ಐಎಸ್‌ಎಲ್: ಗೋಲಿಲ್ಲದೆ ಅಂಕ ಹಂಚಿಕೊಂಡ ಹೈದರಾಬಾದ್, ಬೆಂಗಳೂರು

ಗೋವಾ, ನವೆಂಬರ್ 28: ಹೈದರಾಬಾದ್ ಎಫ್‌ಸಿ ಹಾಗೂ ಬೆಂಗಳೂರು ಫ್‌ಸಿ ನಡುವಿನ ಹೀರೋ ಇಂಡಿಯನ್ ಸೂಪರ್ ಲೀಗ್ ಪಂದ್ಯ ಗೋಲಿಲ್ಲದೆ ಅಂತ್ಯಗೊಂಡಿತು, ಇತ್ತಂಡಗಳು ಅಂಕ ಹಂಚಿಕೊಡವು. ಪ್ರಥಮಾರ್ಧದಲ್ಲಿ ಚೆಂಡಿನ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದ ಹೈದರಾಬಾದ್ ದ್ವಿತಿಯಾರ್ಧದಲ್ಲೂ ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲವಾಯಿತು. ಹೈದರಾಬಾದ್ ತಂಡ ಕಳೆದ ಋತುವಿನ ಹೈದರಾಬಾದ್ ತಂಡವಾಗಿ ಕಾಣಲಿಲ್ಲ.
ಬೆಂಗಳೂರಿಗೆ ದಿಟ್ಟ ಸವಾಲು ನೀಡಿತು. ಅಲ್ಲದೆ ಗೋಲು ಗಳಿಸಲು ಎಲ್ಲಿಯೂ ಅವಕಾಶ ಕಲ್ಪಿಸಲಿಲ್ಲ. ಇತ್ತಂಡಗಳ ಡಿಫೆನ್ಸ್ ವಿಭಾಗ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದು ಗಮನಾರ್ಹವಾಗಿತ್ತು.
ಗೋಲಿಲ್ಲದ ಪ್ರಥಮಾರ್ಧ: 45 ನಿಮಿಷಗಳ ಹೋರಾಟದಲ್ಲಿ ಗೋಲು ದಾಖಲಾಗದಿದ್ದರೂ ಹೈದರಾಬಾದ್ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು.

ಅವಕಾಶ ಸಿಕ್ಕರೂ ಯಶಸ್ಸು ಸಿಗಲಿಲ್ಲ
ಎರಡು ಬಾರಿ ಹೈದರಾಬಾದ್ ಗೆ ಗೋಲು ಗಳಿಸುವ ಅವಕಾಶ ಸಿಕ್ಕರೂ ಯಶಸ್ಸು ಸಿಗಲಿಲ್ಲ. ಬೆಂಗಳೂರು ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಮೊದಲಾರ್ಧದಲ್ಲಿ ಆಟ ಪ್ರದರ್ಶಿಸಿಲ್ಲ. ಹೈದರಾಬಾದ್ ನ ಇಬ್ಬರು ಆಟಗಾರರು ಗಾಯಗೊಂಡಿರುವುದು ತಂಡದ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು. ಬೆಂಗಳೂರು ಎಫ್ ಸಿ ಪರ ಗೋಲ್ ಕೀಪರ್ ಸಂಧೂ ಉತ್ತಮ ರೀತಿಯಲ್ಲಿ ಅರಿದಾನೆ ಸಾಂಟನಾ ಅವರ ಹೊಡೆತವನ್ನು ತಡೆದು ತಂಡಕ್ಕೆ ನೆರವಾದರು.

ಸವಾಲಿನ ಪಂದ್ಯ
ಫಟೋರ್ಡಾ ಅಂಗಣದಲ್ಲಿ ಬೆಂಗಳೂರು ಎಫ್ ಸಿ ಮತ್ತು ಹೈದರಾಬ್ ಎಫ್ ಸಿ ತಂಡಗಳು ಹೀರೋ ಇಂಡಿಯನ್ ಸೂಪರ್ ಲೀಗ್ ನ 9ನೇ ಪಂದ್ಯದಲ್ಲಿ ಮುಖಾಮುಖಿಯಾಗಲು ಸಜ್ಜಾದವು. ಪಂದ್ಯಕ್ಕೂ ಮುನ್ನ ಇತ್ತಂಡಗಳ ಸಾಮರ್ಥ್ಯಗಳ ಬಗ್ಗೆ ಬೆಳಕು ಚೆಲ್ಲಿದಾಗ ಅಲ್ಲಿ ಬೆಂಗಳೂರು ತಂಡ ಬಲಿಷ್ಠವಾಗಿ ಕಾಣುವುದು ಸಹಜ. ಇದಕ್ಕೆ ಈ ಹಿಂದೆ ಇತ್ತಂಡಗಳ ನಡುವಿನ ಪಂದ್ಯಗಳ ಫಲಿತಾಂಶದತ್ತ ಗಮನ ಹರಿಸಿದರೆ ಸ್ಪಷ್ಟವಾಗುತ್ತದೆ.

ಹೈಪೋಟಿಗೆ ಉತ್ತಮ ಅವಕಾಶವಿದೆ
ಮುಖಾಮುಖಿಯಾದ ಎರಡು ಪಂದ್ಯಗಳಲ್ಲಿ ಬೆಂಗಳೂರು ಒಂದು ಪಂದ್ಯದಲ್ಲಿ ಜಯ ಗಳಿಸಿದ್ದರೆ ಇನ್ನೋಂದು ಪಂದ್ಯ ಡ್ರಾದಲ್ಲಿ ಕೊನೆಗೊಂಡಿತ್ತು. ಗುರ್ ಪ್ರೀತ್ ಸಿಂಗ್ ಸಂಧೂ ಹಾಗೂ ಸುಬ್ರತಾ ಪಾಲ್ ಲೀಗ್ ಇಬ್ಬರು ಪ್ರಮುಖ ಗೋಲ್ ಕೀಪರ್ ಗಳ ನಡುವಿನ ಹೈಪೋಟಿಗೆ ಇಲ್ಲಿ ಉತ್ತಮ ಅವಕಾಶವಿದೆ. ಇಬ್ಬರ ನಡುವೆ ಸುಮಾರು 52 ಕ್ಲೀನ್ ಶೀಟ್ ಸಾಧನೆ ಇದೆ. ಗೋವಾ ವಿರುದ್ಧದ ಪಂದ್ಯದ ದ್ವಿತಿಯಾರ್ಧದಲ್ಲಿ ಎರಡು ಗೋಲುಗಳನ್ನು ನೀಡಿದ ಬೆಂಗಳೂರು ತಂಡದ ಡಿಫೆನ್ಸ್ ವಿಭಾಗ ಮತ್ತೆ ಪುಟಿದೇಳಲಿದೆ ಎಂದು ಕೋಚ್ ಕಾರ್ಲ್ಸ್ ಕ್ವಾಡ್ರಟ್ ನಂಬಿದ್ದಾರೆ. ಕ್ರಿಸ್ಟಿಯನ್ ಆಫ್ಸೆತ್, ದೆಶಾರ್ನ್ ಬ್ರೌನ್, ಸುನಿಲ್ ಛೆಟ್ರಿ ಅವರಿಂದ ಸುಧಾರಿತ ಪ್ರದರ್ಶನದ ನಿರೀಕ್ಷೆಯಲ್ಲಿ ಬೆಂಗಳೂರು ತಂಡದ ಕೋಚ್ ಕ್ಬಾಡ್ರಾಟ್ ಅವರದ್ದು.

ಆತ್ಮವಿಶ್ವಾಸದೊಂದಿಗೆ ಅಂಗಣಕ್ಕಿಳಿದಿದೆ
ಐಎಸ್ ಎಲ್ ನಲ್ಲಿ ಮೊದಲ ಬಾರಿಗೆ ಕ್ಲೀನ್ ಶೀಟ್ ಜತೆಯಲ್ಲಿ ಜಯ ಕಂಡು ಆತ್ಮವಿಶ್ವಾಸದಲ್ಲಿರುವ ಹೈದರಾಬಾದ್ ಈ ಬಾರಿ ಬೆಂಗಳೂರಿಗೆ ಸೋಲುಣಿಸಬೇಕೆಂಬ ಗುರಿಯೊಂದಿಗೆ ಅಂಗಣಕ್ಕಿಳಿಯಿತು. ಕಳೆದ ಬಾರಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ಹೈದರಾಬಾದ್ ಈ ಬಾರಿ ಅತ್ಯಂತ ಆತ್ಮವಿಶ್ವಾಸದೊಂದಿಗೆ ಅಂಗಣಕ್ಕಿಳಿದಿದೆ. ಅರಿದಾನೆ ಅವರ ಮೇಲೆ ಹೆಚ್ಚು ಅವಲಂಬಿತವಾಗಿರುವ ತಂಡ ಜಯವನ್ನೇ ಮಂತ್ರವಾಗಿರಿಸಿಕೊಂಡಿದೆ. 53 ಪಾಸ್ ಗಳನ್ನು ನೀಡಿರುವ ಲೂಯಿಸ್ ಸಾಸ್ತ್ರೆ ತಂಡಕ್ಕೆ ಆಧಾರವಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications