ಐಎಸ್‌ಎಲ್: ಈಸ್ಟ್ ಬೆಂಗಾಲ್ ವಿರುದ್ಧ ಜಯಭೇರಿ ಬಾರಿಸಿದ ನಾರ್ಥ್‌ಈಸ್ಟ್ ಯುನೈಟೆಡ್

ಇಂಡಿಯನ್ ಸೂಪರ್ ಲೀಗ್‌ನ 32ನೇ ಪಂದ್ಯದಲ್ಲಿ ಎಸ್‌ಸಿ ಈಸ್ಟ್ ಬೆಂಗಾಲ್ ಹಾಗೂ ನಾರ್ಥ್‌ಈಸ್ಟ್ ಯುನೈಟೆಡ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿಎಸ್‌ಸಿ ಈಸ್ಟ್ ಬೆಂಗಾಲ್ ವಿರುದ್ಧ ನಾರ್ಥ್‌ಈಸ್ಟ್ ಯುನೈಟೆಡ್ ತಂಡ 2-1 ಅಂತರದಿಂದ ಭರ್ಜರಿಯಾಗಿ ಗೆದ್ದುಕೊಂಡಿದೆ. ಈ ಮೂಲಕ ನಾರ್ಥ್‌ಈಸ್ಟ್ ಯುನೈಟೆಡ್ ತಂಡ ಈ ಬಾರಿಯ ಟೂರ್ನಿಯಲ್ಲಿ ಏಳನೇ ಪಂದ್ಯದಲ್ಲಿ ಎರಡನೇ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಈ ಪಂದ್ಯದ ಮೊದಲಾರ್ಧದಲ್ಲಿ ಎರಡು ತಂಡಗಳು ಕೂಡ ಗೋಲು ಗಳಿಸಲು ವಿಫಲವಾದವು. ಸಾಕಷ್ಟು ಪೈಪೋಟಿಯಿಂದ ಕೂಡಿದ ಈ ಪಂದ್ಯದಲ್ಲಿ ಮೊದಲಾರ್ದದಲ್ಲಿ ಎರಡು ತಂಡಗಳ ರಕ್ಷಣಾ ವಿಭಾಗ ಕೂಡ ಉತ್ತಮ ಪ್ರದರ್ಶನ ನೀಡಿತು. ಆದರೆ ದ್ವಿತೀಯಾರ್ಧದಲ್ಲಿ ನಾರ್ಥ್‌ಈಸ್ಟ್ ಯುನೈಟೆಡ್ ತಂಡ ಅದ್ಭುತವಾದ ಮೇಲುಗೈ ಸಾಧಿಸಿತು. ಪಂದ್ಯದ 60ನೇ ನಿಮಿಷದಲ್ಲಿ ಸುಹೇರ್ ವಡಕ್ಕೆಪೀಡಿಕಾ ಮೊದಲ ಗೋಲು ಗಳಿಸುವ ಮೂಲಕ ನಾರ್ಥ್‌ಈಸ್ಟ್ ಯುನೈಟೆಡ್ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಈ ಮೂಲಕ ನಾರ್ಥ್‌ಈಸ್ಟ್ ಯುನೈಟೆಡ್ ತಂಡ ಪಂದ್ಯದಲ್ಲಿ ಮೇಲುಗೈ ಸಾಧಿಸಿತು.
ಇನ್ನು ನಾರ್ಥ್‌ಈಸ್ಟ್ ಯುನೈಟೆಡ್ ತಂಡ ಮೊದಲ ಗೋಲು ಗಳಿಸಿದ ಎಂಟೇ ನಿಮಿಷದ ಅಂತರದಲ್ಲಿ ಮತ್ತೊಂದು ಗೋಲು ದಾಖಲಿಸಿತು. ಪ್ಯಾಟ್ರಿಕ್ ಫ್ಲೋಟ್‌ಮನ್ ನಾರ್ಥ್‌ಈಸ್ಟ್ ಯುನೈಟೆಡ್ ಪರವಾಗಿ ಎರಡನೇ ಗೋಲು ದಾಖಲಿಸಿದರು. ಈ ಮೂಲಕ ಪಂದ್ಯದಲ್ಲಿ ತನ್ನ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿತು. ಈ ಮೂಲಕ ಮುನ್ನಡೆಯ ಅಂತರ 2-0ಗೆ ಹೆಚ್ಚಿಸಿಕೊಂಡಿತು. ನಂತರ ಎದುರಾಳಿಗೆ ಯಾವುದೇ ಗೋಲು ಗಳಿಸುವ ಅವಕಾಶವನ್ನು ನೀಡಲಿಲ್ಲ. ಈ ಮೂಲಕ ಪಂದ್ಯದಲ್ಲಿ ನಾರ್ಥ್‌ಈಸ್ಟ್ ಯುನೈಟೆಡ್ ತಂಡ ಗೆಲುವಿನ ನಗೆ ಬೀರಿದೆ.
ಇದು ನಾರ್ಥ್‌ಈಸ್ಟ್ ಯುನೈಟೆಡ್ ತಂಡ ಈ ಬಾರಿಯ ಟೂರ್ನಿಯಲ್ಲಿ ಆಡಿದ ಏಳನೇ ಪಂದ್ಯದಲ್ಲಿ ಸಾಧಿಸಿದ 2ನೇ ಗೆಲುವಾಗಿದೆ. ಒಂದು ಪಮದ್ಯದಲ್ಲಿ ಡ್ರಾ ಸಾಧಿಸಿದ್ದರೆ ಉಳಿದ ನಾಲ್ಕು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಈಗ ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 10ನೇ ಸ್ಥಾನಕ್ಕೆ ಕುಸಿದಿದ್ದ ಈ ತಂಡ 7ನೇ ಸ್ಥಾನಕ್ಕೆ ಏರಿದೆ.
ಮತ್ತೊಂದೆಡೆ ಎಸ್‌ಸಿ ಈಸ್ಟ್ ಬೆಂಗಾಲ್ ಈ ಪಂದ್ಯದಲ್ಲಿಯೂ ಗೆಲುವಿನ ರುಚಿ ಸವಿಯಲು ವಿಫಲವಾಗಿದೆ. ಇಸ್ಟ್ ಬೆಂಗಾಲ್ ಈ ಬಾರಿಯ ಟೂರ್ನಿಯಲ್ಲಿ ಈವರೆಗೂ ಒಂದೇ ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿಲ್ಲ. ಏಳು ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದರೆ ನಾಲ್ಕು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಹೀಗಾಗಿ ಅಂಕಪಟ್ಟಿಯಲ್ಲಿ ಕೊನೇಯ ಸ್ಥಾನದಲ್ಲಿ ಭದ್ರವಾಗಿ ನೆಲೆಯೂರಿದೆ. ಇನ್ನು ಈ ಫಲಿತಾಂಶದೊಂದಿಗೆ ಅಗ್ರ ನಾಲ್ಕು ಸ್ಥಾನಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಮುಂಬೈ ಸಿಟಿ ಎಫ್‌ಸಿ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದು ಎರಡನೇ ಸ್ಥಾನದಲ್ಲಿ ಜೆಮ್ಶೆಡ್ಪುರ ಎಫ್‌ಸಿ ಮೂರನೇ ಸ್ಥಾನದಲ್ಲಿ ಹೈದರಾಬಾದ್ ಎಫ್‌ಸಿ ಹಾಗೂ ನಾಲ್ಕನೇ ಸ್ಥಾನದಲ್ಲಿ ಒಡಿಶಾ ಎಫ್‌ಸಿ ತಂಡಗಳಿದೆ. ಬೆಂಗಳೂರು ಎಫ್‌ಸಿ ತಂಡ 10ನೇ ಸ್ಥಾನಕ್ಕೆ ಕುಸಿದಿದ್ದು ಹೀನಾಯ ಪರಿಸ್ಥಿತಿಯನ್ನು ಎದುರಿಸುತ್ತಿದೆ.
ಎಸ್‌ಸಿ ಈಸ್ಟ್ ಬೆಂಗಾಲ್ ಆಡುವ ಬಳಗ: ಅರಿಂದಮ್ ಭಟ್ಟಾಚಾರ್ಯ (ನಾಯಕ ಹಾಗೂ ಗೋಲ್ ಕೀಪರ್), ಟೊಮಿಸ್ಲಾವ್ ಮ್ರ್ಸೆಲಾ, ಹಿರಾ ಮೊಂಡಲ್, ರಾಜು ಗಾಯಕ್ವಾಡ್, ಫ್ರಾಂಜೊ ಪ್ರೈಸ್, ಲಾಲ್ರಿನ್ಲಿಯಾನಾ ಹ್ನಾಮ್ಟೆ, ಸೌರವ್ ದಾಸ್, ಮೊಹಮ್ಮದ್ ರಫೀಕ್, ಆಂಟೋನಿಯೊ ಪೆರೋಸೆವಿಕ್, ನವೋರೆಮ್ ಸಿಂಗ್ ಮತ್ತು ಡೇನಿಯಲ್ ಚುಕ್ವು.
ನಾರ್ಥ್‌ಈಸ್ಟ್ ಯುನೈಟೆಡ್ ಆಡುವ ಬಳಗ: ಮಿರ್ಷಾದ್ ಮಿಚು (ಗೋಲ್ ಕೀಪರ್), ಗುರ್ಜಿಂದರ್ ಕುಮಾರ್, ಪ್ಯಾಟ್ರಿಕ್ ಫ್ಲೋಟ್‌ಮನ್, ಪ್ರೊವತ್ ಲಾಕ್ರಾ, ಖಾಸ್ಸಾ ಕ್ಯಾಮೆರಾ (ನಾಯಕ), ಇಮ್ರಾನ್ ಖಾನ್, ಜೆಸ್ಟಿನ್ ಜಾರ್ಜ್, ಸುಹೇರ್ ವಡಕ್ಕೆಪೀಡಿಕಾ, ರೊಚಾರ್ಜೆಲಾ, ಮಥಿಯಾಸ್ ಕೋರೆರ್ ಮತ್ತು ಲಾಲ್‌ಖಾವ್ಪುಮಾವಿಯಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications