
ಇಂಡಿಯನ್ ಸೂಪರ್ ಲೀಗ್‌ನ 37ನೇ ಪಂದ್ಯದಲ್ಲಿ ನಾರ್ಥ್‌ಈಸ್ಟ್ ಯುನೈಟೆಡ್ ಎಫ್‌ಸಿ ಹಾಗೂ ಎಟಿಕೆ ಮೋಹನ್ ಬಾಗನ್ ತಂಡಗಳು ಮುಖಾಮುಖಿಯಾಗಿದೆ. ಈ ರೋಚಕ ಪಂದ್ಯದಲ್ಲಿ ನಾರ್ಥ್‌ಈಸ್ಟ್ ಯುನೈಟೆಡ್ ತಂಡದ ವಿರುದ್ಧ ಎಟಿಕೆ ಮೋಹನ್ ಬಾಗನ್ ತಂಡ ಗೆಲುವು ಸಾಧಿಸಿದೆ. ಅಂತಿಮ ಹಂತದವರೆಗೆ ನಡೆದ ಜಿದ್ದಾಜಿದ್ದಿನ ಕದನದಲ್ಲಿ ಮೋಹನ್ ಬಾಗನ್ ತಂಡ 3-2 ಅಂತರದಿಂದ ಗೆಲುವು ಸಾಧಿಸಿದೆ.
ಈ ಪಂದ್ಯ ಆರಂಭವಾದ ಎರಡನೇ ನಿಮಿಷದಲ್ಲಿಯೇ ನಾರ್ಥ್‌ಈಸ್ಟ್ ಯುನೈಟೆಡ್ ತಂಡ ಗೋಲು ಗಳಿಸುವ ಮೂಲಕ ಆರಂಭಿಕ ಮುನ್ನಡೆಯನ್ನು ಸಾಧಿಸಿತ್ತು. ಈ ಮುನ್ನಡೆಯನ್ನು ಮೊದಲಾರ್ಧದ ಅಂತಿಮ ಹಂತದವರೆಗೂ ಕಾಪಾಡಿಕೊಂಡಿತ್ತು. ಆದರೆ ಅಂತಿಮ ನಿಮಿಷದಲ್ಲಿ ಮೋಹನ್ ಬಾಗನ್ ಪರವಾಗಿ ಮೊದಲ ಗೋಲು ದಾಖಲಾಗಿತ್ತು. ಈ ಮೂಲಕ ಮೊದಲಾರ್ಧದಲ್ಲಿ ಎರಡು ತಂಡಗಳು ಕೂಡ 1-1 ಅಂತರದ ಸಮಬಲವನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದವು.
ಅದಾದ ಬಳಿಕ ದ್ವಿತೀಯಾರ್ಧದಲ್ಲಿ ಮೋಹನ್ ಬಾಗನ್ ನಾರ್ಥ್‌ಈಸ್ಟ್ ಯುನೈಟೆಡ್ ವಿರರುದ್ಧ ಸಂಪೂರ್ಣ ಹಿಡಿತವನ್ನು ಸಾಧಿಸುವಲ್ಲಿ ಯಶಸ್ವಿಯಾಯಿತು. 53ನೇ ನಿಮಿಷದಲ್ಲಿ ಮೋಹನ್ ಬಾಗನ್ ಪರವಾಗಿ ಎರಡನೇ ಗೋಲು ದಾಖಲಾಯಿತು. ಈ ಮೂಲಕ ಪಂದ್ಯದಲ್ಲಿ ಮೊದಲ ಬಾರಿಗೆ ಮುನ್ನಡೆಯನ್ನು ಸಾಧಿಸುವಲ್ಲಿ ಮೋಹನ್ ಬಾಗನ್ ಯಶಸ್ವಿಯಾಯಿತು. ಹ್ಯೂಗೋ ಬೌಮಸ್ ಈ ಗೋಲು ಬಾರಿಸಿ ತಂಡಕ್ಕೆ ಮುನ್ನಡೆ ಒದಗಿಸಿದರು. ನಂತರ 76ನೇ ನಿಮಿಷದಲ್ಲಿ ಬೌಮಸ್ ಮತ್ತೊಂದು ಗೋಲು ದಾಖಲಿಸುವ ಮೂಲಕ ಮುನ್ನಡೆಯನ್ನು ಹೆಚ್ಚಿಸಿದರು. ಈ ಮೂಲಕ ಮೋಹನ್ ಬಾಗನ್ ಮುನ್ನಡೆಯ ಅಂತರ 3-1ಕ್ಕೆ ಏರಿತ್ತು.
ನಂತರ ನಾರ್ಥ್‌ಈಸ್ಟ್ ಯುನೈಟೆಡ್ ತಂಡ ಕೂಡ ತೀವ್ರ ಪೈಪೋಟಿಯನ್ನು ನಡೆಸಿತು. ಪಂದ್ಯದ 87ನೇ ನಿಮಿಷದಲ್ಲಿ ನಾರ್ಥ್‌ಈಸ್ಟ್ ಯುನೈಟೆಡ್ ತಮಡ ಎರಡನೇ ಗೋಲು ಗಳಿಸುವಲ್ಲಿ ಯಶಸ್ವಿಯಾಯಿತು. ಅಂತುಮವಾಗಿ ಎಟಿಕೆ ಮೋಹಮ್ ಬಾಗನ್ ಈ ಪಂದ್ಯದಲ್ಲಿ 3-2 ಅಂತರದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು.
ಇನ್ನು ಈ ಗೆಲುವಿನೊಂದಿಗೆ ಎಟಿಕೆ ಮೋಹನ್ ಬಾಗನ್ ಅಂಕಪಟ್ಟಿಯಲ್ಲಿ 7ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಏರಿಕೆ ಕಂಡಿದೆ. ಈ ತಂಡ ಈವರೆಗೆ ಆಡಿದ 7 ಪಂದ್ಯಗಳ ಪೈಕಿ 3 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು 2 ಪಂದ್ಯಗಳಲ್ಲಿ ಡ್ರಾ ಹಾಗೂ 2 ಪಂದ್ಯದಲ್ಲಿ ಸೋಲು ಅನುಭವಿಸಿದೆ. ಇನ್ನು ನಾರ್ಥ್‌ಈಸ್ಟ್ ಯುನೈಟೆಡ್ ತಂಡ ಈ ಪಂದ್ಯದಲ್ಲಿ ಸೋಲು ಕಂಡ ಬಳಿಕವೂ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿ ಮುಂದುವರಿದಿದೆ. ಇನ್ನು ಅಂಕಪಟ್ಟಿಯಲ್ಲಿ ಅಗ್ರ ನಾಲ್ಕು ತಂಡಗಳ ಪೈಕಿ ಯಾವುದೇ ಬದಲಾವಣೆ ಆಗಿಲ್ಲ.
ಎಟಿಕೆ ಮೋಹನ್ ಬಾಗನ್: ಅಮರಿಂದರ್ ಸಿಂಗ್ (ಗೋಲ್ ಕೀಪರ್), ಅಶುತೋಷ್ ಮೆಹ್ತಾ, ಪ್ರೀತಮ್ ಕೋಟಾಲ್ (ನಾಯಕ), ತಿರಿ, ಸುಭಾಸಿಶ್ ಬೋಸ್, ಕಾರ್ಲ್ ಮೆಕ್‌ಹಗ್, ದೀಪಕ್ ತಂಗ್ರಿ, ಮನ್ವಿರ್ ಸಿಂಗ್, ಹ್ಯೂಗೋ ಬೌಮಸ್, ಲಿಸ್ಟನ್ ಕೊಲಾಕೊ ಮತ್ತು ರಾಯ್ ಕೃಷ್ಣ.
ನಾರ್ಥ್‌ಈಸ್ಟ್ ಯುನೈಟೆಡ್ ಎಫ್‌ಸಿ: ಮಿರ್ಷಾದ್ ಮಿಚು (ಗೋಲ್ ಕೀಪರ್), ಪ್ರೊವತ್ ಲಾಕ್ರಾ, ಪ್ಯಾಟ್ರಿಕ್ ಫ್ಲೋಟ್‌ಮನ್, ಗುರ್ಜಿಂದರ್ ಕುಮಾರ್, ಹೆರ್ನಾನ್ ಸಂತಾನಾ, ಖಾಸ್ಸಾ ಕ್ಯಾಮೆರಾ (ನಾಯಕ), ಇಮ್ರಾನ್ ಖಾನ್, ಮಥಿಯಾಸ್ ಕೊರೇರ್, ರೋಚಾರ್ಜೆಲಾ, ಲಾಲ್‌ಖಾವ್ಪುಮಾವಿಯಾ ಮತ್ತು ಸುಹೇರ್ ವಡಕ್ಕೆಪೀಡಿಕಾ