
ಇಂಡಿಯನ್ ಸೂಪರ್ ಲೀಗ್‌ನ 30ನೇ ಪಂದ್ಯದಲ್ಲಿ ಚೆನ್ನೈಯಿನ್ ಎಫ್‌ಸಿ ಹಾಗೂ ಮುಂಬೈ ಸಿಟಿ ಎಫ್‌ಸಿ ತಂಡಗಳು ಮುಖಾಮುಖಿಯಾಗಿದೆ. ಈ ಸೆಣೆಸಾಟದಲ್ಲಿ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿರುವ ಮುಂಬೈ ಸಿಟಿ ಎಫ್‌ಸಿ ತಂಡ 1-0 ಅಂತರದಿಂದ ಗೆಲುವು ಸಾಧಿಸಿದೆ. ಈ ಮೂಲಕ ಟೂರ್ನಿಯಲ್ಲಿ ಅಗ್ರಸ್ಥಾನಿಯಾಗಿಯೇ ಮುಂದುವರಿದಿದೆ ಮುಂಬೈ ಸಿಟಿ ಎಫ್‌ಸಿ ತಂಡ.
ಪಂದ್ಯದ ಕೊನೆಯ ಹಂತದವರೆಗೂ ಎರಡು ತಂಡಗಳು ಕೂಡ ಸಾಕಷ್ಟು ಪೈಪೋಟಿಯ ಪ್ರದರ್ಶನ ನೀಡುತ್ತಾ ಸಾಗಿತ್ತು. ಹೀಗಾಗಿ ಅಂತಿಮ ಘಟ್ಟದವರೆಗೂ ಎರಡು ತಂಡಗಳು ಕೂಡ ಯಾವುದೇ ಗೋಲು ದಾಖಲಿಸಿಲು ವಿಫಲವಾಗಿದ್ದವು. ಆದರೆ ಪಂದ್ಯದ 86ನೇ ನಿಮಿಷದಲ್ಲಿ ಮುಂಬೈ ಸಿಟಿ ಎಫ್‌ಸಿ ಪಂದ್ಯದ ಮೊದಲ ಹಾಗೂ ಅಂತಿಮ ಗೋಲು ದಾಖಲಿಸುವಲ್ಲಿ ಯಶಸ್ವಿಯಾಗಿದ್ದರು. ರಾಹುಲ್ ಬೇಕೆ ತಂಡದ ಸಹ ಆಟಗಾರ ಅಹ್ಮದ್ ಜಹೌ ಅವರಿಂದ ಪಡೆದ ಚೆಂಡನ್ನು ಗೋಲು ಪೆಟ್ಟಿಗೆಗೆ ತಳ್ಳುವಲ್ಲಿ ಯಶಸ್ವಿಯಾಗಿದ್ದರು. ಇದರ ಪರಿಣಾಮವಾಗಿ ಮುಂಬೈ ಸಿಟಿ ತಂಡ ಪಂದ್ಯದಲ್ಲಿ ಮೇಲುಗೈ ಸಾಧಿಸಿತು. ಬಳಿಕ ಎದುರಾಳಿ ಗೋಲು ಗಳಿಸಲು ವಿಫಲವಾದ ಹಿನ್ನೆಲೆಯಲ್ಲಿ ರೋಚಕ ಗೆಲುವು ಸಾಧಿಸಿ ಸಂಭ್ರಮಿಸಿದೆ.
ಇನ್ನು ಈ ಗೆಲುವಿನೊಂದಿಗೆ ಮುಂಬೈ ಸಿಟಿ ಎಫ್‌ಸಿ ತಂಡ ಟೂರ್ನಿಯಲ್ಲಿ ತಂಡ ಮೇಲುಗೈಯನ್ನು ಮುಂದುವರಿಸಿದೆ. ಮುಂಬೈ ಸಿಟಿ ಎಫ್‌ಸಿ ತಂಡ ಈ ಟೂರ್ನಿಯಲ್ಲಿ ಈವರೆಗೆ ಆಡಿದ ಆರು ಪಂದ್ಯಗಳಲ್ಲಿ ಐದರಲ್ಲಿ ಗೆದ್ದು ಬೀಗಿದ್ದು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದೆ. ಹೈದರಾಬಾದ್ ಎಫ್‌ಸಿ ತಂಡದ ವಿರುದ್ಧ ತನ್ನ ಎರಡನೇ ಪಂದ್ಯದಲ್ಲಿ ಮುಂಬೈ ಸಿಟಿ ಎಫ್‌ಸಿ ತಂಡ ಏಕೈಕ ಸೋಲು ಕಂಡಿದೆ.
ಮತ್ತೊಂದೆಡೆ ಚೆನ್ನೈಯಿನ್ ಎಫ್‌ಸಿ ಈ ಪಂದ್ಯದಲ್ಲಿ ಗೆದ್ದು ಅಗ್ರ ನಾಲ್ಕರಲ್ಲಿ ಕಾಣಿಸಿಕೊಳ್ಳುವ ಪ್ರಯತ್ನದಲ್ಲಿ ವಿಫಲವಾಗಿದೆ. ಚೆನ್ನೈಯಿನ್ ಎಫ್‌ಸಿ ತಂಡಕ್ಕೆ ಇದು ಈ ಟೂರ್ನಿಯ ಮೊದಲ ಸೋಲಾಗಿದ್ದು ಆಡಿದ ಐದು ಪಂದ್ಯಗಳ ಪೈಕಿ ಎರಡು ಗೆಲುವು ಹಾಗೂ ಎರಡು ಡ್ರಾ ಫಲಿತಾಂಶವನ್ನು ಪಡೆದುಕೊಂಡಿತ್ತು. ಇದೀಗ ಒಂದು ಸೋಲನ್ನು ತನ್ನ ಖಾತೆಗೆ ಹಾಕಿಕೊಂಡಿದೆ. ಈ ಮೂಲಕ ಟೂರ್ನಿಯಲ್ಲಿ ಐದನೇ ಸ್ಥಾನದಲ್ಲಿಯೇ ಮುಂದುವರಿದಿದೆ. ಇನ್ನು ಇಂದಿನ ಈ ಫಲಿತಾಂಶದಲ್ಲಿ ಯಾವುದೇ ತಂಡಗಳ ಸ್ಥಾನಗಳು ಕೂಡ ಬದಲಾವಣೆಯಾಗಿಲ್ಲ.
ಚೆನ್ನೈಯಿನ್ ಎಫ್‌ಸಿ ಈ ಪಂದ್ಯದಲ್ಲಿ ಗೆದ್ದು ಅಗ್ರ ನಾಲ್ಕರಲ್ಲಿ ಕಾಣಿಸಿಕೊಳ್ಳುವ ಪ್ರಯತ್ನದಲ್ಲಿ ವಿಫಲವಾಗಿದೆ. ಚೆನ್ನೈಯಿನ್ ಎಫ್‌ಸಿ ತಂಡಕ್ಕೆ ಇದು ಈ ಟೂರ್ನಿಯ ಮೊದಲ ಸೋಲಾಗಿದ್ದು ಆಡಿದ ಐದು ಪಂದ್ಯಗಳ ಪೈಕಿ ಎರಡು ಗೆಲುವು ಹಾಗೂ ಎರಡು ಡ್ರಾ ಫಲಿತಾಂಶವನ್ನು ಪಡೆದುಕೊಂಡಿತ್ತು. ಇದೀಗ ಒಂದು ಸೋಲನ್ನು ತನ್ನ ಖಾತೆಗೆ ಹಾಕಿಕೊಂಡಿದೆ. ಈ ಮೂಲಕ ಟೂರ್ನಿಯಲ್ಲಿ ಐದನೇ ಸ್ಥಾನದಲ್ಲಿಯೇ ಮುಂದುವರಿದಿದೆ. ಇನ್ನು ಇಂದಿನ ಈ ಫಲಿತಾಂಶದಲ್ಲಿ ಯಾವುದೇ ತಂಡಗಳ ಸ್ಥಾನಗಳು ಕೂಡ ಬದಲಾವಣೆಯಾಗಿಲ್ಲ.
ಚೆನ್ನೈಯಿನ್ ಎಫ್‌ಸಿ ಆಡುವ ಬಳಗ: ವಿಶಾಲ್ ಕೈತ್ (ಗೋಲ್ ಕೀಪರ್), ರೇಗನ್ ಸಿಂಗ್, ಸ್ಲಾವ್ಕೊ ದಮ್ಜಾನೋವಿಕ್, ನಾರಾಯಣ್ ದಾಸ್, ಜೆರ್ರಿ ಲಾಲ್ರಿಂಜುವಲಾ, ಏರಿಯಲ್ ಬೊರಿಸಿಯುಕ್, ಲಾಲಿಯನ್ಜುವಾಲಾ ಚಾಂಗ್ಟೆ, ವ್ಲಾಡಿಮಿರ್ ಕೋಮನ್, ಅನಿರುದ್ಧ್ ಥಾಪಾ (ನಾಯಕ), ಎಡ್ವಿನ್ ವಾನ್ಸ್ಪಾಲ್ ಮತ್ತು ಲುಕಾಸ್ಜ್ ಗಿಕಿವಿಚ್.
ಮುಂಬೈ ಸಿಟಿ ಎಫ್‌ಸಿ ಆಡುವ ಬಳಗ: ಮೊಹಮ್ಮದ್ ನವಾಜ್ (ಗೋಲ್ ಕೀಪರ್), ಅಮಿ ರಾನವಾಡೆ, ಮೌರ್ತಡಾ ಫಾಲ್ (ನಾಯಕ), ರಾಹುಲ್ ಭೆಕೆ, ಮಂದರ್ ದೇಸಾಯಿ, ಲಾಲೆಂಗ್ಮಾವಿಯಾ, ಅಹ್ಮದ್ ಜಹೌ, ರೇನಿಯರ್ ಫೆರ್ನಾಂಡಿಸ್, ಕ್ಯಾಸಿಯೊ ಗೇಬ್ರಿಯಲ್, ಬಿಪಿನ್ ಸಿಂಗ್ ಮತ್ತು ಇಗೊರ್ ಅಂಗುಲೊ.