ಐಎಸ್‌ಎಲ್: ಬೆಂಗಳೂರು vs ಜೆಮ್ಶೆಡ್ಪುರ ವಿರುದ್ಧದ ಪಂದ್ಯ ಡ್ರಾ: ಬಿಎಫ್‌ಸಿಗೆ ಮತ್ತೆ ನಿರಾಸೆ

ಇಂಡಿಯನ್ ಸೂಪರ್ ಲೀಗ್‌ನ 35ನೇ ಪಂದ್ಯದಲ್ಲಿ ಬೆಂಗಳೂರು ಎಪ್‌ಸಿ ತಂಡಕ್ಕೆ ಜೆಮ್ಶೆಡ್ಪುರ ಎಫ್‌ಸಿ ತಂಡ ಎದುರಾಳಿಯಾಗಿ ಕಣಕ್ಕಿಳಿದಿತ್ತು. ಈ ಪಂದ್ಯದಲ್ಲಿಯೂ ಬೆಂಗಳೂರು ಎಫ್‌ಸಿ ತಂಡ ಗೆಲುವು ಸಾಧಿಸಲು ವಿಫಲವಾಗಿದೆ. ಈ ಮೂಲಕ ಸತತ 7ನೇ ಪಂದ್ಯದಲ್ಲಿಯೂ ಬೆಂಗಳೂರು ಎಪ್‌ಸಿ ತಂಡ ಗೆಲುವಿನ ಮುಖ ನೋಡಲು ಸಾಧ್ಯವಾಗಲಿಲ್ಲ. ಹೀಗಾಗಿ ಅಂಕಪಟ್ಟಿಯಲ್ಲಿ ಹೀನಾಯ ಸ್ಥಿತಿಯಲ್ಲಿದೆ.
ಈ ಬಾರಿಯ ಟೂರ್ನಿಯಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ ಬಳಿಕ ಬಿಎಫ್‌ಸಿ ತಂಡಕ್ಕೆ ಮತ್ತೊಮದು ಗೆಲುವು ಸಾಧಿಸಲು ಈವರೆಗೂ ಸಾಧ್ಯವಾಗಲೇ ಇಲ್ಲ. ಅಂತಿಮ ಏಳು ಪಂದ್ಯಗಳಲ್ಲಿ ಬಿಎಫ್‌ಸಿ ಒಂದೇ ಒಂದು ಗೆಲುವು ಸಾಧಿಸಿಲ್ಲ. ಇದರಲ್ಲಿ ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡಿದ್ದರೆ ಮೂರರಲ್ಲಿ ಡ್ರಾ ಸಾಧಿಸಿದೆ.
ಜೆಮ್ಶೆಡ್ಪುರ ಎಫ್‌ಸಿ ವಿರುದ್ಧದ ಈ ಪಂದ್ಯದಲ್ಲಿ ಗೆಲುವು ಸಾಧಿಸಲು ಬಿಎಸ್‌ಸಿ ಸಾಕಷ್ಟು ಪ್ರಯತ್ನ ನಡೆಸಿತು. ಆದರೆ ಪಂದ್ಯದುದ್ದಕ್ಕೂ ಒಂದೇ ಒಂದು ಗೋಲು ದಾಖಲಾಗಲಿಲ್ಲ. ಎರಡು ತಮಡಗಳು ಕೂಡ ಗೋಲು ದಾಖಲಿಸಲು ಸಾಕಷ್ಟು ಪ್ರಯತ್ನಗಳನ್ನು ನಡೆಸಿತ್ತು. ಆದರೆ ಅದರಲ್ಲಿ ಸತತವಾಗಿ ವಿಫಲವಾಯಿತು. ಅಂತಿಮವಾಗಿ ಪಂದ್ಯ ಯಾವುದೇ ಗೋಲುಗಳು ಇಲ್ಲದೆ ಡ್ರಾಗೊಂಡಿದೆ.
ಇನ್ನು ಈ ಪಂದ್ಯದಲ್ಲಿ ಡ್ರಾ ಸಾಧಿಸಿದ ಹೊರತಾಗಿಯೂ ಜೆಮ್ಶೆಡ್ಪುರ ಎಫ್‌ಸಿ ತಂಡ ಅಂಕಪಟ್ಟಿಯಲ್ಲಿ ಒಂದು ಸ್ಥಾನ ಮೇಲೇರಿದ್ದು ಅಂಕಪಟ್ಟಿಯಲ್ಲಿ ಟಾಪ್ 2 ತಂಡವಾಗಿದೆ. ಆಡಿದ 7 ಪಂದ್ಯಗಳ ಪೈಕಿ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಜೆಮ್ಶೆಡ್ಪುರ ಎಫ್‌ಸಿ ತಂಡ ಮೂರು ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ. ಒಂದು ಪಮದ್ಯದಲ್ಲಿ ಮಾತ್ರವೇ ಸೋಲು ಕಂಡಿದೆ. ಈ ಮೂಲಕ ಒಟ್ಟು 12 ಅಂಕಗಳನ್ನು ಖಾತೆಯಲ್ಲಿ ಹೊಂದಿದೆ.
ಇತ್ತ ಬಿಎಫ್‌ಸಿ ತಂಡ ಆಡಿದ 8 ಒಂದ್ಯಗಳ ಪೈಕಿ ಒಂದು ಪಮದ್ಯದಲ್ಲಿ ಮಾತ್ರವೇ ಗೆಲುವು ಸಾಧಿಸಿದೆ. ಇನ್ನು ಮೂರು ಪಂದ್ಯಗಳಲ್ಲಿ ಡ್ರಾ ಸಾಧಿಸಿದ್ದು ನಾಲ್ಕು ಪಂದ್ಯದಲ್ಲಿ ಸೋಲು ಕಂಡಿದೆ. ಈ ಮೂಲಕ ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ಬೆಂಗಳೂರು ಎಫ್‌ಸಿ ಖಾತೆಯಲ್ಲಿರುವ ಅಂಕ 6. ಇನ್ನು ಮುಂಬೈ ಸಿಟಿ ಎಫ್‌ಸಿ ತಂಡ ಆಡಿದ 7 ಪಂದ್ಯಗಳ ಪೈಕಿ 5ರಲ್ಲಿ ಗೆಲುವು ಸಾಧಿಸಿರುವ ಮುಂಬೈ ಸಿಟಿ ತಂಡ 15 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಹೈದರಾಬಾದ್ ಎಫ್‌ಸಿ ತಂಡ ಮೂರನೇ ಸ್ಥಾನದಲ್ಲಿ ಹಾಗೂ ಚೆನ್ನೈಯಿನ್ ಎಫ್‌ಸಿ ತಂಡ ನಾಲ್ಕನೇ ಸ್ಥಾನದಲ್ಲಿದೆ
ಬೆಂಗಳೂರು ಎಫ್‌ಸಿ: ಗುರುಪ್ರೀತ್ ಸಂಧು (ಗೋಲ್ ಕೀಪರ್/ ನಾಯಕ), ಅಜಿತ್ ಕಾಮರಾಜ್, ಅಲನ್ ಕೋಸ್ಟಾ, ಪರಾಗ್ ಶ್ರೀವಾಸ್, ಆಶಿಕ್ ಕುರುನಿಯನ್, ಸುರೇಶ್ ವಾಂಗ್ಜಮ್, ಬ್ರೂನೋ ಸಿಲ್ವಾ, ಡ್ಯಾನಿಶ್ ಫಾರೂಕ್, ಉದಾಂತ ಸಿಂಗ್, ಪ್ರಿನ್ಸ್ ಇಬಾರಾ, ಕ್ಲಿಟನ್ ಸಿಲ್ವಾ.
ಜಮ್ಶೆಡ್‌ಪುರ ಎಫ್‌ಸಿ: ಟಿಪಿ ರೆಹನೇಶ್ (ಗೋಲ್ ಕೀಪರ್), ಲಾಲ್ಡಿನ್ಲಿಯಾನಾ ರೆಂತ್ಲೀ, ನರೇಂದರ್ ಗಹ್ಲೋಟ್, ಪೀಟರ್ ಹಾರ್ಟ್ಲಿ (ನಾಯಕ), ರಿಕಿ ಲಲ್ಲಾವ್ಮಾ, ಜಿತೇಂದ್ರ ಸಿಂಗ್, ಅಲೆಕ್ಸಾಂಡ್ರೆ ಲಿಮಾ, ಸೀಮಿನ್ಲೆನ್ ಡೌಂಗೆಲ್, ಕೋಮಲ್ ಥಾಟಲ್, ಗ್ರೆಗ್ ಸ್ಟೀವರ್ಟ್, ಜೋರ್ಡಾನ್ ಮುರ್ರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications