ಐಎಸ್ಎಲ್: ಎಸ್‌ಸಿ ಈಸ್ಟ್ ಬೆಂಗಾಲ್ vs ಕೇರಳ ಬ್ಲಾಸ್ಟರ್ಸ್ ಪಂದ್ಯ ಡ್ರಾದಲ್ಲಿ ಅಂತ್ಯ

ಇಂಡಿಯನ್ ಸೂಪರ್ ಲೀಗ್‌ನ 27ನೇ ಪಂದ್ಯ ಎಸ್‌ಸಿ ಈಸ್ಟ್ ಬೆಂಗಾಲ್ ಹಾಗೂ ಕೇರಳ ಬ್ಲಾಸ್ಟರ್ಸ್ ಎಫ್‌ಸಿ ವಿರುದ್ಧ ನಡೆದಿದೆ. ಈ ಪಂದ್ಯದಲ್ಲಿ ಎರಡು ತಂಡಗಳು ಕೂಡ ಜಿದ್ದಾಜಿದ್ದಿನ ಪ್ರದರ್ಶನ ನೀಡಿದ್ದು ಪಂದ್ಯ 1-1 ಅಂತರದಿಂದ ಡ್ರಾ ಮೂಲಕ ಅಂತ್ಯ ಕಂಡಿದೆ.
ಪಂದ್ಯದಲ್ಲಿ ಆರಂಭದಿಂದಲೇ ಎರಡು ತಂಡಗಳು ಕೂಡ ಸಾಕಷ್ಟು ಪೈಪೋಟಿಯ ಪ್ರದರ್ಶನ ನೀಡಿತ್ತು. ಆದರೆ 37ನೇ ನಿಮಿಷದಲ್ಲಿ ಎಸ್‌ಸಿ ಈಸ್ಟ್ ಬೆಂಗಾಲ್ ತಂಡ ಮೊದಲ ಯಶಸ್ಸು ಪಡೆಯುದುಕೊಂಡಿತು. ಈ ಮೂಲಕ ಪಂದ್ಯದಲ್ಲಿ ಮೇಲುಗೈ ಸಾಧಿಸಿತು. ಆಸ್ಟ್ರೇಲಿಯಾ ಮೂಲದ ಆಟಗಾರ ಟೊಮಿಸ್ಲಾವ್ ಮರ್ಸೆಲಾ ಮೊದಲ ಗೋಲು ಗಳಿಸಿದರು. ಅದಾದ ಬಳಿಕ ಮೊದಲಾರ್ಧದ ಪಂದ್ಯ ಇನ್ನೇನು ಮುಗಿಯುವ ಹಂತದಲ್ಲಿದ್ದಾಗ ಕೇರಳ ಬ್ಲಾಸ್ಟರ್ಸ್ ಕೂಡ ಗೋಲು ಗಳಿಸುವಲ್ಲಿ ಯಶಸ್ವಿಯಾಯಿತು. ಸ್ಪ್ಯಾನಿಶ್ ಆಟಗಾರ ಅಲ್ವಾರೊ ವಾಜ್ಕ್ವೆಜ್ ಕೇರಳ ಬ್ಲಾಸ್ಟರ್ಸ್ ಪರವಾಗಿ ಗೋಲು ದಾಖಲಿಸಿದ್ದು. ಈ ಮೂಲಕ ಕೇರಳ ಬ್ಲಾಸ್ಟರ್ಸ್ ತಂಡ ಪಂದ್ಯದಲ್ಲಿ ಸಮಬಲ ಸಾಧಿಸಿತು.
ನಂತರ ದ್ವಿತೀಯಾರ್ಧದಲ್ಲಿ ಎರಡು ತಂಡಗಳು ಕೂಡ ತೀವ್ರ ಪೈಪೋಟಿಯ ಹೋರಾಟ ನಡೆಸಿತು. ಆದರೆ ಯಾವ ತಂಡ ಕೂಡ ಗೋಲು ದಾಖಲಿಸುವಲ್ಲಿ ಯಶಸ್ವಿಯಾಗಲಿಲ್ಲ. ಹೆಚ್ಚುವರಿ ಅವಧಿ ಕೂಡ ಮುಕ್ತಾಯವಾದ ಕಾರಣ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು.
ಇನ್ನು ಈ ಗೆಲುವಿನೊಂದಿಗೆ ಬಿಎಫ್‌ಸಿ ತಂಡ ಟೂರ್ನಿಯಲ್ಲಿ ಆಡಿದ ಐದು ಪಂದ್ಯಗಳ ಪೈಕಿ ಎರಡನೇ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಆರಂಬಿಕ ಮೂರು ಪಂದ್ಯಗಳಲ್ಲಿ ಹ್ಯಾಟ್ರಿಕ್ ಸೋಲು ಅನುಭವಿಸಿದ ಬಳಿಕ ಗೋವಾ ಸತತ ಎರಡನೇ ಗೆಲುವು ಸಾಧಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ 10ನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಏರಿಕೆ ಕಂಡಿದೆ.
ಮತ್ತೊಂದೆಡೆ ಬಿಎಫ್‌ಸಿ ತಂಡದ ಹೀನಾಯ ಪ್ರದರ್ಶನ ಅಭಿಮಾನಿಗಳನ್ನು ಕಂಗೆಡಿಸಿದೆ. ಆರಂಭಿಕ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ ಶುಭಾರಂಭ ಮಾಡಿದ್ದ ಬೆಂಗಳೂರು ಎಫ್‌ಸಿ ತಂಡ ನಂತರದ ಐದು ಪಂದ್ಯಗಳಲ್ಲಿಯೂ ಗೆದ್ದಿಲ್ಲ. ಮೂರನೇ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ವಿರುದ್ಧ ಡ್ರಾ ಸಾಧಿಸಿದ್ದೇ ದೊಡ್ಡ ಸಾಧನೆಯಾಗಿದೆ. ಎಫ್‌ಸಿ ಗೋವಾ ವಿರುದ್ಧದ ಸೋಲಿನೊಂದಿಗೆ ಬವಿಎಫ್‌ಸಿ ಹ್ಯಾಟ್ರಿಕ್ ಸೋಲು ಕಂಡು ಹೀನಾಯ ಸ್ಥಿತಿಯಲ್ಲಿದೆ. ಅಂಕಪಟ್ಟಿಯಲ್ಲಿಯೂ ಬಿಎಫ್‌ಸಿ ತಂಡ 8ನೇ ಸ್ಥಾನದಿಂದ 10ನೇ ಸ್ಥಾನಕ್ಕೆ ಕುಸಿತ ಕಂಡಿದೆ. ಅಂಕಪಟ್ಟಿಯಲ್ಲಿ ಮುಂಬೈ ಸಿಟಿ ಎಫ್‌ಸಿ ತಂಡ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ ಒಡಿಶಾ ಎಫ್‌ಸಿ ತಂಡ ಎರಡನೇ ಸ್ಥಾನದಲ್ಲಿ ಚೆನ್ನೈಯಿನ್ ಮೂರನೇ ಹಾಗೂ ಜೆಮ್ಶೆಡ್ಪುರ ಎಫ್‌ಸಿ ತಂಡ ನಾಲ್ಕನೇ ಸ್ಥಾನದಲ್ಲಿದೆ.
ಕೇರಳ ಬ್ಲಾಸ್ಟರ್ಸ್ ಎಫ್‌ಸಿ: ಪ್ರಭಾಸುಖಾನ್ ಗಿಲ್ (ಗೋಲ್ ಕೀಪರ್), ಎನೆಸ್ ಸಿಪೊವಿಕ್, ಸಂದೀಪ್ ಸಿಂಗ್, ಜೆಸೆಲ್ ಕಾರ್ನೆರೊ (ನಾಯಕ), ಮಾರ್ಕೊ ಲೆಸ್ಕೊವಿಕ್, ಲಾಲ್ತತಂಗ ಖಾಲ್ಹ್ರಿಂಗ್, ಸಹಲ್ ಸಮದ್, ಆಡ್ರಿಯನ್ ಲೂನಾ, ಪ್ರಶಾಂತ್ ಕರುತದತ್ಕುನಿ, ಜೀಕ್ಸನ್ ಸಿಂಗ್, ಅಲ್ವಾರೊ ವಾಜ್ಕ್ವೆಜ್.
ಎಸ್‌ಸಿ ಈಸ್ಟ್ ಬೆಂಗಾಲ್: ಶಂಕರ್ ರಾಯ್ (ಗೋಲ್ ಕೀಪರ್), ಟೊಮಿಸ್ಲಾವ್ ಮರ್ಸೆಲಾ (ನಾಯಕ), ಹೀರಾ ಮೊಂಡಲ್, ರಾಜು ಗಾಯಕ್ವಾಡ್, ಫ್ರಾಂಜೊ ಪ್ರೈಸ್, ಸೌರವ್ ದಾಸ್, ಲಾಲ್ರಿನ್ಲಿಯಾನಾ ಹ್ನಾಮ್ಟೆ, ಅಮರ್‌ಜಿತ್ ಕಿಯಾಮ್, ಆಂಟೋನಿಯೊ ಪೆರೊಸೆವಿಕ್, ಥಾಂಗ್‌ಕೋಸಿಯೆಮ್ ಹಾಕಿಪ್, ಡೇನಿಯಲ್ ಚುಕ್ವು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications