ಐಎಸ್‌ಎಲ್: ಒಡಿಶಾ ವಿರುದ್ಧ 4-0 ಅಂತರದಿಂದ ಅಮೋಘ ಗೆಲುವು ಸಾಧಿಸಿದ ಜೆಮ್ಶೆಡ್ಪುರ ಎಫ್‌ಸಿ

ಇಂಡಿಯನ್ ಸೂಪರ್ ಲೀಗ್‌ನಲ್ಲಿ 29ನೇ ಪಂದ್ಯದಲ್ಲಿ ಜೆಮ್ಶಡ್ಪುರ ಎಫ್‌ಸಿ ಹಾಗೂ ಒಡಿಶಾ ಎಫ್‌ಸಿ ತಂಡಗಳು ಮುಖಾಮುಖಿಯಾಗಿದ್ದು ಜೆಮ್ಶೆಡ್ಪುರ ಪಂದ್ಯದಲ್ಲಿ ಅಕ್ಷರಶಃ ಅಬ್ಬರಿಸಿದೆ. ಒಡಿಶಾ ತಮಡದ ವಿರುದ್ಧ ಭರ್ಜರಿ 4-0 ಅಂತರದಿಂದ ಗೆಲುವು ಸಾಧಿಸಿ ಬೀಗಿದೆ. ಈ ಮೂಲಕ ಒಡಿಶಾ ತಂಡ ಊಹಿಸಲಾಗದ ಆಘಾತ ನೀಡಿದೆ ಜೆಮ್ಶೆಡ್ಪುರ ಎಫ್‌ಸಿ ತಂಡ. ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅದ್ಭುತ ಪ್ರಗತಿ ಸಾಧಿಸಿರುವ ಜೆಮ್ಶಡ್ಪುರ ಎಫ್‌ಸಿ ತಂಡ ಎರಡನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ.
ಈ ಪಂದ್ಯದಲ್ಲಿ ಆರಂಭದಿಂದಲೇ ಜೆಮ್ಶೆಡ್ಪುರ ತಂಡ ಅಬ್ಬರದ ಪ್ರದರ್ಶನ ನೀಡುತ್ತಾ ಮುನ್ನುಗ್ಗಲು ಆರಂಭಿಸಿತ್ತು. ಪಂದ್ಯದ ಮೂರನೇ ನಿಮಿಷದಲ್ಲಿಯೇ ತಂಡದ ಪರವಾಗಿ ಇಂಗ್ಲೀಷ್ ಫುಟ್ಬಾಲರ್ ಪೀಟರ್ ಹಾರ್ಟ್ಲಿ ಮೊದಲ ಗೋಲು ದಾಖಲಿಸಿದರು. ಈ ಮೂಲಕ ತಂಡದ ಗೋಲಿನ ಖಾತೆ ತೆರೆದರು. ಅದಾದ ಮುಂದಿನ ನಿಮಿಷದಲ್ಲಿಯೇ ಜೆಮ್ಶೆಡ್ಪುರ ಪರವಾಗಿ ಮತ್ತೊಂದು ಗೋಲು ದಾಖಲಾಗಿತ್ತು. ಸ್ಕಾಟಿಶ್ ಫುಟ್ಬಾಲ್ ಆಟಗಾರ ಗ್ರೇಗ್ ಸ್ಟೆವಾರ್ಟ್ ಜೆಮ್ಶೆಡ್ಪುರ ಎಫ್‌ಸಿ ಪರವಾಗಿ ಎರಡನೇ ಗೋಲು ದಾಖಲಿಸಿದರು. ಈ ಪಂದ್ಯದಲ್ಲಿ ಗ್ರೇಗ್ ಸ್ಟೆವಾರ್ಟ್ ಬರೊಬ್ಬರಿ ಮೂರು ಗೋಲು ದಾಖಲಸಿದ್ದಾರೆ. ಅಂದರೆ ಮುಂದಿನ ಎರಡು ಗೋಲುಗಳು ಕೂಡ ಗ್ರೇಗ್ ಸ್ಟೆವರ್ಟ್ ಅವರಿಂದಲೇ ದಾಖಲಾಗಿತ್ತು. ಈ ಮೂಲಕ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲು ಸಿಡಿಸಿದ ಸಾಧನೆ ಮಾಡಿದ್ದಾರೆ ಗ್ರೇಗ್ ಸ್ಟೆವರ್ಟ್.
ಪಂದ್ಯದ 21ನೇ ನಿಮಿಷದಲ್ಲಿ ಗ್ರೇಗ್ ಸ್ಟೆವರ್ಟ್ ತಂಡದ ಪರವಾಘಿ ಮೂರನೇ ಗೋಲು ದಾಖಲಸಿದರು. ಈ ಮೂಲಕ ಮುನ್ನಡೆಯ ಅಂತರವನ್ನು 3-0ಗೆ ಏರಿಸಿದರು. ಬಳಿಕ 35ನೇ ನಿಮಿಷದಲ್ಲಿ ಮತ್ತೊಮ್ಮೆ ಗ್ರೇಗ್ ಸ್ಟೆವರ್ಟ್ ಚೆಂಡನ್ನು ಗೋಲ್ ಪೋಸ್ಟ್‌ನ ಒಳಕ್ಕೆ ತಳ್ಳಿದ್ದರು. ಈ ಮೂಲಕ ನಾಲ್ಕನೇ ಗೋಲು ದಾಖಲಾಗಿತ್ತು. ಅಚ್ಚರಿಯೆಂದರೆ ಈ ನಾಲ್ಕು ಗೋಲುಗಳು ಕೂಡ ಮೊದಲಾರ್ಧದಲ್ಲಿಯೇ ದಾಳಲಾಗಿತ್ತು. ದ್ವಿತಿಯಾರ್ಧದಲ್ಲಿ ಎರಡು ತಮಡಗಳು ಕೂಡ ಯಾವುದೇ ಗೋಲು ದಾಖಲಿಸಲು ವಿಫಲವಾಗಿತ್ತು. ಈ ಮೂಲಕ ಪಂದ್ಯದಲ್ಲಿ ಜೆಮ್ಶೆಡ್ಪುರ ಎಫ್‌ಸಿ ತಂಡ 4-0 ಅಂತರದಿಂದ ಗೆಲುವು ಸಾಧಿಸಿತು.
ಈ ಗೆಲುವಿನೊಂದಿಗೆ ಜೆಮ್ಶೆಡ್ಪುರ ಎಫ್‌ಸಿ ತಂಡ ಅಂಕ ಪಟ್ಟಿಯಲ್ಲಿ ಭಾರೀ ಮೇಲುಗೈ ಸಾಧಿಸಿದೆ. ಐದನೇ ಸ್ಥಾನದಲ್ಲಿದ್ದ ಜೆಮ್ಶೆಡ್ಪುರ ಎಫ್‌ಸಿ ತಂಡ ಎರಡನೇ ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದೆ. ಇನ್ನು ಈ ಪಂದ್ಯದಲ್ಲಿ ಭಾರೀ ಅಂತರದಿಂದ ಸೋಲು ಅನುಭವಿಸಿದ ಒಡಿಶಾ ಎಫ್‌ಸಿ ತಂಡ ಮೂರನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡಿದೆ. ಮೊದಲ ಸ್ಥಾನದಲ್ಲಿ ಮುಂಬೈ ಸಿಟಿ ಎಫ್‌ಸಿ ತಂಡ ಮುಂದುವರಿದಿದ್ದು ಹೈದರಾಬಾದ್ ಎಫ್‌ಸಿ ತಂಡ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಇನ್ನು ಬೆಂಗಳೂರು ಎಫ್‌ಸಿ ತಂಡ 9ನೇ ಸ್ಥಾನದಲ್ಲಿ ಮುಂದುವರಿದಿದೆ.
ಜಮ್ಶೆಡ್‌ಪುರ ಎಫ್‌ಸಿ ಆಡುವ ಬಳಗ: ಟಿಪಿ ರೆಹನೇಶ್ (ಗೋಲ್ ಕೀಪರ್), ಲಾಲ್ಡಿನ್ಲಿಯಾನಾ ರೆಂತ್ಲೀ, ನರೇಂದರ್ ಗಹ್ಲೋಟ್, ಪೀಟರ್ ಹಾರ್ಟ್ಲಿ (ನಾಯಕ), ರಿಕಿ ಲಲ್ಲಾವ್ಮಾ, ಜಿತೇಂದ್ರ ಸಿಂಗ್, ಅಲೆಕ್ಸಾಂಡ್ರೆ ಲಿಮಾ, ಸೀಮಿನ್ಲೆನ್ ಡೌಂಗೆಲ್, ಕೋಮಲ್ ಥಟಾಲ್, ಗ್ರೆಗ್ ಸ್ಟೀವರ್ಟ್, ನೆರಿಜಸ್ ವಾಲ್ಸ್ಕಿಸ್.
ಒಡಿಶಾ ಎಫ್‌ಸಿ ಆಡುವ ಬಳಗ: ಕಮಲ್ಜಿತ್ ಸಿಂಗ್ (ಗೋಲ್ ಕೀಪರ್), ಹೆಂಡ್ರಿ ಆಂಟೊನಾಯ್, ಹೆಕ್ಟರ್ ರಾಮಿರೆಜ್, ವಿಕ್ಟರ್ ಮೊಂಗಿಲ್, ಲಾಲ್ರುತ್ತರಾ, ಪಾಲ್ ರಾಮ್‌ಫಾಂಗ್‌ಜೌವಾ, ವಿನಿತ್ ರೈ (ನಾಯಕ), ಐಸಾಕ್ ಚಕ್ಚುವಾಕ್, ಜೆರ್ರಿ ಮಾವಿಹ್ಮಿಂಗ್ತಂಗ, ಅರಿಡೈ ಸೌರೆಜ್, ಜೊನಾಥಸ್ ಕ್ರಿಸ್ಟಿಯನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications