ಐಎಸ್‌ಎಲ್ 2022: ಒಡಿಶಾ ಎಫ್‌ಸಿ vs ಎಟಿಕೆ ಮೋಹನ್ ಬಾಗನ್ ಪಂದ್ಯ ಡ್ರಾದಲ್ಲಿ ಅಂತ್ಯ

ಇಂಡಿಯನ್ ಸೂಪರ್ ಲೀಗ್‌ನ 2021-22ರ ಆವೃತ್ತಿಯಲ್ಲಿ ಇಂದು 100ನೇ ಪಂದ್ಯ ನಡೆಯುತ್ತಿದ್ದು ಈ ಪಂದ್ಯದಲ್ಲಿ ಒಡಿಶಾ ಎಫ್‌ಸಿ ಹಾಗೂ ಎಟಿಕೆ ಮೋಹನ್ ಬಾಗನ್ ತಂಡಗಳು ಮುಖಾಮುಖಿಯಾಗಿದೆ. ಟೂರ್ನಿಯ ಅಂತಿಮ ಘಟ್ಟದಲ್ಲಿ ಪ್ರತಿಯೊಂದು ಪಂದ್ಯದ ಫಲಿತಾಂಶಗಳು ಕೂಡ ನಿರ್ಣಾಯಕವಾಗಿದ್ದು ಲೀಗ್‌ನ ಕುತೂಹಲವನ್ನು ಹೆಚ್ಚಿಸಿದೆ. ಈ ಪಂದ್ಯದಲ್ಲಿ ಟಾಪ್ 3ರಲ್ಲಿರುವ ಎಟಿಕೆ ಮೋಹನ್ ಬಾಗನ್ ಡ್ರಾಗೆ ತೃಪ್ತಿಪಟ್ಟುಕೊಳ್ಳುವ ಮೂಲಕ ಸಣ್ಣ ಹಿನ್ನಡೆಯನ್ನು ಅನುಭವಿಸಿದೆ.
ಪಂದ್ಯ ಆರಂಭವಾದ 5ನೇ ನಿಮಿಷದಲ್ಲಿಯೇ ಒಡಿಶಾ ಎಫ್‌ಸಿ ತಂಡ ಗೋಲು ಗಳಿಸುವ ಮೂಲಕ ಆರಂಭಿಕ ಯಶಸ್ಸು ಸಾಧಿಸಿತು. ಈ ಮೂಲಕ ಪಂದ್ಯದಲ್ಲಿ ಹಿಡಿತವನ್ನು ಸಾಧಿಸುವ ಪ್ರಯತ್ನ ನಡೆಸಿತು. ರೆಡೀಮ್ ಟ್ಲಾಂಗ್ ಈ ಗೋಲು ಸಿಡಿಸಿ ತಂಡಕ್ಕೆ ಮೇಲುಗೈ ಒದಗಿಸಿದರು. ಆದರೆ ಈ ಮುನ್ನಡೆ ಹೆಚ್ಚು ಹೊತ್ತು ಇರಲಿಲ್ಲ. ಪಂದ್ಯದ 8ನೆ ನಿಮಿಷದಲ್ಲಿ ಪೆನಾಲ್ಟಿ ಅವಕಾಶವನ್ನು ಪಡೆದುಕೊಂಡು ಎಟಿಕೆ ಮೋಹನ್ ಬಾಗನ್ ತಂಡ ಈ ಅವಕಾಶವನ್ನು ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಪಂದ್ಯ 1-1 ಅಂತರದಿಂದ ಸಮಬಲಗೊಂಡಿತು.
ನಂತರ ಎರಡೂ ತಂಡಗಳು ಕೂಡ ಸಾಕಷ್ಟು ಪೈಪೋಟಿಯನ್ನು ನಡೆಸಿದ್ದು ಯಾವುದೇ ತಂಡಗಳು ಕೂಡ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ. ದ್ವಿಯಾರ್ಧ ಸಂಪೂರ್ಣವಾಗಿ ಗೋಲಿಲ್ಲದೆ ಮುಕ್ತಾಯವಾಯಿತು. ಹೆಚ್ಚುವರು ಅವಧಿ ಕೂಡ ಎರಡೂ ತಂಡಗಳಿಗೆ ನಿರಾಸೆ ಮೂಡಿಸಿತು. ಈ ಮೂಲಕ ಈ ಪಂದ್ಯ ಡ್ರಾದಲ್ಲಿ ಅಂತ್ಯಕಂಡಿದೆ.
ಇನ್ನು ಈ ಫಲಿತಾಂಶದಿಂದಾಗಿ ತಕ್ಷಣಕ್ಕೆ ಅಂಕಪಟ್ಟಿಯಲ್ಲಿ ಯಾವುದೇ ಬದಲಾವನೆಯಾಗಿಲ್ಲ. ಎಟಿಕೆ ಮೋಹನ್ ಬಾಗನ್ ತಂಡ ಮೂರನೇ ಸ್ಥಾನದಲ್ಲಿಯೇ ಮುಂದುವರಿದಿದ್ದು ಒಡಿಶಾ ಎಫ್‌ಸಿ ತಂಡ 7ನೇ ಸ್ಥಾನದಲ್ಲಿ ಮುಂದುವರಿದಿದೆ. ಇನ್ನು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಹೈದರಾಬಾದ್ ಎಫ್‌ಸಿ ಈಗಾಗಲೇ ಮುಂದಿನ ಹಂತಕ್ಕೆ ಅರ್ಹತೆ ಪಡೆದಿದ್ದು ಉಳಿದ ಮೂರು ಸ್ಥಾನಗಳಿಗಾಗಿ ತೀವ್ರ ಪೈಪೋಟಿ ನಡೆದಿದೆ. ಜೆಮ್ಶೆಡ್ಪುರ ಎಫ್‌ಸಿ ಎರಡನೇ ಸ್ಥಾನದಲ್ಲಿದ್ದು ಎಟಿಕೆ ಮೋಹನ್ ಬಾಗನ್ ಮೂರು ಹಾಗೂ ಮುಂಬೈ ಸಿಟಿ ಎಫ್‌ಸಿ ತಂಡ ನಾಲ್ಕನೇ ಸ್ಥಾನದಲ್ಲಿದೆ. ಬೆಂಗಳೂರು ಎಫ್‌ಸಿ ತಂಡ 6ನೇ ಸ್ಥಾನದಲ್ಲಿದೆ.
ಎಟಿಕೆ ಮೋಹನ್ ಭಾಗನ್: ಅಮರಿಂದರ್ ಸಿಂಗ್ (ಗೋಲ್‌ಕೀಪರ್), ತಿರಿ, ಸಂದೇಶ್ ಜಿಂಗನ್, ಸುಭಾಸಿಶ್ ಬೋಸ್, ಪ್ರೀತಮ್ ಕೋಟಾಲ್ (ನಾಯಕ), ಜೋನಿ ಕೌಕೊ, ಕಾರ್ಲ್ ಮೆಕ್‌ಹಗ್, ಲೆನ್ನಿ ರೋಡ್ರಿಗಸ್, ಹ್ಯೂಗೋ ಬೌಮಸ್, ಮನ್ವಿರ್ ಸಿಂಗ್, ಲಿಸ್ಟನ್ ಕೊಲಾಕೊ.
ಒಡಿಶಾ ಎಫ್‌ಸಿ: ಕಮಲ್ಜಿತ್ ಸಿಂಗ್ (ಗೋಲ್‌ಕೀಪರ್), ವಿಕ್ಟರ್ ಮೊಂಗಿಲ್ (ನಾಯಕ), ಹೆಕ್ಟರ್ ರಾಮಿರೆಜ್, ಸೆಬಾಸ್ಟಿಯನ್ ತಂಗ್ಮುವಾನ್ಸಾಂಗ್, ಸಾಹಿಲ್ ಪನ್ವಾರ್, ಜೇವಿಯರ್ ಹೆರ್ನಾಂಡೆಜ್, ತೊಯ್ಬಾ ಸಿಂಗ್, ಐಸಾಕ್ ಚಕ್ಚುವಾಕ್, ಅರಿದೈ ಸೌರೆಜ್, ಜೆರ್ರಿ ಮಾವಿಹ್ಮಿಂಗ್ತಂಗ, ರಿಡೀಮ್ ಟ್ಲಾಂಗ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications