For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಮುಂಬೈ ಸಿಟಿ vs ನಾರ್ಥ್‌ಈಸ್ಟ್ ಯುನೈಟೆಡ್ ಪಂದ್ಯ ರೋಚಕ ಡ್ರಾದಲ್ಲಿ ಅಂತ್ಯ

ISL 2021-22: match 42 MCFC vs NEUFC, match draw by 3-3 Highlights

ಇಂಡಿಯನ್ ಸೂಪರ್ ಲೀಗ್‌ನಲ್ಲಿ ಇಂದು 42ನೇ ಪಂದ್ಯ ನಡೆದಿದ್ದು ಈ ಪಂದ್ಯದಲ್ಲಿ ಮುಂಬೈ ಸಿಟಿ ಎಫ್‌ಸಿ ಹಾಗೂ ನಾರ್ಥ್‌ಈಸ್ಟ್ ಯುನೈಟೆಡ್ ಎಫ್‌ಸಿ ತಂಡಗಳು ಮುಖಾಮುಖಿಯಾಗಿದೆ. ರೋಚಕವಾಗಿ ನಡೆದ ಈ ಹಣಾಹಣಿ 3-3 ಗೋಲುಗಳಿಂದ ಡ್ರಾ ಫಲಿತಾಂಶವನ್ನು ಪಡೆದುಕೊಂಡಿದೆ. ಈ ಪಂದ್ಯದಲ್ಲಿ ನಾರ್ಥ್‌ಈಸ್ಟ್ ಯುನೈಟೆಡ್ ತಂಡದ ದೇಶೋರ್ನ್ ಬ್ರೌನ್ ಹ್ಯಾಟ್ರಿಕ್ ಗೋಲು ಗಳಿಸಿ ಮಿಂಚುಹರಿಸಿದರು.

ಆರಂಭದಿಂದಲೇ ಜಿದ್ದಾಜಿದ್ದಿನಿಂದ ಕೂಡಿದ್ದ ಈ ಪಂದ್ಯದಲ್ಲಿ ಪಂದ್ಯದ 29ನೇ ನಿಮಿಷದಲ್ಲಿ ನಾರ್ಥ್‌ಈಸ್ಟ್ ಯುನೈಟೆಡ್ ತಂಡ ಮೊದಲ ಗೋಲು ಗಳಿಸಿ ಮುನ್ನಡೆಯನ್ನು ಪಡೆದುಕೊಂಡಿತ್ತು. ದೇಶೋರ್ನ್ ಬ್ರೌನ್ ಈ ಗೋಲು ದಾಖಲಿಸಿ ತಂಡಕ್ಕೆ ಮೊದಲ ಮುನ್ನಡೆಯನ್ನು ಒದಗಿಸಿದರು. ಆದರೆ ಈ ಮುನ್ನಡೆ ನಾರ್ಥ್‌ಈಸ್ಟ್‌ಗೆ ಹೆಚ್ಚು ಹೊತ್ತು ಇರಲಿಲ್ಲ.

ಮೊದಲಾರ್ಧ ಮುಕ್ತಾಯವಾಗುವ ಮುನ್ನ ಮುಂದಿನ ಎರಡು ಗೋಲುಗಳು ಮುಂಬೈ ಸಿಟಿ ಎಫ್‌ಸಿ ತಂಡದ ಪಾಲಾಯಿತು. 33ನೇ ನಿಮಿಷದಲ್ಲಿ ಇಗೊರ್ ಅಂಗುಲೊ ಗೋಲು ಗಳಿಸಿ ಮುಂಬೈ ಸಿಟಿ ತಂಡ ಸಮಬಲ ಸಾಧಿಸಲು ಕಾರಣವಾದರು. ಅದಾದ ಏಳೇ ನಿಮಿಷದ ಅಂತರದಲ್ಲಿ ಅಂದರೆ 40ನೇ ನಿಮಿಷದಲ್ಲಿ ಮುಂಬೈ ಸಿಟಿ ಮತ್ತೊಂದು ಗೋಲು ದಾಖಲಿಸಿತ್ತು. ಬಿಪಿನ್ ಸಿಂಗ್ ಈ ಗೋಲು ದಾಖಲಿಸಿ ಮುಂಬೈ ಸಿಟಿ ತಂಡಕ್ಕೆ ಮುನ್ನಡೆಯನ್ನು ಒದಗಿಸಿದರು.

ಈ ಮೂಲಕ ಮೊದಲಾರ್ಧದಲ್ಲಿ ಮುಂಬೈ ಸಿಟಿ ತಂಡ 2-1 ಅಂತರದಿಂದ ಮುನ್ನಡೆಯನ್ನು ಸಾಧಿಸಿತ್ತು. ನಂತರ ದ್ವಿತಿಯಾರ್ಧದಲ್ಲಿಯೂ ಮುಂಬೈ ಸಿಟಿ ತಂಡ ಮತ್ತೊಂದು ಗೋಲು ದಾಖಲಿಸುವಲ್ಲಿ ಯಶಸ್ವಿಯಾಯಿತು. ಇಗೊರ್ ಅಂಗುಲೊ ಈ ಗೋಲು ದಾಖಲಿಸಿ ಮತ್ತೊಮ್ಮೆ ತಂಡಕ್ಕೆ ಮುನ್ನಡೆಯನ್ನು ಒದಗಿಸಿದರು. ಅಲ್ಲಿಗೆ ಮುಂಬೈ ಸಿಟಿ ತಂಡ 3-1 ಅಂತರದ ಮುನ್ನಡೆಯನ್ನು ಸಾಧಿಸಿತ್ತು.

