For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2020: ಸಮಬಲ ಸಾಧಿಸಿದ ನಾರ್ತ್ ಈಸ್ಟ್-ಚೆನ್ನೈಯಿನ್

By Isl Media
ISL 2020: Chennaiyin to face Goa after NorthEast draw

ಗುವಾಹಟಿ, ಫೆಬ್ರವರಿ 26: ನಾರ್ಥ್ ಈಸ್ಟ್ ಯುನೈಟೆಡ್ ಪರ ಮಾರ್ಟಿನ್ ಚಾವೆಮ್ ಗಾರ್ಸಿಯಾ (43 ಮತ್ತು 71ನೇ ನಿಮಿಷ) ಹಾಗೂ ಚೆನ್ನೈಯಿನ್ ಎಫ್ ಸಿ ಪರ ಮನೀಶ್ ಸೈಘಾನಿ (17ನೇ ನಿಮಿಷ) ಹಾಗೂ ಲಾಲ್ ರಿಯಾನ್ಜುವಾಲಾ ಚಾಂಗ್ಟೆ (90ನೇ ನಿಮಿಷ) ಗಳಿಸಿದ ಗೋಲಿನಿಂದ ಹೀರೋ ಇಂಡಿಯನ್ ಸೂಪರ್ ಲೀಗ್ ನ ಕೊನೆಯ ಪಂದ್ಯ 2-2 ಗೋಲಿನಿಂದ ಡ್ರಾದಲ್ಲಿ ಕೊನೆಗೊಂಡಿತು.

ಸಮಬಲ ಸಾಧಿಸಿದ ಇತ್ತಂಡಗಳು
ಚೆನ್ನೈಯಿನ್ ತಂಡ ಈಗಾಗಲೇ ಸೆಮಿಫೈನಲ್ ಪ್ರವೇಶಿಸಿದ್ದರಿಂದ ಸೋಲು ಗೆಲುವಿನ ಬಗ್ಗೆ ಹೆಚ್ಚಿನ ತಲೆಕೆಡಿಸಿಕೊಂಡಂತಿಲ್ಲ. ಇದರ ಪರಿಣಾಮ ಆತಿಥೇಯ ನಾರ್ಥ್ ಈಸ್ಟ್ ಇದರ ಪ್ರಯೋಜನ ಉತ್ತಮ ರೀತಿಯಲ್ಲಿ ಪಡೆದುಕೊಂಡಿತು. ಆದರೆ ಚೆನ್ನೈಯಿನ್ ತಂಡ ತನ್ನ ವೃತ್ತಿಪರತೆಯೊಂದಿಗೆ ಜವಾಬದ್ದಾರಿಯನ್ನು ಮರೆತಿಲ್ಲ. ಪರಿಣಾಮ, 17ನೇ ನಿನಿಷದಲ್ಲಿ ಮನೀಶ್ ಸೈಘಾನಿ ಗಳಿಸಿದ ಗೋಲಿನಿಂದ ಚೆನ್ನೈಯಿನ್ ತಂಡ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಯಿತು.

ಮನೆಯಂಗಣದಲ್ಲಿ ನಡೆಯುತ್ತಿರುವ ಕೊನೆಯ ಪಂದ್ಯದಲ್ಲಿ ಗೌರವ ಕಾಯ್ದುಕೊಳ್ಳಬೇಕೆಂಬ ಗುರಿ ಹೊಂದಿರುವ ನಾರ್ಥ್ ಈಸ್ಟ್ ಯುನೈಟೆಡ್ ಅಷ್ಟೇ ಉತ್ತಮ ರೀತಿಯಲ್ಲಿ ಪೈಪೋಟಿ ನೀಡಿತು. ಪರಿಣಾಮ 43ನೇ ನಿಮಿಷದಲ್ಲಿ ತಂಡಕ್ಕೆ ಸಮಬಲ ಸಾಧಿಸುವ ಅವಕಾಶ. 43ನೇ ನಿಮಿಷದಲ್ಲಿ ಮಾರ್ಟಿನ್ ಗಾರ್ಸಿಯಾ ಪೆನಾಲ್ಟಿ ಕಾರ್ನರ್ ಮೂಲಕ ಗಳಿಸಿದ ಗೋಲಿನಿಂದ ನಾರ್ಥ್ ಈಸ್ಟ್ ಯುನೈಟೆಡ್ 1-1 ಗೋಲಿನಿಂದ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಪ್ರಥಮಾರ್ಧದಲ್ಲಿ ಇತ್ತಂಡಗಳು ಸಮಬಲ ಸಾಧಿಸಿದವು.

ISL 2020: Chennaiyin to face Goa after NorthEast draw

ನಾರ್ಥ್ ಈಸ್ಟ್ ಗೆ ಗೌರವದ ಗುರಿ
ಸೆಮಿಫೈನಲ್ ತಲಪುವಲ್ಲಿ ವಿಫಲವಾಗಿರುವ ನಾರ್ಥ್ ಈಸ್ ಯುನೈಟೆಡ್ ಹಾಗೂ ಈಗಾಗಲೇ ಸೆಮಿಫೈನಲ್ ತಲುಪಿರುವ ಚೆನ್ನೈಯಿನ್ ಎಫ್ ಸಿ ತಂಡಗಳ ನಡುವೆ ಹೀರೋ ಇಂಡಿಯನ್ ಸೂಪರ್ ಲೀಗ್ ನ ನೀಗ್ ಹಂತದ ಕೊನೆಯ ಪಂದ್ಯದಲ್ಲಿ ಜಯದ ನಗು ಬೀರಲು ಮುಂದಾದವು.

ಮುಂಬೈ ಸಿಟಿ ಎಫ್ ಸಿ ತಂಡವನ್ನು ಮನೆಯಂಗಣದಲ್ಲಿ ಸೋಲಿಸುವ ಮೂಲಕ ಚೆನ್ನೈಯಿನ್ ಎಫ್ ಸಿ ಸೆಫೈನಲ್ ಗೆ ಲಗ್ಗೆ ಇಟ್ಟಿತ್ತು. ನಾರ್ಥ್ ಈಸ್ಟ್ ಯುನೈಟೆಡ್ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದ್ದು, ಮನೆಯಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಜಯ ಗಳಿಸಿ ಗೌರವ ಕಾಯ್ದುಕೊಳ್ಳುವ ಗುರಿಯೊಂದಿಗೆ ಅಂಗಣಕ್ಕಿಳಿಯಿತು.

28 ಅಂಕಗಳನ್ನು ಗಳಿಸಿರುವ ಚೆನ್ನೈಯಿನ್ ಎಫ್ ಸಿ ಮೂರನೇ ಸ್ಥಾನದಲ್ಲಿರುವ ಬೆಂಗಳೂರು ತಂಡಕ್ಕಿಂತ ಎರಡು ಅಂಕ ಹಿಂದೆ ಇದೆ. ಡ್ರಾ ಆಥವಾ ಸೋಲು ಅನುಭವಿಸಿದ್ದಲ್ಲಿ, ಅಗ್ರ ಸ್ಥಾನದಲ್ಲಿರುವ ಗೋವಾ ವಿರುದ್ಧ ಪ್ಲೇ ಆಫ್ ಪಂದ್ಯವನ್ನಾಡಲಿದೆ. ಇಲ್ಲಿ ಜಯ ಗಳಿಸಿದ್ದಲ್ಲಿ ಎರಡನೇ ಸ್ಥಾನದಲ್ಲಿರುವ ಎಟಿಕೆ ವಿರುದ್ಧ ಸೆಮಿಫೈನಲ್ ಪಂದ್ಯ ಆಡುವುದು ಖಚಿತ.

ಲೂಸಿಯಾನ್ ಗೊಯೆನ್, ರಫಾಯೆಲ್ ಕ್ರಿವೆಲ್ಲರೋ ಹಾಗೂ ನೆರಿಜುಸ್ ವಾಸ್ಕಿಸ್ ಈಗಾಗಲೇ ಮೂರು ಹಳದಿ ಕಾರ್ಡುಗಳನ್ನು ಗಳಿಸಿದ್ದು, ನಾಳೆಯ ಪಂದ್ಯದಲ್ಲಿ ಈ ಆಟಗಾರರಲ್ಲಿ ಯಾರಾದರೂ ಹಳದಿ ಕಾರ್ಡು ಗಳಿಸಿದರೆ ಸೆಮಿಫೈನಲ್ ಪಂದ್ಯದಿಂದ ವಂಚಿತರಾಗಲಿದ್ದಾರೆ. ಈ ಕಾರಣಕ್ಕಾಇ ಓವೆನ್ ಕಾಯ್ಲ್ ಈ ಆಟಗಾರರಿಗೆ ವಿಶ್ರಾಂತಿ ನೀಡಿದರು.

ನಾರ್ಥ್ ಈಸ್ಟ್ ಯುನೈಟೆಡ್ ತಂಡಕ್ಕೆ ಇಲ್ಲೊಂದು ಜಯದ ಅಗತ್ಯ ಇದೆ. ಕಳೆದ ವಾರ ಹೈದರಬಾದ್ ವಿರುದ್ಧ 5-1 ಗೋಲುಗಳ ಅಂತರದಲ್ಲಿ ಹೀನಾಯವಾಗಿ ಸೋತ ಬಳಿಕ ಮನೆಯಂಗಣದ ಪ್ರೇಕ್ಷಕರಿಗಾಗಿ ಕೊನೆಯ ಪಂದ್ಯದಲ್ಲಿ ಗೆಲ್ಲುವ ಗುರಿಹೊಂದಿದೆ.

Story first published: Wednesday, February 26, 2020, 9:58 [IST]
Other articles published on Feb 26, 2020
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+