ಐಎಸ್‌ಎಲ್: ಹೈದರಾಬಾದ್ ಜಯಕ್ಕೆ ಅಡ್ಡಿಯಾದ ಕಳಿಂಗ ವಾರಿಯರ್ಸ್

ಗೋವಾ: ಹೈದರಾಬಾದ್ ಪರ ಹಾಲಿಚರಣ್ ನಾರ್ಜರಿ (13ನೇ ನಿಮಿಷ) ಹಾಗೂ ಒಡಿಶಾ ಪರ ಕೊಲ್ ಅಲೆಕ್ಸಾಂಡರ್ (51ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಹೀರೋ ಇಂಡಿಯನ್ ಸೂಪರ್ ಲೀಗ್ ನ 64ನೇ ಪಂದ್ಯ 1-1 ಗೋಲುಗಳಲ್ಲಿ ಸಮಬಲಗೊಂಡು ಇತ್ತಂಡಗಳು ಅಂಕ ಹಂಚಿಕೊಂಡವು. ಒಡಿಶಾ ತಂಡಕ್ಕೆ ಈ ಪಂದ್ಯವನ್ನು ಗೆಲ್ಲುವ ಅದೃಷ್ಟವೇ ಇರಲಿಲ್ಲ ಎಂದರೆ ತಪ್ಪಾಗಲಾರದು. ಏಕೆಂದರೆ ಅಲೆಕ್ಸಾಂಡರ್ ಗೋಲು ಗಳಿಸಿದ ನಂತರ ಎರಡು ಬಾರಿ ಗೋಲು ಗಳಿಸುವ ಅವಕಾಶ ಸಿಕ್ಕರೂ ಅದೃಷ್ಟ ಕೈಗೂಡಲಿಲ್ಲ. ಕೂದಲೆಳೆಯ ಅಂತರದಲ್ಲಿ ತಂಡ ಜಯದಿಂದ ವಂಚಿತವಾಯಿತು. ಈ ಫಲಿತಾಂಶದೊಂದಿಗೆ ಒಡಿಶಾ ಕೊನೆಯ ಸ್ಥಾನದಲ್ಲೇ ಉಳಿದುಕೊಂಡರೆ, ಹೈದರಾಬಾದ್ ಕೂಡ ನಾಲ್ಕರಲ್ಲೇ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತು.
ಮುನ್ನಡೆದ ಹೈದರಾಬಾದ್: ಹಾಲಿಚರಣ್ ನಾರ್ಜರಿ (13ನೇ ನಿಮಿಷ) ಗಳಿಸಿದ ಗೋಲಿನಿಂದ ಒಡಿಶಾ ವಿರುದ್ಧದ ಪಂದ್ಯದಲ್ಲಿ ಹೈದರಾಬಾದ್ ಎಫ್ ಸಿ 1-0 ಅಂತರದಲ್ಲಿ ಮೇಲುಗೈ ಸಾಧಿಸಿದೆ. ಹೈದರಾಬಾದ್ ಇನ್ನೂ ಎರಡು ಗೋಲುಗಳನ್ನು ಗಳಿಸುವ ಅವಕಾಶ ಕಂಡುಕೊಂಡಿತ್ತು ಆದರೆ ಅರ್ಶದೀಪ್ ಸಿಂಗ್ ಅವರ ಅದ್ಭುತ ಗೋಲ್ ಕೀಪಿಂಗ್ ನಿಂದಾಗಿ ಅದು ಸಾಧ್ಯವಾಗಲಿಲ್ಲ.
ಹಾಲಿಚರಣ್ ಅವರು ಪ್ರಸಕ್ತ ಲೀಗ್ ನಲ್ಲಿ ಅತಿ ಹೆಚ್ಚು ಗೋಲು (4) ಗಳಿಸಿದ ಆಟಗಾರರೆನಿಸಿದರು. ಸುನಿಲ್ ಛೆಟ್ರಿ ಕೂಡ ನಾಲ್ಕು ಗೋಲುಗಳನ್ನು ಗಳಿಸಿರುತ್ತಾರೆ. ಒಡಿಶಾ ತಂಡ ಪ್ರಥಮಾರ್ಧದಲ್ಲಿ ಗೋಲು ನೀಡಿದಾಗಲೆಲ್ಲಾ ಸೋಲು ಅನುಭವಿಸಿರುವುದು ಗಮನಾರ್ಹ.

ಒಡಿಶಾಕ್ಕೆ ಕಠಿಣ ಸವಾಲು
ಉತ್ತಮ ಪ್ರದರ್ಶನ ತೋರಿ ಅಗ್ರ ನಾಲ್ಕರಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಕೊಂಡಿರುವ ಹೈದರಾಬಾದ್ ಎಫ್ ಸಿ ಫಟೋರ್ಡಾ ಅಂಗಣದಲ್ಲಿ ನಡೆಯಲಿರುವ ಒಡಿಶಾ ವಿರುದ್ಧದ ಪಂದ್ಯದಲ್ಲಿ ಜಯ ಗಳಿಸಿ ಗೋವಾದೊಂದಿಗೆ ಮೂರನೇ ಸ್ಥಾನವನ್ನು ಹಂಚಿಕೊಳ್ಳುವ ಗುರಿಯೊಂದಿಗೆ ಅಂಗಣಕ್ಕಿಳಿಯಿತು.ಈ ಹಿಂದೆ ಇತ್ತಂಡಗಳು ಮುಖಾಮುಖಿಯಾದಾಗ ಹೈದರಾಬಾದ್ ಜಯ ಗಳಿಸಿತ್ತು. 6 ಗೋಲುಗಳನ್ನು ಗಳಿಸಿರುವ ಅರಿದಾನೆ ಸ್ಯಾಂಟನಾ ತಂಡದ ಯಶಸ್ಸಿನಲ್ಲಿ ಪ್ರಮುಖಪಾತ್ರ ವಹಿಸಿದ್ದಾರೆ. ಹಾಲಿಚರಣ್ ನಾರ್ಜರಿ ಮತ್ತು ಜೊಯೆಲ್ ಚಿಯಾನೆಸ್ ಕೂಡ ನಾಯಕನೊಂದಿಗೆ ಕೈ ಜೋಡಿಸಿ ಯಶಸ್ಸಿಗೆ ಕಾರಣರಾಗಿದ್ದಾರೆ. ಹಿಂದಿನ ಪಂದ್ಯದಲ್ಲಿ ಚೆನ್ನೈಯಿನ್ ತಂಡದ ವಿರುದ್ಧ 1-2 ಗೋಲುಗಳಿಂದ ಸೋಲನುಭವಿಸಿತ್ತು. 11 ಪಂದ್ಯಗಳಲ್ಲಿ 7 ಸೋಲು ಕಂಡಿರುವ ಕಳಿಂಗ ವಾರಿಯರ್ಸ್, 18 ಗೋಲುಗಳನ್ನು ನೀಡಿದೆ. ಮೊದಲಾರ್ಧದಲ್ಲೇ 13 ಗೋಲುಗಳನ್ನು ನೀಡಿರುವುದು ಗಮನಾರ್ಹ.

ಆಗ್ರ ಸ್ಥಾನದಲ್ಲಿರುವ ಮುಂಬೈ
ಹಿಂದಿನ ಪಂದ್ಯದಲ್ಲಿ ಆಗ್ರ ಸ್ಥಾನದಲ್ಲಿರುವ ಮುಂಬೈ ಸಿಟಿ ಎಫ್ ಸಿ ವಿರುದ್ಧ ಹೈದರಾಬಾದ್ ಕೇವಲ ಒಂದು ಅಂಕ ಗಳಿಸಿರಬಹುದು, ಆದರೆ ಒಂದು ಅಂಕಕ್ಕಿಂತ ಆ ರೀತಿಯ ಫಲಿತಾಂಶ ಮುಖ್ಯವಾದುದಾಗಿತ್ತು. ಅದು ಈ ಋತುವಿನ ಅತ್ಯಂತ ಕಠಿಣ ಪಂದ್ಯವಾಗಿತ್ತು. ತಂಡ ಉತ್ತಮ ರೀತಿಯಲ್ಲಿ ತನ್ನ ನೈಜ ಹೋರಾಟವನ್ನು ಪ್ರದರ್ಶಿಸಿತ್ತು. ಮುಂಬೈ ತಂಡದ ಜಯಕ್ಕೆ ಅಡ್ಡಿಯನ್ನುಂಟುಮಾಡಿರುವುದು ಪಂದ್ಯ ಗೆದ್ದಷ್ಟೇ ಸಾಧನೆ ಮಾಡಿದಂತಾಗಿತ್ತು, ಪ್ರತಿಯೊಂದು ಪಂದ್ಯದಲ್ಲೂ ಗೋಲು ಗಳಿಸಿರುವ ಮುಂಬೈ ತಂಡಕ್ಕೆ ಗೋಲು ಗಳಿಸದಂತೆ ತಡೆಯೊಡ್ಡಿರುವುದು ಅದ್ಭುತ ಸಾಧನೆ.

ಮೂರು ಅಂಕಗಳನ್ನು ಗಳಿಸುತ್ತಿದ್ದರು
ತಮಗೆ ಸಿಕ್ಕಿರುವ ಆವಕಾಶವನ್ನು ಗೋಲಾಗಿ ಪರಿವರ್ತಿಸಿರುತ್ತಿದ್ದರೆ ನಿಜಾಮರು ಮೂರು ಅಂಕಗಳನ್ನು ಗಳಿಸುತ್ತಿದ್ದರು. ಮುಂಬೈ ವಿರುದ್ಧ ಉತ್ತಮ ಪ್ರದರ್ಶನ ತೋರಿದ ಹೈದಾರಬಾದ್ ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಒಡಿಶಾ ವಿರುದ್ಧ ಜಯ ಸಾಧಿಸಿದರೆ ಮೂರನೇ ಸ್ಥಾನದಲ್ಲಿರುವ ಗೋವಾದೊಂದಿಗೆ ಸಮಬಲ ಸಾಧಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications