ಐಎಸ್‌ಎಲ್: ಒಡಿಶಾ ಎಫ್‌ಸಿ vs ಬೆಂಗಳೂರು ಎಫ್‌ಸಿ, Live ಸ್ಕೋರ್

ಗೋವಾ: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) 31ನೇ ಪಂದ್ಯದಲ್ಲಿ ಇಂದು ಒಡಿಶಾ ಎಫ್‌ಸಿ ಮತ್ತು ಬೆಂಗಳೂರು ಎಫ್‌ಸಿ ತಂಡಗಳು ಕಾದಾಡುತ್ತಿವೆ. ಬಂಬೋಲಿಮ್‌ನ ಜಿಎಂಸಿ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯುತ್ತಿದೆ. ಇಂದಿನ ಪಂದ್ಯದಲ್ಲಿ ಬೆಂಗಳೂರು ಮೇಲುಗೈ ಸಾಧಿಸುವ ನಿರೀಕ್ಷೆಯಿದೆ.
ಈವರೆಗೆ ಆಡಿರುವ ಐದು ಪಂದ್ಯಗಳಲ್ಲಿ ಬೆಂಗಳೂರು ಎಫ್‌ಸಿ ಎರಡರಲ್ಲಿ ಗೆದ್ದು ಮೂರರಲ್ಲಿ ಡ್ರಾ ಮಾಡಿಕೊಂಡಿದೆ. ಅಂಕಪಟ್ಟಿಯಲ್ಲಿ ಬೆಂಗಳೂರು ನಾಲ್ಕನೇ ಸ್ಥಾನದಲ್ಲಿದೆ. ಒಡಿಶಾ ತಂಡ ಆಡಿರುವ ಐದು ಪಂದ್ಯಗಳಲ್ಲಿ 1ರಲ್ಲಿ ಡ್ರಾ ಮಾಡಿಕೊಂಡು 4 ಪಂದ್ಯಗಳನ್ನು ಸೋತಿದೆ. 10ನೇ ಸ್ಥಾನದಲ್ಲಿ ಒಡಿಶಾ ಇದೆ.
ಒಡಿಶಾ ಎಫ್‌ಸಿ: ಅರ್ಷ್‌ದೀಪ್ ಸಿಂಗ್ (ಜಿಕೆ), ಹೆಂಡ್ರಿ ಆಂಟೊನಿ, ಗೌರವ್ ಬೋರಾ, ಶುಭಮ್ ಸಾರಂಗಿ, ಜಾಕೋಬ್ ಟ್ರಾಟ್, ಸ್ಟೀವನ್ ಟೇಲರ್ (ಸಿ), ಕೋಲ್ ಅಲೆಕ್ಸಾಂಡರ್, ವಿನಿತ್ ರೈ, ಜೆರ್ರಿ ಮಾವಿಹ್ಮಿಂಗ್ಥಂಗಾ, ಡಿಯಾಗೋ ಮೌರಿಸಿಯೋ, ಮ್ಯಾನುಯೆಲ್ ಒನ್ವು.
ಬೆಂಗಳೂರು ಎಫ್‌ಸಿ: ಗುರ್‌ಪ್ರೀತ್ ಸಿಂಗ್ ಸಂಧು (ಜಿಕೆ), ಪ್ರತೀಕ್ ಚೌಧರಿ, ಜುವಾನಾನ್, ಎರಿಕ್ ಪಾರ್ತಲು, ಹರ್ಮನ್‌ಜೋತ್ ಖಬ್ರಾ, ಡಿಮಾಸ್ ಡೆಲ್ಗಾಡೊ, ಕ್ಲೀಟನ್ ಸಿಲ್ವಾ, ಸುರೇಶ್ ವಾಂಗ್ಜಮ್, ಕ್ರಿಸ್ಟಿಯನ್ ಒಪ್ಸೇತ್, ಸುನಿಲ್ ಛೆಟ್ರಿ (ಸಿ), ಆಶಿಕ್ ಕುರುನಿಯನ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications