Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಎಸ್‌ಎಲ್‌ 2020: ಸುನಿಲ್ ಛೆಟ್ರಿ ಸಾಹಸ, ಗೋವಾ ಮಣಿಸಿದ ಬೆಂಗಳೂರು

ISL 2020: Chhetri, Bengaluru rise to the occasion

ಬೆಂಗಳೂರು, ಜನವರಿ 4: ನಾಯಕ ಸುನಿಲ್ ಛೆಟ್ರಿ (59 ಮತ್ತು 84ನೇ ನಿಮಿಷ) ಗಳಿಸಿದ ಎರಡು ಗೋಲುಗಳ ನೆರವಿನಿಂದ ಹಾಲಿ ಚಾಂಪಿಯನ್ ಬೆಂಗಳೂರು ಎಫ್‌ಸಿ ಎಫ್‌ಸಿ ಗೋವಾ ವಿರುದ್ಧದ ಪಂದ್ಯದಲ್ಲಿ 2-1 ಗೋಲಿನಿಂದ ಜಯ ಗಳಿಸಿ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿಯಿತು. ಹೊಸ ವರುಷವನ್ನು ಜಯದೊಂದಿಗೆ ಸ್ವಾಗತಿಸಿದ ಬೆಂಗಳೂರು ಎಫ್ ಸಿ ಮುಂಬೈ ಹಾಗೂ ಜೆಮ್ಷೆಡ್ಪುರ ತಂಡಗಳಲ್ಲಿ ಒತ್ತಡವನ್ನು ಹೆಚ್ಚಿಸಿತು. ಗೋವಾ ಪರ ಹ್ಯೂಗೋ ಬೌಮಾಸ್ 61ನೇ ನಿಮಿಷದಲ್ಲಿ ಗಳಿಸಿದ ಗೋಲು ಛೆಟ್ರಿ ಪಡೆಯ ಕ್ಲೀನ್ ಶೀಟ್ ಆವಕಾಶವನ್ನು ಕಸಿದುಕೊಂಡಿತು.

ದ್ವಿತಿಯಾರ್ಧದದಲ್ಲಿ ಇತ್ತಂಡಗಳು ಆಕ್ರಮಣಕಾರಿ ಆಟಕ್ಕೆ ಮನ ಮಾಡಿದವು, ಪರಿಣಾಮ ಸತತ ಗೋಲು ದಾಖಲಾಯಿತು. ಬೆಂಗಳೂರು ಎಫ್ ಸಿ ಪರ ನಾಯಕ ಸುನಿಲ್ ಛೆಟ್ರಿ ಎರಡು ಗೋಲುಗಳನ್ನು ಗಳಿಸಿದರೆ, ಗೋವಾದ ಪರ ಹ್ಯುಗೋ ಬೌಮಾಸ್ ಗಳಿಸಿದ ಗೋಲು ತಂಡಕ್ಕೆ ಸೋಲಿನ ಅಂತರವನ್ನು ಕಡಿಮೆ ಮಾಡಿತು.

ಗೋಲಿಲ್ಲದ ಪ್ರಥಮಾರ್ಧ
45 ನಿಮಿಷಗಳ ಮೊದಲಾರ್ಧದಲ್ಲಿ ಗೋವಾ ಉತ್ತಮ ಅವಕಾಶಗಳನ್ನು ಕೈಚೆಲ್ಲಿತು. ಚೆಂಡನ್ನು ಹೆಚ್ಚು ಕಾಲ ನಿಯಂತ್ರಣದಲ್ಲಿ ಇರಿಸಿಕೊಂಡ ಪ್ರವಾಸಿ ಗೋವಾ ತಂಡ ಮೇಲುಗೈ ಸಾಧಸಿತ್ತು. ಆದರೆ ಮನೆಯಂಗಣದಲ್ಲಿ ಬೆಂಗಳೂರು ಯಾವಾಗಲೂ ಬಲಿಷ್ಠವಾಗಿರುತ್ತದೆ. ಇದರಿಂದಾಗಿ ಪ್ರಥಮಾರ್ಧ ಗೋಲಿಲ್ಲದೆ ಕೊನೆಗೊಂಡಿತು. ಗೋವಾ ತಂಡದ ಫೆರಾನ್ ಕೊರೊಮಿನಾಸ್ ಆವರನ್ನು ನಿಯಂತ್ರಿಸಿರುವುದು ಸುನಿಲ್ ಛೆಟ್ರಿ ಪಡೆಯ ಉತ್ತಮ ಸಾಧನೆ ಎಂದರೆ ತಪ್ಪಾಗಲಾರದು. ಹಿಂದಿನ ಪಂದ್ಯದಲ್ಲೂ ಗೋವಾ ಇದೇ ರೀತಿಯಲ್ಲಿ ನಿಯಂತ್ರಿಸಲ್ಪಟ್ಟಿತ್ತು.

ISL 2020: Chhetri, Bengaluru rise to the occasion

ಹೊಸ ವರ್ಷದ ಮೊದಲ ಪಂದ್ಯ
ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಹೊಸ ವರ್ಷದ ಸಂಭ್ರಮ. 2020ರ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ಎಫ್ ಸಿ ಹಾಗೂ ಕಳೆದ ಬಾರಿಯ ಫೈನಲಿಸ್ಟ್ ಎಫ್ ಸಿ ಗೋವಾ ತಂಡಗಳು ಮುಖಾಮುಖಿಯಾದವು. ಇಲ್ಲಿ ಜಯ ಗಳಿಸಿದರೆ ಗೋವಾ ತಂಡ ಅಂಕಪಟ್ಟಿಯಲ್ಲಿ ತನ್ನ ಅಗ್ರ ಸ್ಥಾನವನ್ನು ಕಾಯ್ದುಕೊಳ್ಳಲಿದೆ. ಅಲ್ಲದೆ ಪ್ಲೈಆಫ್ ನಲ್ಲಿ ತನ್ನ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಳ್ಳಲಿದೆ. ಕಳೆದ ನಾಲ್ಕೂ ಪಂದ್ಯಗಳಲ್ಲಿ ಜಯ ಗಳಿಸಿರುವ ಗೋವಾ ಈಗ 5 ರಲ್ಲಿ 5 ರ ಸಾಧನೆ ಮಾಡಲಿದೆ. ಬ್ರೆಂಡಾನ್ ಫೆರ್ನಾಂಡೀಸ್, ಹ್ಯುಗೋ ಬೌಮಾಸ್ ಹಾಗೂ ಫೆರಾನ್ ಕೊರೊಮಿನಾಸ್ ಆವರನ್ನು ಓಟಕ್ಕೆ ಬೆಂಗಳೂರು ಬ್ರೇಕ್ ಹಾಕಬೇಕಾಗಿದೆ, ಡಿಫೆನ್ಸ್ ವಿಭಾಗದಲ್ಲಿ ಅಹಮದ್ ಜಹೌ ಗೋವಾದ ಭದ್ರ ಕೋಟೆ ಎನಿಸಿದ್ದಾರೆ.

ಗೋವಾ ತಂಡಕ್ಕೆ ಬೆಂಗಳೂರು ಎಫ್ ಸಿ ಅತ್ಯಂತ ಕಠಿಣ ಎದುರಾಳಿ ಎನಿಸಿದೆ. ಪ್ರವಾಸಿ ತಂಡ ಬೆಂಗಳೂರು ವಿರುದ್ಧ ಇದುವರೆಗೂ ಗೆದ್ದಿರುವುದು ಕೇವಲ ಒಂದು ಪಂದ್ಯ. ಬೆಂಗಳೂರು ತಂಡ ಮುಂಬೈ ಸಿಟಿ ವಿರುದ್ಧ ಸೋಲುವವರೆಗೂ ಅಜೇಯ ತಂಡವಾಗಿ ಸಾಗುತ್ತಿತ್ತು. ಈಗ ಇತರ ತಂಡಗಳು ಉತ್ತಮ ರೀತಿಯಲ್ಲಿ ಪ್ರದರ್ಶನ ತೋರುತ್ತಿರುವುದರಿಂದ ಬೆಂಗಳೂರು ತಂಡಕ್ಕೆ ಅಂತಿಮ ನಾಲ್ಕರಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಬೇಕಾದರೆ ಇಲ್ಲಿ ಗೆಲ್ಲಬೇಕಾದ ಅಗತ್ಯ ಇದೆ. ಬೆಂಗಳೂರು ತಂಡ ಇದುವರೆಗೂ 11 ಗೋಲುಗಳನ್ನು ಗಳಿಸಿದೆ. ಜೆಮ್ಷೆಡ್ಪರು ಹಾಗೂ ಮುಂಬೈ ತಂಡಗಳು ನಾಲ್ಕನೇ ಸ್ಥಾನದಲ್ಲಿ ಭದ್ರವಾಗಿ ತಳ ೂರಲು ಯತ್ನಿಸುತ್ತಿರುವುದರಿಂದ ಬೆಂಗಳೂರು ತಂಡದ ಪ್ರಮುಖ ಆಟಗಾರರು ತಮ್ಮ ನೈಜ ಪ್ರದರ್ಶನ ತೋರಬೇಕಾಗಿದೆ.

Story first published: Saturday, January 4, 2020, 1:29 [IST]
Other articles published on Jan 4, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+