For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಈಸ್ಟ್ ಬೆಂಗಾಲ್ ವಿರುದ್ಧ 6-4 ಅಂತರದ ರೋಚಕ ಗೆಲುವು ಸಾಧಿಸಿದ ಒಡಿಶಾ ಎಫ್‌ಸಿ

ISL 2021-22: match 13 SCEB vs OFC, Odisha FC won by 6-4 Highlights

ಇಂಡಿಯನ್ ಸೂಪರ್ ಲೀಗ್‌ನ ಈ ಬಾರಿಯ ಆವೃತ್ತಿಯಲ್ಲಿ ಎಸ್‌ಸಿ ಈಸ್ಟ್ ಬೆಂಗಾಲ್ ಹಾಗೂ ಒಡಿಶಾ ಎಫ್‌ಸಿ ವಿರುದ್ಧದ ಪಂದ್ಯದಲ್ಲಿ ಗೋಲುಗಳ ಸುರಿಮಳೆಯೇ ಆಗಿದೆ. ಎರಡು ತಂಡಗಳು ಕೂಡ ಜಿದ್ದಿಗೆ ಬಿದ್ದು ಪೈಪೋಟಿ ನಡೆಸಿ ಗೋಲಿನ ಮೇಲೆ ಗೋಲು ಗಳಿಸುತ್ತಾ ಸಾಗಿದವು. ಈ ಪಂದ್ಯದಲ್ಲಿ ಒಟ್ಟು ಹತ್ತು ಗೋಲುಗಳು ದಾಖಲಾಗಿದೆ. ಆದರೆ ಅಂತಿಮವಾಗಿ ಒಡಿಶಾ ಎಫ್‌ಸಿ ಈಸ್ಟ್ ಬೆಂಗಾಲ್ ವಿರುದ್ಧ 6-4 ಅಂತರದಿಂದ ಗೆದ್ದು ಬೀಗಿದೆ.

ಈ ಪಂದ್ಯ ಆರಂಭವಾದ 13ನೇ ನಿಮಿಷದಲ್ಲಿ ಈಸ್ಟ್ ಬೆಂಗಾಲ್ ತಂಡ ಮೊದಲ ಗೋಲು ಗಳಿಸುವ ಮೂಲಕ ಖಾತೆಯನ್ನು ತೆರೆಯಿತು. ಆದರೆ ಅದಾದ ಬಳಿಕ ಒಡಿಶಾ ಎಫ್‌ಸಿ ಪಂದ್ಯದ ಮೇಲೆ ಹಿಡಿತ ಸಾಧಿಸುತ್ತಾ ಸಾಗಿತ್ತು. 33ನೇ ನಿಮಿಷದಲ್ಲಿ ಒಡಿಶಾ ಪರವಾಗಿ ರೋಡಾಸ್ ಮೊದಲ ಗೋಲು ಗಳಿಸಿದರು. 40ನೇ ನಿಮಿಷದಲ್ಲಿ ಮತ್ತೆ ರೋಡಾಸ್ ಎರಡನೇ ಗೋಲು ದಾಖಲಿಸಿ ಮೇಲುಗೈ ಒದಗಿಸಿದರು. ಅದಾದ ಐದೇ ನಿಮಿಷದಲ್ಲಿ ಜಾವಿ ಹೆಚ್ ಒಡಿಶಾ ಪರವಾಗಿ ಮೂರನೇ ಗೋಲು ದಾಖಲಿಸಿದರು. ಈ ಮೂಲಕ ಮೊದಲಾರ್ಧದಲ್ಲಿಯೇ ಒಡಿಶಾ 3-1 ಅಂತರದಿಂದ ಮುನ್ನಡೆ ಸಾಧಿಸಿತ್ತು.

ನಂತರ 71ನೇ ನಿಮಿಷದಲ್ಲಿ ಒಡಿಶಾ ಎಫ್‌ಸಿ ತಂಡ ನಾಲ್ಕನೇ ಗೋಲು ಗಳಿಸಿತು. ಎರಿಡೈ ಈ ಗೋಲು ದಾಖಲಿಸಿದ್ದರು. ನಂತರ 80ನೇ ನಿಮಿಷದಲ್ಲಿ ಎಸ್‌ಸಿ ಈಸ್ಟ್ ಬೆಂಗಾಲ್ ಪರವಾಗಿ ಸೆಂಬೋಯ್ ಎರಡನೇ ಗೋಲು ಗಳಿಸಿದರು. ಈ ಸಂದರ್ಭದಲ್ಲಿ ಒಡಿಶಾ ಎಫ್‌ಸಿ 4-2 ಅಂತರದಿಮದ ಮುನ್ನಡೆಯಲ್ಲಿತ್ತು. ನಂತರ 82ನೇ ನಿಮಿಷದಲ್ಲಿ ಒಡಿಶಾ ಪರವಾಗಿ 5ನೇ ಗೋಲು ದಾಖಲಾಯಿತು. ಇಸಾಕಾ ರಾಲ್ಟೆ ಈ ಗೋಲು ಸಿಡಿಸಿದ್ದರು. ಇನ್ನು ಪಂದ್ಯದ ಅಂತಿಮ ನಿಮಿಷ ಮತ್ತಷ್ಟು ರೋಚಕವಾಗಿತ್ತು.

89ನೇ ನಿಮಿಷದಲ್ಲಿ ಎಸ್‌ಸಿ ಈಸ್ಟ್ ಬೆಂಗಾಲ್ ಪರವಾಗಿ ಡೇನಿಯಲ್ ಚುಕ್ವು ಗೋಲು ದಾಖಲಿಸಿ ಮಿಂಚಿದರು. ನಂತರ ಮತ್ತೊಂದು ನಾಟಕೀಯ ಬೆಳವಣಿಗೆಯಲ್ಲಿ ಈಸ್ಟ್ ಬೆಂಗಾಲ್ ಪೆನಾಲ್ಟಿ ಅವಕಾಶವನ್ನು ಪಡೆದುಕೊಂಡಿತ್ತು. ಇದನ್ನು ಗೋಲಾಗಿ ಪರಿವರ್ತಿಸುವಲ್ಲಿ ಈಸ್ಟ್ ಬೆಂಗಾಲ್ ಯಶಸ್ವಿಯಾಯಿತು. ನಂತರ ಪಂದ್ಯ ಇನ್ನೇನು ಮುಕ್ತಾಯದ ಹಂತಕ್ಕೆ ಬಂದಾಗ ಒಡಿಶಾ ಎಫ್‌ಸಿ ತಂಡದ ಪರವಾಗಿ ಮತ್ತೊಂದು ಗೋಲು ದಾಖಲಾಯಿತು. ಏರಿಡೈ ಸೌರಜ್ ಈ ಕೊನೆಯ ಗೋಲು ದಾಖಲಿಸಿದರು. ಈ ಮೂಲಕ ಅತ್ಯಂತ ರೋಚಕವಾಗಿ ಪಂದ್ಯ ಅಂತ್ಯವಾಯಿತು. ಅಂತಿಮವಾಗಿ ಒಡಿಶಾ ಎಫ್‌ಸಿ ತಂಡ 6 ಗೋಲು ಗಳಿಸಿ ಗೆಲುವು ಸಾಧಿಸಿದ್ದರೆ ಎಸ್‌ಸಿ ಈಸ್ಟ್ ಬೆಂಗಾಲ್ 4 ಗೋಲು ಸಂಪಾದಿಸಿ ಸೋಲು ಕಂಡಿತು.

ಈ ಅಮೋಘ ಗೆಲುವಿನ ನಂತರ ಒಡಿಶಾ ಎಫ್‌ಸಿ ತಂಡ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಆಡಿದ ಎರಡು ಪಂದ್ಯಗಳ ಪೈಕಿ ಒಡಿಶಾ ಎರಡರಲ್ಲಿಯೂ ಗೆಲುವು ಪಡೆದಿದೆ. ಸೋತ ಈಸ್ಟ್ ಬೆಂಗಾಲ್ ತಂಡ ಈ ಬಾರಿಯ ಟೂರ್ನಿಯಲ್ಲಿ ಈವರೆಗೆ ಒಂದು ಗೆಲುವು ಕಾಣುವಲ್ಲಿಯೂ ವಿಫಲವಾಗಿದೆ. ಒಂದು ಪಂದ್ಯದಲ್ಲಿ ಡ್ರಾ ಮಾಡಿಕೊಂಡಿದ್ದರೆ ಮತ್ತೆರಡು ಪಂದ್ಯಗಳಲ್ಲಿ ಸೋಲಿನ ರುಚಿ ಕಂಡಿದೆ. ಈ ಮೂಲಕ ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ಅಂಕಪಟ್ಟಿಯಲ್ಲಿ ಎಟಿಕೆ ಮೋಹನ್ ಬಾಗನ್ ಅಗ್ರ ಸ್ಥಾನದಲ್ಲಿಯೇ ಮುಂದಿವರಿಸಿದ್ದರೆ ಒಡಿಶಾ ಎಫ್‌ಸಿ ಎರಡನೇ ಸ್ಥಾನದಲ್ಲಿದೆ. ಚೆನ್ನೈಯಿನ್ ಎಫ್‌ಸಿ ಹಾಗೂ ಜೆಮ್ಶೆಡ್ಪುರ ಎಫ್‌ಸಿ ಮೂರು ಹಾಗೂ ನಾಲ್ಕನೇ ಸ್ಥಾನಗಳಲ್ಲಿದೆ. ಬೆಂಗಳೂರು ಎಫ್‌ಸಿ ಐದನೇ ಸ್ಥಾನಕ್ಕೆ ಕುಸಿದಿದೆ.

ಎಸ್‌ಸಿ ಈಸ್ಟ್ ಬೆಂಗಾಲ್ ತಂಡ: ಸುವಮ್ ಸೇನ್ (ಗೋಲ್‌ಕೀಪರ್), ಜಾಯ್ನರ್ ಲೌರೆಂಕೊ, ಹೀರಾ ಮೊಂಡಲ್, ರಾಜು ಗಾಯಕ್ವಾಡ್, ಫ್ರಾಂಜೊ ಪ್ರೈಸ್ (ನಾಯಕ), ಬಿಕಾಶ್ ಜೈರು, ಅಮೀರ್ ಡೆರ್ವಿಸೆವಿಕ್, ಮೊಹಮ್ಮದ್ ರಫೀಕ್, ಡ್ಯಾರೆನ್ ಸಿಡೊಯೆಲ್, ನವೊರೆಮ್ ಸಿಂಗ್ ಮತ್ತು ಆಂಟೋನಿಯೊ ಪೆರೊಸೆವಿಕ್

ಒಡಿಶಾಎಫ್‌ಸಿ ತಂಡ: ಕಮಲ್ಜಿತ್ ಸಿಂಗ್ (ಗೋಲ್‌ ಕೀಪರ್), ವಿಕ್ಟರ್ ಮೊಂಗಿಲ್, ಹೆಕ್ಟರ್ ರಾಮಿರೆಜ್, ಹೆಂಡ್ರಿ ಆಂಟೊನಾಯ್, ಲಾಲ್ರುತ್ತರಾ, ಜೇವಿಯರ್ ಹೆರ್ನಾಂಡೆಜ್, ವಿನಿತ್ ರೈ (ನಾಯಕ), ಥೋಯ್ಬಾ ಸಿಂಗ್, ಲಿರಿಡಾನ್ ಕ್ರಾಸ್ನಿಕಿ, ನಂದಕುಮಾರ್ ಸೇಕರ್ ಮತ್ತು ಜೆರ್ರಿ ಮಾವಿಹ್ಮಿಂಗ್ತಂಗ

Story first published: Wednesday, December 1, 2021, 15:28 [IST]
Other articles published on Dec 1, 2021
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+