Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಎಸ್‌ಎಲ್: ನಾರ್ಥ್‌ಈಸ್ಟ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಜೆಮ್ಶೆಡ್ಪುರ ಎಫ್‌ಸಿ

ISL 2021-22: match 101 NEUFC vs JFC, Jamshedpur FC match won by 3-2 Highlights

ಇಂಡಿಯನ್ ಸೂಪರ್ ಲೀಗ್‌ನ 101ನೇ ಪಂದ್ಯದಲ್ಲಿ ನಾರ್ಥ್‌ಇಸ್ಟ್ ಯುನೈಟೆಡ್ ಎಫ್‌ಸಿ ಹಾಗೂ ಜೆಮ್ಶೆಡ್ಪುರ ಎಫ್‌ಸಿ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಜೆಮ್ಶೆಡ್ಪುರ ಎಫ್‌ಸಿ ತಂಡ ಅರ್ಹ ಗೆಲುವು ಸಂಪಾದಿಸಿದೆ. ಆರಂಭದಿಂದಲೇ ಮೇಲುಗೈ ಸಾಧಿಸಿದ ಜೆಮ್ಶೆಡ್ಪುರ ಎಫ್‌ಸಿ ತಂಡ 3-2 ಅಂತರದ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿ ಭದ್ರವಾಗಿ ಮುಂದುವರಿದಿದೆ ಜೆಮ್ಶೆಡ್ಪುರ ಎಫ್‌ಸಿ.

ಈ ಪಂದ್ಯದಲ್ಲಿ 35ನೇ ನಿಮಿಷದಲ್ಲಿ ಮೊದಲ ಗೋಲು ದಾಖಲಿಸುವಲ್ಲಿ ಜೆಮ್ಶೆಡ್ಪುರ ಎಫ್‌ಸಿ ತಂಡ ಯಶಸ್ವಿಯಾಗಿತ್ತು. ಸೀಮಿನ್ಲೆನ್ ಡೌಂಗೆಲ್ ಈ ಗೋಲು ಸಿಡಿಸುವ ಮೂಲಕ ತಂಡಕ್ಕೆ ಆರಂಭಿಕ ಮೇಲುಗೈ ಒದಗಿಸಿದರು. ಮೊದಲಾರ್ಧದ ಅಂತ್ಯದಲ್ಲಿಯೂ ಈ ಮುನ್ನಡೆಯನ್ನು ಜೆಮ್ಶೆಡ್ಪುರ ಎಫ್‌ಸಿ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ನಂತರ ದ್ವಿತಿಯಾರ್ಧದಲ್ಲಿಯೂ ತಂಡದ ಉತ್ತಮ ಪ್ರದರ್ಶನ ಮುಂದುವರಿಯಿತು. 58ನೇ ನಿಮಿಷದಲ್ಲಿ ಗ್ರೇಗ್ ಅಲೆಕ್ಸಾಂಡರ್ ಗೋಲು ಸಿಡಿಸುವ ಮೂಲಕ ಜೆಮ್ಶೆಡ್ಪುರ ಎಫ್‌ಸಿ 2-0 ಅಂತರದ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಯಿತು.

ಅದಾದ ನಂತರ ನಾರ್ಥ್‌ಈಸ್ಟ್ ಯುನೈಟೆಡ್ ತಂಡ ಅದ್ಭುತವಾಗಿ ತಿರುಗೇಟು ನೀಡಿತು. ಒಂದೇ ನಿಮಿಷದ ಅಂತರದಲ್ಲಿ ಎರಡು ಗೋಲು ಸಿಡಿಸುವ ಮೂಲಕ ಜೆಮ್ಶೆಡ್ಪುರ ಎಫ್‌ಸಿ ತಂಡಕ್ಕೆ ಆಘಾತ ನೀಡಿತು. 66ನೇ ನಿಮಿಷದಲ್ಲಿ ಲಾಲ್ದಾನ್ಮವಿಯಾ ಗೋಲು ಸಿಡಿಸಿದರೆ ಮುಂದಿನ ನಿಮಿಷದಲ್ಲಿಯೇ ಮತ್ತೊಂದು ಗೋಲು ನಾರ್ಥ್‌ಈಸ್ಟ್ ಪರ ಸಿಡಿದಿತ್ತು. ಮರ್ಸೆಲೋ ಲೈಟೋ ಈ ಗೋಲು ಸಿಡಿಸುವ ಮೂಲಕ ಸಮಬಲಕ್ಕೆ ಕಾರಣವಾದರು. ನಂತರ ಪಂದ್ಯ ಮುಕ್ತಾಯದ ಘಟ್ಟಕ್ಕೆ ತಲುಪುತ್ತಿದ್ದಂತೆಯೇ ಜೆಮ್ಶಡ್ಪುರ ಎಫ್‌ಸಿ ತಂಡ ಮತ್ತೊಮ್ಮೆ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಯಿತು. ಜೋರ್ಡಾನ್ ಮರ್ರೆ ತಂಡದ ಪರ ಗೋಲು ಸಿಡಿಸಿ ಮೇಲುಗೈಗೆ ಕಾರಣವಾದರು ಈ ಮೂಲಕ ಜೆಮ್ಶೆಡ್ಪುರ ಎಫ್‌ಸಿ ತಂಡ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದೆ.

ಇನ್ನು ಈ ಗೆಲುವಿನೊಂದಿಗೆ ಜೆಮ್ಶಡ್ಪುರ ಎಫ್‌ಸಿ ತಂಡ ಅಂಕಪಟ್ಟಿಯಲ್ಲಿ 2ನೇ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದು ಮೊದಲ ಸ್ಥಾನಕ್ಕೇರುವ ಅವಕಾಶವನ್ನು ಕೂಡ ತೆರೆದಿಟ್ಟಿದೆ. ಹೈದರಾಬಾದ್ ಎಫ್‌ಸಿ ಅಗ್ರಸ್ಥಾನದಲ್ಲಿದ್ದು ಈಗಾಗಲೇ ಮುಂದಿನ ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ. ಎಟಿಕೆ ಮೋಹನ್ ಬಾಗನ್ ಮೂರನೇ ಸ್ಥಾನದಲ್ಲಿದ್ದು ಮುಂಬೈ ಸಿಟಿ ಎಫ್‌ಸಿ ನಾಲ್ಕನೇ ಸ್ಥಾನದಲ್ಲಿದೆ.

ಜೆಮ್ಶೆಡ್ಪುರ ಎಫ್‌ಸಿ: ಟಿಪಿ ರೆಹನೇಶ್ (ಗೋಲ್‌ ಕೀಪರ್), ಲಾಲ್ಡಿನ್ಲಿಯಾನಾ ರೆಂತ್ಲೀ, ಎಲಿ ಸಬಿಯಾ, ಪೀಟರ್ ಹಾರ್ಟ್ಲಿ (ನಾಯಕ), ರಿಕಿ ಲಲ್ಲಾವ್ಮಾ, ಪ್ರೊನೇ ಹಾಲ್ಡರ್, ರಿತ್ವಿಕ್ ದಾಸ್, ಸೀಮಿನ್ಲೆನ್ ಡೌಂಗೆಲ್, ಮೊಬಾಶಿರ್ ರೆಹಮಾನ್, ಗ್ರೆಗ್ ಸ್ಟೀವರ್ಟ್ ಮತ್ತು ಡೇನಿಯಲ್ ಚುಕ್ವು.

ನಾರ್ಥ್‌ ಈಸ್ಟ್ ಯುನೈಟೆಡ್ ಎಫ್‌ಸಿ: ಮಿರ್ಷಾದ್ ಮಿಚು (ಗೋಲ್‌ಕೀಪರ್), ಮಶೂರ್ ಶೆರೀಫ್, ಜಕಾರಿಯಾ ಡಿಯಲ್ಲೊ, ಗುರ್ಜಿಂದರ್ ಕುಮಾರ್, ಮೊಹಮ್ಮದ್ ಇರ್ಷಾದ್, ಪ್ರಗ್ಯಾನ್ ಗೊಗೊಯ್, ಹೆರ್ನಾನ್ ಸಂತಾನಾ (ನಾಯಕ), ಜೋ ಜೊಹೆರ್ಲಿಯಾನಾ, ಇಮ್ರಾನ್ ಖಾನ್, ಮಾರ್ಕೊ ಸಹನೆಕ್ ಮತ್ತು ಡೆಶೋರ್ನ್ ಬ್ರೌನ್.

Story first published: Friday, February 25, 2022, 23:48 [IST]
Other articles published on Feb 25, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+