ಐಎಸ್‌ಎಲ್: ಜೆಮ್ಷೆಡ್ಪುರ ವಿರುದ್ಧ ಕ್ಲೀನ್ ಶೀಟ್ ಗುರಿಯಲ್ಲಿ ಕೇರಳ ಬ್ಲಾಸ್ಟರ್ಸ್

ಗೋವಾ: ಹೀರೋ ಇಂಡಿಯನ್ ಸೂಪರ್ ನಲ್ಲಿ ಬುಧವಾರದ ಪಂದ್ಯದಲ್ಲಿ ಜೆಮ್ಷೆಡ್ಪುರ ಎಫ್ ಸಿ ಹಾಗೂ ಕೇರಳ ಬ್ಲಾಸ್ಟರ್ಸ್ ನಡುವೆ ನಡೆಯಲಿರುವ ಪಂದ್ಯವು ಹಲವಾರು ನಿರೀಕ್ಷೆಗಳಿಗೆ ದಾರಿಮಾಡಿಕೊಡಲಿದೆ. 13 ಪಂದ್ಯಗಳು ನಡೆದ ನಂತರ ಇತ್ತಂಡಗಳು ಅಂಕಪಟ್ಟಿಯಲ್ಲಿ ಅರ್ಧಕ್ಕಿಂತ ಕೆಳಭಾಗದಲ್ಲಿವೆ. ಮತ್ತು ಸಮಾನ ಅಂಕಗಳನ್ನು ಗಳಿಸಿವೆ. 9ನೇ ಸ್ಥಾನದಲ್ಲಿರುವ ಕೇರಳ ತನ್ನ ಎದುರಾಳಿ ತಂಡಕ್ಕಿಂತ ಒಂದು ಸ್ಥಾನ ಕೆಳಕ್ಕಿದೆ. ಅಗ್ರ ನಾಲ್ಕರಲ್ಲಿ ಎರಡೂ ತಂಡಗಳು ಸ್ಥಾನ ಪಡೆಯಬೇಕಾದರೆ ಕೆಲವೊಂದು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕಾಗಿದೆ.
ಕೇರಳ ತಂಡ ಎದುರಾಳಿ ತಂಡಕ್ಕೆ ಹೆಚ್ಚು ಗೋಲುಗಳನ್ನು ಗಳಿಸುವ ಅವಕಾಶವನ್ನು ನೀಡುತ್ತಿದೆ. 22 ಗೋಲುಗಳನ್ನು ನೀಡಿರುವ ಕೇರಳ 10 ಪಂದ್ಯಗಳಲ್ಲಿ ಕೇವಲ ಒಂದು ಕ್ಲೀನ್ ಶೀಟ್ ಸಾಧನೆ ಮಾಡಿದೆ. ನಿರಂತರ ಗಾಯದ ಸಮಸ್ಯೆ ತಂಡದ ಈ ಸ್ಥತಿಗೆ ಕಾರಣವಾಗಿರಬಹುದು.
ಅಮಾನತುಗೊಂಡಿರುವ ಕೋಚ್ ಕಿಬು ವಿಕುನಾ ಅವರ ಸ್ಥಾನದಲ್ಲಿ ಕಾರ್ಯವಿನರ್ವಹಿಸುತ್ತಿರುವ ಅಶ್ಫಕ್ ಅಹಮದ್ ಇನ್ನೂ ಹೆಚ್ಚಿನ ಕ್ಲೀನ್ ಶೀಟ್ ಸಾಧನೆಯನ್ನು ತಮ್ಮ ತಂಡ ಮಾಡಲಿದೆ ಎಂದಿದ್ದಾರೆ.

ಕ್ಲೀನ್ ಶೀಟ್ ಸಾಧನೆ ಮಾಡಿದ್ದೇವೆ
"ನಾವು ಎರಡು ಕ್ಲೀನ್ ಶೀಟ್ ಸಾಧನೆ ಮಾಡಿದ್ದೇವೆ, ಅಂದರೆ ಇತರ ತಂಡಗಳೂ ಫುಟ್ಬಾಲ್ ಆಡಿವೆ, ಅವರೂ ಗೋಲ್ ಗಳಿಸುತ್ತಾರೆ," ಎಂದು ಹೇಳಿರುವ ಅಹಮ್ಮದ್, "ಋತುವಿನ ಮೊದಲಾರ್ಧದಲ್ಲಿ ನಾವು ಉತ್ತಮ ಆರಂಭ ಕಂಡಿಲ್ಲ ಎಂಬುದು ಸ್ಪಷ್ಟವಾಗಿದೆ. ಹಲವು ಪಂದ್ಯಗಳಲ್ಲಿ ನಾವು ನಮ್ಮ ಪ್ರಮುಖ ಆಟಗಾರರಿಂದ ವಂಚಿತರಾದೆವು. ಅದು ಈಗ ಇತಿಹಾದ, ಈಗ ನಾವು ಉತ್ತಮ ಫುಟ್ಬಾಲ್ ಆಡುತ್ತಿದ್ದೇವೆ. ಇದು ಯಾವಾಗಲೂ ನಮ್ಮ ವೈಯಕ್ತಿಕ ಗುರಿಯಾಗಿರುತ್ತದೆ, ಮತ್ತು ಗೋಲ್ ಕೀಪರ್ ಅಲ್ಬಿನೊ ಗೊಮ್ಸ್ ಅವರಿಗೆ ಇದೇ ಗುರಿಯಾಗಿದೆ. ಹೆಚ್ಚು ಕ್ಲೀನ್ ಶೀಟ್ ಸಾಧನೆ ಮಾಡಿ ಚಾಂಪಿಯನ್ಷಿಪ್ ಗೆಲ್ಲುವುದಾಗಿದೆ. ಅಲ್ಬಿನೊ ಅವರು ಉತ್ತಮ ರೀತಿಯಲ್ಲಿ ತಮ್ಮ ಕೆಲಸವನ್ನು ನಿಭಾಯಿಸುತ್ತಿದ್ದಾರೆ. ಇಡೀ ತಂಡವೇ ಅವರಿಗೆ ಪ್ರೋತ್ಸಾಹ ನೀಡಬೇಕಾಗಿದೆ," ಎಂದರು.

ಗೋವಾ, ಮುಂಬೈ ನಂತರ 3ನೇ ಸ್ಥಾನ
ಹೆಚ್ಚು ಗೋಲುಗಳನ್ನು ಎದುರಾಳಿ ತಂಡಕ್ಕೆ ನೀಡಿದ್ದರೂ ಅಟ್ಯಾಕ್ ವಿಭಾಗದಲ್ಲಿ ಗೋವಾ ಮತ್ತು ಮುಂಬೈ ತಂಡದ ನಂತರ ಮೂರನೇ ಸ್ಥಾನದಲ್ಲಿದೆ. ತಂಡವೊಂದರಲ್ಲಿ ವಿಭಿನ್ನ ಆಟಗಾರರು 9 ಗೋಲುಗಳನ್ನು ಗಳಿಸಿದ್ದಾರೆ, ಇದು ವಿಶಿಷ್ಠ ಸಾಧನೆಯಾಗಿದೆ. ಜೆಮ್ಷೆಡ್ಪುರ ತಂಡ ಕೂಡ ಗೋಲು ಗಳಿಕೆಯಲ್ಲಿ ಹೆಚ್ಚು ಯಶಸ್ಸು ಕಂಡಿಲ್ಲ. ತಂಡ ಗಳಿಸಿದ್ದು ಕೇವಲ 13 ಗೋಲುಗಳು. ಇದು ಅತಿ ಕಡಿಮೆ ಗೋಲುಗಳಿಕೆಯಲ್ಲಿ ಮೂರನೇ ಸ್ಥಾನವಾಗಿದೆ. ಹಿಂದಿನ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಗೋಲಿಲ್ಲದ ಡ್ರಾ ಕಾಣಲು ತಂಡ ಸಾಕಷ್ಟು ಹರಸಾಹಸಪಟ್ಟಿತ್ತು. ಆದರೆ ತಂಡದ ಅಟ್ಯಾಕ್ ವಿಭಾಗ ಉತ್ತಮ ರೀತಿಯಲ್ಲಿ ಸುಧಾರಣೆ ಕಂಡಿದೆ.

ಉತ್ತಮ ರೀತಿಯಲ್ಲಿ ಸುಧಾರಿಸಿದೆ
"ಫಾರೂಕ್ ಚೌಧರಿ ಹಾಗೂ ಲೆನ್ ಡೌಂಗಲ್ ಆವರ ಆಗಮನದಿಂದ ನಮ್ಮ ಫಾರ್ವರ್ಡ್ ವಿಭಾಗ ಉತ್ತಮ ರೀತಿಯಲ್ಲಿ ಸುಧಾರಿಸಿದೆ. ಅದು ಹೈದರಾಬಾದ್ ಪಂದ್ಯದಲ್ಲಿ ಸಾಬೀತಾಗಿದೆ. ಅದು ನಿಜವಾದ ಧನಾತ್ಮಕ ಅಂಶ. ನಮ್ಮ ಆಕ್ರಮಣಕಾರಿ ಆಟವನ್ನು ಮುಂದುವರಿಸಿ ಮೂರು ಅಂಕಗಳನ್ನು ಗಳಿಸಲಿದ್ದೇವೆ," ಎಂದು ಓವೆನ್ ಕೊಯ್ಲ್ ಹೇಳಿದ್ದಾರೆ. ಈ ಹಿಂದಿನ ಪಂದ್ಯದಲ್ಲಿ ಇತ್ತಂಡಗಳು ಮುಖಾಮುಖಿಯಾಗಿದ್ದಾಗ ಕೇರಳ ಜಯ ಗಳಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications