Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಎಸ್‌ಎಲ್: ಗೋವಾಕ್ಕೆ ಆಘಾತ ನೀಡುವ ನಿರೀಕ್ಷೆಯಲ್ಲಿ ಚೆನ್ನೈಯಿನ್

ISL 2020: FC Goa eyeing continuity in performance

ಗೋವಾ: ಹೀರೋ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಶನಿವಾರ ನಡೆಯಲಿರುವ ಪಂದ್ಯದಲ್ಲಿ ಬಲಿಷ್ಠ ಗೋವಾ ಎಫ್‌ಸಿ ವಿರುದ್ಧ ಚೆನ್ನೈಯಿನ್ ತಂಡ ಮೂರು ಅಂಕ ಗಳಿಸುವ ಗುರಿಯೊಂದಿಗೆ ಅಂಗಳಕ್ಕೆ ಇಳಿಯಲಿದೆ. ಎರಡು ಜಯ, ಎರಡು ಡ್ರಾ ಹಾಗೂ ಎರಡು ಸೋಲಿನ ಆಘಾತ ಕಂಡಿರುವ ಗೋವಾ ಎಫ್‌ಸಿ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಇದುವರೆಗೆ ಪ್ರದರ್ಶನ ನೀಡಿರಲಿಲ್ಲ. ಎರಡು ಬಾರಿ ಚಾಂಪಿಯನ್ ಚೆನ್ನೈುನ್ ಕೂಡ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಆಟ ಪ್ರದರ್ಶಿಸಲಿಲ್ಲ. ಐಗರ್ ಆಂಗುಲೋ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವ"ಸಿದ್ದು ಪ್ರತಿ ಬಾರಿಯೂ ಗೋಲ್ ಗಳಿಸಿದ್ದಾರೆ.

ಗೋವಾ ತಂಡ ಫೀಲ್ಡ್ ಗೋಲಿಗಿಂತ ಸೆಟ್ ಪೀಸ್ ಮೂಲಕ ಗೋಲು ಗಳಿಸಿದ್ದೇ ಹೆಚ್ಚು. ಗೋಲಿನ ಕಡೆ ಗುರಿುಡುವುದರಲ್ಲೂ ಗೋವಾ ಕೆಳಹಂತದಲ್ಲಿ ಎರಡನೇ ಸ್ಥಾನದಲ್ಲಿದೆ. ನಮ್ಮ ಗುರಿ ಪಂದ್ಯವನ್ನು ಗೆಲ್ಲುವುದಾಗಿದೆ. ಆದರೆ ಕೆಲವೊಮ್ಮೆ ಡ್ರಾಗೆ ತೃಪ್ತಿಪಡಬೇಕಾಗುತ್ತದೆ. ತಂಡ ದ್ವಿತೀಯಾರ್ಧದಲ್ಲಿ ಗೋಲುಗಳನ್ನು ನೀಡುತ್ತಿದ್ದು ಇದು "ನ್ನೆಡೆಗೆ ಪ್ರಮುಖ ಕಾರಣವಾಗಿದೆ ಎಂದು ಕೋಚ್ ಜೂವಾನ್ ಫೆರಂಡೋ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ.

ಒತ್ತಡಕ್ಕೆ ಸಿಲುಕುತ್ತಿದ್ದೇವೆ

ಒತ್ತಡಕ್ಕೆ ಸಿಲುಕುತ್ತಿದ್ದೇವೆ

ನಾವು ಆಕ್ರಮಣಕಾರಿ ಆಟಕ್ಕೆ ಮನಸ್ಸು ಮಾಡಿ ಒತ್ತಡಕ್ಕೆ ಸಿಲುಕುತ್ತಿದ್ದೇವೆ. ಇದರಿಂದಾಗಿ ಅಂತಿಮ ಕ್ಷಣದಲ್ಲಿ ಪೆನಾಲ್ಟಿ ಮೂಲಕ ಗೋಲ್ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾುತು. ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ನೋಡಕೊಳ್ಳಬೇಕಾಗಿದೆ ಸ್ಪೈನ್ ಮೂಲದ ಕೋಚ್ ಹೇಳಿದರು.
ನಾವು ಅಂಗಳದಲ್ಲಿ ಕಠಿಣ ಶ್ರಮ ವ"ಸಿದರೆ ಅಂತಿಮವಾಗಿ ನಮಗೆ ಯಶಸ್ಸು ಕಟ್ಟಿಟ್ಟ ಬುತ್ತಿ. ಈ "ನ್ನೆಲೆಯಲ್ಲಿ ನಮ್ಮ ತಂಡ ನಿರಂತರವಾಗಿ ಕಠಿಣ ಶ್ರಮ ವ"ಸುತ್ತಲೇ ಇರುತ್ತದೆ ಎಂದು ಗೋವಾದ ಕೋಚ್ ಫೆರಾಂಡೋ ಅತ್ಯಂತ ಆತ್ಮ"ಶ್ವಾಸದಲ್ಲಿ ನುಡಿದರು.

ಅಂಕ ಪಟ್ಟಿಯಲ್ಲಿ 8ನೇ ಸ್ಥಾನ

ಅಂಕ ಪಟ್ಟಿಯಲ್ಲಿ 8ನೇ ಸ್ಥಾನ

ಎರಡು ಬಾರಿ ಚಾಂಪಿಯನ್ ಆಗಿರುವ ಚೆನ್ನೈುನ್ ತಂಡ ಗೋವಾದ ರೀತಿಯಲ್ಲೇ ಇದುವರೆಗೂ ಹೆಜ್ಜೆ ಹಾಕಿದೆ. ಚೆನ್ನೈುನ್ ತಂಡ ಆಡಿರುವ 5 ಪಂದ್ಯದಲ್ಲಿ 3 ಗೋಲ್ ಗಳಿಸಿ ಐದು ಅಂಕಗಳ ಮೂಲಕ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ.
ನಾವು ಆಕ್ರಮಣಕಾರಿ ಆಟಕ್ಕೆ ಮನಸ್ಸು ಮಾಡಬಾರದು. ನಾವು ಪಂದ್ಯವನ್ನು ಗೆಲ್ಲುವುದರ ಕಡೆಗೆ ಗುರಿ ಹೊಂದಿರಬೇಕು. ಗೋವಾ "ರುದ್ಧ ನಾವು ಸಂಘಟಿತರಾಗಿ ಆಡಬೇಕಾಗುತ್ತದೆ. ಆಗ ನಾವು ಯಶಸ್ಸು ಕಾಣಬಹುದು ಎಂದು ಚೆನ್ನೈುನ್ ತಂಡದ ಕೋಚ್ ಸಾಬಾ ಲಾಸಿಯೋ ಹೇಳಿದ್ದಾರೆ.

 ಹಗುರವಾಗಿ ಪರಿಗಣಿಸುವುದಿಲ್ಲ

ಹಗುರವಾಗಿ ಪರಿಗಣಿಸುವುದಿಲ್ಲ

"ಹಿಂದಿನ ಪಂದ್ಯದಲ್ಲಿ ಗೋವಾ ಎಟಿಕೆ ಮೋಹನ್ ಬಾಗನ್ ವಿರುದ್ಧ ಸೋಲನ್ನು ಅನುಭಸಿತ್ತು. ಆದರೂ ಎರಡು ಬಾರಿ ರನ್ನರ್‌ಅಪ್ ಆಗಿರುವ ಗೋವಾ ತಂಡವನ್ನು ಹಗುರವಾಗಿ ಪರಿಗಣಿಸುವುದಿಲ್ಲ ಎಂದು ಲಾಸಿಯೋ ಎಚ್ಚರಿಸಿದ್ದಾರೆ.
ಗೋವಾ ಉತ್ತಮ ತಂಡವಾಗಿದ್ದು ನಾವು ಕೂಡ ಉತ್ತಮ ರೀತಿಯ ಫುಟ್‌ಬಾಲ್ ಆಡುತ್ತಿದ್ದೇವೆ. ಎರಡೂ ತಂಡಗಳಿಂದ ಪೈಪೋಟಿ ನಿರೀಕ್ಷಿಸಬಹುದು ಎಂದು ಲಾಸಿಯೋ ಹೇಳಿದ್ದಾರೆ.
ಚೆನ್ನೈುನ್ ಹಾಗೂ ಗೋವಾ ನಡು"ನ ಪಂದ್ಯ ಈವರೆಗೆ ಗೋಲಿಲ್ಲದೆ ಡ್ರಾ ಆಗಿಲ್ಲ. ಆದ್ದರಿಂದ ನಾಳಿನ ಪಂದ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗೋಲು ದಾಖಲಾಗುವ ಸಾಧ್ಯತೆುದೆ ಎಂದು ಕೋಚ್ ಲಾಸಿಯೋ ಹೇಳಿದ್ದಾರೆ.

Story first published: Saturday, December 19, 2020, 17:21 [IST]
Other articles published on Dec 19, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+