ಐಎಸ್‌ಎಲ್: ಅಗ್ರಸ್ಥಾನ ಕಾಯ್ದುಕೊಳ್ಳುವ ಗುರಿ ಹೊತ್ತ ಮುಂಬೈ ಸಿಟಿ

ಗೋವಾ, ಡಿಸೆಂಬರ್ 8: ಸತತ ಮೂರು ಜಯ ಗಳಿಸಿದ ಆತ್ಮವಿಶ್ವಾದಲ್ಲಿರುವ ಮುಂಬಯ ಸಿಟಿ ಎಫ್ ಸಿ ಬುಧವಾರ ನಡೆಯಲಿರುವ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಚೆನ್ನೈಯಿನ್ ತಂಡದ ವಿರುದ್ಧ ಜಯ ಗಳಿಸಿ ಅಗ್ರ ಸ್ಥಾನ ಕಾಯ್ದುಕೊಳ್ಳುವ ಗುರಿ ಹೊಂದಿದೆ. ನಾರ್ಥ್ ಈಸ್ಟ್ ಯುನೈಟೆಡ್ ತಂಡದ ವಿರುದ್ಧದ ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿದ ನಂತರ ಸರ್ಗಿಯೋ ಲೊಬೆರಾ ಪಡೆ ಮತ್ತೆ ಹಿಂದಿರುಗಿ ನೋಡದೆ ಸತತ ಮೂರು ಜಯ ಗಳಿಸಿತ್ತು ಅಗ್ರ ಸ್ಥಾನಕ್ಕೇರಿತು.
ಸೋಮವಾರದ ಪಂದ್ಯದಲ್ಲಿ ಎಟಿಕೆ ಮೋಹನ್ ಬಾಗನ್ ತಂಡ ಜೆಮ್ಷೆಡ್ಪುರ ವಿರುದ್ಧ ಸೋಲನುಭವಿಸುವ ಮೂಲಕ ಗೋಲುಗಳ ವ್ಯತ್ಯಾಸದಲ್ಲಿ ಮುಂಬೈ ಅಗ್ರಸ್ಥಾನಿಯಾಯಿತು. ಉತ್ತಮ ಆಟಗಾರರನ್ನು ಹೊಂದಿರುವುದು ಮುಂಬೈ ತಂಡಕ್ಕೆ ಕೊನೆಗೂ ಪ್ರತಿಫಲ ತಂದುಕೊಟ್ಟಿತು.

ಉತ್ತಮ ಬದಲಾವಣೆಯೇ ಅಯಿತು
ಲೊಬೆರಾ ಅವರು ಆಟಗಾರರನ್ನು ಆಗಾಗ ಬದಲಾಯಿಸುತ್ತಿರುವುದು ತಂಡದ ಮೇಲೆ ಉತ್ತಮ ಬದಲಾವಣೆಯೇ ಅಯಿತು. ಅಹಮದ್ ಜಹೊವ್, ಹ್ಯೂಗೊ ಬೌಮೌಸ್, ರೌಲಿನ್ ಬೋರ್ಗಸ್ ಮತ್ತು ಆಡಂ ಲೇ ಫಾಂಡ್ರೆ ಡೆಫೆನ್ಸ್ ವಿಭಾಗದಲ್ಲಿ ಉತ್ತಮವಾಗಿ ಕಾರ್ಯವನಿರ್ವಹಿಸಿದ್ದು ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದೆ. ಗೋಲ್ ಕೀಪರ್ ಅಮ್ರಿಂದರ್ ಸಿಂಗ್ ಕೂಡ ತಂಡದ ಯಶಸ್ಸಿಗೆ ಕಾರಣರಾಗಿದ್ದಾರೆ. ಮುಂಬಯ ಸಿಟಿ ಇದುವರೆಗೂ ಎದುರಾಳಿ ತಂಡಕ್ಕೆ ಕೇವಲ ಒಂದು ಗೋಲು ಗಳಿಸಲು ಅವಕಾಶ ನೀಡಿದ್ದು, ಮೂರು ಕ್ಲೀನ್ ಶೀಟ್ ಸಾಧನೆ ಮಾಡಿದೆ.

ಗಮನಿಸಿದರೆ ಅದು ತಪ್ಪಾಗುತ್ತದೆ
"ಆಟದ ಕಡೆಗೆನೇ ನಮ್ಮ ಏಕಾಗ್ರತೆ ಮುಂದುವರಿಯಲಿದೆ," ಎಂದು ಲೊಬೆರಾ ಹೇಳಿದ್ದು, "ನಾವು ಈ ಹಂತದಲ್ಲಿ ಅಂಕಪಟ್ಟಿಯನ್ನು ಗಮನಿಸಿದರೆ ಅದು ತಪ್ಪಾಗುತ್ತದೆ, ನಾವು ಮತ್ತಷ್ಟು ಪಂದ್ಯಗಳನ್ನು ಗೆಲ್ಲಬೇಕು. ನಾವು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದೇವೆ, ಈ ಹಂತದಲ್ಲಿ ಅದು ಖುಷಿಕೊಡುತ್ತದೆ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಮುಂದಿನ ಪಂದ್ಯಗಳನ್ನು ಗೆಲ್ಲುವ ಕಡೆಗೆ ಗಮನಹರಿಸುವುದು, ಹೊರತಾಗಿ ನಾವು ಎಲ್ಲಿ ನಿಲ್ಲಬೇಕು ಎಂಬುದರ ಬಗ್ಗೆಯಲ್ಲ, ಪಂದ್ಯದ ನಂತರ ಪಂದ್ಯವನ್ನು ಆಡುತ್ತ ಸಾಗಬೇಕು. ಕೊನೆಯಲ್ಲಿ ಅಂಕಪಟ್ಟಿ ನೋಡಬೇಕು," ಎಂದರು.

ಕ್ಲಿಷ್ಟವಾದ ಸ್ಥಿತಿ ತಲುಪಿದೆ
ಇದೇ ವೇಳೆ ಚೆನ್ನೈಯಿನ್ ತಂಡ ಕ್ಲಿಷ್ಟವಾದ ಸ್ಥಿತಿ ತಲುಪಿದೆ. ಎರಡು ಬಾರಿ ಚಾಂಪಿಯನ್ ತಂಡ ಮೊದಲ ಪಂದ್ಯದಲ್ಲಿ 2-1 ಗೋಲಿನಿಂದ ಜಯ ಗಳಿಸಿತ್ತು, ಆದರೆ ನಂತರದ ಎರಡು ಪಂದ್ಯಗಳಲ್ಲಿ ಜಯ ಗಳಿಸುವಲ್ಲಿ ವಿಫಲವಾಗಿತ್ತು, ಮಾತ್ರವಲ್ಲ ಗೋಲನ್ನೂ ಗಳಿಸಿರಲಿಲ್ಲ. ಸಾಬಾ ಲಾಜ್ಲೋ ಪಡೆ, ಅಟ್ಯಾಕ್ ವಿಭಾಗದಲ್ಲಿ ಉತ್ತಮ ಆಟಗಾರರಿಂದ ಕೂಡಿದ್ದು, ಅವಕಾಶಗಳನ್ನು ಗೋಲಾಗಿಸುವಲ್ಲಿ ವಿಫಲವಾಗಿದೆ. ಇದುವರೆಗೂ ಓಪನ್ ಫೀಲ್ಡ್ ನಲ್ಲಿ ಎದುರಾಳಿ ತಂಡಕ್ಕೆ ಗೋಲು ನೀಡದಿರುವ ಮುಂಬೈ ವಿರುದ್ಧ ಚೆನ್ನೈಯಿನ್ ಗೋಲು ಗಳಿಸುವ ಗುರಿ ಹೊಂದಿದೆ. ಗಾಯಗೊಂಡಿರುವ ಅನಿರುದ್ಧ್ ಥಾಪಾ ಅವರು ನಾಳೆಯ ಪಂದ್ಯದಿಂದ ವಂಚಿತರಾಗುತ್ತಿದ್ದು, ರಫಾಯಲ್ ಕ್ರಿವೆಲ್ಲೆರೋ ಅವರ ಮೇಲೆ ಹೆಚ್ಚಿನ ಜವಾಬ್ದಾರಿ ಬೀಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications