For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಮುಂಬೈ ಸಿಟಿ ಎಫ್‌ಸಿ್ಗೆ ಶಾಕ್; 4-2 ಅಂತರದಿಂದ ಮಣಿಸಿದ ಒಡಿಶಾ ಎಫ್‌ಸಿ

ISL 2021-22: match 48 MCFC vs OFC, Odisha FC match won by 4-2 Highlights

ಇಂಡಿಯನ್ ಸೂಪರ್ ಲೀಗ್‌ನ 48ನೇ ಪಂದ್ಯದಲ್ಲಿ ಅಗ್ರ ಶ್ರೇಯಾಂಕಿತ ಮುಂಬೈ ಸಿಟಿ ಎಫ್‌ಸಿ ಹಾಗೂ ಒಡಿಶಾ ಎಫ್‌ಸಿ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಬಲಿಷ್ಠ ಮುಂಬೈ ಸಿಟಿ ತಂಡಕ್ಕೆ ಒಡಿಶಾ ಭಾರೀ ಆಘಾತವನ್ನು ನೀಡಿದೆ. 4-2 ಅಂತರದಿಂದ ಒಡಿಶಾ ಎಫ್‌ಸಿ ಈ ಪಂದ್ಯವನ್ನು ಗೆದ್ದುಕೊಳ್ಳುವ ಮೂಲಕ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ.

ಈ ಪಂದ್ಯದ ಆರಂಭದಲ್ಲಿಯೇ ಒಡಿಶಾ ಎಫ್‌ಸಿ ತಂಡ ಗೋಲು ಗಳಿಸುವ ಮೂಲಕ ಮೇಲಯಗೈ ಸಾಧಿಸಿತಾದರೂ ನಂತರದ ಎರಡು ಗೋಲು ಸಿಡುವ ಮೂಲಕ ಮುಂಬೈ ಸಿಟಿ ಎಫ್‌ಸಿ ತಂಡ ಮೇಲುಗೈ ಸಾಧಿಸಿತ್ತು. ಆದರೆ ಅಂತಿಮ ಘಟ್ಟದಲ್ಲಿ ಒಡಿಶಾ ಎಫ್‌ಸಿ ತಂಡದ ಆಟಗಾರರ ಪ್ರದರ್ಶನ ಅಮೋಘವಾಗಿತ್ತು. ಅದ್ಭುತವಾದ ರೀತಿಯಲ್ಲಿ ತಿರುಗಿಬಿದ್ದ ಒಡಿಶಾ ಎಫ್‌ಸಿ ತಂಡ ಕೊನೇಯ ಹಂತದಲ್ಲಿ ಮೂರು ಗೋಲು ಸಿಡಿಸಿ ಮಿಂಚುಹರಿಸಿತ್ತು.

ಪಂದ್ಯದ ನಾಲ್ಕನೇ ನಿಮಿಷದಲ್ಲಿಯೇ ಒಡಿಶಾ ತಂಡದ ಪರವಾಗಿ ಅರಿಡೈ ಸೌರೆಜ್ ಮೊದಲ ಗೋಲು ಸಿಡಿಸಿ ಮುನ್ನಡೆಗೆ ಕಾರಣವಾಗಿದ್ದರು. ಅದಾದ ಬಳಿಕ ಮುಂಬೈ ಸಿಟಿ ತಂಡದ ಪರವಾಗಿ 11ನೇ ನಿಮಿಷದಲ್ಲೊ ಗೋಲು ಸಿಡಿದಿತ್ತು. ಈ ಮೂಲಕ ಎರಡು ತಂಡಗಳು ಸಮಬಲ ಸಾಧಿಸಿದ್ದವು. ಪಂದ್ಯದ 38ನೇ ನಿಮಿಷದಲ್ಲಿ ಮುಂಬೈ ಸಿಟಿ ಎಫ್‌ಸಿ ತಂಡ 2ನೇ ಗೋಲು ಸಿಡಿಸಿತ್ತು. ಹೋಗಾಗಿ ಮೊದಲಾರ್ಧ ಅಂತ್ಯವಾಗುವ ವೇಳೆಗೆ ಮುಂಬೈ ಸಿಟಿ ಎಫ್‌ಸಿ ತಂಡ 2-1 ಅಂತರದಿಂದ ಮುನ್ನಡೆ ಸಾಧಿಸಿತ್ತು.

ಇನ್ನು ಎರಡನೇ ಇನ್ನಿಂಗ್ಸ್‌ನಲ್ಲಿ ಆರಂಭದಲ್ಲಿ ಎರಡು ತಂಡಗಳು ಕೂಡ ಸಾಕಷ್ಟು ಪೈಪೋಟಿಯ ಪ್ರದರ್ಶನ ನೀಡಿದವಾದರೂ ಎರಡು ತಂಡದ ಪರವಾಗಿಯೂ ಗೋಲು ದಾಖಲಾಗಲಿಲ್ಲ. ಪಂದ್ಯದ 70 ನೇ ನಿಮಿಷದಲ್ಲಿ ಒಡಿಶಾ ಪರವಾಗಿ ಎರಡನೇ ಗೋಲು ದಾಖಲಾಗಿತ್ತು. ಈ ಮೂಲಕ ಒಡಿಶಾ ತಂಡ ಪಂದ್ಯವನ್ನು ಸಮಬಲ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ನಂತರ 77ನೇ ನಿಮಿಷದಲ್ಲಿ ಒಡಿಶಾ ತಂಡ ಮೂರನೇ ಗೋಲು ದಾಖಲಿಸಿ ಮುನ್ನಡೆಯನ್ನು ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ನಂತರ ಪಂದ್ಯದ ಅಂತಿಮ ನಿಮಿಷದಲ್ಲಿ ಒಡಿಶಾ ನಾಲ್ಕನೇ ಗೋಲು ದಾಖಲಿಸುವ ಮೂಲಕ ಮುಂಬೈ ತಂಡಕ್ಕೆ ಅಕ್ಷರಶಃ ಆಘಾತ ನೀಡಿತು. ಈ ಮೂಲಕ ಒಡಿಶಾ ಎಫ್‌ಸಿ ತಂಡ ಪಂದ್ಯದಲ್ಲಿ 4-2 ಅಂತರದ ರೋಚಕ ಗೆಲುವು ಸಾಧಿಸಿದೆ.

ಮುಂಬೈ ಸಿಟಿ ಎಫ್‌ಸಿ: ಮೊಹಮ್ಮದ್ ನವಾಜ್ (ಗೋಲ್‌ ಕೀಪರ್), ರಾಹುಲ್ ಭೇಕೆ, ಅಮಿ ರಾನವಾಡೆ, ವಿಘ್ನೇಶ್ ದಕ್ಷಿಣಮೂರ್ತಿ, ಮೌರ್ತಡಾ ಫಾಲ್ (ನಾಯಕ), ಕ್ಯಾಸಿಯೊ ಗೇಬ್ರಿಯಲ್, ಅಹ್ಮದ್ ಜಹೌ, ರೇನಿಯರ್ ಫೆರ್ನಾಂಡಿಸ್, ಲಾಲೆಂಗ್ಮಾವಿಯಾ, ಇಗೊರ್ ಅಂಗುಲೊ, ಬಿಪಿನ್ ಸಿಂಗ್.

ಒಡಿಶಾ ಎಫ್‌ಸಿ: ಕಮಲಜಿತ್ ಸಿಂಗ್ (ಗೋಲ್‌ ಕೀಪರ್), ವಿಕ್ಟರ್ ಮೊಂಗಿಲ್ (ನಾಯಕ), ಹೆಕ್ಟರ್ ರಾಮಿರೆಜ್, ಹೆಂಡ್ರಿ ಆಂಟೊನಾಯ್, ಸಾಹಿಲ್ ಪನ್ವಾರ್, ಜೇವಿಯರ್ ಹೆರ್ನಾಂಡೆಜ್, ತೊಯ್ಬಾ ಸಿಂಗ್, ಐಸಾಕ್ ಚಕ್ಚುವಾಕ್, ಅರಿದೈ ಸೌರೆಜ್, ನಂದಕುಮಾರ್ ಸೇಕರ್, ಜೆರ್ರಿ ಮಾವಿಹ್ಮಿಂಗ್ತಂಗ

Story first published: Monday, January 3, 2022, 22:30 [IST]
Other articles published on Jan 3, 2022
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+