ಐಎಸ್‌ಎಲ್ 2020: ಸೋತು ಗೆದ್ದ ಚೆನ್ನೈಯಿನ್ ತಂಡ ಫೈನಲ್‌ಗೆ ಲಗ್ಗೆ

ಗೋವಾ, ಮಾರ್ಚ್ 8: ಚೆನ್ನೈಯಿನ್ ಎಫ್ ಸಿ ತಂಡ ತನ್ನ ಎರಡನೇ ಸೆಮಿಫೈನಲ್ ತಂದ್ಯದಲ್ಲಿ ಗೋವಾ ವಿರುದ್ಧ 2-4 ಗೋಲಿನಿಂದ ಸೋಲನುಭವಿಸಿದರೂ ಸರಾಸರಿ ಗೋಲಿನಲ್ಲಿ 6-5 ಮುನ್ನಡೆ ಕಂಡ ಚೆನ್ನೈ ತಡ ಹೀರೋ ಇಂಡಿಯನ್ ಸೂಪರ್ ಲೀಗ್ ನ ಫೈನಲ್ ಗೆ ಲಗ್ಗೆ ಇಟ್ಟಿತು. ಗೋವಾ ತಂಡ 2-0 ಅಂತರದಲ್ಲಿ ಮೇಲುಗಯ ಸಾಧಿಸಿತ್ತು.
ಮೊದಲ ಪಂದ್ಯದಲ್ಲಿ 4-1 ಗೋಲಿನಿಂದ ಜಯ ಗಳಿಸಿದ್ದ ಚೆನ್ನೈಯಿನ್ ತಂಡದ ಆರಂಭ ಉತ್ತಮವಾಗಿರಲಿಲ್ಲ, ಲೂಸಿಯಾನ್ ಗೊಯೇನ್ (10ನೇ ನಿಮಿಷ) ನೀಡಿದ ಉಡುಗೊರೆ ಗೋಲಿನಿಂದ ಗೋವಾ ಖಾತೆ ತೆರೆಯಿತು. ಮೌರ್ಥಾದ್ ಫಾಲ್ (21 ಮತ್ತು 83ನೇ ನಿಮಿಷ) ಮತ್ತು ಎಡು ಗಾರ್ಸಿಯಾ (83ನೇ ನಿಮಿಷ) ಗಳಿಸಿದ ಗೋಲು ಗೋವಾಕ್ಕೆ ಜಯ ತಂದು ಕೊಟ್ಟಿತು. ಚೆನ್ನೈಯಿನ್ ಪರ ಲಾಲ್ರಿಯಾನ್ಜುವಾಲ ಚಾಂಗ್ಟೆ (52ನೇ ನಿಮಿಷ) ಹಾಗೂ ನೆರಿಜುಸ್ ವಾಸ್ಕಿಸ್ (59ನೇ ನಿಮಿಷ) ಗಳಿಸಿದ ಗೋಲು ಚೆನ್ನೈಯಿನ್ ತಂಡವನ್ನು ಫೈನಲ್ ಗೆ ಕೊಂಡೊಯ್ಯುವಲ್ಲಿ ನೆರವಾಯಿತು.
ಮೇಲುಗೈ ಸಾಧಸಿದ ಗೋವಾ
ಗೋಲುಗಳ ಸರಾಸರಿಯೊಂದಿಗೆ ಮೇಲುಗೈ ಸಾಧಿಸಿ ಜಯ ಗಳಿಸಬೇಕಾಗಿದ್ದ ಗೋವಾ ತಂಡ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಪ್ರಥಮಾರ್ಧದಲ್ಲಿ 2-0 ಗೋಲಿನಿಂದ ಮುನ್ನಡೆ ಕಾಯ್ದಕೊಂಡಿತು. ಚೆನ್ನೈಯಿನ್ ತಂಡ ಸೆಮಿಫೈನಲ್ ತಲಪುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಲೂಸಿಯಾನ್ ಗೊಯೆನ್ ಎರಡನೇ ಸೆಮಿಫೈನಲ್ ನ ಆರಂಭದಲ್ಲೇ ಗೋವಾ ತಂಡಕ್ಕೆ ಉಡುಗೊರೆ ಗೋಲು ನೀಡಿ ತಂಡಕ್ಕೆ ಹಿನ್ನಡೆ ಕಲ್ಪಿಸಿದರು. 10ನೇ ನಿಮಿಷದಲ್ಲಿ ದಾಖಲಾದ ಗೋಲಿನಿಂದ ಗೋವಾ ಮುನ್ನಡೆ ಕಂಡಿತು. ಮೌರ್ಥಾದ್ ಫಾಲ್ ಗಳಿಸಿ ಗೋಲಿನಿಂದ ಗೋವಾ ತಂಡ ಪ್ರಥಮಾರ್ಧದಲ್ಲಿ 2-0 ಗೋಲಿನಿಂದ ಮುನ್ನಡೆ ಕಾಯ್ದುಕೊಂಡಿತು.

ಚೆನ್ನೈಯಿ ಫೇವರಿಟ್
ಮನೆಯಂಗಣದಲ್ಲಿ ಗೋವಾ ತಂಡ ಪಂದ್ಯ ಗೆಲ್ಲುವ ಫೇವರಿಟ್ ಎನಿಸಿರಬಹುದು ಆದರೆ ಚೆನ್ನೈಯಿನ್ ತಂಡ ಈಗಾಗಲೇ ಬೃಹತ್ ಅಂತರದಲ್ಲಿ ಜಯ ಗಳಿಸಿದ್ದರಿಂದ ಫೈನಲ್ ತಲಪುವ ಫೇವರಿಟ್ ಎನಿಸಿದೆ.
ಚೆನ್ನೈಯಿನ್ ಎಫ್ ಸಿ ವಿರುದ್ಧದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ 1-4 ಗೋಲುಗಳ ಅಂತರದಲ್ಲಿ ಸೋಲು ಹಿನ್ನಡೆ ಕಂಡಿರುವ ಎಫ್ ಸಿ ಗೋವಾ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ನ ಮೂರನೇ ಸೆಮಿಫೈನಲ್ ಪಂದ್ಯದಲ್ಲಿ ಗೋಲುಗಳ ಅಂತರದಲ್ಲಿ ಜಯ ಗಳಿಸಿ ಫೈನಲ್ ತಲಪುವುದು ಅಷ್ಟು ಸುಲಭವಲ್ಲ. ಹೀರೋ ಆಫ್ ಲೀಗ್ ಗೌರವಕ್ಕೆ ಪಾತ್ರರಾಗಿರುವ ಗೋವಾ ತಂಡ ಅಷ್ಟೇ ಆತ್ಮವಿಶ್ವಾಸದೊಂದಿಗೆ ಅಂಗಣಕ್ಕಿಳಿಯಿತು.
ವೈಯಕ್ತಿಕ ಕಾರಣಗಳಿಂದಾಗಿ ಚೆನ್ನೈಯಿನ್ ವಿರುದ್ಧದ ಪಂದ್ಯದಲ್ಲಿ ಆಡಿರದ ಎಡು ಗಾರ್ಸಿಯಾ ನಾಳೆಯ ಪಂದ್ಯಕ್ಕೆ ಲೈಭ್ಯ ಇರುವುದು ಗೋವಾ ತಂಡದ ಬಲವನ್ನು ಹೆಚ್ಚಿಸಿದೆ. ಗಾಯದ ಸಮಸ್ಯೆಯಿಂದಾಗಿ ಎರಡು ವಾರಗಳ ಕಾಲ ವಿಶ್ರಾಂತಿಯಲ್ಲಿದ್ದ ಬ್ರೆಂಡಾನ್ ಫೆರ್ನಾಂಡೀಸ್ ಹಾಗೂ ಹ್ಯುಗೊ ಬೌಮಾಸ್ ಮತ್ತೆ ತಂಡವನ್ನು ಸೇರಿಕೊಂಡಿದ್ದಾರೆ. ಕಳೆದ ತಿಂಗಳ ಶ್ರೇಷ್ಠ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿರುವ ಹ್ಯುಗೋ ಬೌಮಾಸ್ ಆಗಮನ ತಂಡದ ಶಕ್ತಿಯನ್ನು ಹೆಚ್ಚಿಸಿದೆ. 14 ಪಂದ್ಯಗಳಲ್ಲಿ ಬೌಮಾಸ್ 10 ಗೋಲುಗಳನ್ನ ಗಳಿಸಿದ್ದು, 11 ಗೋಲುಗಳನ್ನು ಗಳಿಸುವಲ್ಲಿ ನೆರವಾಗಿದ್ದಾರೆ. ಇದರಿಂದಾಗಿ ಗೋವಾ ತಂಡ ಎರಡನೇ ಪಂದ್ಯದಲ್ಲಿ ಜಯ ಗಳಿಸುವ ನಿರಿಕ್ಷೆಯೊಂದಿಗೆ ಅಂಗಣಕ್ಕಿಳಿಯಿತು.
ಫೆರಾನ್ ಕೊರೊಮಿನಾಸ್ ಹಿಂದಿನ ಪಂದ್ಯದಲ್ಲಿ ಫಾರ್ವರ್ಡ್ ಆಟಗಾರರಾಗಿದ್ದು, ಈಗ ಒಂಬತ್ತನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಗೋವಾ ಇದುವರೆಗೂ ಗಳಿಸಿರುವ ಗೋಲುಗಳಿಗಿಂತ ಹೆಚ್ಚಿನ ಗೋಲನ್ನು ನಾಳೆಯ ಪಂದ್ಯದಲ್ಲಿ ಗಳಿಸಬೇಕಾಗುತ್ತದೆ. ತಂಡದ ಮಧ್ಯಂತರ ಕೋಚ್ ಕ್ಲಿಫಾರ್ಡ್ ಮಿರಾಂಡ ಅವರಿಗೆ ಪೂರ್ಣ ಆಕ್ರಮಣಕಾಗಿ ತಂಡವನ್ನು ಆಯ್ಕೆ ಮಾಡುವುದೋ ಅಥವಾ ಸೆಂಟರ್ ಬ್ಯಾಕ್ ಕಡೆಗೆ ಹೆಚ್ಚಿನ ಗಮನ ಹರಿಸುವುದೂ ಎಂಬುದರ ಬಗ್ಗೆ ಯೋಚಿಸಬೇಕಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications