Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಎಸ್‌ಎಲ್ 2020: ಇತಿಹಾಸ ನಿರ್ಮಿಸಲು ಗೋವಾಕ್ಕೆ ಒಂದೇ ಅಂಕ ಬಾಕಿ

ISL 2020: One point separates Goa and history in Jamshedpur

ಜೇಮ್ಶೆಡ್ಪುರ, ಫೆಬ್ರವರಿ 18: ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಅಗ್ರ ಸ್ಥಾನಕ್ಕೇರಲು ಹಾಗೂ ಇತಿಹಾಸವನ್ನು ನಿರ್ಮಿಸುವ ಉದ್ದೇಶದಿಂದ ಗೋವಾ ಎಫ್‌ಸಿ ತಂಡ ಬುಧವಾರ (ಫೆಬ್ರವರಿ 19) ಜೆಮ್ಷೆಡ್ಪುರ ಎಫ್ ಸಿ ವಿರುದ್ಧ ಸೆಣಸಲಿದೆ.

ಗೋವಾಕ್ಕೆ ನಾಳೆ ಮೂರು ಅಂಕ ಗಳಿಸುವ ಅವಕಾಶನಿವೆ, ಹಾಗಾದಲ್ಲಿ ಅಗ್ರ ಸ್ಥಾನಕ್ಕೇರಲಿದೆ, ಕನಿಷ್ಠ ಒಂದು ಅಂಕ ಗಳಿಸಿದರೂ ಅಗ್ರ ಸ್ಥಾನಕ್ಕೆ ಏರುವುದಲ್ಲದೆ ಎಎಫ್ ಸಿ ಚಾಂಪಿಯನ್ಸ್ ಲೀಗ್ ನಲ್ಲಿ ಆಡಲು ಅರ್ಹತೆ ಪಡೆದ ಮೊದಲ ತಂಡವೆನಿಸಲಿದೆ. ಒಂದು ವೇಳೆ ಗೋವಾ ಇಲ್ಲಿ ಸೋಲನುಐವಿಸಿದರೆ ಎಟಿಕೆ ಬೆಂಗಳೂರು ವಿರುದ್ಧ ಜಯ ಗಳಿಸಿ ಅಗ್ರ ಸ್ಥಾನ ಕಾಯ್ದುಕೊಂಡು ಎಎಫ್ ಸಿ ಚಾಂಪಿಯನ್ಸ್ ಲೀಗ್ ಗೆ ಅರ್ಹತೆ ಪಡೆಯಲಿದೆ.

ಕ್ಲಿಫೋರ್ಡ್ ಮಿರಾಂಡಾ ತಂಡ ಈ ಬಾರಿ ಲೀಗ್ ನಲ್ಲಿ ಇದುವರೆಗೂ ಅದ್ಭುತ ಪ್ರದರ್ಶನ ತೋರಿದೆ. 17 ಪಂದ್ಯಗಳಲ್ಲಿ 41 ಗೋಲುಗಳನ್ನು ಗಳಿಸಿ ಪ್ರಭುತ್ವ ಸಾಧಿಸಿದೆ, ಒಂದು ವೇಳೆ ಇನ್ನೆರಡು ಗೋಲುಗಳನ್ನು ಗಳಿಸಿದರೆ 2017-18ರ ದಾಖಲೆಯನ್ನು ಮುರಿದು ಲೀಗ್ ನಲ್ಲಿ ಅತಿ ಹೆಚ್ಚು ಗೋಲುಗಳನ್ನು ಗಳಿಸಿದ ತಂಡವೆನಿಸಲಿದೆ.

ISL 2020: One point separates Goa and history in Jamshedpur

''ಆರಂಭದಿಂದಲೂ ತಂಡ ತನ್ನದೇ ಆದ ಕೆಲವು ಗುರಿಯನ್ನು ಇಟ್ಟುಕೊಂಡಿತ್ತು. ಅದರಲ್ಲಿ ಅಗ್ರ ಸ್ಥಾನಕ್ಕೇರುವುದೂ ಒಂದಾಗಿತ್ತು. ಬುಧವಾರ ನಡೆಯಲಿರುವ ಪಂದ್ಯದಲ್ಲಿ ಜಯ ಗಳಿಸಿದರೆ ನಮ್ಮ ಒಂದು ಗುರಿ ತಲುಪಿದಂತಾಗುತ್ತದೆ. ಮತ್ತು ಎಎಫ್ ಸಿ ಚಾಂಪಿಯನ್ಸ್ ಲೀಗ್ ನಲ್ಲಿ ಆಡುವ ಅವಕಾಶ ಸಿಕ್ಕಂತಾಗುತ್ತದೆ,'' ಎಂದು ತಂಡದ ಕೋಚ್ ಮಿರಾಂಡಾ ಹೇಳಿದ್ದಾರೆ.

ಉತ್ತಮ ಕೋಚ್ ಸರ್ಗಿಯೋ ಲೊಬೆರಾ ಅವರು ತಂಡವನ್ನು ತೊರೆದರೂ ಗೋವಾ ತನ್ನ ನೈಜ ಆಟವನ್ನು ಮುಂದುವರಿಸಿ ಜಯದ ಹಾದಿಯಲ್ಲೆ ಮುಂದುವರಿದಿದೆ. ಈಗ ಸಂಕಷ್ಟದಲ್ಲಿರುವ ಜೆಮ್ಷೆಡ್ಪುರ ಎಫ್ ಸಿ ವಿರುದ್ಧ ಜಯ ಗಳಿಸುವ ಆತ್ಮವಿಶ್ವಾಸದಲ್ಲಿ ಗೋವಾ ತಂಡನಿದೆ.

ಗೋವಾ ತಂಡ ಅಗ್ರ ಸ್ಥಾನಕ್ಕೇರಲು ಫೆರಾನ್ ಕೊರೊಮಿನಾಸ್ ಹಾಗೂ ಹ್ಯಗೋ ಬೌಮಾಸ್ ಆವರ ಪಾತ್ರ ಪ್ರಮುಖವಾಗಿದೆ. 13 ಗೋಲುಗಳನ್ನು ಗಳಿಸಿರುವ ಸ್ಪೇನ್ ನ ಮೂಲದ ಆಟಗಾರ ತನ್ನ ಖಾತೆಗೆ ಮತ್ತಷ್ಟು ಗೋಲುಗಳನ್ನು ಗಳಿಸಲು ಉತ್ಸುಕರಾಗಿದ್ದಾರೆ. ಬೌಮಾಸ್ ಕೂಡಾ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿರುತ್ತಾರೆ. ಏಳು ಗೋಲು ಗಳಿಸಲು ನೆರವಾಗಿರುವ ಬೌಮಾಸ್ ಒಂಬತ್ತು ಗೋಲುಗಳನ್ನು ಗಳಿಸಿರುತ್ತಾರೆ. 12 ಪಂದ್ಯಗಳಿಂದ ಕ್ನೀನ್ ಶೀಟ್ ಸಾಧನೆ ಮಾಡುವಲ್ಲಿ ವಿಫಲವಾಗಿರುವ ಮತ್ತು ದರರ್ಬಲ ಡಿಫೆನ್ಸ್ ವಿಭಾಗವನ್ನು ಹೊಂದಿರುವ ಜೆಮ್ಷೆಡ್ಪುರ ತಂಡಕ್ಕೆ ಗೋವಾದ ಗೋಲು ಗಳಿಕೆಗೆ ಕಟಿವಾಣ ಹೇರಲು ಕಷ್ಟವಾಗುವುದು ಸಹಜ.

''ಇದು ನಮ್ಮ ಪಾಲಿಗೆ ಅತ್ಯಂತ ಕೆಟ್ಟ ಋತುವಾಗಿರುವುದು ಸ್ಪಷ್ಟ. ನಾವು ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದೇವೆ. ಫುಟ್ಬಾಲ್ ಎಂದರೆ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಪರಿಹರಿಸಿಕೊಂಡು ಮುಂದಿನ ಪಂದ್ಯಕ್ಕೆ ಸಜ್ಜಾಗುವುದಾಗಿದೆ. ಈ ಋತುವಿನಲ್ಲಿ ಮಾಡಿರುವ ಪ್ರಮಾದಗಳನ್ನು ಸರಿಪಡಿಸಿಕೊಂಡು ಮುಂದಿನ ಋತುವಿಗೆ ಸಜ್ಜಾಗಬೇಕಿದೆ. ಕ್ನಬ್ ನ ಹಿತಾಸಕ್ತಿಯಿಂದ ಪ್ರತಿಯೊಬ್ಬರೂ ಜವಾಬದ್ದಾರಿಯನ್ನು ನಿಭಾಯಿಸಬೇಕಾಗಿದೆ,'' ಎಂದು ಜೆಮ್ಷೆಡ್ಪುರ ತಂಡದ ಕೋಚ್ ಆಂಟೋನಿಯೊ ಇರಿಯಾಂಡೊ ಹೇಳಿದ್ದಾರೆ.

ಕಳೆದ ಐದು ಪಂದ್ಯಗಳಲ್ಲಿ ತಂಡ ಜಯ ಗಳಿಸುವಲ್ಲಿ ವಿಫಲವಾಗಿರುವ ಕಾರಣ 17 ಪಂದ್ಯಗಳಿಂದ ಕೇವಲ 18 ಅಂಕಗಳನ್ನು ಗಳಿಸಿದೆ. ಉಕ್ಕಿನ ತಂಡ ಮನೆಯಂಗಣದಲ್ಲಿ ನಡೆಯುವ ಕೊನೆಯ ಪಂದ್ಯದಲ್ಲಿ ಜಯ ಗಳಿಸಿ ಋತುವನ್ನು ಮುಗಿಸುವ ಉತ್ಸುಕತೆಯಲ್ಲಿದೆ.

Story first published: Tuesday, February 18, 2020, 23:17 [IST]
Other articles published on Feb 18, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+