ಆದರೆ ನಂತರ ನಾರ್ಥ್‌ಈಸ್ಟ್ ಯುನೈಟೆಡ್ ತಂಡ ಅದ್ಭುತವಾಗಿ ತಿರುಗಿ ಬೀಳುವಲ್ಲಿ ಯಶಸ್ವಿಯಾಯಿತು. 56ನೇ ನಿಮಿಷದಲ್ಲಿ ನಾರ್ಥ್‌ಈಸ್ಟ್ ಯುನೈಟೆಡ್ ತಂಡ 2ನೇ ಗೋಲು ಸಿಡಿಸಲು ಯಶಸ್ವಿಯಾಯಿತು. ಮತ್ತೊಮ್ಮೆ ದೇಶೋರ್ನ್ ಬ್ರೌನ್ ಗೋಲು ದಾಖಲಿಸಿದ್ದರು. ಈ ಮೂಲಕ ಹಿನ್ನಡೆಯನ್ನು 2-3ಕ್ಕೆ ಕುಗ್ಗಿಸಿದರು. ಬಳಿಕ 80ನೇ ನಿಮಿಷದಲ್ಲಿ ದೇಶೋರ್ನ್ ಬ್ರೌನ್ ಮೂರನೇ ಗೋಲನ್ನು ಬಾರಿಸಿ ಪಂದ್ಯವನ್ನು ಸಮಬಲಗೊಳಿಸಿದರು. ಈ ಮೂಲಕ ರೋಚಕವಾಗಿ ನಾರ್ಥ್‌ಈಸ್ಟ್ ಯುನೈಟೆಡ್ ತಂಡ ಮುಂಬೈ ಸಿಟಿ ಎಫ್‌ಸಿ ತಂಡಕ್ಕೆ ತಿರುಗೇಟು ನೀಡಿತ್ತು. ಬಳಿಕ ಎರಡು ತಂಡಗಳು ಕೂಡ ಗೋಲು ದಾಖಲಿಸುವಲ್ಲಿ ವಿಫಲವಾಯಿತು. ಈ ಮೂಲಕ ಪಂದ್ಯ 3-3 ಗೋಲುಗಳಿಂದ ಡ್ರಾಗೊಂಡಿದೆ.

ಇನ್ನು ಇಂದಿನ ಈ ಡ್ರಾ ಫಲಿತಾಂಶದಿಂದಾಗಿ ಅಂಕಪಟ್ಟಿಯಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ. 8 ಪಂದ್ಯಗಳಲ್ಲಿ ಐದು ಗೆಲುವು ಹಾಗೂ ಒಮದು ಡ್ರಾ ಹಾಗೂ ಎರಡು ಸೋಲು ಅನುಭವಿಸಿರುವ ಮುಂಬೈ ಸಿಟಿ ಅಗ್ರ ಸ್ಥಾನದಲ್ಲಿಯೇ ಮುಂದುವರಿದಿದೆ. ಇನ್ನು ನಾರ್ಥ್‌ಈಸ್ಟ್ ಯುನೈಟೆಡ್ ಎಫ್‌ಸಿ ತಂಡ 9 ಪಂದ್ಯಗಳಲ್ಲಿ ಎರಡು ಗೆಲುವು ಎರಡು ಡ್ರಾ ಹಾಗೂ ಐದು ಸೋಲು ಅನುಭವಿಸಿ 9ನೇ ಸ್ಥಾನದಲ್ಲಿ ಮುಂದುವರಿದಿದೆ.

ಮುಂಬೈ ಸಿಟಿ ಎಫ್‌ಸಿ ಪ್ಲೇಯಿಂಗ್ XI: ಮೊಹಮ್ಮದ್ ನವಾಜ್ (ಗೋಲ್‌ ಕೀಪರ್), ಅಮಿ ರಾನವಾಡೆ, ರಾಹುಲ್ ಭೇಕೆ, ಮೆಹ್ತಾಬ್ ಸಿಂಗ್, ಮಂದರ್ ದೇಸಾಯಿ (ನಾಯಕ), ಲಾಲೆಂಗ್ಮಾವಿಯಾ, ಅಹ್ಮದ್ ಜಹೌಹ್, ಕ್ಯಾಸಿಯೊ ಗೇಬ್ರಿಯಲ್, ಯೊಗೊರ್ ಕ್ಯಾಟಟೌ, ಬಿಪಿನ್ ಸಿಂಗ್ ಮತ್ತು ಇಗೊರ್ ಅಂಗುಲೊ

ನಾರ್ಥ್‌ಈಸ್ಟ್ ಯುನೈಟೆಡ್ ಎಫ್‌ಸಿ ಪ್ಲೇಯಿಂಗ್ XI: ಮಿರ್ಷಾದ್ ಮಿಚು (ಗೋಲ್‌ಕೀಪರ್), ಪ್ರೊವತ್ ಲಾಕ್ರಾ, ಪ್ಯಾಟ್ರಿಕ್ ಫ್ಲೋಟ್‌ಮನ್, ತೊಂಡೊನ್ಬಾ ಸಿಂಗ್, ಹೆರ್ನಾನ್ ಸಂತಾನಾ (ನಾಯಕ), ಇಮ್ರಾನ್ ಖಾನ್, ಸೆಹ್ನಾಜ್ ಸಿಂಗ್, ಪ್ರಗ್ಯಾನ್ ಗೊಗೊಯ್, ಸುಹೇರ್ ವಡಕ್ಕೆಪೀಡಿಕಾ, ದೇಶೋರ್ನ್ ಬ್ರೌನ್ ಮತ್ತು ಮಥಿಯಾಸ್ ಕೋರೆರ್

Story first published: Tuesday, December 28, 2021, 9:42 [IST]
Other articles published on Dec 28, 2021
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+