರಡೂ ತಂಡಗಳು ಓಪನ್ ಗೋಲ್ ದಾಖಲಿಸಿರುವುದು ವಿಶೇಷ.ಪಂದ್ಯ ಆರಂಭಗೊಂಡ 11ನೇ ನಿಮಿಷದಲ್ಲಿ ಮನ್ವೀರ್ ಸಿಂಗ್ ಗಳಿಸಿ ಅದ್ಭುತ ಗೋಲು ಎಟಿಕೆ ಮೋಹನ್ ಬಾಗನ್ ಗೆ 1-0 ಮುನ್ನಡೆ ತಂದುಕೊಟ್ಟಿತು. ಆ ಬಳಿಕ ಕೋಲ್ಕೊತಾ ಪಡೆ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು. ಎರಡು ಮೂರು ಬಾರಿ ಗೋಲು ಗಳಿಸುವ ಅವಕಾಶ ಸಿಕ್ಕರೂ ಒಡಿಶಾ ಗೋಲ್ ಕೀಪರ್ ಅರ್ಶದೀಪ್ ಸಿಂಗ್ ಅದ್ಭುತವಾಗಿ ತಡದು ತಂಡಕ್ಕೆ ನೆರವಾದರು. ಆದರೆ 45 ನಿಮಿಷ ಒಡಿಶಾದ ಪಾಲಿಗೆ ಅವಿಸ್ಮರಣೀಯ ಕ್ಷಣ. ಪೆನಾಲ್ಟಿ ವಲಯದಲ್ಲಿ ಮೊದಲು ಗುರಿ ಇಟ್ಟ ಚೆಂಡು ಗೋಲ್ ಅಂಚಿಗೆ ತಗಲಿ ಹೊರ ಚಿಮ್ಮಿತು. ಆದರೆ ಅದು ಹೆಚ್ಚು ದೂರ ಸಾಗದೆ ಕಫಲ್ ಆಲೆಕ್ಸಾಂಡರ್ ಅವರ ನಿಯಂತ್ರಣಕ್ಕೆ ಸಿಕ್ಕಿತು. ಎಟಿಕೆಯ ಡಿಫೆನ್ಸ್ ವಿಭಾಗವನ್ನು ನಿಯಂತ್ರಿಸಿದ ಅಲೆಕ್ಸಾಂಡರ್ ತುಳಿದ ಚೆಂಡು ನೇರವಾಗಿ ನೆಟ್ ಸೇರಿತು. ಈ ಬಾರಿ ಅರಿಂದಂ ಭಟ್ಟಾಚಾರ್ಯ ಅವರಿಗೆ ತಡೆಯಲು ಯಾವುದೇ ಅವಕಾಶ ಇರಲಿಲ್ಲ. ಪ್ರಥಮಾರ್ಧ 1-1ರಲ್ಲಿ ಸಮಬಲ.

ಬಾಗಾನ್ ಫೇವರಿಟ್
ಅಂಕಪಟ್ಟಿಯಲ್ಲಿ ಅಗ್ರ ಎರಡನೇ ಸ್ಥಾನದಲ್ಲಿರುವ ಎಟಿಕೆ ಮೋಹನ್ ಬಾಗನ್ ತಂಡ ಕೊನೆಯ ಸ್ಥಾನದಲ್ಲಿರುವ ಒಡಿಶಾ ಎಫ್ ಸಿ ವಿರುದ್ಧ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಮತ್ತೊಂದು ಹೋರಾಟಕ್ಕೆ ಇಳಿಯಿತು. ಕೇರಳ ಬ್ಲಾಸ್ಟರ್ಸ್ ವಿರುದ್ಧ ಜಯ ಗಳಿಸಿದ ಆತ್ಮವಿಶ್ವಾದಲ್ಲಿರುವ ಎಟಿಕೆಎಂಬಿ ಗೆಲ್ಲುವ ಫೇವರಿಟ್ ಎನಿಸಿದೆ. ತಂಡದ ಆಟಗಾರರ ಬಗ್ಗೆ ಅತ್ಯಂತ ಆತ್ಮವಿಶ್ವಾಸದಲ್ಲಿರುವ ಆಂಟೋನಿಯೊ ಹಬ್ಬಾಸ್ ಒಡಿಶಾ ವಿರುದ್ಧ ಜಯ ಗಳಿಸಿ ಮುಂಬೈ ಸಿಟಿ ಎಫ್ ಸಿಗೆ ಹತ್ತಿರುವಾಗುವ ಹಂಬಲದಲ್ಲಿದ್ದಾರೆ. ತಂಡದ ಫಾರ್ವರ್ಡ್ ವಿಭಾಗ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಡಿಫೆನ್ಸ್ ನಲ್ಲಿ ಸುಘಾರಣೆ ಕಂಡುಕೊಳ್ಳಲಾಗಿದೆ.

ಒಂದು ಕ್ಲೀನ್ ಶೀಟ್ ಸಾಧನೆ
ಮೊದಲ ಒಂಬತ್ತು ಪಂದ್ಯಗಳಲ್ಲಿ ಏಳು ಕ್ಲೀನ್ ಶೀಟ್ ಸಾಧನೆ ಮಾಡಿರುವ ತಂಡ ಕಳೆದ ಐದು ಪಂದ್ಯಗಳಲ್ಲಿ ಕೇವಲ ಒಂದು ಕ್ಲೀನ್ ಶೀಟ್ ಸಾಧನೆ ಕಂಡಿದೆ. ಪ್ರಧಾನ ಕೋಚ್ ಸ್ಟುವರ್ಟ್ ಬಾಕ್ಸ್ಟರ್ ಅವರನ್ನು ಕಳೆದುಕೊಂಡಿರುವ ಒಡಿಶಾ ಈಗ ಗೆರಾಲ್ಡ್ ಪೆಟಾನ್ ಅವರನ್ನು ಮಧ್ಯಂತರ ಕೋಚ್ ಆಗಿ ಆಯ್ಕೆ ಮಾಡಿಕೊಂಡಿದೆ. ತಂಡ ಪಿಚ್ ಎರಡೂ ಕಡೆ ಸಮಸ್ಯೆಯಿಂದ ಕೂಡಿದೆ. ಬ್ಯಾಕ್ ಲೇನ್ ಗೋಲುಗಳನ್ನು ಬಿಟ್ಟರೆ ಫಾರ್ವರ್ಡ್ ಆಟಗಾರರು ಗೋಲು ಗಳಿಸುತ್ತಿಲ್ಲ. ಇಲ್ಲಿಂದಾದರೂ ಗೋಲು ಗಳಿಸಿ ಜಯದ ಹಾದಿ ಹಿಡಿಯಬೇಕೆಂಬುದು ಒಡಿಶಾದ ನಿಲುವು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications