ಐಎಸ್‌ಎಲ್: ರೋಚಕ ಸೆಣೆಸಾಟದಲ್ಲಿ ಈಸ್ಟ್ ಬೆಂಗಾಲ್ ವಿರುದ್ಧ ಗೆದ್ದ ಎಫ್‌ಸಿ ಗೋವಾ

ಇಂಡಿಯನ್ ಸೂಪರ್ ಲೀಗ್‌ನ 21ನೇ ಪಂದ್ಯದಲ್ಲಿ ಎಫ್‌ಸಿ ಗೋವಾ ಹಾಗೂ ಈಸ್ಟ್ ಬೆಂಗಾಲ್ ತಂಡಗಳು ಜಿದ್ದಾಜಿದ್ದಿನ ಕಾದಾಟವನ್ನು ನಡೆಸಿದೆ. ಈ ರೋಚಕ ಸೆಣೆಸಾಟದಲ್ಲಿ ಎಸ್‌ಸಿ ಈಸ್ಟ್ ಬೆಂಗಾಲ್ ವಿರುದ್ಧ ಎಫ್‌ಸಿ ಗೋವಾ ತಂಡ 4-3 ಅಂತರದಿಂದ ರೋಚಕ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಎಫ್‌ಸಿ ಗೋವಾ ತಂಡ ಈ ಬಾರಿಯ ಟೂರ್ನಿಯಲ್ಲಿ ತನ್ನ ಮೊದಲ ಗೆಲುವು ಸಾಧಿಸಿದಂತಾಗಿದೆ. ಎಸ್‌ಸಿ ಈಸ್ಟ್ ಬೆಂಗಾಲ್ ತಂಡ ಐದು ಪಂದ್ಯಗಳ ನಂತರವೂ ತನ್ನ ಮೊದಲ ಗೆಲುವು ಸಾಧಿಸಲು ವಿಫಲವಾಗಿದೆ.
ಈ ಪಂದ್ಯದಲ್ಲಿ ಎಫ್‌ಸಿ ಗೋವಾ ತಂಡ 14ನೇ ನಿಮಿಷದಲ್ಲಿ ಮೊದಲ ಗೋಲು ದಾಖಲಿಸಿ ಪಂದ್ಯದಲ್ಲಿ ಮೇಲುಗೈ ಸಾಧಿಸಿತು. ಸ್ಪಾನಿಶ್ ಫುಟ್ಬಾಲ್ ಆಟಗಾರ ಆಲ್ಬರ್ಟೊ ನೊಗುರಾ ರಿಪೋಲ್ ಈ ಮುನ್ನಡೆಯನ್ನು ಒದಗಿಸಿದ್ದರು. ಅದಾದ ಬಳಿಕ ಪಂದ್ಯದ 26ನೇ ನಿಮಿಷದಲ್ಲಿ ಎಸ್‌ಸಿ ಈಸ್ಟ್ ಬೆಂಗಾಲ್ ಕೂಡ ಮೊದಲ ಗೋಲು ದಾಖಲಿಸಿ ಸಮಬಲ ಸಾಧಿಸಿತು. 32ನೇ ನಿಮಿಷದಲ್ಲಿ ಗೋವಾ ತಂಡ ಎರಡನೇ ಗೋಲು ದಾಖಲಿಸಿ ಮತ್ತೊಮ್ಮೆ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಯಿತು. ಅದಾಗಿ ಐದೇ ನಿಮಿಷದಲ್ಲಿ ಈಸ್ಟ್ ಬೆಂಗಾಲ್ ಕೂಡ ಮತ್ತೊಂದು ಗೋಲು ದಾಖಲಿಸಿ ಪಂದ್ಯದಲ್ಲಿ ಮತ್ತೊಂದು ಬಾರಿ ಸಮಬಲ ಸಾಧಿಸುವಲ್ಲಿ ಯಶಸ್ವಿಯಾದರು. ಬಳಿಕ ಪಂದ್ಯದ ಪ್ರಥಮಾರ್ಧದ ಮುಕ್ತಾಯಕ್ಕೆ ಒಂದು ನಿಮಿಷವಿರುವಾದ ಗೋವಾ ಮತ್ತೊಮ್ಮೆ ಮೇಲುಗೈ ಸಾಧಿಸಿತು. ಮೂರನೇ ಗೋಲು ಗೋವಾ ಪರವಾಗಿ ದಾಖಲಾಗಿತ್ತು.
ಈ ಮೂಲಕ ಗೋವಾ ಮೊದಲಾರ್ಧದ ಮುಕ್ತಾಯಕ್ಕೆ 3-2 ಅಂತರದಿಂದ ಮುನ್ನಡೆ ಪಡೆದುಕೊಂಡಿತ್ತು. ನಂತರ ಪಂದ್ಯದ 60ನೇ ನಿಮಿಷದಲ್ಲಿ ಎಸ್‌ಸಿ ಈಸ್ಟ್ ಬೆಂಗಾಲ್ ತಂಡ ಕೂಡ ಎರಡನೇ ಗೋಲು ದಾಖಲಸಿತು. ಈ ಮೂಲಕ ಪಂದ್ಯ 3-3 ಅಂತರದಿಂದ ಸಮಬಲಗೊಂಡಿತು. ಅದಾದ ನಂತರ 79ನೇ ನಿಮಿಷದಲ್ಲಿ ಎಫ್‌ಸಿ ಗೋವಾ ತಂಡ ನಾಲ್ಕನೇ ಗೋಲು ದಾಖಲಿಸಿ ಮತ್ತೊಮ್ಮೆ ಮುನ್ನಡೆ ಸಾಧಿಸಿತು. ಆದರೆ ನಂತರ ಎಸ್‌ಸಿ ಈಸ್ಟ್ ಬೆಂಗಾಲ್ ತಂಡ ಸಾಕಷ್ಟು ಪ್ರಯತ್ನ ನಡೆಸಿತಾದರೂ ಪಂದ್ಯವನ್ನು ಸಮಬಲಗೊಳಿಸಲು ಸಾಧ್ಯವಾಗಲೇ ಇಲ್ಲ. ಅಂತಿಮವಾಗಿ ಈ ರೋಚಕ ಪಂದ್ಯದಲ್ಲಿ ಎಪ್‌ಸಿ ಗೋವಾ ತಂಡ 4-3 ಅಂತರದಿಂದ ಭರ್ಜರಿಯಾಗಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಈ ಗೆಲುವಿನೊಂದಿಗೆ ಎಫ್‌ಸಿ ಗೋವಾ ತಂಡ ಮೊದಲ ಗೆಲುವು ದಾಖಲಿಸಿದೆ. ಹೀಗಾಗಿ ಅಂಕಪಟ್ಟಿಯಲ್ಲಿ ಕೊನೇಯ ಸ್ಥಾನದಿಂದ ಒಂದು ಸ್ಥಾನ ಏರಿಕೆ ಕಂಡಿದ್ದು 10ನೇ ಸ್ಥಾನವನ್ನು ಪಡೆದುಕೊಂಡಿದೆ. ಸೋಲು ಕಂಡ ಎಸ್‌ಸಿ ಈಸ್ಟ್ ಬೆಂಗಾಲ್ ತಂಡ ಆಡಿದ ಐದು ಪಂದ್ಯಗಳಲ್ಲಿ ಒಂದೂ ಗೆಲುವು ಸಾಧಿಸಲು ವಿಫಲವಾಗಿದೆ. ಈ ಮೂಲಕ ಅಂತಿಮ ಸ್ಥಾನವನ್ನು ಪಡೆದುಕೊಂಡಿದೆ.
ಎಫ್‌ಸಿ ಗೋವಾ ಆಡುವ ಬಳಗ: ಧೀರಜ್ ಮೊಯಿರಾಂಗ್ಥೆಮ್ (ಗೋಲ್‌ಕೀಪರ್), ಸೆರಿಟನ್ ಫೆರ್ನಾಂಡಿಸ್, ಇವಾನ್ ಗೊನ್ಜಾಲೆಜ್, ಮೊಹಮ್ಮದ್ ಅಲಿ, ಸೇವಿಯರ್ ಗಾಮಾ, ಐಬಾನ್ ಡೊಹ್ಲಿಂಗ್, ಎಡು ಬೆಡಿಯಾ (ನಾಯಕ), ಗ್ಲಾನ್ ಮಾರ್ಟಿನ್ಸ್, ಅಲ್ಬರ್ಟೊ ನೊಗುರಾ, ದೇವೇಂದ್ರ ಮುರ್ಗಾಂವ್ಕರ್ ಮತ್ತು ಜಾರ್ಜ್ ಒರ್ಟಿಜ್.
ಎಸ್‌ಸಿ ಈಸ್ಟ್ ಬೆಂಗಾಲ್ ಆಡುವ ಬಳಗ: ಸುವಮ್ ಸೇನ್ (ಗೋಲ್ ಕೀಪರ್), ಫ್ರಾಂಜೊ ಪ್ರೈಸ್, ಟೊಮಿಸ್ಲಾವ್ ಮರ್ಸೆಲಾ (ನಾಯಕ), ರಾಜು ಗಾಯಕ್ವಾಡ್, ಹೀರಾ ಮೊಂಡಲ್, ಬಿಕಾಶ್ ಜೈರು, ಅಮೀರ್ ಡೆರ್ವಿಸೆವಿಕ್, ಅಮರ್ಜಿತ್ ಕಿಯಾಮ್, ಸೌರವ್ ದಾಸ್, ನೌರೆಮ್ ಸಿಂಗ್ ಮತ್ತು ಆಂಟೋನಿಯೊ ಪೆರೋಸೆವಿಕ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications