ಐಎಸ್‌ಎಲ್ 2020: ಜೆಮ್ಷೆಡ್ಪುರದಲ್ಲಿ ಇತಿಹಾಸ ಬರೆದ ಎಫ್‌ಸಿ ಗೋವಾ!

ಜೆಮ್ಷೆಡ್ಪುರ, ಫೆಬ್ರವರಿ 19: ಫೆರಾನ್ ಕೊರೊಮಿನಾಸ್ (11ನೇ ನಿಮಿಷ), ಹ್ಯುಗೋ ಬೌಮಾಸ್ (70 ಮತ್ತು 90ನೇ ನಿಮಿಷ), ಜಾಕಿಚಾನ್ ಸಿಂಗ್ (84ನೇ ನಿಮಿಷ) ಮತ್ತು ಮೌರ್ಥದಾ ಫಾಲ್ (87ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಜೆಮ್ಷೆಡ್ಪುರ ಎಫ್ ಸಿ ತಂಡವನ್ನು 5-0 ಗೋಲುಗಳ ಅಂತರದಲ್ಲಿ ಮಣಿಸಿದ ಎಫ್ ಸಿ ಗೋವಾ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿತಲ್ಲದೆ, ಎಎಫ್ ಸಿ ಚಾಂಪಿಯನ್ಸ್ ಲೀಗ್ ಗೆ ಅರ್ಹತೆ ಪಡೆದ ಭಾರತದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು, ಅಲ್ಲದೆ 46 ಗೋಲುಗಳನ್ನು ಗಳಿಸಿ ಲೀಗ್ ಇತಿಹಾಸದಲ್ಲಿ ಅತಿಹೆಚ್ಚು ಗೋಲುಗಳನ್ನು ಗಳಿಸಿದ ತಂಡವೆನಿಸಿತು.
ಮುನ್ನಡೆ ಕಂಡ ಗೋವಾ
ನಿರೀಕ್ಷೆಯಂತೆ ಗೋವಾ ತಂಡ ಪ್ರಥಮಾರ್ಧದಲ್ಲಿ ಮೇಲುಗಯ ಸಾಧಿಸಿದೆ. 11ನೇ ನಿಮಿಷದಲ್ಲಿ ಫೆರಾನ್ ಕೊರೊಮಿನಾಸ್ ಗಳಿಸಿದ ಗೋಲಿನಿಂದ ಪ್ರವಾಸಿ ತಂಡ ಮೇಲುಗೈ ಸಾಧಿಸಿತು, ಜೆಮ್ಷೆಡ್ಪುರ ಮಾಡಿದ ಪ್ರಮಾದಕ್ಕೆ ತಕ್ಕೆ ಬೆಲೆ ತೆರಬೇಕಾಯಿತಿ. 23ನೇ ನಿಮಿಷದಲ್ಲಿ ಟಾಟಾ ಪಡೆಗೆ ಗೋಲು ಗಳಿಸುವ ಅವಕಾಶ ಉತ್ತಮವಾಗಿತ್ತು. ಆದರೆ ದೇವಿಡ್ ಗ್ರಾಂಡ್ 6 ಅಡಿಗಳ ಅಂತರದಲ್ಲಿ ಮುಕ್ತವಾಗಿ ಗೋಲು ಗಳಿಸುವ ಅವಕಾಶವನ್ನು ಕೈ ಚೆಲ್ಲಿದರು. ಜೆಮ್ಷೆಡ್ಪುರ ತನ್ನ ಆಕ್ರಮಣಕಾರಿ ಆಟ ಮುಂದುವರಿಸಿತು. ಆದರೆ ಫಲ ಸಿಗಲಿಲ್ಲ, ಲೀಗ್ ನಲ್ಲಿ 14ನೇ ಗೋಲು ಗಳಿಸಿದ ಕೊರೊಮಿನಾಸ್ ಎಟಿಕೆ ತಂಡದ ರಾಯ್ ಕೃಷ್ಣ ಅವರೊಂದಿಗೆ ಅಗ್ರ ಸ್ಥಾನ ಹಂಚಿಕೊಂಡರು, ಈ ಬಾರಿ ಗೋಲ್ಡನ್ ಶೂ ಸ್ಪರ್ಧೆಗೆ ಸಾಕಷ್ಟು ಪೈಪೋಟಿ ಇರುವುದು ಸ್ಪಷ್ಟವಾಯಿತು.

ಇತಿಹಾಸ ನಿರ್ಮಿಸುವ ಗುರಿ
ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಗೋವಾ ಎಫ್ ಸಿ ತಂಡ ಜೆಮ್ಷೆಡ್ಪುರ ಎಫ್ ಸಿ ವಿರುದ್ಧ ಜಯ ಗಳಿಸಿ ಅಗ್ರ ಸ್ಥಾನಕ್ಕೇರುವುದು ಮಾತ್ರವಲ್ಲದೆ ಎಎಫ್ ಸಿ ಚಾಂಪಿಯನ್ಸ್ ಲೀಗ್ ನಲ್ಲಿ ಆಡಲು ಅರ್ಹತೆ ಪಡೆದ ಮೊದಲ ತಂಡವೆನಿಸುವ ಗುರಿಯೊಂದಿಗೆ ಅಂಗಣಕ್ಕಿಳಿಯಿತು. ಇಲ್ಲಿ ಗೋವಾ ಜಯ ಗಳಿಸಲು ವಿಫಲವಾದರೆ ಎಟಿಕೆ ತಂಡಕ್ಕೆ ಆ ಅವಕಾಶ ಸಿಗಲಿದೆ.
ಕ್ಲಿಫೋರ್ಡ್ ಮಿರಾಂಡಾ ತಂಡ ಈ ಬಾರಿ ಲೀಗ್ ನಲ್ಲಿ ಇದುವರೆಗೂ ಅದ್ಭುತ ಪ್ರದರ್ಶನ ತೋರಿದೆ. 17 ಪಂದ್ಯಗಳಲ್ಲಿ 41 ಗೋಲುಗಳನ್ನು ಗಳಿಸಿ ಪ್ರಭುತ್ವ ಸಾಧಿಸಿದೆ, ಒಂದು ವೇಳೆ ಇನ್ನೆರಡು ಗೋಲುಗಳನ್ನು ಗಳಿಸಿದರೆ 2017-18ರ ದಾಖಲೆಯನ್ನು ಮುರಿದು ಲೀಗ್ ನಲ್ಲಿ ಅತಿ ಹೆಚ್ಚು ಗೋಲುಗಳನ್ನು ಗಳಿಸಿದ ತಂಡವೆನಿಸಲಿದೆ. 'ಉತ್ತಮ ಕೋಚ್ ಸರ್ಗಿಯೋ ಲೊಬೆರಾ ಅವರು ತಂಡವನ್ನು ತೊರೆದರೂ ಗೋವಾ ತನ್ನ ನೈಜ ಆಟವನ್ನು ಮುಂದುವರಿಸಿ ಜಯದ ಹಾದಿಯಲ್ಲೆ ಮುಂದುವರಿದಿದೆ. ಈಗ ಸಂಕಷ್ಟದಲ್ಲಿರುವ ಜೆಮ್ಷೆಡ್ಪುರ ಎಫ್ ಸಿ ವಿರುದ್ಧ ಜಯ ಗಳಿಸುವ ಆತ್ಮವಿಶ್ವಾಸದಲ್ಲಿ ಗೋವಾ ತಂಡನಿದೆ.
ಗೋವಾ ತಂಡ ಅಗ್ರ ಸ್ಥಾನಕ್ಕೇರಲು ಫೆರಾನ್ ಕೊರೊಮಿನಾಸ್ ಹಾಗೂ ಹ್ಯಗೋ ಬೌಮಾಸ್ ಆವರ ಪಾತ್ರ ಪ್ರಮುಖವಾಗಿದೆ. 13 ಗೋಲುಗಳನ್ನು ಗಳಿಸಿರುವ ಸ್ಪೇನ್ ನ ಮೂಲದ ಆಟಗಾರ ತನ್ನ ಖಾತೆಗೆ ಮತ್ತಷ್ಟು ಗೋಲುಗಳನ್ನು ಗಳಿಸಲು ಉತ್ಸುಕರಾಗಿದ್ದಾರೆ. ಬೌಮಾಸ್ ಕೂಡಾ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿರುತ್ತಾರೆ. ಏಳು ಗೋಲು ಗಳಿಸಲು ನೆರವಾಗಿರುವ ಬೌಮಾಸ್ ಒಂಬತ್ತು ಗೋಲುಗಳನ್ನು ಗಳಿಸಿರುತ್ತಾರೆ.
12 ಪಂದ್ಯಗಳಿಂದ ಕ್ನೀನ್ ಶೀಟ್ ಸಾಧನೆ ಮಾಡುವಲ್ಲಿ ವಿಫಲವಾಗಿರುವ ಮತ್ತು ದರರ್ಬಲ ಡಿಫೆನ್ಸ್ ವಿಭಾಗವನ್ನು ಹೊಂದಿರುವ ಜೆಮ್ಷೆಡ್ಪುರ ತಂಡಕ್ಕೆ ಗೋವಾದ ಗೋಲು ಗಳಿಕೆಗೆ ಕಟಿವಾಣ ಹೇರಲು ಕಷ್ಟವಾಗುವುದು ಸಹಜ. ಕಳೆದ ಐದು ಪಂದ್ಯಗಳಲ್ಲಿ ತಂಡ ಜಯ ಗಳಿಸುವಲ್ಲಿ ವಿಫಲವಾಗಿರುವ ಕಾರಣ 17 ಪಂದ್ಯಗಳಿಂದ ಕೇವಲ 18 ಅಂಕಗಳನ್ನು ಗಳಿಸಿದೆ. ಉಕ್ಕಿನ ತಂಡ ಮನೆಯಂಗಣದಲ್ಲಿ ನಡೆಯುವ ಕೊನೆಯ ಪಂದ್ಯದಲ್ಲಿ ಜಯ ಗಳಿಸಿ ಋತುವನ್ನು ಮುಗಿಸುವ ಉತ್ಸುಕತೆಯಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications