For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2021: ಜೆಮ್ಶೆಡ್ಪುರ್ vs ಈಸ್ಟ್ ಬೆಂಗಾಲ್ ಪಂದ್ಯ ಡ್ರಾದಲ್ಲಿ ಅಂತ್ಯ

ISL 2021-22: match 3 SCEB vs JFC, match draw by 1-1 Highlights

ಇಂಡಿಯನ್ ಸೂಪರ್ ಲೀಗ್‌ನ 3ನೇ ಪಂದ್ಯ ಎಸ್‌ಸಿ ಈಸ್ಟ್ ಬೆಂಗಾಲ್ ಹಾಗೂ ಜೆಮ್ಶೆಡ್ಪುರ್ ಎಫ್‌ಸಿ ತಂಡಗಳ ನಡುವೆ ಭಾನುವಾರ ನಡೆಯಿತು. ಈ ಪಂದ್ಯದಲ್ಲಿ ಎರಡು ತಮಡಗಳು ಕೂಡ ಜಿದ್ದಾಜಿದ್ದಿನ ಪ್ರದರ್ಶನ ನೀಡಿದ್ದು ಫಲಿತಾಂಶ ಡ್ರಾದಲ್ಲಿ ಅಂತ್ಯವಾಗಿದೆ. ಹೀಗಾಗಿ ಮೊದಲ ಪಂದ್ಯದಲ್ಲಿ ಎರಡು ತಂಡಗಳು ಕೂಡ ಅಂಕಗಳನ್ನು ಹಂಚಿಕೊಂಡಿದೆ.

ಎರಡು ತಂಡಗಳು ಕೂಡ ಆರಂಭದಿಂದಲೇ ಉತ್ತಮ ಪ್ರದರ್ಶನ ನೀಡಿದ್ದವು. ಆದರೆ ಮೊದಲ ಯಶಸ್ಸು ಪಡೆದುಕೊಂಡಿದ್ದು ಎಸ್‌ಸಿ ಈಸ್ಟ್ ಬೆಂಗಾಲ್ ತಂಡ. ಫ್ರಾಂಜೋ ಪ್ರೆಸ್ ಈಸ್ಟ್ ಬೆಂಗಾಲ್ ಪರವಾಗಿ ಮೊದಲ ಗೋಲು ದಾಖಲಿಸಿದರು. ಆಂಟೋನಿಯೋ ಪೆರೋಸೆವಿಕ್ ಸಹಾಯದಿಂದ ಪಡೆದುಕೊಂಡ ಚೆಂಡನ್ನು ಪ್ರೆಸ್ ಗೋಲ್ ಪೋಸ್ಟ್‌ಗೆ ತಳ್ಳುವಲ್ಲಿ ಯಶಸ್ವಿಯಾಗಿದ್ದರು. ಈ ಮೂಲಕ ಈಸ್ಟ್ ಬೆಂಗಾಲ್ ಪಮದ್ಯದಲ್ಲಿ ಆರಂಭಿಕ ಮುನ್ನಡೆ ಸಾಧಿಸಿತು.

ಆದರೆ ಈ ಮುನ್ನಡೆಯನ್ನು ಸಮಬಲಗೊಳಿಸುವ ಪ್ರಯತ್ನದಲ್ಲಿ ಜೆಮ್ಶೆಡ್ಪುರ ವಿಫಲವಾಯಿತು. ಮತ್ತೊಂದೆಡೆ ಈಸ್ಟ್ ಬೆಂಗಾಲ್ ಕೂಡ ಮತ್ತೊಂದು ಗೋಲು ಗಳಿಸಿ ಮುನ್ನಡೆಯನ್ನು ಹೆಚ್ಚಿಸುವ ಪ್ರಯತ್ನದಲ್ಲಿ ವಿಫಲವಾಯಿತು. ಆದರೆ ನಂತರ 45ನೇ ನಿಮಿಷದಲ್ಲಿ ಜೆಮ್ಶೆಡ್ಪುರ ತಂಡ ಭರ್ಜರಿ ಗೋಲು ದಾಖಲಿಸುವಲ್ಲಿ ಯಶಸ್ವಿಯಾಯಿತು. ಈ ಮೂಲಕ ತಂಡದ ಸ್ಕೋರ್ ಸಮಬಲಗೊಂಡಿತು. ನೆರಿಜುಸ್ ವಲಕ್ಸ್ಕಿಸ್ ಸಹಾಯದೊಂದಿಗೆ ಪಡೆದ ಚೆಂಡನ್ನು ಪೀಟರ್ ಹಾರ್ಟ್ಲಿ ಗೋಲ್ ಪೆಟ್ಟಿಗೆಗೆ ಸೇರಿಸಿದ್ದರು. ಈ ಮೂಲಕ ಜೆಮ್ಶೆಡ್ಪುರ ತಂಡ ಪಂದ್ಯವನ್ನು ಸಮಬಲಗೊಳಿಸಿತು. ನಂತರ ಎರಡು ತಮಡಗಳು ಕೂಡ ಗೋಲು ದಾಖಲಿಸುವಲ್ಲಿ ವಿಫಲವಾಯಿತು.

ಇನ್ನು ದ್ವಿತೀಯಾರ್ಧದಲ್ಲಿ ಈ ಎರಡು ತಂಡಗಳು ಕೂಡ ಗೋಲು ಗಳಿಸಲು ಸಂಪೂರ್ಣ ವಿಫಲವಾಯಿತು. ನಂತರ ಐದು ನಿಮಿಷಗಳ ಹೆಚ್ಚುವರಿ ಅವಧಿಯನ್ನು ಕೂಡ ನೀಡಲಾಯಿತು. ಆದರೆ ಇಲ್ಲಿಯೂ ತಂಡಗಳಿಂದ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು. ಎರಡು ತಂಡಗಳು ಕೂಡ ತಲಾ ಒಂದೊಂದು ಅಂಕಗಳನ್ನು ಖಾತೆಗೆ ಹಾಕಿಕೊಂಡಿದೆ.

ಜೆಮ್ಶೆಡ್ಪುರ್ ಎಫ್‌ಸಿ ಆರಂಭಿಕ ಆಡುವ XI:
ಟಿಪಿ ರೆಹನೇಶ್ (ಗೋಲ್‌ ಕೀಪರ್), ರಿಕಿ ಲಲ್ಲಾವ್ಮಾ, ಎಲಿ ಸಬಿಯಾ, ಲಾಲ್ಡಿನ್ಲಿಯಾನಾ ರೆಂತ್ಲೀ, ಪೀಟರ್ ಹಾರ್ಟ್ಲಿ (ನಾಯಕ), ಬೋರಿಸ್ ಸಿಂಗ್, ಜಿತೇಂದ್ರ ಸಿಂಗ್, ಸೀಮಿನ್ಲೆನ್ ಡೌಂಗೆಲ್, ಪ್ರೊನೇ ಹಾಲ್ಡರ್, ಅಲೆಕ್ಸಾಂಡ್ರೆ ಲಿಮಾ, ನೆರಿಜಸ್ ವಾಲ್ಸ್ಕಿಸ್.

ಎಸ್‌ಸಿ ಈಸ್ಟ್ ಬೆಂಗಾಲ್ ಆರಂಭಿಕ ಆಡುವ XI: ಅರಿಂದಮ್ ಭಟ್ಟಾಚಾರ್ಜ (ನಾಯಕ) (ಗೋಲ್‌ಕೀಪರ್), ಟೊಮಿಸ್ಲಾವ್ ಮರ್ಸೆಲಾ, ಹಿರಾ ಮೊಂಡಲ್, ಫ್ರಾಂಜೊ ಪ್ರೈಸ್, ಮೊಹಮ್ಮದ್ ರಫೀಕ್, ವಹೆಂಗ್‌ಬಾಮ್ ಲುವಾಂಗ್, ಸೌರವ್ ದಾಸ್, ಲಾಲ್ರಿನ್ಲಿಯಾನಾ ಹ್ನಾಮ್ಟೆ, ಬಿಕಾಶ್ ಜೈರು, ಡೇನಿಯಲ್ ಚುಕ್ವು, ಆಂಟೋನಿಯೊ ಪೆರೋಸೆವಿಕ್.

Story first published: Monday, November 22, 2021, 16:50 [IST]
Other articles published on Nov 22, 2021
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+