ಐಎಸ್‌ಎಲ್: ಒಡಿಶಾ vs ಮೋಹನ್ ಬಾಗನ್ ಪಂದ್ಯ ಮುಂದೂಡಿಕೆ: ಚೆನ್ನೈಯಿನ್ ವಿರುದ್ಧ ಗೆದ್ದ ಗೋವಾ

ಇಂಡಿಯನ್ ಸೂಪರ್ ಲೀಗ್‌ನಲ್ಲಿ ಇಂದು ಎರಡು ಪಂದ್ಯಗಳು ನಡೆಯಬೇಕಿತ್ತು. ಟೂರ್ನಿಯ 53ನೇ ಪಂದ್ಯದಲ್ಲಿ ಎಟಿಕೆ ಮೋಹನ್ ಬಾಗನ್ ಹಾಗೂ ಒಡಿಶಾ ಎಫ್‌ಸಿ ತಂಡ ಮುಖಾಮುಖಿಯಾಗಬೇಕಿತ್ತು. ಆದರೆ ಕೊರೊನಾವೈರಸ್ ಈ ಪಂದ್ಯಕ್ಕೆ ಆಘಾತ ನೀಡಿದ್ದು ಪಂದ್ಯವನ್ನು ಮುಂದೂಡಲಾಗಿದೆ. ಎಟಿಕೆ ಮೋಹನ್ ಬಾಗನ್ ತಂಡದ ಓರ್ವ ಆಟಗಾರನಿಗೆ ಕೊರೊನಾವೈರಸ್ ದೃಢಪಟ್ಟ ಕಾರಣ ಈ ಬದಲಾವಣೆ ಮಾಡಲಾಗಿದೆ. ಆದರೆ ಮುಂದೂಡಿರುವ ಪಂದ್ಯವನ್ನು ಯಾವಾಗ ನಡೆಸಲಾಗುತ್ತದೆ ಎಂಬ ಬಗ್ಗೆ ಯಾವುದೇ ಮಾಹಿತಿಗಳು ಈ ಕ್ಷಣಕ್ಕೆ ಲಭ್ಯವಾಗಿಲ್ಲ. ಇನ್ನು ಕೊಒರನಾವೈರಸ್‌ಗೆ ತುತ್ತಾಗಿರುವ ಆಟಗಾರನ ಬಗ್ಗೆಯೂ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.
ಇನ್ನು ಶನಿವಾರ ಮತ್ತೊಂದು ಪಂದ್ಯ ಚೆನ್ನೈಯಿನ್ ಎಫ್‌ಸಿ ಹಾಗೂ ಎಫ್‌ಸಿ ಗೋವಾ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಚೆನ್ನೈಯಿನ್ ಎಫ್‌ಸಿ ವಿರುದ್ಧ ಅಂತಿಮ ಹಂತದಲ್ಲಿ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿರುವ ಎಫ್‌ಸಿ ಗೋವಾ ತಂಡ ಗೆಲುವು ಸಾಧಿಸಿದೆ.
ಈ ಪಂದ್ಯದಲ್ಲಿ ಆರಂಭದಿಂದಲೇ ಎರಡನೂ ತಂಡಗಳು ಕೂಡ ಸಾಕಷ್ಟು ಜಿದ್ದಾಜಿದ್ದಿನ ಪ್ರದರ್ಶನವನ್ನು ನೀಡಿದವು. ಆದರೆ ಮೊದಲಾರ್ಧದಲ್ಲಿ ಎರಡೂ ತಂಡಗಳು ಕೂಡ ಯಾವುದೇ ಗೋಲುಗಳಿಸುವಲ್ಲಿ ವಿಫಲವಾದ ಕಾರಣ ಗೋಲಿಲ್ಲದೆ ಮೊದಲಾರ್ಧ ಅಂತ್ಯವಾಗಿತ್ತು. ದ್ವಿತಿಯಾರ್ಧದಲ್ಲಿಯೂ ಬಹುತೇಕ ಇದೇ ಸ್ಥಿತಿಯಲ್ಲಿ ಪಂದ್ಯ ಮುಂದುವರಿದರೂ 82ನೇ ನಿಮಿಷದಲ್ಲಿ ಎಫ್‌ಸಿ ಗೋವಾ ತಂಡ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಜಾರ್ಜ್ ಒರ್ಟಿಜ್ ಈ ಪಂದ್ಯದ ಏಕೈಕ ಗೋಲನ್ನು ದಾಖಲಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಎಫ್‌ಸಿ ಗೋವಾ ತಂಡ ಪಂದ್ಯದಲ್ಲಿ ಗೆಲುವು ಸಾಧಿಸಿದೆ.

ಈ ಗೆಲುವಿನಿಂದಾಗಿ ಎಫ್‌ಸಿ ಗೋವಾ ತಂಡ ಅಂಕಪಟ್ಟಿಯಲ್ಲಿ ಒಂದು ಸ್ಥಾನದ ಏರಿಕೆ ಕಂಡಿದೆ. 9ನೇ ಸ್ಥಾನದಲ್ಲಿದ್ದ ಗೋವಾ 8ನೇ ಸ್ಥಾನವನ್ನು ಪಡೆದುಕೊಂಡಿದೆ. 8ನೇ ಸ್ಥಾನದಲ್ಲಿದ್ದ ಬೆಂಗಳೂರು ಎಫ್‌ಸಿ ತಂಡ 9ನೇ ಸ್ಥಾನಕ್ಕೆ ಕುಸಿದಿದೆ. ಇನ್ನು ಚೆನ್ನೈಯಿನ್ ಎಫ್‌ಸಿ ತಂಡ ಅಂಕ ಪಟ್ಟಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಚೆನ್ನೈಯಿನ್ ಎಫ್‌ಸಿ ಪ್ಲೇಯಿಂಗ್ XI: ದೇಬ್ಜಿತ್ ಮಜುಂದಾರ್ (ಗೋಲ್ ಕೀಪರ್), ಮೊಹಮ್ಮದ್ ಸಾಜಿದ್ ಧೋತ್, ಸ್ಲಾವ್ಕೊ ದಮ್ಜಾನೋವಿಕ್, ನಾರಾಯಣ್ ದಾಸ್, ರೇಗನ್ ಸಿಂಗ್, ಜೆರ್ರಿ ಲಾಲ್ರಿಂಜುವಲಾ, ಅನಿರುದ್ಧ್ ಥಾಪಾ (ನಾಯಕ), ವ್ಲಾಡಿಮಿರ್ ಕೋಮನ್, ಎಡ್ವಿನ್ ವಾನ್ಸ್ಪಾಲ್, ಮಿರ್ಲಾನ್ ಮುರ್ಜೇವ್ ಮತ್ತು ನೆರಿಜಸ್ ವಾಲ್ಸ್ಕಿಸ್.
ಎಫ್‌ಸಿ ಗೋವಾ ಪ್ಲೇಯಿಂಗ್ XI: ನವೀನ್ ಕುಮಾರ್ (ಗೋಲ್ ಕೀಪರ್), ಅನ್ವರ್ ಅಲಿ, ಇವಾನ್ ಗೊನ್ಜಾಲೆಜ್, ಐಬನ್ ಡೊಹ್ಲಿಂಗ್, ಸೆರಿಟನ್ ಫೆರ್ನಾಂಡಿಸ್, ಸೇವಿಯರ್ ಗಾಮಾ, ಮುಹಮ್ಮದ್ ನೆಮಿಲ್, ಗ್ಲಾನ್ ಮಾರ್ಟಿನ್ಸ್, ಎಡು ಬೆಡಿಯಾ (ನಾಯಕ), ಆಲ್ಬರ್ಟೊ ನೊಗುರಾ ಮತ್ತು ಜಾರ್ಜ್ ಒರ್ಟಿಜ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+

Click it and Unblock the Notifications