ಒಡಿಶಾಕ್ಕೆ ಮತ್ತೆ ಸೋಲಿನ ಆಘಾತ, ಗೋವಾಕ್ಕೆ ಸತತ ಎರಡನೇ ಜಯ

ಗೋವಾ: ಐಗರ್ ಆಂಗುಲೋ ಗಳಿಸಿದ ಏಕೈಕ ಗೋಲಿನಿಂದ ಎಫ್ ಸಿ ಗೋವಾ ತಂಡ ಒಡಿಶಾ ವಿರುದ್ಧ 1-0 ಗೋಲಿನ ಅಂತರದಲ್ಲಿ ಜಯ ಗಳಿಸಿದೆ. ಆಂಗುಲೋ ಗೋಲು ಗಳಿಸಿ ಗೋವಾಕ್ಕೆ ಜಯ ತಂದಿರಬಹುದು, ಆದರೆ ಪಂದ್ಯದ ನಿಜವಾದ ಹೀರೋ ಒಡಿಶಾದ ಗೋಲ್ ಕೀಪರ್ ಅರ್ಶದೀಪ್. ಇಲ್ಲವಾದಲ್ಲಿ ಗೋವಾ ಅಂದಾಜು ನಾಲ್ಕು ಗೋಲುಗಳ ಅಂತರದಲ್ಲಿ ಜಯ ಗಳಿಸಿರುತ್ತಿತ್ತು. 45 ನಿಮಿಷಗಳ ಆಟದಲ್ಲಿ ಇತ್ತಂಡಗಳು ಗೋಲು ಗಳಿಸುವಲ್ಲಿ ವಿಫಲವಾಗಿದ್ದವು.
ಆದರೆ ಗಾಯದ ಮೂರು ನಿಮಿಷಗಳ ಅವಧಿಯ ಕೊನೆಯ ಕ್ಷಣದಲ್ಲಿ ಐಗರ್ ಆಂಗುಲೋ (45ನೇ ನಿಮಿಷ) ಗಳಿಸಿದ ಗೋಲಿನಿಂದ 1-0 ಅಂತರದಲ್ಲಿ ಪ್ರಥಮಾರ್ಧದಲ್ಲಿ ಮೇಲುಗೈ ಸಾಧಿಸಿತು. ಗೋವಾ ತಂಡಕ್ಕೆ ಹಲವು ಬಾರಿ ಗೋಲು ಗಳಿಸುವ ಅವಕಾಶ ಸಿಕ್ಕಿತ್ತು ಆದರೆ ಟಾರ್ಗೆಟ್ ಗೋಲ್ ಬಾಕ್ಸ್ ಕಡೆಗೆ ಇರಲಿಲ್ಲ.
ಪಿಚ್ ನಲ್ಲಿ ಒಂದು ರೀತಿಯಲ್ಲಿ ಪಂದ್ಯ ಒನ್ ವೇ ಆಗಿತ್ತು. ಒಡಿಶಾದ ಆಟಗಾರರು ಗೋಲು ಗಳಿಸುವ ಕಡೆಗೆ ಹೆಚ್ಚು ಗಮನ ಹರಿಸಿದಂತೆ ಕಾಣದೆ ಗೋಲು ತಡೆಯವುದರಲ್ಲೇ ಹೆಚ್ಚು ನಿರತರಾದಂತಿತ್ತು. ಗೋವಾ ಚೆಂಡಿನ ಮೇಲೆ ಹೆಚ್ಚು ನಿಯಂತ್ರಣ ಸಾಧಿಸಿತ್ತು .ಒಡಿಶಾ ಆಟಗಾರರು ಓಟಕ್ಕೆ ಹೆಚ್ಚಿನ ಸಮಯವನ್ನು ವಿನಿಯೋಗಿಸಿದರು.

ಸತತ ಜಯದ ನಿರೀಕ್ಷೆಯಲ್ಲಿ ಗೋವಾ
ಹೀರೋ ಇಂಡಿಯನ್ ಸೂಪರ್ ಲೀಗ್ ನ 25ನೇ ಪಂದ್ಯದಲ್ಲಿ ಎಫ್ ಸಿ ಗೋವಾ ತಂಡ ಒಡಿಶಾ ವಿರುದ್ಧ ತನ್ನ ಸತತ ಎರಡನೇ ಜಯ ಗಳಿಸುವ ಉದ್ದೇಶದಿಂದ ಅಂಗಣಕ್ಕಿಳಿಯಿತು. ಈ ಋತುವಿನಲ್ಲಿ ಉತ್ತಮ ಆರಂಭ ಕಾಣದ ಭುವನೇಶ್ವರ ಮೂಲದ ಕ್ಲಬ್, ಅಂಕಪಟ್ಟಿಯಲ್ಲಿ ಕೊನೆಯಿಂದ ಎರಡನೇ ಸ್ಥಾನದಲ್ಲಿದೆ. ಆಡಿರುವ ನಾಲ್ಕು ಪಂದ್ಯಗಳಲ್ಲಿ ಒಡಿಶಾ ಗೋಲ್ ಬಾಕ್ಸ್ ಕಡೆಗೆ ಗುರಿ ಮಾಡಿದ್ದೆ ಕಡಿಮೆ. ಇದರಿಂದಾಗಿ ಸ್ಟುವರ್ಟ್ ಬಾಕ್ಸ್ಟರ್ ತಂಡ ಗಳಿಸಿದ್ದು ಕೇವಲ ಒಂದು ಅಂಕ.

ದೌರ್ಬಲ್ಯವನ್ನು ಸಾಬೀತುಪಡಿಸಿದಂತಾಗಿದೆ
ಇದು ಎದುರಾಳಿ ತಂಡದಲ್ಲಿ ಗೋಲು ಗಳಿಸುವ ಆತಂಕವನ್ನು ಕಡಿಮೆ ಮಾಡಿದೆಯಲ್ಲದೆ, ತಂಡದ ದೌರ್ಬಲ್ಯವನ್ನು ಸಾಬೀತುಪಡಿಸಿದಂತಾಗಿದೆ. ಇದು ಇದುವರೆಗೂ ನಡೆದಿರುವ ಪಂದ್ಯಗಳಿಗೆ ಮಾತ್ರ ಅನ್ವಯಿಸುತ್ತದೆ. ತಂಡ ಗಳಿಸಿದ ಎರಡು ಗೋಲು ಜೆಮ್ಷೆಡ್ಪುರ ವಿರುದ್ಧದ 2-2 ಡ್ರಾ ಪಂದ್ಯದಲ್ಲಿ. ಜೆಮ್ಷೆಡ್ಪುರ ಕೇವಲ 10 ಆಟಗಾರರಿಂದ ಕೂಡಿದ ಸಂದರ್ಭ ಅದಾಗಿತ್ತು. ಎರಡೂ ಗೋಲುಗಳನ್ನು ಡಿಗೊ ಮೌರಿಸಿಯೊ ಗಳಿಸಿದ್ದರು. ಚೆಂಡನ್ನು ಹೆಚ್ಚು ಕಾಲ ನಿಯಂತ್ರಿಸುವ ಮತ್ತು ತಮ್ಮದೇ ವಲಯದಲ್ಲಿ ಎದುರಾಳಿಯನ್ನು ಕಟ್ಟಿ ಹಾಕುವ ಸಾಮರ್ಥ್ಯ ಹೊಂದಿರುವ ಗೋವಾ ತಂಡ ಒಡಿಶಾ ಪಾಲಿಗೆ ಅಪಾಯ ಎನಿಸುವುದು ಸಹಜ.

ಪ್ರಸಕ್ತ ಋತುವಿನಲ್ಲಿ ತನ್ನ ಮೊದಲ ಜಯ
ಕೇರಳ ಬ್ಲಾಸ್ಟರ್ಸ್ ವಿರುದ್ಧ 3-1 ಗೋಲುಗಳ ಅಂತರದಲ್ಲಿ ಯಶಸ್ಸು ಕಾಣುವ ಮೂಲಕ ಗೋವಾ ತಂಡ ಪ್ರಸಕ್ತ ಋತುವಿನಲ್ಲಿ ತನ್ನ ಮೊದಲ ಜಯ ಗಳಿಸಿತ್ತು. ಲೀಗ್ ನಲ್ಲಿ ಅತಿ ಹೆಚ್ಚು ಗೋಲು ಗಳಿಸಿರುವವರಲ್ಲಿ ಒಬ್ಬರಾಗಿರುವ ಐಗರ್ ಆಂಗುಲೋ ಅದೇ ರೀತಿಯಲ್ಲಿ ತಮ್ಮ ಪ್ರದರ್ಶನ ತೋರುವರೆಂಬ ನಂಬಿಕೆ ಕೋಚ್ ಜುವಾನ್ ಫೆರಾಂಡೊ ಅವರಿಗೆ. ಆರು ಗೋಲುಗಳನ್ನು ಓಪನ್ ಪ್ಲೇಯಲ್ಲಿ ಗಳಿಸಿರುವ ಗೋವಾ ಒಂದು ಗೋಲನ್ನು ಎದುರಾಳಿ ತಂಡಕ್ಕೆ ಓಪನ್ ಪ್ಲೇ ಮೂಲಕ ನೀಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications