For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ನೀರಸ ಡ್ರಾದಲ್ಲಿ ಅಂತ್ಯವಾದ ಚೆನ್ನೈಯಿನ್ vs ಈಸ್ಟ್ ಬೆಂಗಾಲ್ ಪಂದ್ಯ

ISL 2021-22: match 16 SCEB vs CFC, match draw by without Goal, Highlights

ಇಂಡಿಯನ್ ಸೂಪರ್ ಲೀಗ್‌ನ 16ನೇ ಪಂದ್ಯದಲ್ಲಿ ಮುಖಾಮುಖಿಯಾದ ಚೆನ್ನೈಯಿನ್ ಎಫ್‌ಸಿ ಹಾಗೂ ಈಸ್ಟ್ ಬೆಂಗಾಲ್ ತಂಡಗಳು ಹೋಲು ರಹಿತ ನೀರಸ ಡ್ರಾಗೆ ತೃಪ್ತಿಪಟ್ಟುಕೊಂಡಿದೆ. ಈ ಹಣಾಹಣಿಯಲ್ಲಿ ಎರಡು ತಂಡಗಳು ಕೂಡ ಸಾಕಷ್ಟು ಪೈಪೋಟಿ ನಡೆಸಿದವಾದರೂ ಗೋಲು ಗಳಿಸಲು ಎರಡು ತಂಡಗಳು ಕೂಡ ವಿಫಲವಾಯಿತು. ಹೀಗಾಗಿ ಅಂತಿಮವಾಗಿ ಡ್ರಾಗೆ ತೃಪ್ತಿಪಟ್ಟುಕೊಂಡಿದೆ.

ಆರಂಭದಿಂದಲೇ ಎರಡು ತಂಡಗಳು ಕೂಡ ಸಾಕಷ್ಟು ಜಿದ್ದಾಜಿದ್ದಿನ ಪ್ರದರ್ಶನ ನೀಡುತ್ತಾ ಸಾಗಿತ್ತು. ಆದರೆ ಎರಡು ತಂಡಗಳ ರಕ್ಷಣಾ ವಿಭಾಗದ ಪ್ರದರ್ಶನ ಅತ್ಯುತ್ತಮವಾಗಿತ್ತು. ಹೀಗಾಗಿ ಇತ್ತಂಡಗಳ ಪ್ರಯತ್ನಗಳು ಕೂಡ ವಿಫಲವಾಯಿತು. ಅಂತಿಮ ಕ್ಷಣದವರೆಗೂ ಗೋಲು ಗಳಿಸಲು ಎರಡು ತಂಡಗಳು ಕೂಡ ಭಾರೀ ಪೈಪೋಟಿ ನಡೆಸಿತಾದರೂ ಸಂಪೂರ್ಣವಾಗಿ ವಿಫಲವಾಯಿತು, ಬಳಿಕ ಹೆಚ್ಚುವರಿ ಅವಧಿಯಲ್ಲಿಯೂ ಕೂಡ ಗೋಲು ದಾಖಲಾಗದಿದ್ದಾಗ ಫಲಿತಾಂಶವನ್ನು ಡ್ರಾ ಎಂದು ಘೋಷಿಸಲಾಯಿತು.

ಇನ್ನು ಈ ಡ್ರಾ ಫಲಿತಾಂಶದೊಂದಿಗೆ ಚೆನ್ನೈಯಿನ್ ಎಫ್‌ಸಿ ಆಡಿದ ಮೂರು ಪಂದ್ಯಗಳಲ್ಲಿ ಎರಡು ಗೆಲುವು ಹಾಗೂ ಒಂದು ಡ್ರಾ ಫಲಿತಾಂಶವನ್ನು ಪಡೆದುಕೊಂಡಿದೆ. ಮತ್ತೊಂದೆಡೆ ಎಸ್‌ಸಿ ಈಸ್ಟ್ ಬೆಂಗಾಲ್ ಆಡಿದ ನಾಲ್ಕು ಪಮದ್ಯಗಳಲ್ಲಿ ಈವರೆಗೂ ಒಂದೇ ಒಂದು ಗೆಲುವು ಸಾಧಿಸಲು ವಿಫಲವಾಗಿದೆ. ಇಸ್ಟ್ ಬೆಂಗಾಲ್ ಎರಡು ಪಂದ್ಯಗಳಲ್ಲಿ ಸೋಲು ಕಂಡಿದ್ದರೆ ಎರಡು ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ.

ಇನ್ನು ಇಸ್ಟ್ ಬೆಂಗಾಲ್ ವಿರುದ್ಧಧ ಪಂದ್ಯದಲ್ಲಿ ಚೆನ್ನೈಯಿನ್ ಎಫ್‌ಸಿ ತಂಡ ಡ್ರಾಫಲಿತಾಂಶಕ್ಕೆ ತೃಪ್ತಿಪಟ್ಟುಕೊಂಡರೂ ಅಂಕಪಟ್ಟಿಯಲ್ಲಿ ಏರಿಕೆ ಸಾಧಿಸಿದ್ದು ಅಗ್ರ ಸ್ಥಾನವನ್ನು ಸಂಪಾದಿಸಿದೆ. ಮೊದಲ ಸ್ಥಾನದಲ್ಲಿದ್ದ ಮುಂಬೈ ಸಿಟಿ ಎಫ್‌ಸಿ ತಂಡ ಎರಡನೇ ಸ್ಥಾನಕ್ಕೆ ಕುಸಿದಿದ್ದರೆ ಒಡಿಶಾ ಎಫ್‌ಸಿ ಎರಡನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಇನ್ನು ಬೆಂಗಳೂರು ಎಫ್‌ಸಿ ತ,ಡ ಏಳನೇ ಸ್ಥಾನವನ್ನು ಪಡೆದುಕೊಂಡಿದೆ.

ಎಸ್‌ಸಿ ಈಸ್ಟ್ ಬೆಂಗಾಲ್ ಆಡುವ ಬಳಗ: ಸುವಮ್ ಸೇನ್ (ಗೋಲ್‌ ಕೀಪರ್), ಡೇನಿಯಲ್ ಗೋಮ್ಸ್, ಟೊಮಿಸ್ಲಾವ್ ಮರ್ಸೆಲಾ (ನಾಯಕ), ಜಾಯ್ನರ್ ಲೌರೆಂಕೊ, ಹೀರಾ ಮೊಂಡಲ್, ಅಮರ್‌ಜಿತ್ ಕಿಯಾಮ್, ಡ್ಯಾರೆನ್ ಸಿಡೊಯೆಲ್, ಮೊಹಮ್ಮದ್ ರಫೀಕ್, ಅಮೀರ್ ಡರ್ವಿಸೆವಿಕ್, ನವೊರೆಮ್ ಸಿಂಗ್, ಡೇನಿಯಲ್ ಚುಕ್ವು.

ಚೆನ್ನೈಯಿನ್ ಎಫ್‌ಸಿ ಆಡುವ ಬಳಗ: ವಿಶಾಲ್ ಕೈತ್ (ಗೋಲ್‌ ಕೀಪರ್), ರೇಗನ್ ಸಿಂಗ್, ಜೆರ್ರಿ ಲಾಲ್ರಿಂಜುಲಾ, ನಾರಾಯಣ್ ದಾಸ್, ಸ್ಲಾವ್ಕೊ ದಮ್ಜಾನೋವಿಕ್, ವ್ಲಾಡಿಮಿರ್ ಕೋಮನ್, ಮಿರ್ಲಾನ್ ಮುರ್ಜೇವ್, ಏರಿಯಲ್ ಬೊರಿಸಿಯುಕ್, ಅನಿರುದ್ಧ್ ಥಾಪಾ (ನಾಯಕ), ಲಾಲಿಯನ್ಜುವಾಲಾ ಚಾಂಗ್ಟೆ, ರಹೀಮ್ ಅಲಿ.

Story first published: Saturday, December 4, 2021, 0:00 [IST]
Other articles published on Dec 4, 2021
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+