ಐಎಸ್‌ಎಲ್: ಡ್ರಾದೊಂದಿಗೆ ಅಂಕದ ಖಾತೆ ತೆರೆದ ಎಸ್‌ಸಿ ಈಸ್ಟ್ ಬೆಂಗಾಲ್

ಗೋವಾ: ಜೆಮ್ಷೆಡ್ಪುರ ವಿರುದ್ಧ ಪಂದ್ಯದಲ್ಲಿ ಈಸ್ಟ್ ಬೆಂಗಾಲ್ ತಂಡ ಡ್ರಾ ಸಾಧನೆ ಮಾಡುವುದರೊಂದಿಗೆ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಮೊದಲ ಅಂಕ ಗಳಿಸಿತು. ಪಂದ್ಯದ ಹೆಚ್ಚಿನ ಅವಧಿಯನ್ನು ಕೇವಲ 10 ಮಂದಿ ಆಟಗಾರರನ್ನೇ ಹೊಂದಿದ್ದ ಈಸ್ಟ್ ಬೆಂಗಾಲ್ ಜೆಮ್ಷೆಡ್ಪುರಕ್ಕೆ ಗೋಲು ಗಳಿಸಲು ಅನುವು ಮಾಡಿಕೊಡಲಿಲ್ಲ. ದ್ವಿತಿಯಾರ್ಧದ ಕೊನೆಯ ಕ್ಷಣದಲ್ಲಿ ಲಾಲ್ ದಿನ್ಲಿಯಾನ ರೆಂಥ್ಲೆ ಎರಡನೇ ಹಳದಿ ಕಾರ್ಡ್ ಗೆ ಗುರಿಯಾಗಿ ರೆಡ್ ಕಾರ್ಡ್ ಮೂಲಕ ಪಂದ್ಯದಿಂದ ಹೊರನಡೆದರು. ಇದೇ ಮೊದಲ ಬಾರಿಗೆ ಪ್ರಸಕ್ತ ಲೀಗ್ ನಲ್ಲಿ ಇಬ್ಬರು ಆಟಗಾರರು ರೆಡ್ ಕಾರ್ಡ್ ಗೆ ಗುರಿಯಾದರು.
ಗೋಲಿಲ್ಲದ ಪ್ರಥಮಾರ್ಧ: ಎಸ್ ಸಿ ಈಸ್ಟ್ ಬೆಂಗಾಲ್ ಹಾಗೂ ಜೆಮ್ಷೆಡ್ಪುರ ಎಫ್ ಸಿ ತಂಡಗಳ ನಡುವಿನ ಪ್ರಥಮಾರ್ಧದ ಪಂದ್ಯ ಗೋಲಿಲ್ಲದೆ ಕೊನೆಗೊಂಡಿತು. ಎರಡು ಬಾರಿ ಹಳದಿ ಕಾರ್ಡ್ ಪಡೆದ ಈಸ್ಟ್ ಬೆಂಗಾಲ್ ನ ಯುಗೆನ್ಸನ್ ಲಿಂಗ್ಡೊ ರೆಡ್ ಕಾರ್ಡ್ ಮೂಲಕ ಹೊರನಡೆಯಬೇಕಾಯಿತು, ಇದರಿಂದ ತಂಡ ಕೇವಲ 10 ಆಟಗಾರರಲ್ಲೇ ಪಂದ್ಯವನ್ನು ಮುಂದುವರೆಸಬೇಕಾಯಿತು.

ಲಾಭ ಪಡೆಯುವಲ್ಲಿ ತಂಡ ವಿಫಲವಾಯಿತು
ಪಂದ್ಯ ಆರಂಭಗೊಂಡ 11ನೇ ನಿಮಿಷದಲ್ಲಿ ಈಸ್ಟ್ ಬೆಂಗಾಲ್ ತಂಡಕ್ಕೆ ಫ್ರೀ ಕಿಕ್ ದೊರೆತರೂ ಅದರ ಲಾಭ ಪಡೆಯುವಲ್ಲಿ ತಂಡ ವಿಫಲವಾಯಿತು. ಆಂಟೋನಿಯೋ ಪಿಲ್ಕಿಂಗ್ಟನ್ ತುಳಿದ ಚೆಂಡನ್ನು ಪೀಟರ್ ಹಾರ್ಟ್ಲೀ ಸುಲಭವಾಗಿ ಹೆಡರ್ ಮೂಲಕ ಹೊರದಬ್ಬಿದರು. ಗೋಲ್ ಕೀಪಿಂಗ್ ನಲ್ಲಿ ರೆಹನೇಶ್ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿ ತಂಡಕ್ಕೆ ನೆರವಾದರು. ಜೆಮ್ಷೆಡ್ಪುರಕ್ಕೆ ಕೆಲವು ಅವಕಾಶಗಳು ಕೂಡಿ ಬಂದರೂ ಅದು ಗೋಲಾಗಿ ಪರಿವರ್ತನೆಗೊಂಡಿಲ್ಲ.

ಜಯದ ಹುಡುಕಾಟದಲ್ಲಿ ಈಸ್ಟ್ ಬೆಂಗಾಲ್
ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಮೊದಲ ಬಾರಿಗೆ ಸ್ಪರ್ಧಿಸುತ್ತಿರುವ ಈಸ್ಟ್ ಬೆಂಗಾಲ್ ತಂಡ ತಿಲಕ್ ಮೈದಾನದಲ್ಲಿ ಜೆಮ್ಷೆಡ್ಪುರ ತಂಡದ ವಿರುದ್ಧ ಗೆಲ್ಲಲೇಕಾದ ಅನಿವಾರ್ಯತೆಯೊಂದಿಗೆ ಅಂಗಣಕ್ಕಿಳಿಯಿತು. ಈಗಾಗಲೇ ಎದುರಾಳಿ ತಂಡಕ್ಕೆ ಏಳು ಗೋಲುಗಳನ್ನು ಗಳಿಸಲು ಅವಕಾಶ ನೀಡಿರುವ ಈಸ್ಟ್ ಬೆಂಗಾಲ್ ಇನ್ನೂ ಜಯದ ರುಚಿ ಕಂಡಿಲ್ಲ. ಪ್ರತಿಯೊಂದು ಪಂದ್ಯದಲ್ಲೂ ಈಸ್ಟ್ ಬೆಂಗಾಲ್ ಗೋಲು ಗಳಿಸುವ ಅವಕಾಶವನ್ನು ನಿರ್ಮಿಸಿತ್ತು ಆದರೆ ಗೋಲು ದಾಖಲಾಗಲಿಲ್ಲ, ಕೋಚ್ ರಾಬೀ ಫ್ಲವರ್ ತಮ್ಮ ತಂಡ ಹಿಂದಿನ ತಪ್ಪುಗಳನ್ನು ಮರೆತು ಜಯ ದಾಖಲಿಸಬಹುದು ಎಂಬ ನಿರೀಕ್ಷೆಯಲ್ಲಿ ಇದ್ದಾರೆ. ಆಂಟೊನಿ ಪಿಲ್ಕಿಂಗ್ಟನ್ ಮತ್ತು ಜಾಕಸ್ ಮಘೊಮಾ ಎದುರಾಳಿ ತಂಡದ ಗೋಲ್ ಬಾಕ್ಸ್ ವಲಯದಲ್ಲಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದರೂ ಗೋಲು ದಾಖಲಾಗಲಿಲ್ಲ.

ಗೋಲು ಗಳಿಸಬೇಕಾದ ಅನಿವಾರ್ಯತೆ ಇದೆ
ಭಾರತದ ಪ್ರಮುಖ ಫಾರ್ವರ್ಡ್ ಆಟಗಾರರಾದ ಜೆಜೆ, ಬಲ್ವಂತ್ ಸಿಂಗ್, ರಫೀಕ್ ಮತ್ತು ವಿನೀತ್ ಅವರಂಥ ಆಟಗಾರರು ಗೋಲು ಗಳಿಸಬೇಕಾದ ಅನಿವಾರ್ಯತೆ ಇದೆ. ಗೆದ್ದ ಆತ್ಮವಿಶ್ವಾಸದಲ್ಲಿದ್ದ ಜೆಮ್ಷೆಡ್ಪುರದ ಪರ ನಿರಿಜಸ್ ವಾಸ್ಕಿಸ್ ತಂಡದ ರೂವಾರಿ ಎನಿಸಿದ್ದಾರೆ. ಪ್ರತಿಯೊಂದು ಪಂದ್ಯದಲ್ಲಿ ಗೋಲು ನೀಡಿದರೂ ಗೋಲು ಗಳಿಸಿದ ಆತ್ಮವಿಶ್ವಾಸ ತಂಡದಲ್ಲಿದೆ. ಈ ಸ್ಟ್ರೈಕರ್ ತಂಡ ಗಳಿಸಿರುವ 6 ಗೋಲುಗಳಲ್ಲಿ 5ನ್ನು ತನ್ನ ಹೆಸರಿನಲ್ಲಿ ದಾಖಲಿಸಿದ್ದಾರೆ. ನಾರ್ಥ್ ಈಸ್ಟ್ ಯುನೈಟೆಡ್ ಮತ್ತು ಮುಂಬೈ ಸಿಟಿ ತಂಡಗಳು ಟಾಟಾ ಪಡೆಗಿಂತ ಅತಿ ಹೆಚ್ಚು ಗೋಲುಗಳಿಸಿದ ಇತರ ತಂಡಗಳಾಗಿವೆ. ಪೀಟರ್ ಹಾರ್ಟ್ಲೀ ಮತ್ತು ಸ್ಟೀಫನ್ ಎಝಿ ಅವರಂಥ ಸೆಂಟರ್ ಬ್ಯಾಕ್ ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದಾರೆ. ಟಿ.ಪಿ. ರಹನೇಶ್ ಗೋಲ್ ಕೀಪಿಂಗ್ ನಲ್ಲಿ ತಂಡದ ಯಶ್ಸನ್ನು ತೋರಿಸಿದ್ದಾರೆ. ರೆಡ್ ಮೈನರ್ಸ್ ಖ್ಯಾತಿಯ ಜೆಮ್ಷೆಡ್ಪುರ ತಂಡ ಮತ್ತೊಮ್ಮೆ ಜಯ ದಾಖಲಿಸುವುದು ಎಂಬ ಆತ್ಮವಿಶ್ವಾಸದಲ್ಲಿ ಕೋಚ್ ಓವೆನ್ ಕೊಯ್ಲ್ ಇದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications