ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2021- ಮೊದಲ ಪಂದ್ಯದಲ್ಲಿ ಭರ್ಜರಿ ಗೆಲವು ಸಾಧಿಸಿದ ಬೆಂಗಳೂರು

ISL 2021-22: match 2 BFC vs NEUFC: 	Bengaluru FC won by 4-2 against NorthEast United

ಇಂಡಿಯನ್ ಸೂಪರ್ ಲೀಗ್‌ನ ಪಂದ್ಯಗಳು ಭಾನುವಾರದಿಂದ ಭರ್ಜರಿಯಾಗಿ ಆರಂಭವನ್ನು ಪಡೆದುಕೊಂಡಿದೆ. ಟೂರ್ನಿಯ ಆರಂಭದ ದಿನವೇ ಬೆಂಗಳೂರು ಮೂಲದ ತಂಡ ಬೆಂಗಳೂರು ಎಫ್‌ಸಿ ತಂಡ ಕಣಕ್ಕಿಳಿದಿತ್ತು. ಈ ಪಂದ್ಯದಲ್ಲಿ ಬಿಎಫ್‌ಸಿ ತಂಡ ಭರ್ಜರಿಯಾದ ಗೆಲುವು ಸಾಧಿಸಿದೆ. ನಾರ್ಥ್‌ಈಸ್ಟ್ ಯುನೈಟೆಡ್ ವಿರುದ್ಧ ನಡೆದ ಪಂದ್ಯದಲ್ಲಿ ಬೆಂಗಳೂರು ಭರ್ಜರಿ 4-2 ಅಂತರದಿಂದ ಗೆಲುವು ಪಡೆದಿದೆ.

ಆರಂಭದಿಂದಲೇ ಉತ್ತಮ ಪ್ರದರ್ಶನ ನಿಡುತ್ತಾ ಸಾಗಿದ ಬಿಎಫ್‌ಸಿ 14ನೇ ನಿಮಿಷದಲ್ಲಿ ಮೊದಲ ಗೋಲು ಬಾರಿಸಿ ಮೇಲುಗೈ ಸಾಧಿಸಿತು. ಕ್ಲೈಟನ್ ಸಿಲ್ವ ಮೂಲಕ ಗೋಲಿನ ಖಾತೆ ತೆರೆಯಿತು ಬಿಎಫ್‌ಸಿ. ನಂತರ ಮೂರೇ ನಿಮಿಷದಲ್ಲಿ ನಾರ್ಥ್‌ಈಸ್ಟ್ ಯುನೈಟೆಡ್ ತಂಡ ಕೂಡ ಗೋಲು ಗಳಿಸುವ ಮೂಲಕ ಸ್ಕೋರ್ ಸಮಬಲಗೊಳಿಸುವಲ್ಲಿ ಯಶಸ್ವಿಯಾಗಿತ್ತು.

ನಂತರ 22ನೇ ನಿಮಿಷದಲ್ಲಿ ಎಬಿಎಸ್ ತಂಡ ಮತ್ತೊಂದು ಗೋಲು ಗಳಿಸಿತು. ಮಶೂರ್ ಶೆರೀಫ್ ತಂಡಕ್ಕೆ ಎರಡನೇ ಬಾರಿಗೆ ಮೇಲುಗೈ ಒದಗಿಸಿದರು. ಇದಕ್ಕೆ ಪ್ರತಿಯಾಗಿ ನಾರ್ಥ್‌ಈಸ್ಟ್ ಯುನೈಟೆಡ್ ತಂಡ ಮಥಿಯಾಸ್ ಕೋರೊಯರ್ ಅವರ ಗೋಲಿನ ಮೂಲಕ ಎರಡನೇ ಬಾರಿಗೆ ಗೋಲ್ ಗಳಿಕೆಯಲ್ಲಿ ಸಮಬಲ ಪಡೆದುಕೊಂಡಿತು. ಹೀಗೆ ಜಿದ್ದಾಜಿದ್ದಿನ ಹೋರಾಟ ಮುಂದುವರಿದಿತ್ತು.

ಬಳಿಕ ಮತ್ತೊಮ್ಮೆ ಬೆಂಗಳುರು ಬುಲ್ಸ್ ತಂಡ ಮೇಲುಗೈ ಸಾಧಿಸಿದ್ದು 42ನೇ ನಿಮಿಷದಲ್ಲಿ. ಜಯೇಶ್ ರಾಣೆ ಮೂಲಕ ಈ ಗೋಲು ಸಿಡಿದಿತ್ತು. ಈ ಮೂಲಕ ಬಿಎಫ್‌ಸಿ 3-2 ಅಂತರದಿಂದ ಮುನ್ನಡ ಪಡೆದುಕೊಂಡಿತ್ತು. ನಂತರ ಪ್ರಿನ್ಸ್ ಇಬಾರ ಬಿಎಫ್‌ಸಿ ಪರವಾಗಿ ನಾಲ್ಕನೇ ಗೋಲು ಗಳಿಸಿದರು. ಈ ಮೂಲಕ ಬಿಎಸ್‌ಸಿ ನಾಲ್ಕು ಗೋಲನ್ನು ದಾಖಲಿಸಿದೆ. ಆದರೆ ಮೊದಲ ಎರಡು ಗೋಲು ಗಳಿಸಿದ ನಂತರ ನಾರ್ಥ್‌ಈಸ್ಟ್ ಯುನೈಟೆಡ್ ತಂಡಕ್ಕೆ ಮತ್ತೊಂದು ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಈ ಮೂಲಕ ಬೆಂಗಳೂರು ಎಫ್‌ಸಿ ತಂಡ ಭರ್ಜರಿಯಾದ ಗೆಲುವು ಪಡೆದುಕೊಂಡಿದೆ.

ಬೆಂಗಳೂರು ಎಫ್‌ಸಿ ಆಡುವ ಬಳಗ: ಗುರುಪ್ರೀತ್ ಸಂಧು (ಗೋಲ್‌ಕೀಪರ್), ಅಲನ್ ಕೋಸ್ಟಾ, ಅಜಿತ್ ಕಾಮರಾಜ್, ಆಶಿಕ್ ಕುರುನಿಯನ್, ಯರೋಂಡು ಮುಸಾವು-ಕಿಂಗ್, ಬ್ರೂನೋ ಸಿಲ್ವಾ, ಜಯೇಶ್ ರಾಣೆ, ಸುರೇಶ್ ವಾಂಗ್ಜಮ್, ಉದಾಂತ ಸಿಂಗ್, ಕ್ಲಿಟನ್ ಸಿಲ್ವಾ, ಸುನಿಲ್ ಛೆಟ್ರಿ (ನಾಯಕ).

ನಾರ್ರ್ತ್ಈಸ್ಟ್ ಯುನೈಟೆಡ್ಡ್ ಆಡುವ ಬಳಗ: ಸುಭಾಶಿಶ್ ರಾಯ್ (ನಾಯಕ/ ಗೋಲ್‌ಕೀಪರ್), ಪ್ರೊವತ್ ಲಾಕ್ರಾ, ಗುರ್ಜಿಂದರ್ ಕುಮಾರ್, ಜೆಸ್ಟಿನ್ ಜಾರ್ಜ್, ಮಶೂರ್ ಶೆರೀಫ್, ಖಾಸ್ಸಾ ಕ್ಯಾಮೆರಾ, ಹೆರ್ನಾನ್ ಸಂತಾನಾ, ಸುಹೇರ್ ವಡಕ್ಕೆಪೀಡಿಕಾ, ಲಾಲ್ದನ್ಮಾವಿಯಾ ರಾಲ್ಟೆ, ಮಥಿಯಾಸ್ ಕೊರೇರ್, ಡೆಶೋರ್ನ್ ಬ್ರೌನ್.

Story first published: Sunday, November 21, 2021, 9:36 [IST]
Other articles published on Nov 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X