For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಜೆಮ್ಶೆಡ್ಪುರ ಎಫ್‌ಸಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಮುಂಬೈ ಸಿಟಿ

ISL 2021-22: match 23 MCFC vs JFC, Mumbai city FC match won by 4-2, Highlights

ಇಂಡಿಯನ್ ಸೂಪರ್ ಲೀಗ್‌ನ 23ನೇ ಪಂದ್ಯದಲ್ಲಿ ಮುಂಬೈ ಸಿಟಿ ಎಫ್‌ಸಿ ಹಾಗೂ ಜೆಮ್ಶೆಡ್ಪುರ ಎಫ್‌ಸಿ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಮುಂಬೈ ಸಿಟಿ ಎಫ್‌ಸಿ ತಂಡ 4-2 ಗೋಲುಗಳ ಅಂತರದಿಂದ ಜೆಮ್ಶೆಡ್ಪುರ ಎಫ್‌ಸಿ ತಂಡವನ್ನು ಮಣಿಸುವಲ್ಲಿ ಯಶಸ್ವಿಯಾಗಿದೆ.

ಆರಂಭದಿಂದಲೇ ಅದ್ಭುತ ಪ್ರದರ್ಶನ ನೀಡಲು ಆರಂಭಿಸಿದ ಮುಂಬೈ ಸಿಟಿ ಎಫ್‌ಸಿ ತಂಡದ ಆಟಗಾರರು ಪಂದ್ಯದಲ್ಲಿ ಸಂಪೂರ್ಣ ಹಿಡಿತವನ್ನು ಹೊಂದುವಲ್ಲಿ ಯಶಸ್ವಿಯಾಗಿದ್ದರು. 3ನೇ ನಿಮಿಷದಲ್ಲಿಯೇ ಮೊದಲ ಗೋಲುಗಳಿಸಲು ಯಶಸ್ವಿಯಾದ ಮುಂಬೈ ಸಿಟಿ ತಂಡ 17ನೇ ನಿಮಿಷದಲ್ಲಿ ಎರಡನೇ ಗೋಲು ಗಳಿಸುವಲ್ಲಿ ಯಶಸ್ವಿಯಾಗಿತ್ತು. ನಂತರ 24ನೇ ನಿಮಿಷದಲ್ಲಿ ಮೂರನೇ ಗೋಲು ದಾಖಲಿಸಿತು ಮುಂಬೈ. ಈ ಹಂತದಲ್ಲಿ ಮುಂಬೈ 3-0 ಅಂತರದಿಂದ ಮುನ್ನಡೆ ಸಾಧಿಸಿತ್ತು.

ನಂತರ 48ನೇ ನಿಮಿಷದಲ್ಲಿ ಜೆಮ್ಶೆಡ್ಪುರ ಎಫ್‌ಸಿ ತಂಡ ಮೊದಲ ಗೋಲು ಗಳಿಸುವ ಮೂಲಕ ಅಂತರವನ್ನು ಕಡಿಮೆ ಗೋಲಿಸಿತು. ಬಳಿಕ 55ನೇ ನಿಮಿಷದಲ್ಲಿ ಜೆಮ್ಶೆಡ್ಪುರ ಎಫ್‌ಸಿ ತಂಡ ಎರಡನೇ ಗೋಲು ದಾಖಲಿಸಿತು. ಈ ಮೂಲಕ ಪಂದ್ಯ 3-2 ಅಂತರದಿಂದ ರೋಚಕ ಘಟ್ಟಕ್ಕೆ ತಲುಪಿತ್ತು. ಬಳಿಕ 70ನೇ ನಿಮಿಷದಲ್ಲಿ ಮುಂಬೈ ಸಿಟಿ ಪರವಾಗಿ ನಾಲ್ಕನೇ ಗೋಲು ದಾಖಲಾಯಿತು. ಬಳಿಕ ಎರಡು ತಂಡಗಳಿಂದಲೂ ಯಾವುದೇ ಗೋಲು ದಾಖಲಾಗಲಿಲ್ಲ. ಅಂತಿಮವಾಗಿ ಪಂದ್ಯದಲ್ಲಿ ಮುಂಬೈ ಸಿಟಿ ಎಫ್‌ಸಿ ತಂಡ 4-2 ಅಂತರದಿಂದ ಭರ್ಜರಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು.

ಇನ್ನು ಈ ಗೆಲುವಿನಿಂದಾಗಿ ಈ ಮುಂಬೈ ಸಿಟಿ ಅಗ್ರಸ್ಥಾನದಲ್ಲಿ ಭದ್ರವಾಗಿದೆ. ಆಡಿದ ಐದು ಪಂದ್ಯಗಳ ಪೈಕಿ ನಾಲ್ಕರಲ್ಲಿ ಮುಂಬೈ ಗೆಲುವು ಸಾಧಿಸಿದ್ದು ಒಂದು ಪಂದ್ಯದಲ್ಲಿ ಸೋಲಿನ ರುಚಿ ಕಂಡಿದೆ. ಹೀಗಾಗಿ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇನ್ನು ಸೋಲಿನ ನಂತರವೂ ಜೆಮ್ಶೆಡ್ಪುರ ಎಫ್‌ಸಿ ತಂಡ ಎರಡನೇ ಸ್ಥಾನದಲ್ಲಿಯೇ ಮುಂದುವರಿದಿದೆ. ಆಡಿದ ಐದು ಪಂದ್ಯಗಳಲ್ಲಿ 2 ಪಂದ್ಯಗಳಲ್ಲಿ ಗೆಲುವು ಹಾಗೂ 2 ಡ್ರಾ ಸಾಧಿಸಿರುವ ಜೆಮ್ಶೆಡ್ಪುರ ಎಫ್‌ಸಿ ತಂಡ ಒಂದು ಪಂದ್ಯದಲ್ಲಿ ಸೋಲು ಕಂಡಿದೆ. ಹೀಗಾಗಿ 8 ಅಂಕ ಸಂಪಾದಿಸಿದೆ. ಉಳಿದಂತೆ ಹೈದರಾಬಾದ್ ಎಫ್‌ಸಿ ಹಾಗೂ ಚೆನ್ನೈಯಿನ್ ಎಫ್‌ಸಿ ತಮಡಗಳು ಮೂರು ಹಾಗೂ ನಾಲ್ಕನೇ ಸ್ಥಾನದಲ್ಲಿ ಮುಂದುವರಿದಿದೆ.

ಜೆಮ್ಶೆಡ್ಪುರ ಎಫ್‌ಸಿ ಆಡುವ ಬಳಗ: ಟಿಪಿ ರೆಹನೇಶ್ (ಗೋಲ್‌ ಕೀಪರ್), ರಿಕಿ ಲಲ್ಲಾವ್ಮಾ, ಎಲಿ ಸಬಿಯಾ, ಲಾಲ್ಡಿನ್ಲಿಯಾನಾ ರೆಂತ್ಲೀ, ಪೀಟರ್ ಹಾರ್ಟ್ಲಿ (ನಾಯಕ), ಜಿತೇಂದ್ರ ಸಿಂಗ್, ಪ್ರಣಯ್ ಹಾಲ್ಡರ್, ಕೋಮಲ್ ಥಾಟಲ್, ಅಲೆಕ್ಸಾಂಡ್ರೆ ಲಿಮಾ, ಗ್ರೆಗ್ ಸ್ಟೀವರ್ಟ್ ಮತ್ತು ಇಶಾನ್ ಪಂಡಿತಾ.

ಮುಂಬೈ ಸಿಟಿ ಎಫ್‌ಸಿ ಆಡುವ ಬಳಗ:
ಮೊಹಮ್ಮದ್ ನವಾಜ್ (ಗೋಲ್‌ ಕೀಪರ್), ರಾಹುಲ್ ಭೇಕೆ, ಅಮಿ ರಾನವಾಡೆ, ಮೌರ್ತಡಾ ಫಾಲ್ (ನಾಯಕ), ಮಂದರ್ ದೇಸಾಯಿ, ಕ್ಯಾಸಿಯೊ ಗೇಬ್ರಿಯಲ್, ಅಹ್ಮದ್ ಜಹೌಹ್, ರೇನಿಯರ್ ಫೆರ್ನಾಂಡಿಸ್, ಲಾಲೆಂಗ್ಮಾವಿಯಾ, ಇಗೊರ್ ಅಂಗುಲೊ ಮತ್ತು ಬಿಪಿನ್ ಸಿಂಗ್.

Story first published: Thursday, December 9, 2021, 23:54 [IST]
Other articles published on Dec 9, 2021
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+