For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2021: ಹೈದರಾಬಾದ್ ವಿರುದ್ಧ ಗೆದ್ದ ಚೆನ್ನೈಯಿನ್ ಎಫ್‌ಸಿ

ISL 2021-22: match 5 CFC vs HFC, Chennaiyin FC won the match by 1-0

ಈ ಬಾರಿಯ ಇಂಡಿಯನ್ ಸೂಪರ್ ಲೀಗ್‌ನ ಐದನೇ ಪಂದ್ಯದಲ್ಲಿ ಚೆನ್ನೈಯಿನ್ ಎಫ್‌ಸಿ ಹಾಗೂ ಹೈದರಾಬಾದ್ ಎಫ್‌ಸಿ ತಂಡಗಳು ಮುಖಾಮುಖಿಯಾಗಿದೆ. ಇದರಲ್ಲಿ ಚೆನ್ನೈಯಿಮ್ ತಂಡ ಗೆಲುವು ಸಾಧಿಸಿದ್ದು ಈ ಆವೃತ್ತಿಯಲ್ಲಿ ಶುಭಾರಂಭ ಮಾಡಿದೆ. 1-0 ಗೋಲುಗಳ ಅಂತರದಿಂದ ಚೆನ್ನೈಯಿನ್ ತಂಡ ಹೈದರಾಬಾದ್ ತಂಡವನ್ನು ಸೋಲಿಸುವಲ್ಲಿ ಯಶಸ್ವಿಯಾಗಿದೆ.

ಈ ಪಂದ್ಯದಲ್ಲಿ ಎರಡು ತಂಡಗಳು ಕೂಡ ಆರಂಭದಿಂದಲೇ ಉತ್ತಮ ಪ್ರದರ್ಶನ ನೀಡುತ್ತಾ ಬಂದವು. ಆದರೆ ಎರಡು ತಂಡಗಳು ಕೂಡ ಮೊದಲಾರ್ಧದಲ್ಲಿ ಗೋಲು ಗಳಿಸಲು ವಿಫಲವಾದವು. ಆದರೆ 66ನೇ ನಿಮಿಷದಲ್ಲಿ ಚೆನ್ನೈಯಿನ್ ತಂಡದ ಪರವಾಗಿ ಹಂಗೇರಿಯನ್ ಮೂಲದ ಆಟಗಾರ ವ್ಲಾಡಿಮಿರ್ ಕೋಮನ್ ಗೋಲು ಗಳಿಸುವ ಮೂಲಕ ಮುನ್ನಡೆ ತಂದುಕೊಟ್ಡರು. ಆದರೆ ಇದನ್ನು ಸರಿದೂಗಿಸಲು ಹೈದರಾಬಾದ್ ತಂಡ ಕೊನೆಯವರೆಗೂ ಪ್ರಯತ್ನ ಮಾಡಿತಾದರೂ ಇದರಲ್ಲಿ ಯಾವುದೇ ಯಶಸ್ಸು ದೊರೆಯಲಿಲ್ಲ.

ಈ ಗೋಲಿನ ಮೂಲಕ ಚೆನ್ನೈಯಿನ್ ತಂಡ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಐಎಸ್‌ಎಲ್‌ನ ಈ ಬಾರಿಯ ಆವೃತ್ತಿಯಲ್ಲಿ ಚೆನ್ನೈಯಿನ್ ತಂಡ ಶುಭಾರಂಬ ಮಾಡಿದೆ. ಆದರೆ ಹೈದರಾಬಾದ್ ಎಫ್‌ಸಿ ತಂಡ ಮೊದಲ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ನಿರಾಸೆ ಅನುಭವಿಸಿದೆ.

ಈ ಗೆಲುವಿನೊಂದಿಗೆ ಚೆನ್ನೈಯಿನ್ ತಂಡ ಅಂಕಪಟ್ಟಿಯಲ್ಲಿ ಅಗ್ರ ನಾಲ್ಕರಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. ಮುಂಬೈ ಸಿಟಿ ಎಫ್‌ಸಿ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನವಲ್ಲಿದ್ದು ಎಟಿಕೆ ಮೋಹನ್ ಬಾಗನ್ ಎರಡನೇ ಸ್ಥಾನದಲ್ಲಿ ಹಾಗೂ ಬೆಂಗಳೂರು ಎಫ್‌ಸಿ ಮೂರನೇ ಸ್ಥಾನವಲ್ಲಿದೆ.

ಚೆನ್ನೈಯಿನ್ ಎಫ್‌ಸಿ ಪ್ಲೇಯಿಂಗ್ XI : ವಿಶಾಲ್ ಕೈತ್ (ಗೋಲ್‌ ಕೀಪರ್), ರೇಗನ್ ಸಿಂಗ್, ಸಲಾಮ್ ಸಿಂಗ್, ಲಾಲಿಯನ್ಜುವಾಲಾ ಚಾಂಗ್ಟೆ, ರಹೀಮ್ ಅಲಿ, ಅನಿರುದ್ಧ್ ಥಾಪಾ (ನಾಯಕ), ಏರಿಯಲ್ ಬೊರಿಸಿಯುಕ್, ಮಿರ್ಲಾನ್ ಮುರ್ಜೇವ್, ನಾರಾಯಣ ದಾಸ್, ಸ್ಲಾವ್ಕೊ ದಮ್ಜಾನೋವಿಕ್, ವ್ಲಾಗ್ಯಿಮಿರ್ ಕೋಮನ್.

ಹೈದರಾಬಾದ್ ಎಫ್‌ಸಿ ಪ್ಲೇಯಿಂಗ್ XI: ಲಕ್ಷ್ಮೀಕಾಂತ್ ಕಟ್ಟಿಮನಿ (ಗೋಲ್‌ ಕೀಪರ್), ಚಿಂಗ್ಲೆನ್ಸನಾ ಸಿಂಗ್, ಜುವಾನನ್, ಜೋವೊ ವಿಕ್ಟರ್ (ನಾಯಕ), ಯಾಸಿರ್ ಮೊಹಮ್ಮದ್, ಎಡು ಗಾರ್ಸಿಯಾ, ಹಿತೇಶ್ ಶರ್ಮಾ, ಹಲಿಚರಣ್ ನರ್ಜಾರಿ, ಬಾರ್ತಲೋಮಿವ್ ಓಗ್ಬೆಚೆ, ಆಕಾಶ್ ಮಿಶ್ರಾ, ಆಸಿಶ್ ರೈ.

Story first published: Wednesday, November 24, 2021, 17:00 [IST]
Other articles published on Nov 24, 2021
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+