For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2021: ಬೆಂಗಳೂರು ಎಫ್‌ಸಿ vs ಕೇರಳ ಬ್ಲಾಸ್ಟರ್ಸ್ ಎಫ್‌ಸಿ ಪಂದ್ಯ ಡ್ರಾದಲ್ಲಿ ಅಂತ್ಯ

ISL 2021-22: match 11 BFC vs KBFC, match draw by 1-1 Highlights

ಇಂಡಿಯನ್ ಸೂಪರ್ ಲೀಗ್‌ನಲ್ಲಿ ಇಂದು ಬೆಂಗಳೂರು ಎಫ್‌ಸಿ ಹಾಗೂ ಕೇರಳ ಬ್ಲಾಸ್ಟರ್ಸ್ ಎಫ್‌ಸಿ ವಿರುದ್ಧ ರೋಚಕ ಪಂದ್ಯ ಸೆಣೆಸಾಟ ನಡೆದಿದೆ. ಅಂತಿಮ ಹಂತದಲ್ಲಿ ಈ ಎರಡು ತಂಡಗಳು ಕೂಡ ತಲಾ ಒಂದೊಂದು ಗೋಲು ದಾಖಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿಯೊತು. ಈ ಮೂಲಕ ಪಂದ್ಯ ಡ್ರಾದಲ್ಲಿ ಅಂತ್ಯ ಕಂಡಿದೆ. ಹೀಗಾಗಿ ಎರಡು ತಂಡಗಳು ಕೂಡ ಅಂಕಗಳನ್ನು ಹಂಚಿಕೊಂಡಿದೆ.

ಪಂದ್ಯದ ಆರಂಭದಿಂದಲೇ ಈ ಎರಡು ತಂಡಗಳು ಕೂಡ ಸಾಕಷ್ಟು ಜಿದ್ದಾಜಿದ್ದಿನ ಪ್ರದರ್ಶನ ನೀಡಲು ಆರಂಭಿಸಿತ್ತು. ಆದರೆ ಪಂದ್ಯದ ಕೊನೆಯ ಹಂತದವರೆಗೂ ಎರಡು ತಂಡಗಳು ಕೂಡ ಒಂದೇ ಒಂದು ಗೋಲು ಗಳಿಸಲು ಸಾಧ್ಯವಾಗಿರಲಿಲ್ಲ. ಆದರೆ ಕೊನೇಯ ಹಂತದಲ್ಲಿ ಎರಡು ತಂಡಗಳು ಕೂಡ ಒಂದೊಂದು ಗೋಲು ದಾಖಲಿಸಿಕೊಂಡವು. ಹೀಗಾಗಿ ಡ್ರಾ ಫಲಿತಾಂಶಕ್ಕೆ ತೃಪ್ತಿಪಡಬೇಕಾಯಿತು.

ಸಾಕಷ್ಟು ಪ್ರಯತ್ನಗಳ ನಂತರ ಪಂದ್ಯದ ಮುಕ್ತಾಯಕ್ಕೆ ಇನ್ನೇನು ಆರು ನಿಮಿಷಗಳು ಬಾಕಿಯಿದೆ ಎನ್ನುವಾಗ ಬೆಂಗಳೂರು ಎಫ್‌ಸಿ ಮೊದಲ ಗೋಲು ದಾಖಲಿಸಿತು. ಈ ಮೂಲಕ ಮೇಲುಗೈ ಸಾಧಿಸಿ ಗೆಲುವಿನ ಕನಸು ಕಂಡಿತ್ತು. ಆದರೆ ಕೇರಳ ಬ್ಲಾಸ್ಟರ್ಸ್ ಅದಕ್ಕೆ ಅವಕಾಶ ನೀಡಲಿಲ್ಲ 88ನೇ ನಿಮಿಷದಲ್ಲಿ ಕೇರಳ ಬ್ಲಾಸ್ಟರ್ಸ್ ತಂಡ ಗೋಲು ದಾಖಲಿಸುವ ಮೂಲಕ ಪಂದ್ಯದಲ್ಲಿ ಸಮಬಲವನ್ನು ಸಾಧಿಸಿತು. ನಂತರ ಎರಡು ತಂಡಗಳು ಕೂಡ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಹೆಚ್ಚುವರಿ ಅವಧಿಯಲ್ಲಿಯೂ ಗೋಲು ದಾಖಲಾಗದ ಕಾರಣ ಪಂದ್ಯ ಡ್ರಾ ಫಲಿತಾಂಶದೊಂದಿಗೆ ಅಂತ್ಯವಾಗಿದೆ.

ಇನ್ನು ಈ ಪಂದ್ಯದಲ್ಲಿ ಡ್ರಾ ಫಲಿತಾಂಶವನ್ನು ಪಡೆದಿದ್ದರೂ ಬಿಎಫ್‌ಸಿ ಅಂಕಪಟ್ಟಿಯಲ್ಲಿ ಏರಿಕೆ ಕಂಡಿದೆ. ಏಳನೇ ಸ್ಥಾನದಲ್ಲಿದ್ದ ಬಿಎಫ್‌ಸಿ ಮತ್ತೆ ಟಾಪ್ ನಾಲ್ಕರಲ್ಲಿ ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಸದ್ಯಕ್ಕೆ ಬಿಎಫ್‌ಸಿ ತಂಡ ಮೂರನೇ ಸ್ಥಾನದಲ್ಲಿದೆ. ಆಡಿದ ಮೂರು ಪಂದ್ಯಗಳ ಪೈಕಿ ಒಂದು ಗೆಲುವು ಒಂದು ಸೋಲು ಹಾಗೂ ಒಂದು ಡ್ರಾ ಫಲಿತಾಂಶವನ್ನು ಕಂಡಿದೆ ಬಿಎಫ್‌ಸಿ.

ಆದರೆ ಕೇರಳ ಬ್ಲಾಸ್ಟರ್ಸ್ ತಂಡದ ಸ್ಥಾನದಲ್ಲಿ ಮಾತ್ರ ಯಾವುದೇ ಬದಲಾವಣೆಯಾಗಿಲ್ಲ. ಆಡಿದ ಮೂರು ಪಂದ್ಯಗಳ ಪೈಕಿ ಎರಡು ಡ್ರಾ ಫಲಿತಾಂಶ ಕಂಡಿರುವ ಕೇರಳ ಬ್ಲಾಸ್ಟರ್ಸ್ ಮತ್ತೊಂದು ಪಂದ್ಯದಲ್ಲಿ ಸೋಲು ಅನುಭವಿಸಿದೆ. ಈ ಮೂಲಕ ಒಟ್ಟು ಎರಡು ಅಂಕಗಳನ್ನು ಖಾತೆಯಲ್ಲಿ ಹೊಂದಿದ್ದು 8ನೇ ಸ್ಥಾನದಲ್ಲಿಯೇ ಮುಂದುವರಿದಿದೆ. ಆಡಿದ 2 ಪಂದ್ಯಗಳಲ್ಲಿ ಎರಡು ಗೆಲುವು ಸಾಧಿಸಿ 6 ಅಂಕ ಹೊಂದಿರುವ ಎಟಿಕೆ ಮೋಹನ್ ಬಾಗನ್ ಮೊದಲ ಸ್ಥಾನ ಪಡೆದುಕೊಂಡಿದ್ದರೆ ಜಮ್ಶೆಡ್ಪುರ ಎಫ್‌ಸಿ ತಮಡ ಎರಡನೇ ಸ್ಥಾನದಲ್ಲಿದೆ. ಒಡಿಶಾ ಎಫ್‌ಸಿ ನಾಲ್ಕನೇ ಟಾಪ್ ನಾಲ್ಕರಲ್ಲಿರುವ ಮತ್ತೊಂದು ತಂಡವಾಗಿದೆ.

ಕೇರಳ ಬ್ಲಾಸ್ಟರ್ಸ್ ಎಫ್‌ಸಿ ಪ್ಲೇಯಿಂಗ್ XI: ಅಲ್ಬಿನೊ ಗೋಮ್ಸ್ (ಗೋಲ್‌ ಕೀಪರ್), ಎನೆಸ್ ಸಿಪೊವಿಕ್, ಜೆಸೆಲ್ ಕಾರ್ನೆರೊ (ನಾಯಕ), ಮಾರ್ಕೊ ಲೆಸ್ಕೊವಿಕ್, ಲಾಲ್ತತಂಗ ಖೌಲ್ಹ್ರಿಂಗ್, ಹರ್ಮನ್ಜೋತ್ ಖಬ್ರಾ, ಸಹಲ್ ಸಮದ್, ಆಡ್ರಿಯನ್ ಲೂನಾ, ಜೀಕ್ಸನ್ ಸಿಂಗ್, ವಿನ್ಸಿ ಬ್ಯಾರೆಟ್ಟೊ ಮತ್ತು ಅಲ್ವಾರೊ ವಾಜ್ಕ್ವೆಜ್.

ಬೆಂಗಳೂರು ಎಫ್‌ಸಿ ಪ್ಲೇಯಿಂಗ್ XI: ಗುರುಪ್ರೀತ್ ಸಂಧು (ಗೋಲ್‌ ಕೀಪರ್), ಪ್ರತೀಕ್ ಚೌಧರಿ, ಅಲನ್ ಕೋಸ್ಟಾ, ಆಶಿಕ್ ಕುರುನಿಯನ್, ರೋಷನ್ ನೊರೆಮ್, ಬ್ರೂನೋ ಸಿಲ್ವಾ, ಸುರೇಶ್ ವಾಂಗ್‌ಜಮ್, ಇಮಾನ್ ಬಸಾಫಾ, ಉದಾಂತ ಸಿಂಗ್, ಕ್ಲಿಟನ್ ಸಿಲ್ವಾ ಮತ್ತು ಸುನಿಲ್ ಛೆಟ್ರಿ (ನಾಯಕ).

Story first published: Sunday, November 28, 2021, 22:18 [IST]
Other articles published on Nov 28, 2021
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+