ಐಎಸ್‌ಎಲ್: ಜೆಮ್ಶೆಡ್ಪುರ ಎಫ್‌ಸಿ vs ಹೈದರಾಬಾದ್ ಎಫ್‌ಸಿ ಪಂದ್ಯ ಡ್ರಾದಲ್ಲಿ ಅಂತ್ಯ

ಇಂಡಿಯನ್ ಸೂಪರ್ ಲೀಗ್‌ನ 15ನೇ ಪಂದ್ಯದಲ್ಲಿ ಜೆಮ್ಶೆಡ್ಪುರ ಎಫ್‌ಸಿ ಹಾಗೂ ಹೈದರಾಬಾದ್ ಎಫ್‌ಸಿ ತಂಡಗಳು ಮುಖಾಮುಖಿಯಾಗಿದೆ. ಈ ಜಿದ್ದಾಜಿದ್ದಿನಿಂದ ಕೂಡದ ಈ ಪಂದ್ಯ 1-1 ಗೋಲುಗಳಿಂದ ಡ್ರಾ ಫಲಿತಾಂಶವನ್ನು ಪಡೆದುಕೊಂಡಿದೆ. ಈ ಮೂಲಕ ಟಾಪ್ 4ರಲ್ಲಿ ಸ್ಥಾನ ಗಳಿಸುವ ಮೇಲೆ ಕಣ್ಣಿಟ್ಟಿದ್ದ ಎರಡು ತಂಡಗಳಿಗೂ ನಿರಾಸೆಯಾಗಿದೆ.
ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಪಂದ್ಯದಲ್ಲಿ ಆರಂಭದಲ್ಲಿ ಎರಡು ತಂಡಗಳು ಕೂಡ ಗೋಲು ಗಳಿಸಲು ವಿಫಲವಾಗಿದ್ದವು. ಆದರೆ ಪಂದ್ಯದ 41ನೇ ನಿಮಿಷದಲ್ಲಿ ಜೆಮ್ಶೆಡ್ಪುರ ಎಪ್‌ಸಿ ಮೊದಲ ಗೋಲು ಗಳಿಸುವಲ್ಲಿ ಯಶಸ್ವಿಯಾಯಿತು. ಸ್ಕಾಟಿಷ್ ಫುಟ್ಬಾಲರ್ ಗ್ರೆಗ್ ಸ್ಟೆವರ್ಟ್ ಜೆಮ್ಶೆಡ್ಪುರ ಪರವಾಗಿ ಈ ಗೋಲು ಸಿಡಿಸಿ ತಂಡಕ್ಕೆ ಮುನ್ನಡೆಯನ್ನು ಒದಗಿಸಿದರು. ಆದರೆ ಹೈದರಾಬಾದ್ ಎಫ್‌ಸಿ ಮೊದಲಾರ್ಧದಲ್ಲಿ ಯಾವುದೇ ಗೋಲು ಗಳಿಸಲು ವಿಫಲವಾಗಿತ್ತು.
ಆದರೆ ದ್ವಿತೀಯಾರ್ಧ ಆರಂಭವಾದ ಕೆಲವೇ ನಿಮಿಷಗಳಲ್ಲಿ ಪಂದ್ಯದ 57ನೇ ನಿಮಿಷದಲ್ಲಿ ಹೈದರಾಬಾದ್ ಎಫ್‌ಸಿ ತಂಡ ಕೂಡ ಗೋಲು ದಾಖಲಿಸುವಲ್ಲಿ ಯಶಸ್ವಿಯಾಯಿತು. ಬೈಜೀರಿಯಾದ ಫುಟ್ಬಾಲ್ ಆಟಗಾರ ಬಾರ್ಥೊಲೊವೋವ್ ಲೊಗ್ಬೇಚೇ ಹೈದರಾಬಾದ್ ತಂಡದ ಪರವಾಗಿ ಈ ಗೋಲು ದಾಖಲಸುವಲ್ಲಿ ಯಶಸ್ವಿಯಾದರು. ಈ ಮೂಲಕ ಹೈದರಾಬಾದ್ ತಂಡ ಸಮಬಲ ಸಾಧಿಸುವಲ್ಲಿ ಯಶಸ್ವುಯಾಯಿತು. ಅದಾದ ಬಳಿಕ ಎರಡು ತಮಡಗಳು ಕೂಡ ಸಾಕಷ್ಟು ಪ್ರಯತ್ನಿಸಿತಾದರೂ ಯಾವ ತಂಡ ಕೂಡ ಗೋಲು ಗಳಿಸುವಲ್ಲಿ ವಿಫಲವಾಯಿತು. ಈ ಮೂಲಕ ಪಂದ್ಯ ಡ್ರಾದೊಂದಿಗೆ ಅಂತ್ಯ ಕಂಡಿದೆ.
ಹೈದರಾಬಾದ್ ಎಫ್‌ಸಿ ಆಡುವ ಬಳಗ: ಲಕ್ಷ್ಮೀಕಾಂತ್ ಕಟ್ಟಿಮನಿ (ಗೋಲ್‌ಕೀಪರ್), ಜುವಾನನ್, ಚಿಂಗ್ಲೆನ್ಸನಾ ಸಿಂಗ್, ಆಕಾಶ್ ಮಿಶ್ರಾ, ಆಸಿಶ್ ರೈ, ಜೋವೊ ವಿಕ್ಟರ್ (ನಾಯಕ), ಅನಿಕೇತ್ ಜಾಧವ್, ಯಾಸಿರ್ ಮೊಹಮ್ಮದ್, ಹಿತೇಶ್ ಶರ್ಮಾ, ಜೋಯಲ್ ಚಿಯಾನೀಸ್ ಮತ್ತು ಬಾರ್ತಲೋಮಿವ್ ಓಗ್ಬೆಚೆ.
ಜೆಮ್ಶಡ್ಪುರ ಎಫ್‌ಸಿಆಡುವ ಬಳಗ: ಟಿಪಿ ರೆಹನೇಶ್ (ಗೋಲ್‌ಕೀಪರ್), ನರೇಂದರ್ ಗಹ್ಲೋಟ್, ರಿಕಿ ಲಲ್ಲಾವ್ಮಾ, ಎಲಿ ಸಬಿಯಾ (ನಾಯಕ), ಲಾಲ್ಡಿನ್ಲಿಯಾನಾ ರೆಂತ್ಲೀ, ಜಿತೇಂದ್ರ ಸಿಂಗ್, ಸೆಮಿನ್ಲೆನ್ ಡೌಂಗೆಲ್, ಕೋಮಲ್ ಥಾಟಲ್, ಅಲೆಕ್ಸಾಂಡ್ರೆ ಲಿಮಾ, ನೆರಿಜಸ್ ವಾಲ್ಸ್ಕಿಸ್ ಮತ್ತು ಗ್ರೆಗ್ ಸ್ಟೀವರ್ಟ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications