Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಈಸ್ಟ್‌ ಬೆಂಗಾಲ್‌ ಆಘಾತದಿಂದ ತಪ್ಪಿಸಿಕೊಂಡು ಡ್ರಾಗೆ ತೃಪ್ತಿಪಟ್ಟ ಗೋವಾ

ISL 2020-21: Murgaonkar saves blushes for Goa against 10-men East Bengal

ಗೋವಾ: ಸ್ಟ್ರೈಕರ್‌ ದೇವೇಂದ್ರ ಮುರುಗಾವ್ಕಂರ್‌ (81ನೇ ನಿ.) ದ್ವಿತೀಯಾರ್ಧದಲ್ಲಿ ತಂದುಕೊಟ್ಟ ಅಮೋಘ ಗೋಲ್‌ನ ನೆರವಿನಿಂದ ಚೇತರಿಸಿದ ಎಫ್‌ಸಿ ಗೋವಾ ತಂಡ ಪ್ರಸಕ್ತ ಇಂಡಿಯನ್ ಸೂಪರ್‌ ಲೀಗ್‌ ಟೂರ್ನಿಯಲ್ಲಿ ಎಸ್‌ಸಿ ಈಸ್ಟ್‌ ಬೆಂಗಾಲ್‌ ಎದುರು ಸೋಲಿನ ಆಘಾತದಿಂದ ಪಾರಾಯಿತು. ಇಲ್ಲಿನ ತಿಲಕ್ ಮೈದಾನ್‌ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಹೈ ವೋಲ್ಟೇಜ್ ಪಂದ್ಯದಲ್ಲಿ ಆತಿಥೇಯ ಎಫ್‌ಸಿ ಗೋವಾ ಮತ್ತು ಈಸ್ಟ್‌ ಬೆಂಗಾಲ್‌ ತಂಡಗಳು 1-1 ಗೋಲ್‌ಗಳ ಸಮಬಲದ ಫಲಿತಾಂಶಕ್ಕೆ ತೃಪ್ತಿಪಟ್ಟವು.

ಪಂದ್ಯದ ಮೊದಲಾರ್ಧದಲ್ಲಿ ಇತ್ತಂಡಗಳಿಗೆ ಯಾವುದೇ ಗೋಲ್‌ ಲಭ್ಯವಾಗಲಿಲ್ಲ. ಹೀಗಾಗಿ 2ನೇ ಅವಧಿಯಲ್ಲಿ ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. ಈ ನಡುವೆ ಈಸ್ಟ್‌ ಬೆಂಗಾಲ್ ಡಿಫೆಂಡರ್‌ ಡ್ಯಾನಿ ಫಾಕ್ಸ್‌ ಅಪಾಯಕಾರಿ ಡಿಫೆನ್ಸ್‌ ಮೂಲಕ ಪಂದ್ಯದ 56ನೇ ನಿಮಿಷದಲ್ಲಿ ಅಂಪೈರ್‌ನಿಂದ ರೆಡ್‌ ಕಾರ್ಡ್‌ ಸ್ವೀಕರಿಸಿ ಹೊರನಡೆಯುವಂತ್ತಯಿತು.

ಆತ್ಮವಿಶ್ವಾಸ ಕಳೆದುಕೊಳ್ಳದ ಬೆಂಗಾಲ್‌

ಆತ್ಮವಿಶ್ವಾಸ ಕಳೆದುಕೊಳ್ಳದ ಬೆಂಗಾಲ್‌

10 ಆಟಗಾರರೊಂದಿಗೆ ಹೋರಾಡುವಂತ್ತಾದರೂ ಆತ್ಮವಿಶ್ವಾಸ ಕಳೆದುಕೊಳ್ಳದ ಈಸ್ಟ್‌ ಬೆಂಗಾಲ್‌ ತಂಡದ ಪರ ಸ್ಟ್ರೈಕರ್‌ ಬ್ರೈಟ್‌ ಎನೋಬಾಕ್ರೆ 79ನೇ ನಿಮಿಷದಲ್ಲಿ ಗೋಲ್‌ ತಂದುಕೊಟ್ಟು 1-0 ಅಂತರದ ಮುನ್ನಡೆ ನೀಡಿದ್ದರು. ಆದರೆ, ಡಿಫೆನ್ಸ್‌ನಲ್ಲಿ ಒಬ್ಬ ಆಟಗಾರನ ಕೊರತೆ ತಂಡಕ್ಕೆ ಕಾಡಿದರಿಂದ ಮುನ್ನಡೆ ಗಳಿಸಿದ ಮೂರೇ ನಿಮಿಷದಲ್ಲಿ ಗೋಲ್‌ ಬಿಟ್ಟುಕೊಡುವಂತ್ತಾಗಿ ಗೆಲ್ಲುವ ಅತ್ಯುತ್ತಮ ಅವಕಾಶವನ್ನು ಈಸ್ಟ್‌ ಬೆಂಗಾಲ್‌ ಕೈಚೆಲ್ಲಿತು.
ಡ್ರಾ ಫಲಿತಾಂಶದೊಂದಿಗೆ ಒಂದು ಅಂಕ ಖಾತೆಗೆ ಸೇರಿಸಿಕೊಂಡಿರುವ ಈಸ್ಟ್‌ ಬೆಂಗಾಲ್‌ ಆಡಿದ 9 ಪಂದ್ಯಗಳಿಂದ 7 ಅಂಕಗಳನ್ನು ಗಳಿಸಿದ್ದು, ಅಂಕಪಟ್ಟಿಯಲ್ಲಿ 10ನೇ ಸ್ಥಾನದಿಂದ ಮೇಲೇರಿ 9ನೇ ಸ್ಥಾನ ಪಡೆದುಕೊಂಡಿದೆ. ಮತ್ತೊಂದೆಡೆ ಒಟ್ಟು 10 ಪಂದ್ಯಗಳಿಂದ 15 ಅಂಕಗಳನ್ನು ಗಳಿಸಿರುವ ಎಫ್‌ಸಿ ಗೋವಾ ಅಂಕಪಟ್ಟಿಯಲ್ಲಿ ತನ್ನ 3ನೇ ಸ್ಥಾನವನ್ನು ಕಾಯ್ದುಕೊಂಡಿದೆ.

ಮೊದಲಾರ್ಧದಲ್ಲಿ ಸಮಬಲ

ಮೊದಲಾರ್ಧದಲ್ಲಿ ಸಮಬಲ

ಪಂದ್ಯದ ಪ್ರಥಮಾರ್ಧದಲ್ಲಿ ಇತ್ತಂಡಗಳು ಸಮಬಲದ ಹೋರಾಟ ನಡೆಸಿದವು. ನಿರೀಕ್ಷೆಯಂತೆ ಎಫ್‌ಸಿ ಗೋವಾ ಚೆಂಡಿನ ಮೇಲೆ ಹೆಚ್ಚು ನಿಯಂತ್ರಣ ಹೊಂದುವ ಮೂಲಕ ಗೋಲ್‌ ಗಳಿಕೆಗಾಗಿ ಸತತ ಪ್ರಯತ್ನ ಮಾಡಿತಾದರೂ ಈಸ್ಟ್‌ ಬೆಂಗಾಲ್ ತಂಡದ ಡಿಫೆನ್ಸ್‌ ಮುರಿಯಲು ಸಾಧ್ಯವಾಗಲಿಲ್ಲ.

ಮಾಡು ಇಲ್ಲವೆ ಮಡಿ ಹೋರಾಟ

ಮಾಡು ಇಲ್ಲವೆ ಮಡಿ ಹೋರಾಟ

ಗೆದ್ದು ಸಂಪೂರ್ಣ ಮೂರು ಅಂಕಗಳನ್ನು ಖಾತೆಗೆ ಸೇರಿಸಿಕೊಳ್ಳುವ ಸರ್ವ ಪ್ರಯತ್ನ ಮಾಡಿದ ಇತ್ತಂಡಗಳು ಎರಡನೇ ಅವಧಿಯಲ್ಲಿ ಮಾಡು ಇಲ್ಲವೆ ಮಡಿ ಹೋರಾಟ ನಡೆಸಿದವು. ಒಬ್ಬ ಡಿಫೆಂಡರ್‌ನ ಸೇವೆ ಕಳೆದುಕೊಂಡೆರೂ ಈಸ್ಟ್‌ ಬೆಂಗಾಲ್‌ ತೋರಿದ ಹೋರಾಟ ನಿಜಕ್ಕೂ ಪ್ರಶಂಸನೀಯ. ಗೋವಾ ತಂಡ ಪಂದ್ಯದಲ್ಲಿ ಒಟ್ಟು 19 ಬಾರಿ ಗೋಲ್‌ ಗಳಿಕೆಯ ಪ್ರಯತ್ನ ಮಾಡಿದರೆ, ಈಸ್ಟ್‌ ಬೆಂಗಾಲ್ 9 ಬಾರಿ ಮಾತ್ರವೇ ಗುರಿಯತ್ತ ಚೆಂಡನ್ನು ಬಾರಿಸಿತ್ತು. ಈಸ್ಟ್‌ ಬೆಂಗಾಲ್‌ ಪರ 5 ಮಂದಿ ಹಳದಿ ಕಾರ್ಡ್‌ ಸ್ವೀಕರಿಸಿದ್ದು ತಂಡದ ಆಕ್ರಮಣಕಾರಿ ಆಟಕ್ಕೆ ಹಿಡಿದ ಕೈಗನ್ನಡಿಯಾಗಿದೆ.

Story first published: Thursday, January 7, 2021, 9:59 [IST]
Other articles published on Jan 7, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+