For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಕಡೆಗೂ ಗೆಲುವು ಸಾಧಿಸಿದ ಬಿಎಫ್‌ಸಿ: ಚೆನ್ನೈಯಿನ್ ವಿರುದ್ಧ ಭರ್ಜರಿ ಗೆಲುವು

ISL 2021-22: match 45 BFC vs CFC, Bengaluru FC match won by by 4-2 Highlights

ಇಂಡಿಯನ್ ಸೂಪರ್ ಲೀಗ್‌ನ 45ನೇ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ಹಾಗೂ ಚೆನ್ನೈಯಿನ್ ಎಫ್‌ಸಿ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಸತತ 7 ಪಂದ್ಯಗಳಲ್ಲಿ ಬಿಎಫ್‌ಸಿ ಪಾಲಿಗೆ ಮರೀಚಿಕೆಯಾಗಿದ್ದ ವಿಜಯ ಮಾಲೆಯನ್ನು ಧರಿಸಿಕೊಂಡಿದೆ. ಟೂರ್ನಿಯಲ್ಲಿ ಆರಂಭಿಕ ಪಂದ್ಯದಲ್ಲಿ ಗೆಲುವು ಸಾಧಿಸಿದ ನಂತರ ಒಂದೇ ಒಂದು ಪಂದ್ಯದಲ್ಲಿ ಬೆಂಗೂರು ಎಫ್‌ಸಿ ತಂಡ ಗೆಲುವು ಸಾಧಿಸಲು ಸಾಧ್ಯವಾಗಿರಲಿಲ್ಲ. ಇಂದು ಚೆನ್ನೈಯಿನ್ ಎಫ್‌ಸಿ ವಿರುದ್ಧ ಭರ್ಜರಿ 4-2 ಅಂತರದಿಂದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಈ ಪಂದ್ಯದಲ್ಲಿ ಆರಂಭದಲ್ಲಿ ಚೆನ್ನೈಯಿನ್ ತಂಡ ಪಂದ್ಯದ ಮೇಲೆ ಹಿಡಿತವನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದು ಪಂದ್ಯ ಆರಂಬವಾದ ನಾಲ್ಕೇ ನಿಮಿಷದಲ್ಲಿ ಸಿಎಫ್‌ಸಿ ತಂಡ ಮೊದಲ ಗೋಲು ದಾಖಲಿಸುವಲ್ಲಿ ಯಶಸ್ವಿಯಾಗಿತ್ತು. ಮಿರ್ಲಾನ್ ಮುರ್ಜೇವ್ ಈ ಗೋಲು ಗಳಿಸಿ ತಂಡಕ್ಕೆ ಮೇಲುಗೈ ಒದಗಿಸಿದ್ದರು. ಈ ಮುನ್ನಡೆಯನ್ನು ಪಂದ್ಯದ 39ನೇ ನಿಮಿಷದ ವರೆಗೆ ಕಾಯ್ದುಕೊಂಡು ಬಂದಿತ್ತು.

ಆದರೆ 39ನೇ ನಿಮಿಷದಲ್ಲಿ ಬಿಎಫ್‌ಸಿ ತಂಡದ ಕ್ಲಿಟನ್ ಸಿಲ್ವಾ ಗೋಲು ದಾಖಲಿಸುವ ಮೂಲಕ ಅಂತರವನ್ನು ಸಮಬಲಗೊಳಿಸುವಲ್ಲಿ ಯಶಸ್ವಿಯಾದರು. ಅದಾದ ನಾಲ್ಕೇ ನಿಮಿಷದಲ್ಲಿ ಬಿಎಫ್‌ಸಿ ತಂಡ ಎರಡನೇ ಗೋಲು ದಾಖಲಿಸಿ ಮೊದಲ ಬಾರಿಗೆ ಪಂದ್ಯದಲ್ಲಿ ಮುನ್ನಡೆಯನ್ನು ಸಾಧಿಸಿತ್ತು. ಅಲನ್ ಕೋಸ್ಟಾ ಈ ಗೋಲು ದಾಖಲಿಸಿ ತಂಡದ ಮುನ್ನಡೆಯನ್ನು 2-1ಕ್ಕೆ ಏರಿಸಿದರು. ಮೊದಲಾರ್ಧದಲ್ಲಿ ಈ ಮುನ್ನಡೆಯನ್ನು ಕಾಯ್ದುಕೊಳ್ಳುವಲ್ಲಿ ತಂಡ ಯಶಸ್ವಿಯಾಯಿತು.

ಆದರೆ 39ನೇ ನಿಮಿಷದಲ್ಲಿ ಬಿಎಫ್‌ಸಿ ತಂಡದ ಕ್ಲಿಟನ್ ಸಿಲ್ವಾ ಗೋಲು ದಾಖಲಿಸುವ ಮೂಲಕ ಅಂತರವನ್ನು ಸಮಬಲಗೊಳಿಸುವಲ್ಲಿ ಯಶಸ್ವಿಯಾದರು. ಅದಾದ ನಾಲ್ಕೇ ನಿಮಿಷದಲ್ಲಿ ಬಿಎಫ್‌ಸಿ ತಂಡ ಎರಡನೇ ಗೋಲು ದಾಖಲಿಸಿ ಮೊದಲ ಬಾರಿಗೆ ಪಂದ್ಯದಲ್ಲಿ ಮುನ್ನಡೆಯನ್ನು ಸಾಧಿಸಿತ್ತು. ಅಲನ್ ಕೋಸ್ಟಾ ಈ ಗೋಲು ದಾಖಲಿಸಿ ತಂಡದ ಮುನ್ನಡೆಯನ್ನು 2-1ಕ್ಕೆ ಏರಿಸಿದರು. ಮೊದಲಾರ್ಧದಲ್ಲಿ ಈ ಮುನ್ನಡೆಯನ್ನು ಕಾಯ್ದುಕೊಳ್ಳುವಲ್ಲಿ ತಂಡ ಯಶಸ್ವಿಯಾಯಿತು.

ದ್ವಿತಿಯಾರ್ಧದ ಆರಂಭವಾದ ನಾಲ್ಕೇ ನಿಮಿಷದಲ್ಲಿ ಚೆನ್ನೈಯಿನ್ ತಂಡ ಎರಡನೇ ಗೋಲು ದಾಖಲಿಸುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಮತ್ತೊಮ್ಮೆ ಸಮಬಲವನ್ನು ಕಂಡಿತ್ತು. ಬಳಿಕ ಪಂದ್ತ ಅಂತಿಮ ಘಟ್ಟವನ್ನು ತಲುಪುತ್ತಿದ್ದಂತೆಯೇ ಬಿಎಫ್‌ಸಿ ಆಟಗಾರರು ಮತ್ತಷ್ಟು ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಿದರು. 70ನೇ ನಿಮಿಷದಲ್ಲಿ ಮೂರನೇ ಗೋಲು ಬಿಫ್‌ಸಿ ಪರ ದಾಖಲಾಗಿತ್ತು. ಅದಾದ ಬಳಿಕ ನಾಲ್ಕೇ ನಿಮಿಷ ಅಂತರದಲ್ಲಿ ಬಿಎಫ್‌ಸಿ ಪರವಾಗಿ ಮತ್ತೊಂದು ಗೋಲು ದಾಖಲಾಗಿತ್ತು. ಈ ಮೂಲಕ ಪಂದ್ಯದಲ್ಲಿ ಬಿಎಫ್‌ಸಿ ಭರ್ಜರಿ ನಾಲ್ಕು ಗೋಲು ದಾಖಲಿಸಿತ್ತು, ನಂತರ ಚೆನ್ನೈಯಿನ್ ತಂಡಕ್ಕೆ ಯಾಔ ಅವಕಾಶವನ್ನೂ ನೀಡದ ಬಿಫ್‌ಸಿ ಪಂದ್ಯವನ್ನು ಭರ್ಜರಿಯಾಗಿ ಗೆದ್ದು ಕೊಂಡಿದೆ.

ಬೆಂಗಳೂರು ಎಪ್‌ಸಿ: ಗುರುಪ್ರೀತ್ ಸಂಧು (ಗೋಲ್‌ ಕೀಪರ್/ ನಾಯಕ), ಅಲನ್ ಕೋಸ್ಟಾ, ಬ್ರೂನೋ ಸಿಲ್ವಾ, ಜಯೇಶ್ ರಾಣೆ, ಸುರೇಶ್ ವಾಂಗ್ಜಮ್, ಪ್ರಿನ್ಸ್ ಇಬಾರಾ, ಅಜಿತ್ ಕಾಮರಾಜ್, ಆಶಿಕ್ ಕುರುನಿಯನ್, ಕ್ಲಿಟನ್ ಸಿಲ್ವಾ, ಪರಾಗ್ ಶ್ರೀವಾಸ್, ರೋಷನ್ ನೌರೆಮ್.

ಚೆನ್ನೈಯಿನ್ ಎಫ್‌ಸಿ: ವಿಶಾಲ್ ಕೈತ್ (ಗೋಲ್‌ ಕೀಪರ್), ರೇಗನ್ ಸಿಂಗ್, ರಹೀಮ್ ಅಲಿ, ಅನಿರುದ್ಧ್ ಥಾಪಾ (ನಾಯಕ), ಏರಿಯಲ್ ಬೊರಿಸಿಯುಕ್, ಮಿರ್ಲಾನ್ ಮುರ್ಜೇವ್, ಜೆರ್ರಿ ಲಾಲ್ರಿಂಜುವಲಾ, ನಾರಾಯಣ್ ದಾಸ್, ಸ್ಲಾವ್ಕೊ ದಮ್ಜಾನೋವಿಕ್, ಜರ್ಮನ್‌ಪ್ರೀತ್ ಸಿಂಗ್, ವ್ಲಾಡಿಮಿರ್ ಕೋಮನ್.

Story first published: Thursday, December 30, 2021, 22:41 [IST]
Other articles published on Dec 30, 2021
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+