ಐಎಸ್‌ಎಲ್ 2020: ರೋಚಕ ಪಂದ್ಯದಲ್ಲಿ ಚೆನ್ನೈಗೆ ಸೋಲುಣಿಸಿದ ಮುಂಬೈ

ಗೋವಾ: ಅತ್ಯಂತ ರೋಚಕವಾಗಿ ನಡೆದ ಹೀರೋ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಮುಂಬೈ ಸಿಟಿ ಎಫ್ ಸಿ ತಂಡ ಚೆನ್ನೈಯಿನ್ ವಿರುದ್ಧ 2-1 ಗೋಲುಗಳ ಅಂತರದಲ್ಲಿ ಜಯ ಗಳಿಸಿತು. ವಿಜೇತ ಮುಂಬೈ ಪರ ಹೆರ್ನಾನ್ ಸ್ಯಾಂಟನಾ (45ನೇ ನಿಮಿಷ) ಹಾಗೂ ಲೆ ಫಾಂಡ್ರೆ (75ನೇ ನಿಮಿಷ) ಗೋಲು ಗಳಿಸಿ ಜಯದ ರೂವಾರಿ ಎನಿಸಿದರು. ಚೆನ್ನೈಯಿನ್ ಪರ ಜಾಕೋಬ್ ಸಿಲ್ವಸ್ಟರ್ (40ನೇ ನಿಮಿಷ) ಗಳಿಸಿದ ಗೋಲು ಸೋಲಿನ ಅಂತರವನ್ನು ಕಡಿಮೆ ಮಾಡಿತು.
ರೋಚಕ ಪ್ರಥಮಾರ್ಧ: ಹೀರೋ ಇಂಡಿಯನ್ ಸೂಪರ್ ಲೀಗ್ ನ 7ನೇ ಆವೃತ್ತಿಯ ಪಂದ್ಯಗಳಲ್ಲೇ ಅತ್ಯಂತ ರೋಚಕದ ಕ್ಷಣಗಳನ್ನು ನೀಡಿದ ಪಂದ್ಯ 22ನೇ ಪಂದ್ಯ. ಫಾರ್ವರ್ಡ್ ಲೈನ್ ಮತ್ತು ಬ್ಯಾಕ್ ಲೈನ್ ವಿಭಾಗ ಬಲಿಷ್ಠವಾಗಿದ್ದರೆ ಗೋಲು ಗಳಿಕೆ ಎಷ್ಟು ಕಷ್ಟವಾಗುತ್ತದೆ ಎಂಬುದಕ್ಕೆ ಈ ಪಂದ್ಯ ಸಾಕ್ಷಿಯಾಯಿತು.
ಅವಕಾಶಗಳು ಕೈ ತಪ್ಪಿದರೂ ಚೆನ್ನೈ ಪರ ಜಾಕೋಬ್ ಸಿಲ್ಬಸ್ಟರ್ 40ನೇ ನಿಮಿಷದಲ್ಲಿ ಗಳಿಸಿದ ಗೋಲು ತಂಡಕ್ಕೆ ಮುನ್ನಡೆ ತಂದುಕೊಟ್ಟಿತು. ಇತ್ತಂಡಗಳು ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದವು.

ಮುಂಬೈಗೆ ಕಾರ್ನರ್ ಅವಕಾಶ
ಚೆನ್ನೈ ಚೆಂಡಿನ ಮೇಲೆ ಹೆಚ್ಚು ಹಿಡಿತ ಸಾಧಿಸಿ ಅವಕಾಶಗಳನ್ನು ನಿರ್ಮಿಸಿದರೂ ಗೋಲಿಗಾಗಿ 40 ನಿಮಿಷಗಳ ಕಾಲ ಕಾಯಬೇಕಾಯಿತು. ಮುಂಬೈ ಪ್ರಥಮಾರ್ಧದ ಕೊನೆಯ ಕ್ಷಣದವರೆಗೂ ಹೋರಾಟ ಮುಂದುವರಿಸಿತ್ತು. ರೆಫರಿ ವಿಝಿಲ್ ಊದುವುದಕ್ಕೆ ಕೊನೆ ಕ್ಷಣದಲ್ಲಿ ಮುಂಬೈಗೆ ಕಾರ್ನರ್ ಅವಕಾಶ ಸಿಕ್ಕಿತು. ಹ್ಯೂಗೋ ಬೌಮಾಸ್ ಕಾರ್ನರ್ ನಿಂದ ಎಸೆದ ಚೆಂಡನ್ನು ವಿಶಾಲ್ ಖೈತ್ ತಡೆಯಲು ಕೊಂಚ ಮುಂದೆ ಬಂದಿದ್ದರು, ಆದರೆ ಚೆಂಡು ಅವರ ಕೈಗೆ ಸಿಗದೆ ಹಿಂದೆ ನಿಂತಿದ್ದ ಹೆರ್ನಾನ್ ಸ್ಯಾಂಟನಾ ಅವರಿಗೆ ಹೆಡರ್ ಮಾಡಲು ಅನುಕೂಲವಾಗಿತ್ತು. ಸ್ಯಾಂಟನಾ ಸುಲಭವಾಗಿ ಚೆಂಡನ್ನು ನೆಟ್ ಗೆ ತಳ್ಳಿದರು ಪಂದ್ಯ 1-1ರಲ್ಲಿ ಸಮಬಲಗೊಂಡಿತು.

ಬಲಿಷ್ಠರ ಹೋರಾಟ
ಹೀರೋ ಇಂಡಿಯನ್ ಸೂಪರ್ ಲೀಗ್ ನ 22ನೇ ಪಂದ್ಯದಲ್ಲಿ ಮುಂಬೈ ಸಿಟಿ ಎಫ್ ಸಿ ಹಾಗೂ ಚೆನ್ನೈಯಿನ್ ಎಫ್ ಸಿ ತಂಡಗಳು ಮುಖಾಮುಖಿಯಾಗಲು ಮುಂದಾಗುವುದರೊಂದಿಗೆ ಎರಡು ಬಲಿಷ್ಠ ತಂಡಗಳ ಸ್ಪರ್ಧೆಗೆ ವೇದಿಕೆ ಸಜ್ಜಾಯಿತು. ನಿರಾಶದಾಯಕ ಆರಂಭ ಕಂಡ ಮುಂಬೈ ತಂಡ ನಂತರ ಸತತ ಮೂರು ಪಂದ್ಯಗಳಲ್ಲಿ ಜಯ ಗಳಿಸಿ ಆತ್ಮವಿಶ್ವಾಸದ ಅಲೆಯನ್ನೇ ಎಬ್ಬಿಸಿತು. ಹಿಂದಿನ ಪಂದ್ಯದಲ್ಲಿ ಒಡಿಶಾ ವಿರುದ್ಧ 2-0 ಅಂತರದಲ್ಲಿ ಗೆದ್ದ ಮುಂಬೈ ಈಗ ಚೆನ್ನೈಯಿನ್ ವಿರುದ್ಧ ಯಶಸ್ಸಿನ ಹಾದಿ ತುಳಿಯಲು ಮುಂದಾಯಿತು. ಬಾರ್ಥಲೋಮ್ಯೊ ಒಗ್ಬಚೆ ಮತ್ತು ರೌಲಿನ್ ಬೋರ್ಗಸ್ ಒಡಿಶಾ ವಿರುದ್ಧ ಗೋಲು ಗಳಿಸಿ ತಂಡಕ್ಕೆ ಜಯ ತಂದುಕೊಟ್ಟಿದ್ದರು. ನಾಯಕ ಹಾಗೂ ಗೋಲ್ ಕೀಪರ್ ಅಮ್ರಿಂದರ್ ಸಿಂಗ್ ಬ್ಯಾಕ್ ಲೈನ್ ನಲ್ಲಿ ತಂಡಕ್ಕೆ ಆಧಾರವಾಗಿದ್ದಾರೆ. ಇದುವರೆಗೂ ಅವರು ಮೂರು ಕ್ಲೀನ್ ಶೀಟ್ ಸಾಧನೆಗೆ ತಂಡಕ್ಕೆ ನೆರವಾಗಿದ್ದಾರೆ. ಮುರ್ತಾದಾ ಫಾಲ್ ಇದಕ್ಕೆ ಸೂಕ್ತ ಬೆಂಬಲ ನೀಡಿದ್ದಾರೆ. ಈ ಆಟಗಾರರು ಅದೇ ರೀತಿಯಲ್ಲಿ ಪ್ರದರ್ಶನವನ್ನು ಮುಂದುವರಿಸಿದರೆ ಮುಂಬೈಯ ಜಯದ ಹಾದಿ ಸುಗಮವಾಗಲಿದೆ.

ಜೆಮ್ಷೆಡ್ಪುರ ವಿರುದ್ಧ ಜಯ
ಇನ್ನೊಂದೆಡೆ ಚೆನ್ನೈಯಿನ್ ತಂಡ ಬೆಂಗಳೂರು ವಿರುದ್ಧ ಸೋಲಿನ ಆಘಾತ ಕಂಡು ಈ ಪಂದ್ಯಕ್ಕೆ ಸಜ್ಜಾಗಿದೆ. ಜೆಮ್ಷೆಡ್ಪುರ ವಿರುದ್ಧ ಜಯದೊಂದಿಗೆ ಋತುವಿನ ಆರಂಭ ಕಂಡ ಚೆನ್ನೈಯಿನ್ ನಂತರದ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ವಿರುದ್ಧ ಅಂಕ ಹಂಚಿಕೊಂಡಿತ್ತು. ರಫಾಯಲ್ ಕ್ರಿವಿಲ್ಲರೊ, ಅಲಿ ಸಾಬಿಯಾ ಮತ್ತು ಅನಿರುದ್ಧ್ ಥಾಪಾ ಗೋಲು ಗಳಿಸುವಲ್ಲಿ ನಿಸ್ಸೀಮರು. ಬ್ಯಾಕ್ ಲೈನ್ ನಲ್ಲಿ ಎನಿಸ್ ಸಿಪೊವಿಕ್, ಜೆರ್ರಿ ಲಾಲ್ರಿಯಾನ್ಜುವಾಲಾ ಮತ್ತು ಕೀಪರ್ ವಿನೀತ್ ಕೈಥ್ ಆಧಾರವಾಗಿದ್ದಾರೆ. ಉತ್ತಮ ಆಟಗಾರರಿಂದ ಕೂಡಿರುವ ತಂಡಗಳು ಮುಖಾಮುಖಿಯಾಗುತ್ತಿರುವುದರಿಂದ ಉತ್ತಮ ಫುಟ್ಬಾಲ್ ನಿರೀಕ್ಷೆಯಲ್ಲಿರುವುದು ಸಹಜ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications