
ಇಂಡಿಯನ್ ಸೂಪರ್ ಲೀಗ್‌ನ 44ನೇ ಪಂದ್ಯದಲ್ಲಿ ಎಫ್‌ಸಿ ಗೋವಾ ಹಾಗೂ ಎಟಿಕೆ ಮೋಹನ್ ಬಾಗನ್ ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಎಫ್‌ಸಿ ಗೋವಾ ಎಟಿಕೆ ಮೋಗನ್ ಬಾಗನ್ ವಿರುದ್ಧ 1-2 ಅಂತರದಿಂದ ಸೋಲು ಕಂಡಿದೆ. ಈ ಗೆಲುವಿನೊಂದಿಗೆ ಎಟಿಕೆ ಮೋಹನ್ ಬಾಗನ್ ತಂಡ ಅಂಕ ಪಟ್ಟಿಯಲ್ಲಿ ಅದ್ಭುತ ಯಶಸ್ಸು ಸಾಧಿಸಿದ್ದು ಮೂರನೇ ಸ್ಥಾನವನ್ನು ಸಂಪಾದಿಸಿದೆ.
ಆರಂಭದಿಂದಲೇ ಮೇಲುಗೈ ಸಾಧಿಸಿದ ಎಟಿಕೆ ಮೋಹನ್ ಬಾಗನ್ ತಂಡ ಪಂದ್ಯದ 23ನೇ ನಿಮಿಷದಲ್ಲಿ ಮೊದಲ ಗೋಲು ದಾಖಲಿಸುವಲ್ಲಿ ಯಶಸ್ವಿಯಾಗಿತ್ತು. ಲಿಸ್ಟನ್ ಕೊಲಾಕೊ ಈ ಗೋಲು ದಾಖಲಿಸಿ ತಂಡಕ್ಕೆ ಮೇಲುಗೈ ಒದಗಿಸಿದ್ದರು. ಹೀಗಾಗಿ ಮೊದಲಾರ್ಧದ ಮುಕ್ತಾಯದ ವೇಳೆ ಎಟಿಕೆ ಮೋಗನ್ ಬಾಗನ್ 1-0 ಅಂತರದಿಂದ ಮುನ್ನಡೆ ಸಾಧಿಸಿತ್ತು.
ನಂತರ ದ್ವಿತಿಯಾರ್ಧದಲ್ಲಿಯೂ ಮೋಹನ್ ಬಾಗನ್ ತಂಡ ಗೋಲು ದಾಖಲಿಸುವಲ್ಲಿ ಯಶಸ್ವಿಯಾಗಿತ್ತು. ಪಂದ್ಯದ 56ನೇ ನಿಮಿಷದಲ್ಲಿ ಮೋಹನ್ ಬಾಗನ್ ಪರವಾಗಿ ರಾಯ್ ಕೃಷ್ಣ ಗೋಲು ದಾಖಲಿಸಿದ್ದರು. ಈ ಮೂಲಕ ಮುನ್ನಡೆಯನ್ನು ಹೆಚ್ಚಿಸಿಕೊಂಡಿತ್ತು ಮೋಹನ್ ಬಾಗನ್. ಬಳಿಕ ಅಂತಿಮ ಹಂತದಲ್ಲಿ ಪಂದ್ಯದ 81ನೇ ನಿಮಿಷದಲ್ಲಿ ಎಫ್‌ಸಿ ಗೋವಾ ತಂಡ ಕೂಡ ಮೊದಲ ಗೋಲು ದಾಖಲಿಸಿ ಹಿನ್ನಡೆಯನ್ನು ತಗ್ಗಿಸಿತು. ಸಮಬಲಗೊಳಿಸುವ ಪ್ರಯತ್ನವನ್ನು ನಡೆಸಿತಾದರೂ ಅದರಲ್ಲಿ ಗೋವಾ ಎಫ್‌ಸಿ ತಂಡಕ್ಕೆ ಯಶಸ್ಸು ದೊರೆಯಲಿಲ್ಲ. ಅಂತಿಮವಾಗಿ ಪಂದ್ಯವನ್ನು ಎಟಿಕೆ ಮೋಹನ್ ಬಾಗನ್ 2-1 ಅಂತರದಿಂದ ಗೆದ್ದುಕೊಂಡಿದೆ.
ಎಫ್‌ಸಿ ಗೋವಾ ಪ್ಲೇಯಿಂಗ್ XI: ಧೀರಜ್ ಮೊಯಿರಾಂಗ್ಥೆಮ್ (ಗೋಲ್ ಕೀಪರ್), ಡೈಲನ್ ಫಾಕ್ಸ್, ಸೆರಿಟನ್ ಫೆರ್ನಾಂಡಿಸ್, ಸೇವಿಯರ್ ಗಾಮಾ, ಇವಾನ್ ಗೊನ್ಜಾಲೆಜ್ (ನಾಯಕ), ಐಬನ್ ಡೊಹ್ಲಿಂಗ್, ಆಲ್ಬರ್ಟೊ ನೊಗುರಾ, ಪ್ರಿನ್ಸ್‌ಟನ್ ರೆಬೆಲ್ಲೊ, ಮುಹಮ್ಮದ್ ನೆಮಿಲ್, ಜಾರ್ಜ್ ಒರ್ಟಿಜ್, ದೇವೇಂದ್ರ ಮುರ್ಗಾಂವ್ಕರ್.
ಎಟಿಕೆ ಮೋಹನ್ ಬಾಗನ್ ಪ್ಲೇಯಿಂಗ್ XI: ಅಮರಿಂದರ್ ಸಿಂಗ್ (ಗೋಲ್ ಕೀಪರ್), ತಿರಿ, ಅಶುತೋಷ್ ಮೆಹ್ತಾ, ಸುಭಾಸಿಶ್ ಬೋಸ್, ಪ್ರೀತಮ್ ಕೋಟಾಲ್ (ನಾಯಕ), ಕಾರ್ಲ್ ಮೆಕ್‌ಹಗ್, ದೀಪಕ್ ತಂಗ್ರಿ, ಹ್ಯೂಗೋ ಬೌಮಸ್, ಮನ್ವಿರ್ ಸಿಂಗ್, ಲಿಸ್ಟನ್ ಕೊಲಾಕೊ, ರಾಯ್ ಕೃಷ್ಣ.