For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಎಫ್‌ಸಿ ಗೋವಾ vs ಒಡಿಶಾ ಎಫ್‌ಸಿ ಪಂದ್ಯ ಡ್ರಾದಲ್ಲಿ ಅಂತ್ಯ

ISL 2021-22: match 40 FCG vs OFC, match draw by 1-1 Highlights

ಇಂಡಿಯನ್ ಸೂಪರ್ ಲೀಗ್‌ನ 40ನೇ ಮುಖಾಮುಖಿಯಲ್ಲಿ ಇಂದು ಎಫ್‌ಸಿ ಗೋವಾ ಹಾಗೂ ಒಡಿಶಾ ಎಫ್‌ಸಿ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಎರಡು ತಂಡಗಳು ಕೂಡ ತಲಾ ಒಂದೊಂದು ಗೋಲು ಗಳಿಸಿದ್ದು ಪಂದ್ಯ ಡ್ರಾದಲ್ಲಿ ಅಂತ್ಯವಾಗಿದೆ. ಈ ಫಲಿತಾಂಶದಿಂದಾಗಿ ಎರಡು ತಂಡಗಳು ಕೂಡ ಅಂಕಪಟ್ಟಿಯಲ್ಲಿ ಇದ್ದ ಸ್ಥಾನದಲ್ಲಿಯೇ ಮುಂದುವರಿದಿದೆ.

ಟೂರ್ನಿಯಲ್ಲಿ ಈವರೆಗೆ ಒಂದೂ ಗೆಲುವು ಸಾಧಿಸಲು ವಿಫಲವಾಗಿರುವ ಎಸ್‌ಸಿ ಈಸ್ಟ್ ಬೆಂಗಾಲ್ ತಂಡ ಮತ್ತೊಂದು ಪಂದ್ಯದಲ್ಲಿಯೂ ಗೆಲುವು ಪಡೆಯಲು ಸಾಧ್ಯವಾಗದೆ ಡ್ರಾಗೆ ತೃಪ್ತಿಪಟ್ಟುಕೊಂಡಿದೆ. ಹೈದರಾಬಾದ್ ಎಫ್‌ಸಿ ವಿರುದ್ಧದ ಈ ಪಂದ್ಯದಲ್ಲಿ ಈಸ್ಟ್ ಬೆಂಗಾಲ್ ತಂಡ 20ನೇ ನಿಮಿಷದಲ್ಲಿ ಗೋಲನ್ನು ಗಳಿಸಿ ಖಾತೆಯನ್ನು ತೆರೆಯಿತು. ಈ ಮೂಲಕ ಪಂದ್ಯದಲ್ಲು ಮೇಲುಗೈ ಸಾಧಿಸಿತು. ತಂಡದ ಆಟಗಾರ ಅಮೀರ್ ಡೆರ್ವಿಸೆವಿಕ್ ಈ ಗೋಲು ದಾಖಲಿಸುವ ಮೂಲಕ ಮೇಲುಗೈಗೆ ಕಾರಣವಾದರು.

ಆದರೆ ಈಸ್ಟ್ ಬೆಂಗಾಲ್ ತಂಡ ಈ ಮುನ್ನಡೆ ಹೆಚ್ಚು ಹೊತ್ತು ಮುಂದುವರಿಯಲಿಲ್ಲ. ನಂತರ ಐದೇ ನಿಮಿಷದಲ್ಲಿ ಹೈದರಾಬಾದ್ ಎಫ್‌ಸಿ ತಂಡ ಕೂಡ ಗೋಲು ದಾಖಲಿಸುವಲ್ಲಿ ಯಶಸ್ವಿಯಾಯಿತು. ಬಾರ್ತಲೋಮಿವ್ ಓಗ್ಬೆಚೆ ಹೈದರಾಬಾದ್ ತಂಡದ ಪರವಾಗಿ ಗೋಲು ದಾಖಲಿಸಿ ಸಮಬಲ ಸಾಧಿಸಲು ಕಾರಣವಾದರು. ಈ ಮೂಲಕ ಮೊದಲಾರ್ಧದಲ್ಲಿ ಎರಡು ತಮಡಗಳು ಕೂಡ 1-1 ಅಂತರದಿಂದ ಸಮಬಲವನ್ನು ಸಾಧಿಸಿತ್ತು. ಆದರೆ ದ್ವಿತಿಯಾರ್ಧದಲ್ಲಿ ಎರಡು ತಂಡಗಳು ಕೂಡ ಸಾಕಷ್ಟು ಪೈಪೋಟಿಯ ಪ್ರದರ್ಶನ ನೀಡಿದರು ಕೂಡ ಯಾವ ತಂಡಕ್ಕೂ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ.

ಇನ್ನು ಈ ಡ್ರಾ ಫಲಿತಾಂಶದ ಹೊರತಾಗಿಯೂ ಹೈದರಾಬಾದ್ ಎಫ್‌ಸಿ ತಂಡ ಅಂಕಪಟ್ಟಿಯಲ್ಲಿ ಉತ್ತಮ ಸಾಧನೆ ಮಾಡಿದೆ. ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ಹೈದರಾಬಾದ್ ತಂಡ ಎರಡನೇ ಸ್ಥಾನಕ್ಕೆ ಏರಿದೆ. ಈ ಮೂಲಕ ಮಹತ್ವದ ಮೇಲುಗೈ ಸಾಧಿಸಿದೆ. ಹೈದರಾಬಾದ್ ಎಫ್‌ಸಿ ತಂಡ ಈವರೆಗೆ 7 ಪಂದ್ಯಗಳನ್ನು ಆಡಿದ್ದು ಇದರಲ್ಲಿ ಮೂರು ಪಂದ್ಯದಲ್ಲಿ ಗೆಲುವು ಸಾಧಿಸಿದ್ದರೆ ಮೂರು ಪಂದ್ಯದಲ್ಲಿ ಡ್ರಾ ಸಾಧಿಸಿದೆ. ಒಂದು ಪಂದ್ಯದಲ್ಲಿ ಸೋಲು ಕಂಡಿದೆ. ಆದರೆ ಈಸ್ಟ್ ಬೆಂಗಾಲ್ ತಂಡ ಟೂರ್ನಿಯಲ್ಲಿ ಗೆಲುವಿನ ರುಚಿಯನ್ನು ಕಾಣಲು ಇನ್ನೂ ವಿಫಲವಾಗಿದೆ. ಈ ಬಾರಿ ಇನ್ನೂ ಗೆಲುವು ಕಾಣದ ಏಕೈಕ ತಂಡವಾಗಿ ಈಸ್ಟ್ ಬೆಂಗಾಲ್ ತಮಡ ಮುಂದುವರಿದಿದೆ. ಅಂಕಪಟ್ಟಿಯಲ್ಲಿ ಅಂತಿಮ ಸ್ಥಾನದಲ್ಲಿ ಮುಂದುವರಿದಿದೆ. ಎಸ್‌ಸಿ ಈಸ್ಟ್ ಬೆಂಗಾಲ್ ತಂಡ ಒಟ್ಟು 8 ಪಂದ್ಯಗಳಲ್ಲಿ ಆಡಿದ್ದು ನಾಲ್ಕು ಪಂದ್ಯದಲ್ಲಿ ಸೋಲು ಹಾಗೂ ನಾಲ್ಕು ಪಂದ್ಯದಲ್ಲಿ ಡ್ರಾ ಸಾಧಿಸಿದೆ. ಹೀಗಾಗಿ ಕೇವಲ ನಾಲ್ಕು ಅಂಕಗಳೊಂದಿಗೆ ಕೊನೇಯ ಸ್ಥಾನ ಪಡೆದುಕೊಂಡಿದೆ.

ಎಫ್‌ಸಿ ಗೋವಾ ಆಡುವ ಬಳಗ: ಧೀರಜ್ ಮೊಯಿರಾಂಗ್ಥೆಮ್ (ಗೋಲ್‌ ಕೀಪರ್), ಮೊಹಮ್ಮದ್ ಅಲಿ, ಇವಾನ್ ಗೊನ್ಜಾಲೆಜ್, ಐಬಾನ್ ಡೊಹ್ಲಿಂಗ್, ಸೆರಿಟನ್ ಫೆರ್ನಾಂಡಿಸ್, ಸೇವಿಯರ್ ಗಾಮಾ, ಪ್ರಿನ್ಸ್‌ಟನ್ ರೆಬೆಲ್ಲೊ, ಎಡು ಬೆಡಿಯಾ (ನಾಯಕ), ಅಲ್ಬರ್ಟೊ ನೊಗುರಾ, ಐರಾನ್ ಕ್ಯಾಬ್ರೆರಾ, ದೇವೇಂದ್ರ ಮುರ್ಗಾಂವ್ಕರ್.

ಒಡಿಶಾ ಎಫ್‌ಸಿ ಆಡುವ ಬಳಗ: ಕಮಲ್ಜಿತ್ ಸಿಂಗ್ (ಗೋಲ್‌ ಕೀಪರ್), ಹೆಂಡ್ರಿ ಆಂಟೊನಾಯ್, ಹೆಕ್ಟರ್ ರಾಮಿರೆಜ್, ವಿಕ್ಟರ್ ಮೊಂಗಿಲ್, ಲಾಲ್ಹ್ರೆಜುವಾಲಾ ಸೈಲುಂಗ್, ವಿನಿತ್ ರೈ (ನಾಯಕ), ಐಸಾಕ್ ಚಕ್ಚುವಾಕ್, ಜೇವಿಯರ್ ಹೆರ್ನಾಂಡೆಜ್, ನಂದಕುಮಾರ್ ಸೇಕರ್, ಜೆರ್ರಿ ಮಾವಿಹ್ಮಿಂಗ್ತಂಗ, ಜೊನಾಥಸ್ ಕ್ರಿಸ್ಟಿಯನ್

Story first published: Friday, December 24, 2021, 23:16 [IST]
Other articles published on Dec 24, 2021
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+