For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2020: ಗೆದ್ದು ಗೌರವ ಕಾಯ್ದುಕೊಂಡ ಹೈದರಾಬಾದ್ ಎಫ್‌ಸಿ

By Isl Media
ISL 2020: Hyderabad run riot in Guwahati, end season in style

ಗುವಾಹಟಿ, ಫೆಬ್ರವರಿ 20: ಲಿಸ್ಟನ್ ಕೊಲಾಕೊ (12 ಮತ್ತು 41ನೇ ನಿಮಿಷ), ಮಾರ್ಸೆಲೋ ಪೆರೆರಾ (13 ಮತ್ತು 88ನೇ ನಿಮಿಷ) ಮತ್ತು ಮೊಹಮ್ಮದ್ ಯಾಸಿರ್ (55ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ನಾರ್ಥ್ ಈಸ್ಟ್ ಯುನೈಟೆಡ್ ತಂಡವನ್ನು 5-1 ಗೋಲುಗಳ ಅಂತರದಲ್ಲಿ ಮಣಿಸಿದ ಹೈದರಾಬಾದ್ ಎಫ್ ಸಿ ಕೊನೆಯ ಸ್ಥಾನದಲ್ಲಿದ್ದರೂ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ತನ್ನ ಗೌರವವನ್ನು ಕಾಯ್ದುಕೊಂಡಿತು. ನಾರ್ಥ್ ಈಸ್ಟ್ ಪರ ಆ್ಯಂಡ್ರ್ಯು ಕಿಯೊಗ್ 35ನೇ ನಿಮಿಷದಲ್ಲಿ ಏಕೈಕ ಗೋಲು ಗಳಿಸಿದರು. ಇದು ಹೈದರಾಬಾದ್ ತಂಡ ಮನೆಯಂಗಣದ ಹೊರಗಡೆ ಗಳಿಸಿದ ಮೊದಲ ಜಯ.

ಹೈದರಾಬಾದ್ ಮೇಲುಗೈ
ಹೈದರಾಬಾದ್ ಗೆ ಕೊನೆಯ ಸ್ಥಾನಕ್ಕಿಂತ ಅತಿ ಕಡಿಮೆ ಅಂಕ ಗಳಿಸಿದ ಕುಖ್ಯಾತಿಯಿಂದ ಮುಜುಗರಕ್ಕೆ ಒಳಗಾಗಬಾರದು ಎಂಬುದು ಮುಖ್ಯ ಗುರಿಯಾಗಿತ್ತು. ಅದೇ ರೀತಿಯಲ್ಲಿ ಆಟ ಪ್ರದರ್ಶಿಸಿದ ತಂಡಕ್ಕೆ ಪ್ರಥಮಾರ್ದದಲ್ಲಿ 3-1 ಗೋಲಿನಿಂದ ಮುನ್ನಡೆ. 12ನೇ ನಿಮಿಷದಲ್ಲಿ ಲಿಸ್ಟನ್ ಕೊಲಾಕೊ ಗಳಿಸಿದ ಗೋಲಿನಿಂದ ಹೈದರಾಬಾದ್ ಮೇಲುಗೈ ಸಾಧಿಸಿತು. ಮತ್ತೊಂದು ನಿಮಿಷ ಕಳೆಯುತ್ತಿದ್ದಂತೆ ಮಾರ್ಸೆಲೊ ಪೆರೆರಾ ಗಳಿಸಿದ ಗೋಲು ತಂಡಕ್ಕೆ 2-0 ಮುನ್ನಡೆ ತಂದುಕೊಟ್ಟಿತು. 35ನೇ ನಿಮಿಷದಲ್ಲಿ ನಾರ್ಥ್ ಈಸ್ಟ್ ಯುನೈಟೆಡ್ ಪರ ಆ್ಯಂಡ್ರ್ಯು ಕಿಯೊಗ್ ಗಳಿಸಿ ಗೋಲಿನಿಂದ ಖಾತೆ ತೆರೆಯುವಂತಾಯಿತು. 41ನೇ ನಿಮಿಷದಲ್ಲಿ ಲಿಸ್ಟನ್ ಕೊಲಾಕೊ ವೈಯಕ್ತಿಕ ಎರಡನೇ ಗೋಲು ಗಳಿಸುವ ಮೂಲಕ 3-1 ಅಂತರದಲ್ಲಿ ಮುನ್ನಡೆ ಕಾಯ್ದಕೊಂಡಿತು.

ISL 2020: Hyderabad run riot in Guwahati, end season in style

ಆಟಕ್ಕುಂಟು ಲೆಕ್ಕಕ್ಕಿಲ್ಲ!
ಹೀರೋ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ನಾರ್ಥ್ ಈಸ್ಟ್ ಯುನೈಟೆಡ್ ತಂಡ ಹೈದರಾಬಾದ್ ಎಫ್ ಸಿ ವಿರುದ್ಧ ಹೋರಾಟಕ್ಕೆ ಮುಂದಾಯಿತು. ಇದು ಆಟಕ್ಕುಂಟು ಲೆಕ್ಕಕ್ಕಿಲ್ಲದ ಪಂದ್ಯ. ಇತ್ತಂಡಗಳಿಗೂ ಈ ಬಾರಿ ಮರೆಯಬೇಕಾದ ಋತುವೆನಸಿದೆ. ಕೊನೆಯ ಸ್ಥಾನದಲ್ಲಿರುವ ಇತ್ತಂಡಗಳು ಗೆದ್ದು ಗೌರವ ಕಾಯ್ದುಕೊಳ್ಳುವ ಉದ್ದೇಶದಿಂದ ಮುಖಾಮುಖಿಯಾದವು.

16 ಪಂದ್ಯಗಳನ್ನು ಆಡಿರುವ ನಾರ್ಥ್ ಈಸ್ಟ್ 13 ಅಂಕಗಳನ್ನು ಗಳಿಸಿ ಕೆಳಗಿನಿಂದ ಎರಡನೇ ಸ್ಥಾನದಲ್ಲಿದೆ. ಉಳಿದಿರುವ ಪಂದ್ಯಗಳಲ್ಲಿ ಜಯ ಗಳಿಸಿದರೆ ಏಳನೇ ಸ್ಥಾನದವರೆಗೂ ತಲಪುವ ಸಾಧ್ಯತೆ ಇದೆ. ಆದರೆ ಈ ಬಾರಿಯ ಲೀಗ್ ನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ತೋರಲಿಲ್ಲ. ಗಾಯದ ಸಮಸ್ಯೆ ತಂಡವನ್ನು ಉತ್ತಮ ಪ್ರದರ್ಶನಕ್ಕೆ ಅಡ್ಡಿ ತಂದಿತ್ತು. ಅಸಮೋಹ್ ಗ್ಯಾನ್ ಗಾಯದ ಸಮಸ್ಯೆಯಿಂದ ತಂಡಡದಿಂದ ಹೊರಗೆ ಉಳಿದದ್ದು ನಾರ್ಥ್ ಈಸ್ಟ್ ನ ನಿರಂತರ ವೈಫಲ್ಯಕ್ಕೆ ಕಾರಣವಾಯಿತು. ಅವರ ಸ್ಥಾನದಲ್ಲಿ ತಂಡವನ್ನು ಸೇರಕೊಂಡ ಆ್ಯಂಡಿ ಕೆಯೊಗ್ ಅವರಿಂದ ತಂಡಕ್ಕೆ ಯಾವುದೇ ರೀತಿಯ ಪ್ರಯೋಜನವಾಗಲಿಲ್ಲ. 12 ಪಂದ್ಯಗಳ ಹಿಂದೆ ನಾರ್ಥ್ ಈಸ್ಟ್ ತಂಡ ಜಯ ಗಳಿಸಿತ್ತು, ಅದು ಕೋಡ ಹೈದರಾಬಾದ್ ವಿರುದ್ಧ.

ಕೊನೆಯ ಸ್ಥಾನದಲ್ಲಿರುವ ಹೈದರಾಬಾದ್ ವಿರುದ್ಧ ಫೆಡರಿಕೊ ಗಲ್ಲಗೋ ಪಡೆ ಜಯ ಗಳಿಸುವ ಆಶಯ ಹೊಂದಿದೆ, 17 ಪಂದ್ಯಗಳನ್ನು ಆಡಿರುವ ಹೈದರಾಬಾದ್ ಗೆದ್ದಿರುವುದು ಕೇವಲ 7 ಅಂಕ. ಋತುವಿನ ಕೊನೆಯ ಪಂದ್ಯದಲ್ಲಿ ಗೆಲ್ಲುವುದು ಮಾತ್ರವಲ್ಲ, ಐಎಸ್ ಎಲ್ ಋತುವಿನಲ್ಲೇ ಕಡಿಮೆ ಅಂಕ ಗಳಿಸಿದ ತಂಡ ಎನಿಸಿಕೊಳ್ಳಬಾರದು ಎಂಬುದು ಮಧ್ಯಂತರ ಕೋಚ್ ಜೇವಿಯರ್ ಲೊಪೇಜ್ ಅವರ ಗುರಿಯಾಗಿದೆ. ಕಳೆದ ಋತುವಿನಲ್ಲಿ ಚೆನ್ನೈಯಿನ್ ತಂಡ 9 ಅಂಕಗಳನ್ನು ಗಳಿಸಿದ್ದು, ಚೆನ್ನೈಯಿನ್ ಗಿಂತ ಹೆಚ್ಚು ಅಂಕ ಗಳಿಸುವುದು ಈಗ ಹೈದರಾಬಾದ್ ಮುಂದಿರುವ ಸವಾಲು.

Story first published: Thursday, February 20, 2020, 22:05 [IST]
Other articles published on Feb 20, 2020
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+