ಐಎಸ್‌ಎಲ್: ಗೋಲಿಲ್ಲದೆ ಡ್ರಾ ಕಂಡ ಎಸ್‌ಸಿ ಈಸ್ಟ್ ಬೆಂಗಾಲ್ vs ಮುಂಬೈ ಸಿಟಿ ಎಫ್‌ಸಿ ಪಂದ್ಯ

ಇಂಡಿಯನ್ ಸೂಪರ್ ಲೀಗ್‌ನಲ್ಲಿ ಇಂದು 52ನೇ ಪಂದ್ಯ ನಡೆದಿದ್ದು ಎಸ್‌ಸಿ ಈಸ್ಟ್ ಬೆಂಗಾಲ್ ಹಾಗೂ ಮುಂಬೈ ಸಿಟಿ ಎಫ್‌ಸಿ ತಂಡಗಳು ಮುಖಾಮುಖಿಯಾಗಿದೆ. ಆದರೆ ಈ ಪಂದ್ಯ ಯಾವುದೇ ಗೋಲು ಕಾಣದೆ ಡ್ರಾ ಫಲಿತಾಂಶವನ್ನು ಪಡೆದುಕೊಂಡಿದೆ. ಎರಡು ತಂಡಗಳ ನಡುವೆ ಜಿದ್ದಾಜಿದ್ದಿನ ಪ್ರದರ್ಶನ ಕಂಡರು ಕೂಡ ಗೋಲು ದಾಖಲಿಸಲು ತಂಡಗಳು ವಿಫಲವಾದರು. ಹೀಗಾಗಿ ಅಂತಿಮವಾಗಿ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಗಿದೆ.
ಆರಂಭದಿಂದಲೇ ಎರಡು ತಂಡಗಳು ಕೂಡ ಸಾಕಷ್ಟು ಪೈಪೋಟಿಯ ಪ್ರದರ್ಶನ ನೀಡಿತು. ಆದರೆ ಎರಡು ತಂಡಗಳು ಕೂಡ ಯಾವುದೇ ಗೀಲು ಗಳಿಸಲು ಸಾಧ್ಯವಾಗಲಿಲ್ಲ. ಪೂರ್ಣಾವಧಿ ಮುಕ್ತಾಯವಾದ ಬಳಿಕ ಹೆಚ್ಚುವರಿ ಅವಧಿಯನ್ನು ನೀಡಲಾಯಿತಾದರೂ ಈ ಅವಧಿಯಲ್ಲಿಯೂ ಗೋಲು ದಾಖಲಾಗಲಿಲ್ಲ. ಹೀಗಾಗಿ ಪಂದ್ಯ ಡ್ರಾ ಕಂಡಿದೆ.
ಅಂಕಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳಲ್ಲಿರುವ ಮುಂಬೈ ಸಿಟಿ ತಂಡಕ್ಕೆ ಅಂಕಪಟ್ಟಿಯಲ್ಲಿ ಕೊನೇಯ ಸ್ಥಾನದಲ್ಲಿರುವ ಈಸ್ಟ್ ಬೆಂಗಾಲ್ ನೀಡಿದ ಪೈಪೋಟಿ ಮೆಚ್ಚುಗೆಗೆ ಪಾತ್ರವಾಯಿತಾದರೂ ಮತ್ತೊಮದು ಪಂದ್ಯದಲ್ಲಿಯೂ ಗೆಲುವಿನ ರುಚಿ ಸವಿಯಲು ಸಾಧ್ಯವಾಗದ್ದು ತಂಡದ ಅಭಿಮಾನಿಗಳೀಗೆ ಬೇಸರ ಮೂಡಿಸಿದೆ. ಎಸ್‌ಸಿ ಈಓಸ್ಟ್ ಬೆಂಗಾಲ್ ತಮಡ ಈ ಬಾರಿಯ ಟೂರ್ನಿಯಲ್ಲಿ ಈವರಗೆ ಒಟ್ಟು 10 ಪಂದ್ಯಗಳನ್ನು ಆಡಿದ್ದು ಇದರಲ್ಲಿ ಒಂದೇ ಒಂದು ಪಂದ್ಯದಲ್ಲಿ ತಂಡಕ್ಕೆ ಗೆಲುವು ಸಾಧ್ಯವಾಗಿಲ್ಲ. ಆಡು ಪಂದ್ಯಗಳಲ್ಲಿ ಡ್ರಾ ಸಾಧಿಸಿದ್ದು ನಾಲ್ಕರಲ್ಲಿ ಸೋಲು ಕಂಡಿದೆ. ಹೀಗಾಗಿ ಅಂಕಪಟ್ಟಿಯಲ್ಲಿ ಈಸ್ಟ್ ಬೆಂಗಾಲ್ ತಂಡ ಕೊನೇಯ ಸ್ಥಾನದಲ್ಲಿದೆ.
ಮುನ್ನು ಇಂದಿನ ಪಂದ್ಯದಲ್ಲಿ ಡ್ರಾ ಫಲಿತಾಂಶ ಪಡೆದುಕೊಂಡ ಮುಂಬೈ ಸಿಟಿ ಎಫ್‌ಸಿ ತಂಡ ಮತ್ತೊಮ್ಮೆ ಅಗ್ರ ಸ್ಥಾನಕ್ಕೆ ಏರುವಲ್ಲಿ ಯಶಸ್ವಿಯಾಗಿದೆ. ಮುಂಬೈ ಸಿಟಿ ಎಫ್‌ಸಿ ತಂಡ ಈವರೆಗೆ ಒಟ್ಟು 10 ಪಂದ್ಯಗಳನ್ನು ಆಡಿದ್ದು ಇದರಲ್ಲಿ ಐದು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು ಎರಡು ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ. ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ.
ಮುಂಬೈ ಸಿಟಿ ಎಫ್‌ಸಿ (ಆರಂಭಿಕ ಪ್ಲೇಯಿಂಗ್ XI): ಫುರ್ಬಾ ಲಾಚೆನ್ಪಾ (ಗೋಲ್ ಕೀಪರ್), ಅಮಿ ರಾನವಾಡೆ, ಮೌರ್ತಡಾ ಫಾಲ್ (ನಾಯಕ), ರಾಹುಲ್ ಭೇಕೆ, ವಿಘ್ನೇಶ್ ದಕ್ಷಿಣಮೂರ್ತಿ, ಲಾಲೆಂಗ್ಮಾವಿಯಾ, ಅಹ್ಮದ್ ಜಹೌಹ್, ರೇನಿಯರ್ ಫೆರ್ನಾಂಡಿಸ್, ಕ್ಯಾಸಿಯೊ ಗೇಬ್ರಿಯಲ್, ಬಿಪಿನ್ ಸಿಂಗ್, ಇಗೊರ್ ಅಂಗುಲೊ.
ಎಸ್‌ಸಿ ಈಸ್ಟ್ ಬೆಂಗಾಲ್(ಆರಂಭಿಕ ಪ್ಲೇಯಿಂಗ್ XI): ಅರಿಂದಮ್ ಭಟ್ಟಾಚಾರ್ಜ (ಗೋಲ್ ಕೀಪರ್/ ನಾಯಕ), ಜಾಯ್ನರ್ ಲೌರೆಂಕೊ, ಆದಿಲ್ ಖಾನ್, ಹಿರಾ ಮೊಂಡಲ್, ಬಿಕಾಶ್ ಜೈರು, ಸೌರವ್ ದಾಸ್, ವಹೆಂಗ್‌ಬಾಮ್ ಲುವಾಂಗ್, ಅಮರ್‌ಜಿತ್ ಕಿಯಾಮ್, ಲಾಲ್ರಿನ್ಲಿಯಾನಾ ಹ್ನಾಮ್ಟೆ, ಥಾಂಗ್‌ಕೋಸಿಯೆಮ್ ಹಾಕಿಪ್, ಡೇನಿಯಲ್ ಚುಕ್ವು
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications