ಐಎಸ್‌ಎಲ್: ಜಯದೊಂದಿಗೆ ಮುಂದುವರಿದ ಬಿಎಫ್‌ಸಿ ಅಜೇಯ ಓಟ

ಗೋವಾ, ಡಿಸೆಂಬರ್ 17: ಸುನಿಲ್ ಛೆಟ್ರಿ (38ನೇ ನಿಮಿಷ) ಹಾಗೂ ಕ್ಲಿಟನ್ ಸಿಲ್ವಾ (79ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಒಡಿಶಾ ಎಫ್ ಸಿ ವಿರುದ್ಧ 2-1 ಗೋಲುಗಳ ಅಂತರದಲ್ಲಿ ಜಯ ಗಳಿಸಿದ ಬೆಂಗಳೂರು ಎಫ್ ಸಿ ಹೀರೋ ಇಂಡಿಯನ್ ಸೂಪರ್ ಲೀಗ್ ನ 7ನೇ ಆವೃತ್ತಿಯಲ್ಲಿ ತನ್ನ ಅಜೇಯ ಓಟವನ್ನು ಮುಂದುವರಿಸಿದೆ. ಒಡಿಶಾ ಪರ ಸ್ಟೀವನ್ ಟೇಲರ್ (71ನೇ ನಿಮಿಷ) ಗಳಿಸಿದ ಗೋಲು ಸೋಲಿನ ಅಂತರವನ್ನು ಕಡಿಮೆ ಮಾಡಿತು. ಈ ಜಯದೊಂದಿಗೆ ಬೆಂಗಳೂರು ಎಫ್ ಸಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿಯಿತು.
ನಾಯಕ ಸುನಿಲ್ ಛೆಟ್ರಿ ಗೋಲು ಗಳಿಸುವಲ್ಲಿ ವಿಫಲರಾಗುತ್ತಿದ್ದಾರೆ ಎಂಬ ಧ್ವನಿ ಈ ಋತುವಿನ ಆರಂಭದಲ್ಲಿ ಕೇಳಿ ಬಂದಿತ್ತು, ಆದರೆ ಈ ಹಿಂದೆ ಕೇರಳ ಬ್ಲಾಸ್ಟರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಗೋಲಿನ ಖಾತೆ ತೆರೆದ ಸುನಿಲ್ ಛೆಟ್ರಿ ಅದೇ ಲಯವನ್ನು ಮುಂದುವರೆಸಿ ಈಗ ಒಡಿಶಾ ವಿರುದ್ಧದ ಪಂದ್ಯದ ಪ್ರಥಮಾರ್ಧದ 38ನೇ ನಿಮಿಷದಲ್ಲಿ ಗೋಲು ಗಳಿಸಿ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಛೆಟ್ರಿ 50 ಗೋಲುಗಳ ದಾಖಲೆ
ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ 50 ಗೋಲುಗಳನ್ನು ಗಳಿಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಛೆಟ್ರಿ ಪಾತ್ರರಾದರು. ಒಡಿಶಾ ತಂಡದ ಬ್ಯಾಕ್ ಲೈನ್ ಈ ಬಾರು ಉತ್ತಮ ರೀತಿಯಲ್ಲಿ ಕಾರ್ಯವನಿರ್ವಹಿಸಿತ್ತು. ಇದರಿಂದಾಗಿ ಬೆಂಗಳೂರು ಕೇವಲ ಒಂದು ಗೋಲಿಗೆ ತೃಪ್ತಿ ಪಡಬೇಕಾಯಿತು.

ಒಡಿಶಾಕ್ಕೆ ಕಠಿಣ ಪಂದ್ಯ
ಅಜೇಯವಾಗಿ ಮುನ್ನುಗ್ಗುತ್ತಿರುವ ಬೆಂಗಳೂರು ಎಫ್ ಸಿ ವಿರುದ್ಧ ಇನ್ನೂ ಜಯ ಕಾಣದ ಒಡಿಶಾ ಎಫ್ ಸಿ ತಂಡಗಳು ಮುಖಾಮುಖಿಯಾದವು,. ಬಾಂಬೋಲಿಮ್ ನ ಜಿಎಂಸಿ ಕ್ರೀಡಾಂಗಣದಲ್ಲಿ ಬೆಂಗಳೂರು ಗೆಲ್ಲುವ ಫೇವರಿಟ್ ಆಗಿ ಅಂಗಣಕ್ಕಿಳಿಯಿತು. ಆದರೆ ಇನ್ನೂ ಜಯದ ಹುಡುಕಾಟದಲ್ಲಿರುವ ಒಡಿಶಾ ಯಾವಾಗ ಯಾವ ತಂಡಕ್ಕೆ ಅಪಾಯ ತಂದೊಡ್ಡುತ್ತದೆ ಎಂದು ಹೇಳಲಾಗದು. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಒಡಿಶಾ ಗಳಿಸಿರುವುದು ಕೇವಲ ಎರಡು ಗೋಲು. ಆ ಎರಡೂ ಗೋಲುಗಳು ದಾಖಲಾಗಿರುವುದು ಹತ್ತು ಮಂದಿ ಆಟಗಾರರಿದ್ದ ಜೆಮ್ಷೆಡ್ಪುರ ವಿರುದ್ಧ, ಪ್ರತಿಯೊಂದು ಪಂದ್ಯದಲ್ಲೂ ಎದುರಾಳಿ ತಂಡಕ್ಕೆ ಗೋಲು ಗಳಿಸುವ ಅವಕಾಶ ನೀಡುತ್ತಿದ್ದರೂ ಅರ್ಶದೀಪ್ ಸಿಂಗ್ ಗೋಲ್ ಕೀಪಿಂಗ್ ನಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಗೋವಾ ವಿರುದ್ಧದ ಪಂದ್ಯದಲ್ಲಿ ಸಿಂಗ್ ಏಳು ಗೋಲುಗಳನ್ನು ತಡೆದಿದ್ದಾರೆ. ಆದರೂ ತಂಡ 0-1 ಗೋಲಿನಿಂದ ಸೋತಿತ್ತು. ಸ್ಟುವರ್ಟ್ ಬಾಕ್ಸ್ಟರ್ ಪಡೆ ಕೇವಲ ಗೋಲನ್ನು ನೀಡುತ್ತಿರುವುದು ಮಾತ್ರವಲ್ಲ ಗೋಲು ಗಳಿಸುವಲ್ಲಿಯೂ ವೈಫಲ್ಯ ಕಾಣುತ್ತಿದೆ. ಡಿಗೊ ಮೌರಿಸಿಯೋ ತಂಡದ ಪರ ಎರಡೂ ಗೋಲುಗಳನ್ನು ಗಳಿಸಿರುತ್ತಾರೆ. ಇತರ ಆಟಗಾರರೂ ಗೋಲು ಗಳಿಸಿದರೆ ತಂಡದ ಅದೃಷ್ಟ ಬದಲಾಗಬಹುದು. ಇನ್ನೂ ಸೋಲು ಕಾಣದ ಬ್ಲೂ ಪಡೆ ಹಿಂದಿನ ಪಂದ್ಯದಲ್ಲಿ ಕೇರಳ ವಿರುದ್ಧ 4 ಗೋಲುಗಳನ್ನು ಗಳಿಸಿತ್ತು.

ಈ ಸೀಸನ್‌ನಲ್ಲಿ ಹೆಚ್ಚು ಗೋಲು
ಈ ಋತುವಿನಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಎರಡು ತಂಡಗಳಲ್ಲಿ ಬೆಂಗಳೂರು ಕೂಡ ಒಂದಾಗಿದೆ. ಕ್ರಿಸ್ಟಿಯನ್ ಒಪ್ಸೆತ್ ಮತ್ತು ಆಶಿಕ್ ಕುರುನಿಯಾನ್ 4-2ರ ಜಯದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ದಿಮಾಸ್ ಡೆಲ್ಗಾಡೊ ಮತ್ತು ಎರಿಕ್ ಪಾರ್ಥಲು ಕೂಡ ಗೋಲಿನ ಖಾತೆ ತೆರೆದಿದ್ದಾರೆ. ಸುನಿಲ್ ಛೆಟ್ರಿ ಕೂಡ ಬಲಿಷ್ಠ ತಂಡದ ವಿರುದ್ಧ ಖಾತೆ ತೆರದಿರುವುದು ತಂಡದ ಮನೋಬಲವನ್ನು ಹೆಚ್ಚಿಸಿದೆ. ಇಂಡಿಯನ್ ಸೂಪರ್ ಲೀಗ್ ನಲ್ಲಿ 49 ಗೋಲುಗಳನ್ನು ಗಳಿಸಿರುವ ಸುನಿಲ್ ಛೆಟ್ರಿಗೆ 50 ನೇ ಗೋಲು ಗಳಿಸಿದ ಮೊದಲ ಭಾರತೀಯ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಲು ಇದು ಸೂಕ್ತ ಕಾಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications