For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಒಡಿಶಾ ವಿರುದ್ಧ ಗೆದ್ದ ಚೆನ್ನೈಯಿನ್, ಹೈದರಾಬಾದ್ vs ಗೋವಾ ಪಂದ್ಯ ಡ್ರಾ

ISL 2021-22: match 33 CFC vs OFC, Chennaiyin FC match won by by 2-1 Highlights

ಇಂಡಿಯನ್ ಸೂಪರ್‌ ಲೀಗ್‌ನಲ್ಲಿ ಭಾನುವಾರ ಎರಡು ಪಂದ್ಯಗಳು ನಡೆದವು ಮೊದಲ ಪಂದ್ಯದಲ್ಲಿ ಚೆನ್ನೈಯಿನ್ ಎಫ್‌ಸಿ ಹಾಗೂ ಒಡಿಶಾ ಎಫ್‌ಸಿ ತಂಡಗಳು ಮುಖಿಯಾಗಿದ್ದರೆ ನಂತರದ ಪಂದ್ಯದಲ್ಲಿ ಹೈದರಾಬಾದ್ ಎಫ್‌ಸಿ ಹಾಗೂ ಎಫ್‌ಸಿ ಗೋವಾ ತಂಡಗಳು ಮುಖಾಮುಖಿಯಾಗಿದ್ದವು. ಒಡಿಶಾ ಎಫ್‌ಸಿ ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈಯಿನ್ 2-1 ಅಂತರದಿಂದ ಗೆಲುವು ಸಾಧಿಸಿದ್ದರೆ ಹೈದರಾಬಾದ್ ಹಾಗೂ ಗೋವಾ ತಂಡಗಳ ಪಂದ್ಯ 1-1 ಗೋಲುಗಳ ಅಂತರದಿಂದ ಡ್ರಾದೊಂಡಿಗೆ ಅಂತ್ಯಕಂಡಿದೆ.

ಒಡಿಶಾ vs ಚೆನ್ನೈಯಿನ್: ಸಾಕಷ್ಟು ರೋಚಕತೆಯಿಂದ ಕೂಡಿದ್ದ ಈ ಪಂದ್ಯದಲ್ಲಿ ಆರಂಭದಿಂದಲೂ ಚೆನ್ನೈಯಿನ್ ಎಫ್‌ಸಿ ಮೇಲುಗೈ ಸಾಧಿಸಿತ್ತು. 23ನೇ ನಿಮಿಷದಲಲ್ಇ ಚೆನ್ನೈಯಿ್ ಮೊದಲ ಗೋಲು ದಾಖಲಿಸುವ ಮೂಲಕ ಪಂದ್ಯದಲ್ಲಿ ಮೊದಲ ಬಾರಿಗೆ ಮೇಲುಗೈ ಸಾಧಿಸಿತ್ತು. ಅದಾದ ಬಳಿಕ ದ್ವಿತೀಯಾರ್ಧದಲ್ಲಿಯೂ ಮತ್ತೊಂದು ಗೋಲು ದಾಖಲಿಸಲು ಚೆನ್ನೈಯಿನ್ ತಂಡ ಯಶಸ್ವಿಯಾಗಿತ್ತು. ಪಂದ್ಯದ 63ನೇ ನಿಮಿಷದಲ್ಲಿ ಚೆನ್ನೈಯಿನ್ ಎರಡನೇ ಗೋಲು ದಾಖಲಿಸಿತ್ತು. ಈ ಮೂಲಕ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತ್ತು. ಪಂದ್ಯದ ಬಹುತೇಕ ಅವಧಿಯಲ್ಲಿ ಗೋಲು ಗಳಿಸಲು ವಿಫಲವಾಗಿದ್ದ ಒಡಿಶಾ ಎಫ್‌ಸಿ ತಂಡ ಅಂತಿಮ ನಿಮಿಷದಲ್ಲಿ ಒಂದು ಗೋಲು ದಾಖಲಿಸಲು ಸಫಲವಾಯಿತು ಈ ಮೂಲಕ ಪಂದ್ಯದಲ್ಲಿ ಸೋಲಿನ ಅಂತರವನ್ನು 2-1ಕ್ಕೆ ತಗ್ಗಿಸಿಕೊಂಡಿತು. ಈ ಮೂಲಕ ಚೆನ್ನೈಯಿನ್ನ ಎಫ್‌ಸಿ ತಂಡ ಭರ್ಜರಿಯಾಗಿ ಗೆದ್ದುಕೊಂಡಿದೆ.

ಒಡಿಶಾ ಎಫ್‌ಸಿ: ಕಮಲ್ಜಿತ್ ಸಿಂಗ್ (ಗೋಲ್‌ ಕೀಪರ್), ಲಾಲ್ಹ್ರೆಜುವಾಲಾ ಸೈಲುಂಗ್, ಗೌರವ್ ಬೋರಾ, ವಿಕ್ಟರ್ ಮೊಂಗಿಲ್ (ನಾಯಕ), ಲಾಲ್ರುವಾತ್ಥರಾ, ತೊಯ್ಬಾ ಸಿಂಗ್, ಪಾಲ್ ರಾಮ್‌ಫಾಂಗ್‌ಜೌವಾ, ಜೇವಿಯರ್ ಹೆರ್ನಾಂಡೆಜ್, ಐಸಾಕ್ ಚಕ್ಚುವಾಕ್, ಅರಿದೈ ಸೌರೆಜ್ ಮತ್ತು ಜೊನಾಥಸ್ ಕ್ರಿಸ್ಟಿಯನ್.

ಚೆನ್ನೈಯಿನ್ ಎಫ್‌ಸಿ: ವಿಶಾಲ್ ಕೈತ್ (ಗೋಲ್‌ ಕೀಪರ್), ಸ್ಲಾವ್ಕೊ ದಮ್ಜಾನೋವಿಕ್, ನಾರಾಯಣ್ ದಾಸ್, ಜೆರ್ರಿ ಲಾಲ್ರಿಂಜುವಲಾ, ರೇಗನ್ ಸಿಂಗ್, ಏರಿಯಲ್ ಬೊರಿಸಿಯುಕ್, ವ್ಲಾಡಿಮಿರ್ ಕೋಮನ್, ಅನಿರುದ್ಧ್ ಥಾಪಾ (ನಾಯಕ), ಜರ್ಮನ್ಪ್ರೀತ್ ಸಿಂಗ್, ಮಿರ್ಲಾನ್ ಮುರ್ಜಾವ್ ಮತ್ತು ಲಾಲಿಯನ್ಜುವಾಲಾ ಚಾಂಗ್ಟೆ.

ಹೈದರಾಬಾದ್ ಎಫ್‌ಸಿ vs ಎಫ್‌ಸಿ ಗೋವಾ: ಇನ್ನು ಈ ಟೂರ್ನಿಯ 34ನೇ ಪಂದ್ಯದಲ್ಲಿ ಎಫ್‌ಸಿ ಗೋವಾ ಹಾಗೂ ಹೈದರಾಬಾದ್ ಎಫ್‌ಸಿ ತಂಡಗಳು ಮುಖಾಮುಖಿಯಾಗಿದ್ದವು. ಮೊದಲಾರ್ದದಲ್ಲಿ ಎರಡು ತಂಡಗಳು ಕೂಡ ಸಾಕಷ್ಟು ಪೈಪೋಟಿಯ ಪ್ರದರ್ಶನ ನೀಡಿದವಾದರೂ ಎರಡು ತಂಡಗಳು ಗೋಲು ಗಳಿಸಲು ವಿಫಲವಾಗಿದ್ದವು. ಆದರೆ ಸ್ವಿತೀಯಾರ್ಧದಲ್ಲಿ ಎರಡು ತಮಡಗಳು ಕೂಡ ತಲಾ ಒಂದೊಂದು ಗೋಲು ದಾಖಲಿಸಿದವು. 54 ನೇ ನಿಮಿಷದಲ್ಲಿ ಹೈದರಾಬಾದ್ ಎಫ್‌ಸಿ ತಂಡ ಪಂದ್ಯದಲ್ಲಿ ಮೊದಲ ಗೋಲು ದಾಖಲಸಿ ಮುನ್ನಡೆ ಸಾಧಿಸಿದ್ದರೆ ಬಳಿಕ 62ನೇ ನಿಮಿಷದಲ್ಲಿ ಎಫ್‌ಸಿ ಗೋವಾ ಕೂಡ ಗೋಲು ದಾಖಲಸಿ ಪಂದ್ಯದಲ್ಲಿ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಪಂದ್ಯ 1-1 ಅಂತರದಿಂದ ಡ್ರಾಗೊಂಡಿದೆ.

ಹೈದರಾಬಾದ್ ಎಫ್‌ಸಿ: ಲಕ್ಷ್ಮೀಕಾಂತ್ ಕಟ್ಟಿಮನಿ (ಗೋಲ್‌ ಕೀಪರ್), ಆಸಿಶ್ ರೈ, ಚಿಂಗ್ಲೆನ್ಸನಾ ಸಿಂಗ್, ಜುವಾನನ್, ಆಕಾಶ್ ಮಿಶ್ರಾ, ಹಿತೇಶ್ ಶರ್ಮಾ, ಜೋವೊ ವಿಕ್ಟರ್ (ನಾಯಕ), ನಿಖಿಲ್ ಪೂಜಾರಿ, ಜೋಯಲ್ ಚಿಯಾನೀಸ್, ರೋಹಿತ್ ದಾನು ಮತ್ತು ಬಾರ್ತಲೋಮಿವ್ ಓಗ್ಬೆಚೆ.

ಎಫ್‌ಸಿ ಗೋವಾ: ಧೀರಜ್ ಮೊಯಿರಾಂಗ್ಥೆಮ್ (ಗೋಲ್‌ ಕೀಪರ್), ಮೊಹಮ್ಮದ್ ಅಲಿ, ಇವಾನ್ ಗೊನ್ಜಾಲೆಜ್, ಐಬಾನ್ ಡೊಹ್ಲಿಂಗ್, ಸೆರಿಟನ್ ಫೆರ್ನಾಂಡಿಸ್, ಸೇವಿಯರ್ ಗಾಮಾ, ಪ್ರಿನ್ಸ್‌ಟನ್ ರೆಬೆಲ್ಲೊ, ಎಡು ಬೆಡಿಯಾ (ನಾಯಕ), ಆಲ್ಬರ್ಟೊ ನೊಗುರಾ, ಐರಾನ್ ಕ್ಯಾಬ್ರೆರಾ ಮತ್ತು ದೇವೇಂದ್ರ ಮುರ್ಗಾಂವ್ಕರ್.

Story first published: Sunday, December 19, 2021, 9:37 [IST]
Other articles published on Dec 19, 2021
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+