ಐಎಸ್‌ಎಲ್: ನಾರ್ಥ್‌ಈಸ್ಟ್ ಯುನೈಟೆಡ್ ವಿರುದ್ಧ ಗೆದ್ದು ಬೀಗಿದೆ ಚೆನ್ನೈಯಿನ್ ಎಫ್‌ಸಿ

ಇಂಡಿಯನ್ ಸೂಪರ್ ಲೀಗ್‌ನ 12ನೇ ಪಂದ್ಯದಲ್ಲಿ ಚೆನ್ನೈಯಿನ್ ಎಫ್‌ಸಿ ನಾರ್ಥ್‌ಈಸ್ಟ್ ಯುನೈಟೆಡ್ ಎಫ್‌ಸಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ರೋಚಕವಾಗಿ ನಡೆದ ಈ ಹಣಾಹಣಿಯಲ್ಲಿ ಚೆನ್ನೈಯಿನ್ ಎಫ್‌ಸಿ 2-1 ಗೋಲುಗಳ ಅಂತರದಿಂದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿಯೂ ಚೆನ್ನೈಯಿನ್ ಎಫ್‌ಸಿ ತಂಡ ಭಾರೀ ಪ್ರಗತಿ ಸಾಧಿಸಿದೆ.
ಪಂದ್ಯದ ಮೊದಲಾರ್ಧ 41ನೇ ನಿಮಿಷದಲ್ಲಿ ಚೆನ್ನೈಯಿನ್ ತಂಡ ಮೊದಲ ಗೋಲು ಗಳಿಸುವ ಮೂಲಕ ಮುನ್ನಡೆಯನ್ನು ಪಡೆದುಕೊಂಡಿತು. ನಂತರ ಲಲ್ಲಿಯಾಂಜುಲಾ ಛಾಂಗ್ಟೆ ಚೆನ್ನೈಯಿನ್ ಪರವಾಇ ಮೊದಲ ಗೋಲು ದಾಖಲಿಸಿದರು. ನಂತರ ದ್ವಿತಿಯಾರ್ಧದ ಪಂದ್ಯ ಆರಂಭವಾಗಿ ಐದೇ ನಿಮಿಷದಲ್ಲಿ ನಾರ್ಥ್‌ಈಸ್ಟ್ ಯುನೈಟೆಡ್ ತಂಡ ಗೋಲು ದಾಖಲಿಸುವ ಮೂಲಕ ಸಮಬಲ ಸಾಧಿಸಿತು. ಸುಹೈರ್ ಈ ಗೋಲು ದಾಖಲಿಸಿದ್ದರು. ಆದರೆ ನಂತರ ಪಂದ್ಯದ 74ನೇ ನಿಮಿಷದಲ್ಲಿ ಅನಿರುದ್ಧ್ ಥಾಪ ಚೆನ್ನೈಯಿನ್ ಪರವಾಗಿ ಎರಡನೇ ಗೋಲು ದಾಖಲಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಚೆನ್ನೈಯಿನ್ ಪಮದ್ಯದಲ್ಲಿ ಮತ್ತೊಮ್ಮೆ ಮುನ್ನಡೆ ಸಾಧಿಸಿದೆ. ಬಳಿಕ ನಾರ್ಥ್‌ಈಸ್ಟ್ ಯುನೈಟೆಡ್ ತಂಡಕ್ಕೆ ಈ ಸ್ಕೋರ್ ಸಮಬಲ ಸಾಧಿಸಲು ಸಾಧ್ಯವಾಗಲೇ ಇಲ್ಲ. ಅಂತಿಮವಾಗಿ ಚೆನ್ನೈಯಿನ್ ತಂಡ ಪಂದ್ಯದ ವಿಜೇತ ತಂಡವಾಗಿ ಹೊರಹೊಮ್ಮಿದೆ.
ಈ ಗೆಲುವಿನ ಮೂಲಕ ಚೆನ್ನೈಯಿನ್ ಎಫ್‌ಸಿ ತಂಡ ಆಡಿದ ಎರಡು ಪಂದ್ಯಗಳಲ್ಲಿ ಎರಡರಲ್ಲಿಯೂ ಗೆಲುವು ಸಾಧಿಸಿದಂತಾಗಿದೆ. ಇದಕ್ಕೂ ಮುನ್ನ ಹೈದರಾಬಾದ್ ಎಫ್‌ಸಿ ವಿರುದ್ಧ ಚೆನ್ನೈಯಿನ್ ಎಫ್‌ಸಿ 1-0 ಅಂತರದಿಂದ ಗೆಲುವು ಸಾಧಿಸಿತ್ತು. ಆದರೆ ನಾರ್ಥ್‌ಈಸ್ಟ್ ಯುನೈಟೆಡ್ ತಂಡ ಈವರೆಗೆ ಆಡಿದ ಮೂರು ಪಂದ್ಯಗಳ ಪೈಕಿ ಒಂದರಲ್ಲಿಯೂ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಒಂದು ಪಂದ್ಯ ಡ್ರಾಗೊಂಡಿದ್ದರೆ ಎರಡು ಪಂದ್ಯದಲ್ಲಿ ಸೋಲು ಅನುಭವಿಸಿದೆ. ಈ ಬಾರಿಯ ಆವೃತ್ತಿಯ ಮೊದಲ ಪಮದ್ಯದಲ್ಲಿ ಬಿಎಫ್‌ಸಿ ವಿರುದ್ಧ 2-4 ಅಂತರದ ಸೋಲಿನೊಂದಿಗೆ ಟೂರ್ನಿ ಆರಂಭಿಸಿದ್ದ ತಂಡ ನಂತರ ಕೇರಳ ಬ್ಲಾಸ್ಟರ್ಸ್ ವಿರುದ್ಧ ಗೋಲು ರಹಿತ ಡ್ರಾ ಮಾಡಿಕೊಂಡಿತ್ತು.
ಈ ಪಂದ್ಯದ ಫಲಿತಾಂಶದ ನಂತರ ಚೆನ್ನೈಯಿನ್ ಎಫ್‌ಸಿ ತಂಡ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಇದಕ್ಕೂ ಮುನ್ನ ಅದು ಆರನೇ ಸ್ಥಾನದಲ್ಲಿತ್ತು. ನಾರ್ಥ್‌ಈಸ್ಟ್ ಯುನೈಟೆಡ್ ತಂಡ 9ನೇ ಸ್ಥಾನದಲ್ಲಿಯೇ ಮುಂದುವರಿದಿದೆ. ಇನ್ನು ಅಂಕಪಟ್ಟಿಯಲ್ಲಿ ಎಟಿಕೆ ಮೋಹನ್ ಬಾಗನ್ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದರೆ ಜೆಮ್ಶೆಡ್ಪುರ ಎಫ್‌ಸಿ ತಮಡ ಮೂರನೇ ಹಾಗೂ ಬೆಂಗಳೂರು ಎಫ್‌ಸಿ ತಮಡ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ.
ಚೆನ್ನೈಯಿನ್ ಎಫ್‌ಸಿ: ವಿಶಾಲ್ ಕೈತ್ (ಗೋಲ್‌ಕೀಪರ್), ರೇಗನ್ ಸಿಂಗ್, ಜೆರ್ರಿ ಲಾಲ್ರಿಂಜುಲಾ, ನಾರಾಯಣ ದಾಸ್, ಸ್ಲಾವ್ಕೊ ದಮ್ಜಾನೋವಿಕ್, ಲಾಲಿಯನ್ಜುವಾಲಾ ಚಾಂಗ್ಟೆ, ಅನಿರುದ್ಧ್ ಥಾಪಾ (ನಾಯಕ), ಏರಿಯಲ್ ಬೊರಿಸಿಯುಕ್, ಮಿರ್ಲಾನ್ ಮುರ್ಜೇವ್, ವ್ಲಾಗಿಮಿರ್ ಕೋಮನ್, ರಹೀಮ್ ಅಲಿ.
ನಾರ್ಥ್‌ಈಸ್ಟ್ ಯುನೈಟೆಡ್ ತಂಡ: ಸುಭಾಸಿಶ್ ರಾಯ್ (ಗೋಲ್‌ಕೀಪರ್), ಪ್ರೊವತ್ ಲಾಕ್ರಾ, ಗುರ್ಜಿಂದರ್ ಕುಮಾರ್, ಮಶೂರ್ ಶೆರೀಫ್, ಖಾಸ್ಸಾ ಕ್ಯಾಮೆರಾ (ನಾಯಕ), ಫೆಡೆರಿಕೊ ಗ್ಯಾಲೆಗೊ, ಹೆರ್ನಾನ್ ಸಂತಾನಾ, ಪ್ರಗ್ಯಾನ್ ಗೊಗೊಯ್, ಸುಹೇರ್ ವಡಕ್ಕೆಪೀಡಿಕಾ, ಲಾಲ್ದನ್ಮಾವಿಯಾ ರಾಲ್ಟೆ, ಮಥಿಯಾಸ್ ಕೌರೆರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications