For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಒಡಿಶಾ ವಿರುದ್ಧ ಗೋಲಿನ ಮಳೆಗರೆದ ಹೈದರಾಬಾದ್ ಎಫ್‌ಸಿ

ISL 2021-22: match 43 OFC vs HFC, Hyderabad FC match won by 6-1 Highlights

ಇಂಡಿಯನ್ ಸೂಪರ್ ಲೀಗ್‌ನ 43ನೇ ಪಂದ್ಯದಲ್ಲಿ ಒಡಿಶಾ ಎಫ್‌ಸಿ ಹಾಗೂ ಹೈದರಾಬಾದ್ ಎಫ್‌ಸಿ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಹೈದರಾಬಾದ್ ಎಫ್‌ಸಿ ತಂಡ ಒಡಿಶಾ ಎಫ್‌ಸಿ ತಂಡದ ವಿರುದ್ಧ ಅಕ್ಷರಶಃ ಗೋಲಿನ ಮಳೆಗರೆದಿದೆ. ಬರೊಬ್ಬರಿ 6-1 ಅಂತರದಿಂದ ಹೈದರಾಬಾದ್ ಎಫ್‌ಸಿ ತಂಡ ಒಡಿಶಾ ತಂಡವನ್ನು ಮಣಿಸಿ ಮೇಲುಗೈ ಸಾಧಿಸಿದೆ.

ಈ ಪಂದ್ಯದಲ್ಲಿ ಹೈದರಾಬಾದ್ ಎಫ್‌ಸಿ ತಂಡ ಆರಂಭದಿಂದಲೇ ಮೇಲುಗೈ ಸಾಧಿಸುತ್ತಾ ಸಾಗಿತ್ತು. ಪಂದ್ಯದ 9ನೇ ನಿಮಿಷದಲ್ಲಿ ಹೈದರಾಬಾದ್ ತಂಡದ ಪರವಾಗಿ ಮೊದಲ ಗೋಲು ದಾಖಲಾಗಿತ್ತು. ಈ ಗೋಲನ್ನು ಒಡಿಶಾ ತಂಡದ ನಾಯಕ ಹೆಕ್ಟರ್ ರಾಮಿರೆಜ್ ಓನ್ ಗೋಲು ನೀಡುವ ಮೂಲಕ ಎದುರಾಳಿಯ ಖಾತೆ ತೆರೆಯಲು ಕಾರಣವಾದರು. ನಂತರ 16ನೇ ನಿಮಿಷದಲ್ಲಿ ಒಡಿಶಾ ತಂಡ ಕೂಡ ಮೊದಲ ಗೋಲು ದಾಖಲಿಸುವ ಮೂಲಕ ಪೈಪೋಟಿಯ ಪ್ರದರ್ಶನ ನೀಡುವ ಮುನ್ಸೂಚನೆ ನೀಡಿತು. ಕಾಕತಾಳೀಯವೆಂದರೆ ಈಗ ಹೈದರಾಬಾದ್ ತಂಡದ ಜುವಾನನ್ ಓನ್ ಗೋಲು ನೀಡುವ ಮೂಲಕ ಸಮಬಲಕ್ಕೆ ಕಾರಣವಾದರು.

ನಂತರ ಹೈದರಾನಾದ್ ಎಫ್‌ಸಿ ತಂಡ ಸಂಪೂರ್ಣ ಮೇಲುಗೈ ಸಾಧಿಸುತ್ತಲೇ ಸಾಗಿತ್ತು. ಮೊದಲಾರ್ಧದಲ್ಲಿ ಎರಡನೇ ಗೋಲು ಬಾರಿಸಿದ ಹೈದರಾಬಾದ್ ತಂಡ ದ್ವಿತಿಯಾರ್ಧದಲ್ಲಿ ನಾಲ್ಕು ಗೋಲು ಬಾರಿಸಿ ಅಬ್ಬರಿಸಿತು. ಬಾರ್ತಲೋಮಿವ್ ಓಗ್ಬೆಚೆ 39ನೇ ನಿಮಿಷದಲ್ಲಿ ಗೋಲು ಬಾರಿಸಿದರಿ. 54ನೇ ನಿಮಿಷದಲ್ಲಿ ಎಡು ಗಾರ್ಸಿಯಾ ಗೋಲು ಸಿಡಿಸಿದರೆ ನಂತರ 60ನೇ ನಿಮಿಷದಲ್ಲಿ ಬಾರ್ತಲೋಮಿವ್ ಓಗ್ಬೆಚೆ ಮತ್ತೊಂದು ಗೋಲು ದಾಖಲಿಸಿದರು. 72ನೇ ನಿಮಿಷದಲ್ಲಿ ಜ್ಯಾವಿ ಸಿವಾರಿಯೋ ಗೋಲು ಬಾರಿಸುವಲ್ಲಿ ಯಶಸ್ವಿಯಾದರು. ಅಂತಿಮವಾಗಿ 84ನೇ ನಿಮಿಷದಲ್ಲಿ ನಾಯಕ ಜೋವೊ ವಿಕ್ಟರ್ ತಂಡದ ಪರವಾಗಿ 6ನೇ ಗೋಲು ಸಿಡಿಸಿ ಭಾರೀ ಅಂತರದ ಗೆಲುವಿಗೆ ಕಾರಣವಾದರು. ಈ ಮೂಲಕ ಹೈದರಾಬಾದ್ ಎಫ್‌ಸಿ ತಂಡ 6-1 ಅಂತರದಿಂದ ಗೆಲುವು ಸಾಧಿಸಿತು.

ಇನ್ನು ಈ ಗೆಲುವಿನೊಂದಿಗೆ ಹೈದರಾನಾದ್ ಎಫ್‌ಸಿ ತಂಡ ಅಂಕಪಟ್ಟಿಯಲ್ಲಿ ಭಾರೀ ಮೇಲುಗೈ ಸಾಧಿಸಿದೆ. ನಾಲ್ಕನೇ ಸ್ಥಾನದಲ್ಲಿದ್ದ ಹೈದರಾಬಾದ್ ಎರಡನೇ ಸ್ಥಾನಕ್ಕೆ ಜಿಗಿದಿದೆ. ಆಡಿದ 8 ಪಂದ್ಯಗಳ ಪೈಕಿ ಹೈದರಾಬಾದ್ ತಂಡ ನಾಲ್ಕು ಗೆಲುವು ಸಾಧಿಸಿದ್ದು ಮೂರು ಡ್ರಾ ಹಾಗೂ ಒಂದು ಪಂದ್ಯದಲ್ಲಿ ಸೋಲು ಅನುಭವಿಸಿದೆ. ಇನ್ನು ಒಡಿಶಾ ಎಫ್‌ಸಿ ತಂಡ ಓ ಸೋಲಿನ ಹೊರತಾಗಿಯೂ 7ನೇ ಸ್ಥಾನದಲ್ಲಿಯೇ ಮುಂದುವರಿದಿದೆ. ಒಡಿಶಾ ಎಫ್‌ಸಿ ಆಡಿದ 8 ಪಂದ್ಯಗಳ ಪೈಕಿ ಮೂರು ಗೆಲುವು ಸಾಧಿಸಿದ್ದು ಒಂದು ಡ್ರಾ ಹಾಗೂ ನಾಲ್ಕು ಸೋಲು ಕಂಡಿದೆ.

ಇನ್ನು ಅಂಕಪಟ್ಟಿಯಲ್ಲಿ ಮುಂಬೈ ಸಿಟಿ ಎಫ್‌ಸಿ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದರೆ ಹೈದರಾಬಾದ್ ಎರಡನೇ ಸ್ಥಾನ, ಜೆಮ್ಶೆಡ್ಪುರ ಎಫ್‌ಸಿ ಹಾಗೂ ಕೇರಳ ಬ್ಲಾಸ್ಟರ್ಸ್ ತಂಡ ನಾಲ್ಕನೇ ಸ್ಥಾನದಲ್ಲಿದೆ. ಬೆಂಗ್ಳುರು ಎಫ್‌ಸಿ ತಂಡ ಹೀನಾಯ ಪ್ರದರ್ಶನದೊಂದಿಗೆ 10ನೇ ಸ್ಥಾನದಲ್ಲಿ ಮುಂದುವರಿದಿದೆ.

ಒಡಿಶಾ ಎಫ್‌ಸಿ ಪ್ಲೇಯಿಂಗ್ ‍XI: ಕಮಲ್ಜಿತ್ ಸಿಂಗ್ (ಗೋಲ್‌ ಕೀಪರ್), ಲಾಲ್ಹ್ರೆಜುವಾಲಾ ಸೈಲುಂಗ್, ಗೌರವ್ ಬೋರಾ, ಹೆಕ್ಟರ್ ರಾಮಿರೆಜ್ (ನಾಯಕ), ಸಾಹಿಲ್ ಪನ್ವಾರ್, ಲಿರಿಡಾನ್ ಕ್ರಾಸ್ನಿಕಿ, ಐಸಾಕ್ ಚಕ್ಚುವಾಕ್, ತೊಯ್ಬಾ ಸಿಂಗ್, ಜೇವಿಯರ್ ಹೆರ್ನಾಂಡೆಜ್, ನಂದಕುಮಾರ್ ಸೇಕರ್, ಜೊನಾಥಸ್ ಕ್ರಿಸ್ಟಿಯನ್.

ಹೈದರಾಬಾದ್ ಎಫ್‌ಸಿ ಪ್ಲೇಯಿಂಗ್ XI: ಲಕ್ಷ್ಮೀಕಾಂತ್ ಕಟ್ಟಿಮನಿ (ಗೋಲ್‌ ಕೀಪರ್), ನಿಮ್ ದೋರ್ಜಿ, ಚಿಂಗ್ಲೆನ್ಸನಾ ಸಿಂಗ್, ಜುವಾನನ್, ಆಕಾಶ್ ಮಿಶ್ರಾ, ಹಿತೇಶ್ ಶರ್ಮಾ, ಜೋವೊ ವಿಕ್ಟರ್ (ನಾಯಕ), ನಿಖಿಲ್ ಪೂಜಾರಿ, ಎಡು ಗಾರ್ಸಿಯಾ, ಅನಿಕೇತ್ ಜಾಧವ್, ಬಾರ್ತಲೋಮಿವ್ ಓಗ್ಬೆಚೆ.

Story first published: Tuesday, December 28, 2021, 23:48 [IST]
Other articles published on Dec 28, 2021
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+