For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2020: ಅಂಕ ಹಂಚಿಕೊಂಡ ಹೈದರಾಬಾದ್-ಜೆಮ್ಷೆಡ್ಪುರ

By Isl Media
ISL 2020: Late Jamshedpur goal denies Hyderabad winning end to home season

ಹೈದರಾಬಾದ್, ಫೆಬ್ರವರಿ 14: ಹೈದರಾಬಾದ್ ಪರ ನೆಸ್ಟರ್ ಗೋರ್ಡಿಲೊ (39ನೇ ನಿಮಿಷ) ಹಾಗೂ ಜೆಮ್ಷೆಡ್ಪುರ ಎಫ್ ಸಿ ಪರ ಸುಮೀತ್ ಪಾಸ್ಸಿ (90+4ನೇ ನಿಮಿಷ) ಕೊನೆಯ ಕ್ಷಣದಲ್ಲಿ ಗಳಿಸಿದ ಗೋಲಿನಿಂದ ಹೀರೋ ಇಂಡಿಯನ್ ಸೂಪರ್ ಲೀಗ್ ನ 81ನೇ ಪಂದ್ಯ 1-1 ಗೋಲಿನಿಂದ ಡ್ರಾಗೊಂಡಿತು. ಮನೆಯಂಗಣದಲ್ಲಿ ನಡೆದ ಕೊನೆಯ ಪಂದ್ಯದಲ್ಲಾದರೂ ಜಯ ಗಳಿಸಬೇಕೆಂಬ ಹೈದರಾಬಾದ್ ತಂಡದ ಆಸೆ ಕೊನೆಗೂ ಈಡೇರಲೇ ಇಲ್ಲ.

ಹೈದರಾಬಾದ್ ಮುನ್ನಡೆ
ಹೈದರಾಬಾದ್ ತಂಡ ತನ್ನ ಚೊಚ್ಚಲ ಇಂಡಿಯನ್ ಸೂಪರ್ ಲೀಗ್ ನಲ್ಲಿ ಕಳಪೆ ಪ್ರದರ್ಶನ ತೋರಿರಬಹುದು ಆದರೆ ಮನೆಯಂಗಣದ ಪ್ರೇಕ್ಷಕರು ಮಾತ್ರ ತಮ್ಮ ಪ್ರೀತಿಯನ್ನು ತೋರುವಲ್ಲಿ ಹಿಂದೆ ಬಿದ್ದಿಲ್ಲ. ಪ್ರೇಕ್ಷಕರ ಪ್ರೀತಿಗೆ ಪಾತ್ರವಾದ ಹೈದರಾಬಾದ್ ತಂಡ ಜೆಮ್ಷೆಡ್ಪುರ ವಿರುದ್ಧದ ಪಂದ್ಯದ ಪ್ರಥಮಾರ್ಧದಲ್ಲಿ ಗೋಲು ಗಳಿಸಿ ಮೇಲುಗೈ ಕಂಡುಕೊಂಡಿತು. 39ನೇ ನಿಮಿಷದಲ್ಲಿ ನೆಸ್ಟರ್ ಗೋರ್ಡಿಲೊ ಗಳಿಸಿದ ಗೋಲು ಆತಿಥೇಯ ತಂಡಕ್ಕೆ ಮುನ್ನಡೆ ತಂದುಕೊಟ್ಟಿತು. ಈ ಫಲಿತಾಂಶ ತಂಡದ ಮುಂದಿನ ನಡೆಯ ಮೇಲೆ ಯಾವುದೇ ಪರಿಣಾಮ ಬೀರದು ಎಂದು ತಿಳಿದಿದ್ದರೂ ಇತ್ತಂಡಗಳು ಉತ್ತಮ ರೀತಿಯ ಫುಟ್ಬಾಲ್ ಪ್ರದರ್ಶನ ನೀಡಿದವು. ಜೆಮ್ಷೆಡ್ಪುರ ತಂಡ ಚೆಂಡಿನ ಮೇಲೆ ಹೆಚ್ಚು ನಿಯಂತ್ರಣ ಸಾಧಿಸಿದರೂ ಅವಕಾಶಗಳನ್ನು ನಿರ್ಮಿಸುವಲ್ಲಿ ವಿಫಲವಾಯಿತು.

ISL 2020: Late Jamshedpur goal denies Hyderabad winning end to home season

ಮನೆಯಂಗಣದಲ್ಲಿ ಗೆಲ್ಲುವ ಹಂಬಲ
ಹೈದರಬಾದ್ ಎಫ್ ಸಿ ತಂಡಕ್ಕೆ ತನ್ನ ಚೊಚ್ಚಲ ಇಂಡಿಯನ್ ಸೂಪರ್ ಲೀಗನ್ನು ಬೇಗನೇ ಮರೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ , ಅತಿ ಕಡಿಮೆ ಗೋಲು ಗಳಿಸಿದ ತಂಡದಲ್ಲಿ ಎರಡನೇ ಸ್ಥಾನ ಹಾಗೂ ಅತಿ ಹೆಚ್ಚು ಗೋಲು ನೀಡಿದ ತಂಡವೆನಿಸಿರುವ ಹೈದರಾಬಾದ್ ಈಗ ಮನೆಯಂಗಣದಲ್ಲಿ ನಡೆಯುವ ಕೊನೆಯ ಪಂದ್ಯದಲ್ಲಿ ಜಯ ಗಳಿಸುವ ಗುರಿಯೊಂದಿಗೆ ಅಂಗಣಕ್ಕಿಳಿಯಿತು. ಕೊನೆಯ ಸ್ಥಾನದಲ್ಲಿರಲು ಹೈದರಾಬಾದ್ ಬೇರೆ ಯಾರನ್ನೂ ದೂಷಿಸಿದೆ ತನ್ನ ಪ್ರದರ್ಶನವನ್ನೇ ಮತ್ತೊಮ್ಮೆ ಅವಲೋಕಿಸಬೇಕಾಗಿದೆ.

ಮಾರ್ಸೆಲೋ ಪೆರೆರಾ ಹಾಗೂ ಬೊಬೊ ಅವರನ್ನು ಹೊರತುಪಡಿಸಿದರೆ ಇತರ ಆಟಗಾರರು ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ತೋರಲಿಲ್ಲ. ನೀಡಿದ ಉತ್ತಮ ಪ್ರದರ್ಶನವೂ ಸ್ಥಿರವಾಗಿರಲಿಲ್ಲ. ಜೆಮ್ಷೆಡ್ಪುರ ತಂಡ ಆರಂಭದಲ್ಲಿ ತೋರಿದ ಪ್ರದರ್ಶನವನ್ನು ಸ್ಥಿರವಾಗಿ ನೀಡುವಲ್ಲಿ ವಿಫಲವಾಯಿತು. ಪರಿಣಾಮ ಈ ಬಾರಿಯೂ ಪ್ಲೇ ಆಫ್ ಹಂತವನ್ನು ತಲಪುವಲ್ಲಿ ವಿಫಲವಾಯಿತು. ಮೊದಲ ಐದು ಪಂದ್ಯಗಳಲ್ಲಿ 10 ಅಂಕಗಳನ್ನು ಗಳಿಸಿದ್ದ ಟಾಟಾ ಪಡೆ ನಂತರದ 11 ಪಂದ್ಯಗಳಲ್ಲಿ ಗಳಿಸಿದ್ದು, ಬರೇ 7 ಅಂಕ. ಮೆಮೊ ಮೌರಾ, ನೊಯ್ ಅಕೊಸ್ಟಾ ಮತ್ತು ಡೇವಿಡ್ ಗ್ರಾಂಡ್ ತಂಡಡದ ಗೌರವ ಕಾಯ್ದಿದ್ದಾರೆ.

ಅಂಕ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿರುವ ಜೆಮ್ಷೆಡ್ಪುರ, 16 ಪಂದ್ಯಗಳಲ್ಲಿ 29 ಗೋಲುಗಳನ್ನು ಎದುರಾಳಿ ತಂಡಕ್ಕೆ ಗಳಿಸಲು ಅನುವುಮಾಡಿಕೊಟ್ಟಿದೆ. ಇದು ಲೀಗ್ ನಲ್ಲಿಯೇ ಅತಿ ಹೆಚ್ಚು ಗೋಲು ನೀಡಿದ ಎರಡನೇ ತಂಡವೆನಿಸಿದೆ. ಹಿಂದಿನ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಜೆಮ್ಷೆಡ್ಪುರ 3-1 ಗೋಲುಗಳ ಅಂತರದಲ್ಲಿ ಗೆದ್ದಿತ್ತು. ಅದೇ ಆತ್ಮವಿಶ್ವಾಸದೊಂದಿಗೆ ತಂಡ ಅಂಗಣಕ್ಕಿಳಿಯಿತು.

Story first published: Friday, February 14, 2020, 12:07 [IST]
Other articles published on Feb 14, 2020
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+