For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ನಾರ್ಥ್‌ಈಸ್ಟ್ ಯುನೈಟೆಡ್ ವಿರುದ್ಧ ಒಡಿಶಾ ಎಫ್‌ಸಿಗೆ ಗೆಲುವು

ISL 2021-22: match 24 NEUFC vs OFC, Odisha FC match won by 1-0 Highlights

ಇಂಡಿಯನ್ ಸೂಪರ್ ಲೀಗ್‌ನ 24ನೇ ಪಂದ್ಯದಲ್ಲಿ ನಾರ್ಥ್‌ಈಸ್ಟ್ ಯುನೈಟೆಡ್ ಎಫ್‌ಸಿ ಹಾಗೂ ಒಡಿಶಾ ಎಫ್‌ಸಿ ತಂಡಗಳು ಮುಖಾಮುಖಿಯಾಗಿದ್ದವು. ಜಿದ್ದಾಜಿದ್ದಿನಿಂದ ಕೂಡಿದ್ದ ಈ ಪಂದ್ಯದಲ್ಲಿ ಒಡಿಶಾ ಎಫ್‌ಸಿ ತಂಡ ನಾರ್ಥ್‌ಈಸ್ಟ್ ಯುನೈಟೆಡ್ ತಂಡವನ್ನು ಮಣಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಒಡಿಶಾ ಎಫ್‌ಸಿ ಟೂರ್ನಿಯಲ್ಲಿ ಮೂರನೇ ಗೆಲುವು ದಾಖಲಸಿದ್ದು ಅಂಕಪಟ್ಟಿಯಲ್ಲಿಯೂ ಭಾರೀ ಪ್ರಗತಿ ಸಾಧಿಸಿದೆ.

ಎರಡು ತಂಡಗಳು ಕೂಡ ಆರಂಭದಿಂದಲೂ ಸಾಕಷ್ಟು ಪೈಪೋಟಿಯ ಪ್ರದರ್ಶನ ನೀಡಿದವು. ಆದರೆ ಮೊದಲಾರ್ಧದಲ್ಲಿ ಯಾವುದೇ ತಂಡ ಕೂಡ ಒಂದೂ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ದ್ವಿತೀಯಾರ್ಧದ ಅಂತಿಮ ಹಂತದವರೆಗೂ ಕೂಡ ಎರಡು ತಂಡಗಳಿಂದಲೂ ಗೋಲು ದಾಖಲಾಗಲಿಲ್ಲ. ಆದರೆ ಪಂದ್ಯದ ಮುಕ್ತಾಯಕ್ಕೆ ಹತ್ತು ನಿಮಿಷಗಳಿರುವಾಗ ಒಡಿಶಾ ಎಫ್‌ಸಿ ತಂಡ ಪಮದ್ಯದ ಮೊದಲ ಗೋಲು ಬಾರಿಸಲು ಯಶಸ್ವಿಯಾಯಿತು.

ಬ್ರೇಜಿಲ್‌ನ ಫುಟ್ಬಾಲ್ ಆಟಗಾರ ಜೊನಾಥಾಸ್ ಜೀಸಸ್ ಈ ನಿರ್ಣಾಯಕ ಗೋಲು ದಾಖಲಿಸುವ ಮೂಲಕ ಒಡಿಶಾ ತಂಡಕ್ಕೆ ಮೇಲುಗೈ ಒದಗಿಸಿದರು. ತೊಯ್ಬಾ ಸಿಂಗ್ ಅವರಿಂದ ಬಂದ ಚೆಂಡನ್ನು ನೇರವಾಗಿ ಗೋಲ್‌ ಪೋಸ್ಟ್‌ಗೆ ನುಗ್ಗಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಪಂದ್ಯದಲ್ಲಿ ಒಡಿಶಾ ತಂಡ ಮೇಲುಗೈ ಸಾಧಿಸಿತು. ನಂತರ ನಾರ್ಥ್‌ಈಸ್ಟ್ ಯುನೈಟೆಡ್ ಎಫ್‌ಸಿ ತಂಡ ಕೂಡ ಸಮಬಲಗೊಳಿಸಲು ಪ್ರಯತ್ನಿಸಿತಾದರೂ ಅದರಲ್ಲಿ ವಿಫಲವಾಯಿತು. ಅಂತಿಮವಾಗಿ ಒಡಿಶಾ ಎಫ್‌ಸಿ ತಂಡ ಪಂದ್ಯದಲ್ಲಿ 1-0 ಅಂತರದ ಗೆಲುವು ಸಾಧಿಸಿದೆ.

ಇನ್ನು ಈ ಗೆಲುವಿನೊಂದಿಗೆ ಒಡಿಶಾ ಎಫ್‌ಸಿ ತಂಡ ಆಡಿದ ನಾಲ್ಕು ಪಂದ್ಯಗಳ ಪೈಕಿ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು ಮತ್ತೊಂದು ಪಂದ್ಯದಲ್ಲಿ ಸೋಲು ಕಂಡಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಈ ಪಂದ್ಯಕ್ಕೆ ಮುನ್ನ ಅದು ಐದನೇ ಸ್ಥಾನದಲ್ಲಿತ್ತು. ಇನ್ನು ನಾರ್ಥ್‌ಈಸ್ಟ್ ಯುನೈಟೆಡ್ ತಂಡ ಓ ಸೋಲಿನ ಕಾರಣದಿಂದ ಒಂದು ಸ್ಥಾನವನ್ನು ಕಳೆದುಕೊಂಡಿದೆ. 8ನೇ ಸ್ಥಾನದಿಂದ ಅದು 9ನೇ ಸ್ಥಾನಕ್ಕೆ ಕುಸಿದಿದೆ. ನಾರ್ಥ್‌ಈಸ್ಟ್ ಯುನೈಟೆಡ್ ತಂಡ ಆಡಿದ ಐದು ಪಂದ್ಯಗಳ ಪೈಕಿ ಒಂದರಲ್ಲಿ ಮಾತ್ರವೇ ಗೆಲುವು ಸಾಧಿಸಿದ್ದು ಮೂರು ಪಂದ್ಯಗಳಲ್ಲಿ ಸೋಲು ಹಾಗೂ ಒಂದು ಪಂದ್ಯದಲ್ಲಿ ಡ್ರಾ ಸಾಧಿಸಿದೆ. ಇನ್ನು ಈ ಪಂದ್ಯದ ಫಲಿತಾಂಶದ ನಂತರ ಬೆಂಗಳುರು ಎಫ್‌ಸಿ ಒಂದು ಸ್ಥಾನ ಏರಿಕೆ ಕಂಡಿದ್ದು 9ನೇ ಸ್ಥಾನದಲ್ಲಿದೆ.

ನಾರ್ಥ್‌ಈಸ್ಟ್ ಯುನೈಟೆಡ್ ಎಫ್‌ಸಿ ಆಡುವ ಬಳಗ: ಮಿರ್ಷಾದ್ ಮಿಚು (ಗೋಲ್‌ ಕೀಪರ್), ಪ್ರೊವತ್ ಲಾಕ್ರಾ, ಗುರ್ಜಿಂದರ್ ಕುಮಾರ್, ಖಾಸ್ಸಾ ಕ್ಯಾಮೆರಾ, ರೋಚರ್ಜೆಲಾ, ಹೆರ್ನಾನ್ ಸಂತಾನಾ (ನಾಯಕ), ಸುಹೇರ್ ವಡಕ್ಕೆಪೀಡಿಕಾ, ಮಥಿಯಾಸ್ ಕೊರೇರ್, ದೇಶೋರ್ನ್ ಬ್ರೌನ್, ಸೆಹ್ನಾಜ್ ಸಿಂಗ್, ಮಶೂರ್ ಶೆರೀಫ್.

ಒಡಿಶಾ ಎಫ್‌ಸಿ ಆಡುವ ಬಳಗ: ಕಮಲಜಿತ್ ಸಿಂಗ್ (ಗೋಲ್‌ ಕೀಪರ್), ವಿಕ್ಟರ್ ಮೊಂಗಿಲ್, ಅರಿದೈ ಸೌರೆಜ್, ಜೇವಿಯರ್ ಹೆರ್ನಾಂಡೆಜ್, ಗೌರವ್ ಬೋರಾ, ಡೇನಿಯಲ್ ಲಾಲ್‌ಲಿಂಪುಯಾ, ವಿನಿತ್ ರೈ (ನಾಯಕ), ಹೆಂಡ್ರಿ ಆಂಟೊನಾಯ್, ಲಾಲ್‌ರುತಾರಾ, ಐಸಾಕ್ ಚಕ್ಚುವಾಕ್, ಲಿರಿಡಾನ್ ಕ್ರಾಸ್ನಿಕಿ.

Story first published: Friday, December 10, 2021, 22:38 [IST]
Other articles published on Dec 10, 2021
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+