ಐಎಸ್‌ಎಲ್: ಎಟಿಕೆ ಮೋಹನ್ ಬಾಗನ್ vs ಹೈದರಾಬಾದ್ ಎಫ್‌ಸಿ ಪಂದ್ಯ ಡ್ರಾದಲ್ಲಿ ಅಂತ್ಯ

ಇಂಡಿಯನ್ ಸೂಪರ್ ಲೀಗ್‌ನ 2021- 22ರ ಆವೃತ್ತಿಯ 50ನೇ ಮುಖಾಮುಖಿ ಇಂದು ನಡೆದಿದೆ. ಈ ಪಂದ್ಯದಲ್ಲಿ ಎಟಿಕೆ ಮೋಹನ್ ಬಾಗನ್ ಹಾಗೂ ಹೈದರಾಬಾದ್ ಎಫ್‌ಸಿ ತಂಡಗಳು ಸ್ಪರ್ಧೆ ನಡೆಸಿದ್ದು ಈ ಪಂದ್ಯ ರೋಚಕ ಡ್ರಾದಲ್ಲಿ ಅಂತ್ಯವಾಗಿದೆ. ಎರಡು ತಂಡಗಳು ಕೂಡ 2-2 ಗೋಲುಗಳಿಸಿದ್ದು ಇದರ ಪರಿಣಾಮವಾಗಿ ಪಂದ್ಯವನ್ನು ಡ್ರಾ ಎಂದು ನಿರ್ಧರಿಸಲಾಯಿತು. ಈ ಡ್ರಾ ಫಲಿತಾಂಶದಿಂದಾಗಿ ಹೈದರಾಬಾದ್ ಎಫ್‌ಸಿ ತಂಡ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದೆ. ಸುದೀರ್ಘ ಕಾಲದಿಂದ ಮೊದಲ ಸ್ಥಾನದಲ್ಲಿದ್ದ ಮುಂಬೈ ಸಿಟಿ ಎಫ್‌ಸಿ ತಂಡ ಮೊದಲ ಸ್ಥಾನವನ್ನು ಹೈದರಾಬಾದ್ ತಂಡಕ್ಕೆ ಬಿಟ್ಟುಕೊಟ್ಟಿದೆ.
ಪಂದ್ಯ ಆರಂಭವಾದ ಮೊದಲನೇ ನಿಮಿಷದಲ್ಲಿಯೇ ಎಟಿಕೆ ಮೋಹನ್ ಬಾಗನ್ ತಂಡ ಗೋಲಿನ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿತ್ತು. ಡೇವಿಡ್ ವಿಲಿಯಮ್ಸ್ ತಂಡದ ಪರವಾಗಿ ಮೊದಲ ಗೋಲು ದಾಖಲಿಸಿ ಮೇಲುಗೈ ಒದಗಿಸಿದ್ದರು. ಅದಾದ ಬಳಿಕ ಹೈದರಾಬಾದ್ ತಂಡ 18ನೇ ನಿಮಿಷದಲ್ಲಿ ಗೋಲು ದಾಖಲಿಸಿ ಸಮಬಲ ಸಾಧಿಸಿತು. ಬಾರ್ತಲೋಮಿವ್ ಓಗ್ಬೆಚೆ ತಂಡದ ಪರ ಈ ಗೋಲು ಸಿಡಿಸಿ ಸಮಬಲಕ್ಕೆ ಕಾರಣವಾಗಿದ್ದರು. ನಂತರ ಮೊದಲಾರ್ಧದಲ್ಲಿ ಎರಡು ತಂಡಗಳು ಕೂಡ ಗೋಲು ಗಳಿಸಲು ವಿಫಲವಾಗಿದ್ದ ಕಾರಣ 1-1 ಅಂತರದಿಂದ ಮೊದಲಾರ್ಧ ಸಮಬಲಗೊಂಡಿತ್ತು.
ಇನ್ನು ದ್ವಿತಿಯಾರ್ಧದಲ್ಲಿ ಮತ್ತೊಮ್ಮೆ ಎಟಿಕೆ ಮೋಹನ್ ಬಾಗನ್ ತಂಡ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. 64ನೇ ನಿಮಿಷದಲ್ಲಿ ಹೈದರಾಬಾದ್ ಎಫ್‌ಸಿ ತಂಡದ ಆಟಗಾರ ಆಶಿಶ್ ರಾಯ್ ಓನ್ ಗೋಲು ಬಾರಿಸುವ ಮೂಲಕ ಎಟಿಕೆ ಮೋಹನ್ ಬಾಗನ್ ತಂಡಕ್ಕೆ ಉಡುಗೊರೆಯಾಗಿ ಗೋಲು ನೀಡಿದ್ದರು. ಹೀಗಾಗಿ 2-1 ಅಂತರದ ಹಿನ್ನಡೆಯಲ್ಲಿತ್ತು ಹೈದರಾಬಾದ್. ಆದರೆ ಪಂದ್ಯ ಇನ್ನೇನು ಮುಕ್ತಾಯವಾಗುವ ಹಂತದಲ್ಲಿ ಜೇವಿಯರ್ ಟೊರೊ ಗೋಲು ಗಳಿಸಿ ರೋಚಕ ಡ್ರಾಗೆ ಕಾರಣವಾದರು. ಈ ಮೂಲಕ ಹೈದರಾಬಾದ್ ತಂಡ ಸೋಲಿನಿಂದ ಕೊನೇಯ ಕ್ಷಣದಲ್ಲಿ ತಪ್ಪಿಸಿಕೊಂಡಿತ್ತು.
ಇನ್ನು ದ್ವಿತಿಯಾರ್ಧದಲ್ಲಿ ಮತ್ತೊಮ್ಮೆ ಎಟಿಕೆ ಮೋಹನ್ ಬಾಗನ್ ತಂಡ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. 64ನೇ ನಿಮಿಷದಲ್ಲಿ ಹೈದರಾಬಾದ್ ಎಫ್‌ಸಿ ತಂಡದ ಆಟಗಾರ ಆಶಿಶ್ ರಾಯ್ ಓನ್ ಗೋಲು ಬಾರಿಸುವ ಮೂಲಕ ಎಟಿಕೆ ಮೋಹನ್ ಬಾಗನ್ ತಂಡಕ್ಕೆ ಉಡುಗೊರೆಯಾಗಿ ಗೋಲು ನೀಡಿದ್ದರು. ಹೀಗಾಗಿ 2-1 ಅಂತರದ ಹಿನ್ನಡೆಯಲ್ಲಿತ್ತು ಹೈದರಾಬಾದ್. ಆದರೆ ಪಂದ್ಯ ಇನ್ನೇನು ಮುಕ್ತಾಯವಾಗುವ ಹಂತದಲ್ಲಿ ಜೇವಿಯರ್ ಟೊರೊ ಗೋಲು ಗಳಿಸಿ ರೋಚಕ ಡ್ರಾಗೆ ಕಾರಣವಾದರು. ಈ ಮೂಲಕ ಹೈದರಾಬಾದ್ ತಂಡ ಸೋಲಿನಿಂದ ಕೊನೇಯ ಕ್ಷಣದಲ್ಲಿ ತಪ್ಪಿಸಿಕೊಂಡಿತ್ತು.
ಈ ಡ್ರಾ ಫಲಿತಾಂಶದೊಂದಿಗೆ ಹೈದರಾಬಾದ್ ಎಫ್‌ಸಿ ತಂಡ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆಯುವಲ್ಲಿ ಯಶಸ್ವುಯಾಗಿದೆ. ಆಡಿದ 9 ಪಂದ್ಯಗಳಲ್ಲಿ ನಾಲ್ಕು ಗೆಲುವು ಹಾಗೂ ನಾಲ್ಕು ಡ್ರಾ ಸಾಧಿಸಿರುವ ಹೈದರಾಬಾದ್ ಎಪ್‌ಸಿ ತಂಡ ಒಂದು ಪಂದ್ಯದಲ್ಲಿ ಸೋತಿದೆ. ಹೀಗಾಗಿ ಅಂಕಪಟ್ಟಿಯನ್ನು ಮೊದಲ ಸ್ಥಾನವನ್ನು ಪಡೆದುಕೊಂಡದಿದೆ. ಇನ್ನು ಎಟಿಕೆ ಮೋಹನ್ ಬಾಗನ್ ಕೂಡ ಒಂದು ಸ್ಥಾನಗಳ ಏರಿಕೆ ಕಂಡಿದ್ದು ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಕೇರಳ ಬ್ಲಾಸ್ಟರ್ಸ್ ನಾಲ್ಕನೇ ಸ್ಥಾನಕ್ಕೆ ಜಾರಿದೆ. ಕೇರಳ ಬ್ಲಾಸ್ಟರ್ಸ್ ತಂಡ ಆಡಿದ 9 ಪಂದ್ಯಗಳ ಪೈಕಿ 3 ಗೆಲುವು ಸಾಧಿಸಿದ್ದು ಐದು ಡ್ರಾ ಹಾಗೂ ಒಂದು ಸೋಲು ಅನುಭವಿಸಿದೆ.
ಹೈದರಾಬಾದ್ ಎಫ್‌ಸಿ ಆಡುವ ಬಳಗ: ಲಕ್ಷ್ಮೀಕಾಂತ್ ಕಟ್ಟಿಮನಿ (ಗೋಲ್ ಕೀಪರ್), ಚಿಂಗ್ಲೆನ್ಸನಾ ಸಿಂಗ್, ಜುವಾನನ್, ಆಕಾಶ್ ಮಿಶ್ರಾ, ಆಶಿಶ್ ರೈ, ಜೋವೊ ವಿಕ್ಟರ್ (ನಾಯಕ), ಅನಿಕೇತ್ ಜಾಧವ್, ಎಡು ಗಾರ್ಸಿಯಾ, ಹಿತೇಶ್ ಶರ್ಮಾ, ನಿಖಿಲ್ ಪೂಜಾರಿ, ಬಾರ್ತಲೋಮಿವ್ ಓಗ್ಬೆಚೆ.
ಎಟಿಕೆ ಮೋಹನ್ ಬಾಗನ್: ಅಮರಿಂದರ್ ಸಿಂಗ್ (ಗೋಲ್ ಕೀಪರ್), ತಿರಿ, ಅಶುತೋಷ್ ಮೆಹ್ತಾ, ಪ್ರೀತಮ್ ಕೋಟಾಲ್ (ನಾಯಕ ), ಪ್ರಬೀರ್ ದಾಸ್, ಕಾರ್ಲ್ ಮೆಕ್‌ಹಗ್, ದೀಪಕ್ ತಂಗ್ರಿ, ಡೇವಿಡ್ ವಿಲಿಯಮ್ಸ್, ಹ್ಯೂಗೋ ಬೌಮಸ್, ಮನ್ವಿರ್ ಸಿಂಗ್, ಲಿಸ್ಟನ್ ಕೊಲಾಕೊ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications