ಐಎಸ್‌ಎಲ್: ಕೇರಳ ಬ್ಲಾಸ್ಟರ್ಸ್ ಎಫ್‌ಸಿ vs ಎಫ್‌ಸಿ ಗೋವಾ ನಡುವಿನ ಪಂದ್ಯ ಡ್ರಾದಲ್ಲಿ ಅಂತ್ಯ

ಇಂಡಿಯನ್ ಸೂಪರ್ ಲೀಗ್‌ನಲ್ಲಿ ಇಂದು ಟೂರ್ನಿಯ 46ನೇ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ಎಫ್‌ಸಿ ಹಾಗೂ ಎಫ್‌ಸಿ ಗೋವಾ ತಂಡಗಳು ಮುಖಾಮುಖಿಯಾಗಿದೆ. ಮೂರು ದಿನಗಳ ವಿರಾಮದ ಬಳಿಕ ಮತ್ತೆ ಪಂದ್ಯಗಳು ಮುಂದುವರಿದಿದ್ದು ಮೊದಲ ಪಂದ್ಯ ರೋಚಕ ಡ್ರಾದೊಂದಿಗೆ ಅಂತ್ಯವಾಗಿದೆ. ಈ ಪಂದ್ಯದಲ್ಲಿ ಕೇರಳ ಬ್ಲಾರ್ಸ್ ಹಾಗೂ ಎಫ್‌ಸಿ ಗೋವಾ ತಂಡಗಳು ತಲಾ 2 ಗೋಲು ದಾಖಲಿಸುವ ಮೂಲಕ ಪಂದ್ಯ ಡ್ರಾದೊಂದಿಗೆ ಅಂತ್ಯವಾಗಿದೆ.
ಪಂದ್ಯದ ಮೊದಲಾರ್ಧದಲ್ಲಿಯೇ ಎರಡು ತಂಡಗಳು ಕೂಡ ಭಾರೀ ಜಿದ್ದಾಜಿದ್ದಿನ ಪೈಪೋಟಿಗೆ ಇಳಿಯಿತು. ಪಂದ್ಯ ಆರಂಭವಾದ 10ನೇ ನಿಮಿಷದಲ್ಲಿ ಕೇರಳ ಬ್ಲಾಸ್ಟರ್ಸ್ ತಂಡ ಮೊದಲ ಗೋಲು ದಾಖಲಿಸುವಲ್ಲಿ ಯಶಸ್ವಿಯಾಗಿತ್ತು. ಜೀಕ್ಸನ್ ಸಿಂಗ್ ಕೆಎಬಿಎಫ್‌ಸಿ ಪರವಾಗಿ ಈ ಗೋಲು ಸಿಡಿಸಿ ಮಿಂಚಿದರು. ಅದಾಗಿ ಭರ್ತಿ ಹತ್ತು ನಿಮಿಷದಲ್ಲಿ ಕೇರಳ ಬ್ಲಾಸ್ಟರ್ಸ್ ತಂಡ ಎರಡನೇ ಗೋಲು ದಾಖಲಿಸುವಲ್ಲಿ ಯಶಸ್ವಿಯಾಗಿತ್ತು. ಆಡ್ರಿಯನ್ ಲೂನಾ ಕೇರಳ ಬ್ಲಾಸ್ಟರ್ಸ್ ಪರವಾಗಿ ಮತ್ತೊಂದು ಗೋಲು ಸಿಡಿಸಿದರು. ಈ ಮೂಲಕ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ತಂಡ 2-0 ಅಂತರದ ಮುನ್ನಡೆ ಸಾಧಿಸಿ ಪಂದ್ಯದಲ;್ಲಿ ಹಿಡಿತ ಸಾಧಿಸಿತು.
ಆದರೆ ಈ ಹಂತದಲ್ಲಿ ಕೇರಳ ಬ್ಕಾಸ್ಟರ್ಸ್ ತಂಡದ ಆಟಗಾರರು ಕೂಡ ತೀವ್ರ ಪೈಪೋಟಿಯ ಹೋರಾಟವನ್ನು ನಡೆಸಿದರು. ಪಂದ್ಯದ 24ನೇ ನಿಮಿಷದಲ್ಲಿ ಗೋವಾ ಎಫ್‌ಸಿ ಪರವಾಗಿ ಮೊದಲ ಗೋಲು ದಾಖಲಾಗಿತ್ತು. ಜಾರ್ಜ್ ಒರ್ಟಿಜ್ ಈ ಗೋಲು ಸಿಡಿಸುವ ಮೂಲಕ 1-2ಕ್ಕೆ ಹಿನ್ನಡೆಯನ್ನು ಇಳಿಸುವಲ್ಲಿ ಯಶಸ್ವಿಯಾಗಿದ್ದರು. ಅದಾದ ಬಳಿಕ ಎಫ್‌ಸಿ ಗೋವಾ ಪರವಾಗಿ ಮತ್ತೊಂದು ಗೋಲು ದಾಖಲಾಯಿತು. ಈ ಬಾರಿ ತಂಡದ ನಾಯಕ ಎಡು ಬೆಡಿಯಾ ಗೋಲು ಸಿಡಿಸಿದ್ದರು. ಈ ಮೂಲಕ ಪಂದ್ಯವನ್ನು ಸಮಬಲಗೊಳಿಸುವಲ್ಲಿ ಯಶಸ್ವಿಯಾದರು.
ಅದಾದ ಬಳಿಕ ದ್ವಿತಿಯಾರ್ಧದಲ್ಲಿ ಎರಡು ತಂಡಗಳು ಕೂಡ ಸಾಕಷ್ಟು ಪೈಪೋಟಿಯ ಪ್ರದರ್ಶನ ನೀಡಿದವು. ಆದರೆ ಎರಡು ತಂಡಗಳು ಕೂಡ ಮತ್ತೊಂದು ಗೋಲು ದಾಖಲಿಸಲು ಸಾಧ್ಯವಾಗಲ್ಲ. ಹೆಚ್ಚುವರಿ ಅವಧಿ ಕೂಡ ಗೋಲಿಲ್ಲದೆ ಅಂತ್ಯವಾಯಿತು. ಹೀಗಾಗಿ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಗಿದೆ
ಎಫ್‌ಸಿ ಗೋವಾ: ಧೀರಜ್ ಮೊಯಿರಾಂಗ್ಥೆಮ್ (ಗೋಲ್ ಕೀಪರ್), ಜಾರ್ಜ್ ಒರ್ಟಿಜ್, ಡೈಲನ್ ಫಾಕ್ಸ್, ಸೆರಿಟನ್ ಫೆರ್ನಾಂಡಿಸ್, ಸೇವಿಯರ್ ಗಾಮಾ, ಎಡು ಬೆಡಿಯಾ (ನಾಯಕ), ಇವಾನ್ ಗೊನ್ಜಾಲೆಜ್, ಗ್ಲಾನ್ ಮಾರ್ಟಿನ್ಸ್, ಐಬನ್ ಡೊಹ್ಲಿಂಗ್, ದೇವೇಂದ್ರ ಮುರ್ಗಾಂವ್ಕರ್ ಮತ್ತು ಮುಹಮ್ಮದ್ ನೆಮಿಲ್.
ಕೇರಳ ಬ್ಲಾಸ್ಟರ್ಸ್: ಪ್ರಭುಸುಖಾನ್ ಗಿಲ್ (ಗೋಲ್ ಕೀಪರ್), ಲಾಲ್ತತಂಗ ಖೌಲ್ಹ್ರಿಂಗ್, ಹರ್ಮನ್ಜೋತ್ ಖಬ್ರಾ, ಜೆಸೆಲ್ ಕಾರ್ನೆರೊ (ನಾಯಕ), ಸಹಲ್ ಸಮದ್, ಆಡ್ರಿಯನ್ ಲೂನಾ, ಜೀಕ್ಸನ್ ಸಿಂಗ್, ಜಾರ್ಜ್ ಡಯಾಜ್, ಬಿಜೋಯ್ ವಿ, ಮಾರ್ಕೊ ಲೆಸ್ಕೋವಿಕ್ ಮತ್ತು ಅಲ್ವಾರೊ ವಾಜ್ಕ್ವೆಜ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications